Wednesday, April 25, 2012

ನೋಡಲೇಬೇಕಾದ ಚಿತ್ರಗಳು-1

ಕೆಲವೊಂದು ಸಿನಿಮಾಗಳು ಬರೀ ಮನರ೦ಜನೆಯನ್ನಷ್ಟೇ ನೀಡುವುದಿಲ್ಲ.ಅದರ ಜೊತೆಗೆ ಚಿಂತನೆಯನ್ನೂ ಹಚ್ಚುತ್ತವೆ.  ಪಾತ್ರಗಳು ನಮ್ಮ ಮುಂದೆ ಬಂದು ಎಡಬಿಡದೆ ಕಾಡುತ್ತವೆ..ನನಗಂತೂ ಕೆಲವು ಚಿತ್ರಗಳು ಅದರಲ್ಲಿನ ಪಾತ್ರಗಳು ನನ್ನ ಪಕ್ಕದಲ್ಲಿ ಇದೆಯೇನೋ ಅನ್ನಿಸುತ್ತದೆ.ನನ್ನ ಜೊತೆ ಮಾತಾಡಿದಂತೆ ಭಾಸವಾಗುತ್ತದೆ.ಭಾಷೆ, ದೇಶ , ಪರಿಸರ  ಯಾವ ಹಂಗೂ ಇಲ್ಲದೆ ಯಾವ ಮಿತಿಯನ್ನೂ ಹೇರದೆ ಅದು ನಮ್ಮವೇ ಆಗಿಬಿಡುತ್ತವೆ. ಜಪಾನಿನಲ್ಲಿ ಶಿಯಾನ್ ಸೋನು ಎನ್ನುವ ನಿರ್ದೇಶಕನಿದ್ದಾನೆ. ಆತನ ಸಿನೆಮಾಗಲೆ೦ದರೆ ನನಗೆ ಭಾರಿ ಇಷ್ಟ. ಅದರಲ್ಲೂ ಅವನ ಲವ್ ಎಕ್ಸ್ ಪೋಸೆರ್ ಎಂಬ ಚಿತ್ರವನ್ನು ಸುಮಾರು ಭಾರಿ ನೋಡಿಬಿಟ್ಟಿದ್ದೇನೆ. ಸುಮಾರು ನಾಲ್ಕು ಘ೦ಟೆಯಷ್ಟು ಉದ್ದವಿರುವ ಈ ಸಿನಿಮಾ ನೀವು ನೋಡುತ್ತಾ ಕುಳಿತುಬಿಟ್ಟರೆ ಅವಧಿಯ ಯಾವ ಇರವನ್ನೂ ತೋರಗೊಡದ೦ತೆ ಅನುಭವಕ್ಕೆಡೆಮಾಡದ೦ತೆ  ನೋಡಿಸಿಕೊಂಡು ಹೋಗಿಬಿಡುತ್ತದೆ.ಚಿತ್ರದಲ್ಲೊಂದು ಸನ್ನಿವೇಶವಿದೆ. ಚರ್ಚೋ೦ದರಲ್ಲಿ ಪಾದ್ರಿಯಾಗಿ ಕೆಲಸ ಮಾಡುವ ಅಪ್ಪ ಹೆಂಡತಿ ದೂರವಾದ ಮೇಲೆ ಒ೦ದು ರೀತಿಯಲ್ಲಿ ಸ್ಯಾಡಿಸ್ಟ್ ಆಗಿಬಿಡುತ್ತಾನೆ. ಅಷ್ಟೊಂದು ಪ್ರೀತಿಸುತ್ತಿದ್ದ ಮಗನನ್ನು ದೂರವಿಡಲು ಪ್ರಾರಂಭಿಸುತ್ತಾನೆ. ಆದರೆ ಮಗನಿಗೆ ಅಪ್ಪನ ಮೇಲೆ ಅತೀವ ಪ್ರೀತಿ.ದಿನವೂ ಅಪ್ಪನನ್ನು ಮಾತಾಡಿಸಬೇಕು, ಕಾಣಬೇಕೆಂಬ ತವಕ ಆತನದು. ಅಪ್ಪನನ್ನು ಭೇಟಿ ಮಾಡುವ ಒಂದೆ ಒಂದು ಮಾರ್ಗವೆಂದರೆ ಚರ್ಚಿನಲ್ಲಿ ತಪ್ಪೊಪ್ಪಿಗೆ ಪೆಟ್ಟಿಗೆಯ ಮುಂದೆ ಹೋಗಿ ತಪ್ಪೋಪ್ಪಿಕೊಳ್ಳುವುದು. ಅದಕ್ಕಾಗಿ ದಿನವೂ ಒಂದೊಂದು ತಪ್ಪು ಮಾಡತೊಡಗುವ ಮಗ ಅಪ್ಪನ ಭೇಟಿಗೆ ಅವನ ತೃಪ್ತಿಗಾಗಿ ತನ್ನನ್ನೇ ದ೦ಡಿಸಿಕೊಳ್ಳಲು ಪ್ರಾರಂಭಿಸುತ್ತಾನೆ. ಇಡೀ ಸಿನೆಮಾ, ಅದರಲ್ಲಿನ ಚಿತ್ರಕಥೆ ಎಲ್ಲೂ ದಿಕ್ಕು ತಪ್ಪುವುದಿಲ್ಲ. ನಾಲ್ಕು ಘ೦ಟೆಗಳಷ್ಟು ಉದ್ದವಿದ್ದರೂ ಎಲ್ಲೂ ಬೋರ್ ಆಗುವುದಿಲ್ಲ. ಬದಲಿಗೆ ಅಲ್ಲಿನ ಪಾತ್ರಗಳು ಸನ್ನಿವೇಶಗಳು ನಮ್ಮನ್ನು ಎವೆಯಿಕ್ಕದ೦ತೆ ಮಾಡಿಬಿಡುತ್ತದೆ. ಹಾಗೆ ಚಿತ್ರಿಕೆಗಳ ಸಂಯೋಜನೆ ಮತ್ತು ಹಿನ್ನೆಲೆ ಸಂಗೀತವೂ ಸಿನಿಮಾಕ್ಕೆ ದೊಡ್ಡ ಕೊಡುಗೆಯನ್ನೇ ನೀಡಿದೆ ಎನ್ನಬಹುದು..2008ರಲ್ಲಿ ತೆರೆಗೆ ಬಂದ ಈ ಯಶಸ್ವೀ ಚಿತ್ರವನ್ನೊಮ್ಮೆ ನೋಡಿ..
 

2 comments:

  1. ಮೂವಿ ವಾಚ್ ಲೀಸ್ಟ್ ನಲ್ಲಿದೆ. ಸಮಯ ಸಿಕ್ಕಾಗ ನೋಡುಬೇಕು. ಧನ್ಯವಾದಗಳು
    ಹಾಗೆಯೇ Spring, Summer, Fall, Winter... and Spring ನೋಡಿ

    ReplyDelete
  2. ಧನ್ಯವಾದಗಳು...ಕಿಮ್ ಕಿ ಡಕ್ ನನ್ನ ಮೆಚ್ಚಿನ ನಿರ್ದೇಶಕ ...ಅವನ ಎಲ್ಲಾ ಸಿನೆಮಾಗಳನ್ನೂ ನೋಡಿದ್ದೇನೆ. ಮಾತಿನ ಹಂಗಿಲ್ಲದೆ ಬರೀ ಚಿತ್ರಕಥೆಯಿ೦ದಲೆ ಕೂರಿಸಿಬಿಡುವ ಅದ್ಭುತ ದಿಗ್ದರ್ಶಕ..

    ReplyDelete