ನನ್ನ ಪುಸ್ತಕಗಳು:

ಪ್ರೀತಿ ಎನ್ನುವುದು ಹುಟ್ಟುವ
ಘಳಿಗೆ ಮತ್ತು ಆಕ್ಷಣದ ಸಂಭ್ರಮವನ್ನು ಅನುಭವಿಸಬೇಕೆ ಹೊರತು ವಿವರಿಸುವುದಕ್ಕಾಗುವುದಿಲ್ಲ.
ಹಾಗೆಯೇ ಅದರ ವಿಷಾದರೂಪವನ್ನು ಕೂಡ. ಆ ನಿಟ್ಟಿನಲ್ಲಿ ಇದೊಂದು ಸಣ್ಣ ಪ್ರಯತ್ನ. 

ದೊರಕುವ ಸ್ಥಳ:
ಗೂಗಲ್ ಬುಕ್ ನಲ್ಲಿ 
ಗೂಗಲ್ ಪ್ಲೇ ನಲ್ಲಿ 
ಸ್ಮ್ಯಾಶ್ ವರ್ಡ್ಸ್ ನಲ್ಲಿ  

ಇಲ್ಲಿರುವ ಒಂದೊಂದು ಕಥೆಗಳ ಹಿಂದೆಯೂ ಒಂದೊಂದು ಬೇರೆಯದೇ ಆದ

ಕಥೆಯಿದೆ. ಹಾಗಾಗಿ ಇವುಗಳನ್ನು ಬರೀ ಕಾಲ್ಪನಿಕ ಕಥೆಗಳು ಅನ್ನಲಿಕ್ಕೆ ಸಾಧ್ಯವಿಲ್ಲ. ಇಲ್ಲಿನ ಕಥೆಗಳನ್ನು ಬರೆಯಲು ತಿಂಗಳುಗಟ್ಟಲೆ ಹಿಡಿದಿದೆ ಎನ್ನಬಹುದು. ಅದರಲ್ಲೂ ಬದುಕೇ ಒಂದೇ ಒಂದು ಅವಕಾಶ ಕೊಡು ಎನ್ನುವ ಕತೆಯನ್ನು ಬರೆದದ್ದು ಆಸ್ಪತ್ರೆಯಲ್ಲಿ. ನನ್ನ ತಂದೆ ಮೂತ್ರಪಿಂಡದ ವೈಫಲ್ಯದಿಂದ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಗ ನಾನು ಆಸ್ಪತ್ರೆಯ ಹೊರಗೆ ಕುಳಿತು ಬರೆದ ಕತೆ ಅದು. ತಿಂಗಳುಗಳ ವರೆಗೆ ಆಸ್ಪತ್ರೆಯಲ್ಲಿದ್ದ ನನ್ನ ತಂದೆ ಸಾವನ್ನಪ್ಪುವವರೆಗೆ ಅವರು ಪ್ರಜ್ಞೆಯಿದ್ದು ಮಾತಾಡುವ ಸ್ಥಿತಿಯಲ್ಲಿದ್ದಾಗಲೆಲ್ಲಾ ಕೇಳುತ್ತಿದ್ದ ಪ್ರಶ್ನೆ ಒಂದೇ..”

ನನಗೇನಾಗಿದೆ...?” ಅದಕ್ಕೆ ಉತ್ತರಿಸಲು ನನಗೆ ಸಾಧ್ಯವಾಗಲೇ ಇಲ್ಲ.

ದೊರಕುವ ಸ್ಥಳ. 

ಬಹುರಂಗಿ ಪುಸ್ತಕ


                                                       
ಓದುತ್ತಾ ಓದುತ್ತಾ ನಗಿಸುವ ಕಣ್ಣಂಚಿನಲ್ಲಿ ನೀರು ತರಿಸುವ ಆಪ್ತ ಎನಿಸುವ ಪುಸ್ತಕಗಳ ಸಂಕಲವಿದು.

ಎಂದಿನಂತೆ ಲೇಟಾದ್ದರಿಂದ ನರ್ಸಮ್ಮನ ಅಸಹನೆ ಮೇರೆ ಮೀರಿತ್ತು.ಬಸ್ಸಿನ ಕಂಡಕ್ಟರುಡ್ರೈವರು ಎಲ್ಲರನ್ನೂ ಒಕ್ಕೊರಳಿನಿಂದ ಎಲ್ಲಾ ರೀತಿಯ ಬೈಗುಳಗಳಿಂದ ಎಕ್ಕಿಳಿದು ಆಗಿತ್ತು.ಬಹುಶ ಆ ಸಮಯದಲ್ಲಿ ಆ ಡಿಪಾಟರ್ಮೆಂಟಿಗೆ ಸಂಬಂಧಪಟ್ಟವಯರ್ರಾದರೂ ಸಿಕ್ಕಿದ್ದರೆ
ಹೊಡದೇಬಿಡುತ್ತಿದ್ದರೇನೋ.
.ಅಂಥ ಸಮಯದಲ್ಲಿ ನಾನೂ ಅದೇ ಬಸ್ಸಿಗಾಗಿ ಕಾದಿದ್ದೆ. ಮಾದೇವನೂ
ಬಸ್ಸಿಗಾಗಿಯೇ ಕಾಯುತ್ತಿದ್ದ. ಬೈಯ್ಯುವ 
ಉಗಿಯುವ ಕೆಲಸವೆಲ್ಲಾ ಮುಗಿದು ಇನ್ನೇನು ಇಲ್ಲ ಎಂದಾಗ
ನರ್ಸಮ್ಮನ ಚಿತ್ತ ನನ್ನ ಮೇಲೆ
ಅಂದರೆ ನನ್ನ ತಲೆಯ ಮೇಲೆ ಬಿದ್ದುಬಿಟ್ಟಿತ್ತು. ಅದೇ ಬೈಯುವ ವರಸೆಯಲ್ಲಿಯೇ 'ಯಾರೋ
ಅದು ನಿನ್ ಹೇರ್ಕಟ್ ಮಾಡಿದವ್ನು..
?' ಎಂಬೊಂದು ಪ್ರಶ್ನೆ ಹಾಗೆ ತೂರಿಬಂದುಬಿಡಬೇಕೆ.ಆ ಕಡೆತಿರುಗಿಕೊಂಡಿದ್ದ ಮಾದೇವ ಮೈಯೆಲ್ಲಾ ಕಿವಿಯಾಗಿಸಿದ
.ದೊರೆಯುವ ಸ್ಥಳ:

ಲಲಿತ ಪ್ರಬಂಧಗಳ ಸಂಕಲನ.ನೋಡಲೇ ಬೇಕಾದ ನೂರೊಂದು ಕನ್ನಡ ಚಿತ್ರಗಳು: 1934 ರಿಂದ 2009 ರಿಂದ ಕನ್ನಡ ಚಿತ್ರರಂಗದಲ್ಲಿ ಸರಿ ಸುಮಾರು 2844 ಚಲನಚಿತ್ರಗಳು ಬಿಡುಗಡೆಯಾಗಿವೆ. ಅವುಗಳಲ್ಲಿ ಪ್ರತಿಯೊಬ್ಬ ಚಿತ್ರರಸಿಕನೂ ನೋಡಲೇ ಬೇಕಾದ ನೂರಾ ಒಂದು ಚಿತ್ರಗಳನ್ನು ಮತ್ತವುಗಳ ವಿಶೇಷವನ್ನು ಪರಿಚಯಿಸುವ ಅಪರೂಪದ ಪುಸ್ತಕವಿದು.

No comments:

Post a Comment