1978 ರಲ್ಲಿ ಬಿಡುಗಡೆಯಾದ ಕ್ಯಾಪ್ರಿಕಾರ್ನ್ ಒನ್ ಸಿನಿಮಾದ ಕಥೆ
ಹೀಗಿದೆ. ನಾಸಾದ ವಿಜ್ಞಾನಿಗಳು ಒಂದಷ್ಟು ಜನರನ್ನು ಮಂಗಳಗ್ರಹಕ್ಕೆ ಕಳುಹಿಸುವ ಸಂಭ್ರಮದಲ್ಲಿದ್ದಾರೆ.ಈಗಾಗಲೆ
ಅದರ ತಯಾರಿಗಳು ನಡೆದಿವೆ. ಅದು ಜಗತ್ತಿನ ಮೊಟ್ಟಮೊದಲ ಮಂಗಳಯಾನವಾದ್ದರಿಂದ ಜಗತ್ತಿನೆಲ್ಲೆಡೆ ಕುತೂಹಲವಿದೆ.ಇಡೀ
ದೇಶದ ಜನರು ಆ ಒಂದು ಸಂಭ್ರಮದ ಕ್ಷಣಕ್ಕಾಗಿ ಎದುರುನೋಡುತ್ತಿರುತ್ತಾರೆ.
ಸಾಧ್ಯವಿಲ್ಲ ಎಂಬುಗಗನಯಾತ್ರಿಗಳೂ ತಮ್ಮ ಮೊಟ್ಟಮೊದಲ ಯಾನದ ಖುಷಿ, ಇತಿಹಾಸವಾಗುವ ಅದ್ಭುತ ಗಳಿಗೆಗೆ ಕಾಯುತ್ತಿರುವಾಗಲೇ ಅವರನ್ನೆಲ್ಲಾ ಆ ರಾಕೆಟಿನಿಂದ ಹೊರದಬ್ಬಲಾಗುತ್ತದೆ. ಆನಂತರ ಖಾಲಿಯಾದ ಆ ರಾಕೆಟ್ ಉಡಾವಣೆಯಾಗುತ್ತದೆ. ಆದರೆ ಯಾತ್ರಿಗಳನ್ನು ಮಾತ್ರ ರಹಸ್ಯತಾಣವೊಂದಕ್ಕೆ ಕರದೊಯ್ಯಲಾಗುತ್ತದೆ. ಏನಾಗುತ್ತಿದೆ ಎಂಬುದು ಯಾರಿಗೋ ಗೊತ್ತಾಗುವುದಿಲ್ಲ. ಆನಂತರ ಗೊತ್ತಾಗುವ ವಿಷಯವೆಂದರೆ ಆ ಅಂತರಿಕ್ಷದ ತಂತ್ರಜ್ಞಾನದಲ್ಲಿ ದೋಷವಿರುವುದರಿಂದ ಅದರಲ್ಲಿ ಪ್ರಯಾಣಿಸಲು ದು. ಹಾಗಂತ ಅದನ್ನು ಜಗಜ್ಜಾಹೀರು ಮಾಡಲುಸಾಧ್ಯವಿಲ್ಲ. ಹಾಗಾಗಿ
ಅವರನ್ನು ಸ್ಟುಡಿಯೋ ಒಂದಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಮಂಗಳಗ್ರಹದಂತೆ ಸೆಟ್ ಹಾಕಲಾಗಿರುತ್ತದೆ.
ಅದರಲ್ಲಿ ಚಿತ್ರೀಕರಣಮಾಡಿ ಜಗತ್ತಿಗೆ ನಿಜವಾಗಿಯೂ ಮಂಗಳಗ್ರಹದ ಚಿತ್ರಗಳು ಅವು, ತಾವು ಮಂಗಳಗ್ರಹ ಯಾನವನ್ನು ಯಶಸ್ವಿಯಾಗಿ ಮುಗಿಸಿದ ಮೊದಲಿಗರು ಎಂದು ಕೊಚ್ಚಿಕೊಳ್ಳುವ ಉಮ್ಮೇದು
ಸರ್ಕಾರದ್ದು. ಆದರೆ ಒಬ್ಬ ಪತ್ರಕರ್ತನಿಂದಾಗಿ ಎಲ್ಲಾ ಬೆಳಕಿಗೆ ಬರುತ್ತದೆ.
ಪೀಟರ್ ಹ್ಯಾಮ್ಸ್ ನಿರ್ದೇಶನದ ಈ ರೋಮಾಂಚಕಾರಿ ಚಿತ್ರ ತುಂಬಾ ಕುತೂಹಲಕರವಾಗಿದೆ.
ಅದೇ ರೀತಿಯ ಇನ್ನೊಂದು ಪ್ರಶ್ನೆ ಇದೆ.
ಮೊಟ್ಟಮೊದಲ ಬಾರಿಗೆ ಚಂದ್ರನ ಮೇಲೆ ಕಾಲಿರಿಸಿದ ವ್ಯಕ್ತಿ ಯಾರು? ಉತ್ತರ ಎಲ್ಲರಿಗೂ ಗೊತ್ತು. ನೀಲ್ ಆರ್ಮ್
ಸ್ಟ್ರಾಂಗ್. ಆದರೆ ಅದು ನಿಜವೇ ಎಂಬ ಪ್ರಶ್ನೆ ಕಾಡತೊಡಗಿದ್ದು ನನಗೆ ಕಾನ್ಸ್‌ಪಿರಸಿ ಥಿಯರಿ:ಡಿಡ್
ವಿ ಲ್ಯಾಂಡ್ ಆನ್ ದಿ ಮೂನ್ ಎಂಬ ಸಾಕ್ಶ್ಯಚಿತ್ರವನ್ನು ವೀಕ್ಷಿಸಿದಾಗ. ವರ್ಲ್ಡ್ಸ್ ಡೆಡ್ಲಿಯಸ್ಟ್
ಅರ್ಥ್‌ಕ್ವೇಕ್ಸ್ ಸಾಕ್ಷ್ಯಚಿತ್ರದ ನಿರ್ದೇಶಕ ಜಾನ್ ಮೊಫೆಟ್ ನಿರ್ದೇಶನ ಈ ಸಾಕ್ಷ್ಯಚಿತ್ರ 45 ನಿಮಿಷಗಳಷ್ಟು ಉದ್ದವಿದೆ. ಪ್ರಾರಂಭದಲ್ಲಿ ಚಂದ್ರನ ಮೇಲೆ ಕಾಲಿಟ್ಟ
ಮಾನವನ ಹೆಜ್ಜೆ ಗುರುತು, ಆವಾಗ
ತೆಗೆದೆ ಫೋಟೊಗಳು, ಆವತ್ತಿನ ಖ್ಯಾತರ ಹೇಳಿಕೆಗಳನ್ನು ತೋರಿಸುವ ನಿರ್ದೇಶಕ
ಆನಂತರ ಒಂದೊಂದೆ ಅನುಮಾನಗಳನ್ನು ಸಾಕ್ಷಿ ಸಮೇತ ನಮ್ಮ ಮುಂದಿರಿಸುತ್ತಾ ಹೋಗುತ್ತಾನೆ. ಅವನು ಕೊಡುವ
ಕಾರಣಗಳು, ಅದನ್ನು ಸಮರ್ಥಿಸುವ ಹೇಳಿಕೆಗಳು ಮುಂತಾದವುಗಳು ನಮ್ಮನ್ನೂ ಆ
ನಿಟ್ಟಿನಲ್ಲಿ ಯೋಚಿಸುವಂತೆ ಮಾಡುತ್ತವೆ.ಜೆ ಎಫ್ ಕೆನೆಡಿ ಸಾಕ್ಷ್ಯಚಿತ್ರದ ನಿರ್ದೇಶಕ ವಿಲಿಯಮ್ ಕಾರೆಲ್
ನಿರ್ದೇಶನದ ಮತ್ತೊಂದು ಸಾಕ್ಷ್ಯಚಿತ್ರ ಆಪರೇಷನ್ ಲೂನ್ ಈ ನಿಟ್ಟಿನಲ್ಲಿ ಮತ್ತಷ್ಟು ಸಾಕ್ಷ್ಯಾಧಾರ
ಕೊಟ್ಟು ಚಂದ್ರನ ಮೇಲೆ ಕಾಲಿಟ್ಟದ್ದು ಸುಳ್ಳು ಎಂಬುವ ಮಾತಿಗೆ ಪುಷ್ಠಿ ನೀಡುತ್ತದೆ. ಹಾಗೆ 2003ರ ದಿ ಟ್ರೂತ್ ಬಿಹೈ೦ದ್ ಮೂನ್ ಲ್ಯಾ೦ಡಿ೦ಗ್ ಸಹ ಈ ವಾದವನ್ನು ಎತ್ತಿಹಿಡಿಯುತ್ತದೆ,.ಅಂದರೆ ಇತಿಹಾಸವನ್ನು ತಿರುಚಲಾಗಿದೆಯೇ..?
ಈ ಸಾಕ್ಷ್ಯಚಿತ್ರದಲ್ಲಿ
ಕೆಲವು ಗಮನಿಸುವಂತಹ ಅಂಶಗಳಿವೆ.
**ಚಂದ್ರನ ಮೇಲಿನ ಗುರುತ್ವಾಕರ್ಷಣೆ ಭೂಮಿಗಿಂತ ಆರು ಪಟ್ಟು ಕಡಿಮೆ!
ಅಂತಹುದ್ದರಲ್ಲಿ ಅದು ಹೇಗೆ ಅಷ್ಟು ಕಡಿಮೆ ಅವಧಿಯಲ್ಲಿ ಅಸಾಧ್ಯವೆನ್ನಬಹುದಾದಷ್ಟು ಫೋಟೊ ಕ್ಲಿಕ್ಕಿಸಲು
ಸಾಧ್ಯವಾಯಿತು..?
**ಪಾದದ ಗುರುತಿನ ತಗ್ಗಿನಲ್ಲಿರುವ ನೆರಳು-ಬೆಳಕಿನ ಅಸಮತೋಲನ..,
ಮೂನ್ ಲ್ಯಾಂಡರ್ಸಿನ ತೂಕ ಟನ್ ಗಟ್ಟಲೇ ಇದ್ದರೂ ಅದರ ತಗ್ಗಿನ ಗುರುತಿಗಿಂತ ಕೆಜಿ ಗಟ್ಟಲೇ
ತೂಕದ ಮನುಷ್ಯನ ಪಾದದ ತಗ್ಗು ಅದಕ್ಕಿಂತಲೂ ಆಳವಾಗಿ ಮೂಡಿದ್ದು ಹೇಗೆ?
** ಈ
ಚಂದ್ರಗ್ರಹಯಾನದಲ್ಲಿ ಭಾಗಿಯಾದ ಮುಖ್ಯ ವ್ಯಕ್ತಿಗಳು ಇದ್ದಿಕ್ಕಿದ್ದಂತೆ ಅಸಹಜವಾಗಿ, ಆಕಸ್ಮಿಕವಾಗಿ ಅಕಾಲಿಕ ಮರಣಕ್ಕೀಡಾದದ್ದೆಲ್ಲಾ ಕಾಕತಾಳೀಯವೇ..?
ಇವೆಲ್ಲಾ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿಯುತ್ತವೆ.
ನನಗೆ ಎಸ್.ಎಲ್. ಭೈರಪ್ಪನವರ ಆವರಣ ಓದಿದಾಗಲೂ ಹೀಗೆ ಆಗಿತ್ತು. ಟಿಪ್ಪು ಸುಲ್ತಾನ್ ಮತಾಂಧನಾ ? ಎನ್ನುವ
ಪ್ರಶ್ನೆಗೆ ನಿಖರ ಉತ್ತರ ಸಿಕ್ಕಿರಲಿಲ್ಲ.ಈಗಲೂ ಇಲ್ಲ. ನಂಜನಗೂಡಿನಲ್ಲಿ ಶ್ರೀನಂಜುಂಡೀಶ್ವರ ದೇವಸ್ಥಾನದಲ್ಲಿ ಟಿಪ್ಪು ಸುಲ್ತಾನ್ ನಂಜನಗೂಡಿಗೆ ಭೇಟಿ ಕೊಟ್ಟ, ದೇವಸ್ಥಾನಕ್ಕೆ ಕಾಣಿಕೆ ನೀಡಿದ ಕುರುಹುಗಳಿವೆ. ಆದರೆ ಎಸ ಎಲ್ ಭೈರಪ್ಪನವರ ಅಧ್ಯಯನ ಇವೆಲ್ಲಕ್ಕಿಂತ ಆಳವಾದುದರಿ೦ದ ಯಾವುದನ್ನೂ ಹೀಗೆ ಎಂದು ಹೇಳಲಾಗುವುದಿಲ್ಲ. ಏನೆ ಆಗಲಿ ಕೆಲವೊಂದು ಸಿನಿಮಾಗಳು,
ಸಾಕ್ಷ್ಯಚಿತ್ರಗಳು, ಪುಸ್ತಕಗಳು ಒಂದಷ್ಟು ಇತಿಹಾಸದ ಕಡೆಗೆ ತಿರುಗಿನೋಡುವಂತೆ, ಯೋಚಿಸುವಂತೆ ಮಾಡುತ್ತವಲ್ಲಾ..ಅದು ಖುಷಿಯ ಸಂಗತಿ. ಅಲ್ಲವೇ?