Tuesday, October 16, 2012

ಜನಶ್ರೀ ಪ್ರಶಸ್ತಿ ಮತ್ತು ಯೋಗರಾಜ್ ಭಟ್ ರ ಮಾತುಗಳು..

'ನಮಗೆ ಬುದ್ದಿ ಬಲಿತಾಗ ಸಿಹಿ ಅಂಗಡಿಯ ಮುಂದೆ ಹೋದಾಗ ಬೂಂದಿ ನೋಡಿ , ತಿನ್ನುವ ಆಸೆಯಾಗುವುದು ಸಹಜ. ಹಾಗೆ ತಿನ್ನುತ್ತಾ ಹೋದಂತೆ ಅದನ್ನು ಹೇಗೆ ಮಾಡುತ್ತಾರೆಂಬ ಕುತೂಹಲ ಉಂಟಾಗಿ ಅದರ ಬಗ್ಗೆ ತಲೆಕೆಡಿಸಿಕೊಂಡು ಮಾಡುವುದನ್ನು ಕಲಿತುಬಿಡುತ್ತೇವೆ. ಕಲಿತಾದ ಮೇಲೇ ಬೂಂದಿಯನ್ನು ಮಾಡಿ ಅಂಗಡಿ ಇಟ್ಟಾಗ ತಿನ್ನುವ ಖುಷಿ ಹೋಗಿಬಿಡುತ್ತದೆ. ಹಾಗೆ ನಮ್ಮ ನಾಲಗೆ ರುಚಿ ಕೆಡಿಸಿಕೊಳ್ಳುತ್ತದೆ. ಹಾಗೆ ಸಿನಿಮಾವೂ , ಸಿನೆಮಾ ತಂತ್ರಜ್ಞರೂ ಕೂಡ . ನಾವೆಲ್ಲಾ ರುಚಿ ಕೆಡಿಸಿಕೊಂಡ ತಂತ್ರಜ್ಞರು. ಒಬ್ಬ ಓದುಗ , ಪ್ರೇಕ್ಷಕ ಎಲ್ಲಿಯವರೆಗೆ ಬರೆ ಓದುಗನಾಗಿಯೇ ಅಥವಾ ಪ್ರೆಕ್ಷಕನಾಗಿಯೇ ಇರುತ್ತಾನೋ ಅಲ್ಲಿಯವರೆಗೆ ಆತ ಓದನ್ನು ,ಚಿತ್ರವನ್ನು ಸವಿಯಬಲ್ಲ..'
ಇದು ಮೊನ್ನೆ ಜನಶ್ರೀ ವಾಹಿನಿಯ ಕಿರುಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಖ್ಯಾತ ನಿರ್ದೇಶಕರಾದ ಯೋಗರಾಜ್ ಭಟ್ ಆಡಿದ ಮಾತುಗಳು . ನನಗೆ ಯೋಗರಾಜ್ ಭಟ್ ತುಂಬಾ ಇಷ್ಟ. ವ್ಯಕ್ತಿಯಾಗಿಯೂ, ನಿರ್ದೇಶಕನಾಗಿಯೂ . ಅವರ ಮುಂಗಾರು ಮಳೆಯನ್ನೂ ನಾನು ಚಿತ್ರಮಂದಿರದಲ್ಲೇ ಲೆಕ್ಕವಿಲ್ಲದಷ್ಟು ಸಲ ನೋಡಿದ್ದೇನೆ. ಅವರ ಜೊತೆ ನಾನು ಎರಡೇ ಮಾತಾಡಿರುವುದು. 
ನನಗೂ ಒಮ್ಮೆ ಭಟ್ಟರು ಹೇಳಿದಂತೆ ಭಾಸವಾಗಿಬಿಡುತ್ತದೆ. ಹಾಗಾಗಿಯೇ ನಾನು ಬರೆಯುವುದಕ್ಕಿಂತ ಓದುವುದನ್ನು ಹೆಚ್ಚು ಇಷ್ಟ ಪಡುತ್ತೇನೆ ಸಿನೆಮಾ ಮಾಡುವುದನ್ನು ಹಾಗೂ ನೋಡುವುದನ್ನು ಬೇರೆಬೇರೆಯಾಗಿ ಪರಿಗಣಿಸುತ್ತೇನೆ. ನಾಲಗೆ ರುಚಿ ಕೆಡಿಸಿಕೊಳ್ಳದಿರಲಿ ಎನ್ನುವ ಆಶಯ ನನ್ನದು.
 ಜನಶ್ರೀ ವಾಹಿನಿಯ ಕಿರುಚಿತ್ರದಲ್ಲಿ ನಮ್ಮ ಕಿರುಚಿತ್ರ 'ನಿರಾಕೃತ' ಕ್ಕೆ ಅತ್ಯುತ್ತಮ ಸಾಮಾಜಿಕ ಕಳಕಳಿಯ ಚಿತ್ರ  ಪ್ರಶಸ್ತಿ ಬಂದಿದೆ. ಸಂತಸವಾಗಿದೆ ನಮ್ಮ ಕಿರುಚಿತ್ರದ ಅವಧಿಯಿದ್ದದ್ದು 15 ನಿಮಿಷಗಳು. ಅದನ್ನು ಆರು ನಿಮಿಷಕ್ಕೆ ತುಂಡರಿಸಬೇಕಾದಾಗ ನನಗೆ ಅದರ ಭಾವವೇ ತುಂಡಾಗಿಬಿಡುತ್ತಲ್ಲ ಎನಿಸಿತ್ತು.ಅದು ನಿಜ ಕೂಡ.ಆದರೆ ಕಿರುಚಿತ್ರವೊಂದನ್ನು ಮನೆಯಲ್ಲಿಟ್ಟುಕೊಂಡು ನಾನು ತಯಾರಿಸಿದ ಕಿರುಚಿತ್ರದ ಅವಧಿಯಷ್ಟನ್ನೇ ಸ್ಪರ್ಧೆಗೆ ಇಡೀ ಎಂದು ಹೇಳಲಾಗುವುದಿಲ್ಲವಲ್ಲ... ಹಾಗಾಗಿ ಅದನ್ನು ತುಂಡರಿಸೋಣ ಎಂದು  ನಿರ್ಧರಿಸಿದೆ. ಅದಕ್ಕಾಗಿ ಸಂಕಲನ ಕೇಂದ್ರಕ್ಕೆ ಹೋಗುವುದು, ಅಲ್ಲಿ ಕುಳಿತು ನೀಟಾಗಿ ಭಾವಕ್ಕೆ ಧಕ್ಕೆ ಬರದಂತೆ ತುಂಡರಿಸುವುದು ಆವತ್ತಿನ ನನ್ನ ಕೆಲಸದ ಬಿಸಿಯಲ್ಲಿ ಸಾಧ್ಯವಿರಲಿಲ್ಲ . ಏನು ಮಾಡುವುದು ಎಂದು ಯೋಚಿಸಿದೆ. ನನ್ನಲ್ಲಿದ್ದ ಸಾಫ್ಟ್ ವೇರ್[ಅದು ಸಂಕಲನಕ್ಕೆ ಬಳಸುವ ಸಾಫ್ಟ್ ವೇರ್ ಅಲ್ಲ] ಒಂದರಿಂದ ನಾನೇ ಸಂಕಲನ  ಕಾರ್ಯ ಕೈಗೊಂಡೆ. ಕಿರುಚಿತ್ರವನ್ನು ಅದರ ಭಾವದ ಸಮೇತ ಸರಿ ಸುಮಾರು ಮೂರನೇ ಒಂದು ಭಾಗಕ್ಕಿಳಿಸುವಲ್ಲಿ ಯಶಸ್ವಿಯಾದೆ. ಆಮೇಲೆ ನೋಡಿದಾಗ ನನಗನಿಸಿದ್ದು ಇದಕ್ಕೆ ಯಾವ ವಿಭಾಗದಲ್ಲೂ ಅಂದರೆ ನಿರೂಪಣೆ, ಸಂಕಲನ, ನಿರ್ದೇಶನ.. ಹೀಗೆ ಪ್ರಶಸ್ತಿ ಕೊಡುವುದು ಸೂಕ್ತವಲ್ಲ ಎಂಬುದು. ಕಥೆಗಾಗಿ ಕೊಡಬಹುದು..ಆದರೆ ತಾಂತ್ರಿಕ ಅಂಶಗಳನ್ನು ನಾನೆ ನಿರ್ಜೀವಗೊಳಿಸಿಬಿಟ್ಟಿದ್ದೆ. ಬೇರೇನೂ ಮಾಡಲು ಆಗ ಸಮಯವೂ ಇರಲಿಲ್ಲ . ಹಾಗೆಯೇ ಕಳುಹಿಸಿದ್ದೆ.
ಈಗ ಜನಶ್ರೀಯವರು ಒಟ್ಟಾರೆಯಾಗಿ ಚಿತ್ರದ ಕಥೆಯ ಆಶಯವನ್ನು ಪರಿಗಣಿಸಿ ಪ್ರಶಸ್ತಿಕೊಟ್ಟಿದ್ದಾರೆ. 
ಇನ್ನೊಂದು ಖುಷಿಯ  ವಿಷಯವೆಂದರೆ ನನಗೆ ಪ್ರಶಸ್ತಿ ನೀಡಿದ್ದು ಅತೀ ಹೆಚ್ಚು ಚಿತ್ರಗಳ ನಿರ್ದೇಶಕ ಸಾಯಿಪ್ರಕಾಶ್.

10 comments:

  1. ಅಭಿನಂದನೆಗಳು ಬಾಸ್.. :))

    ReplyDelete
  2. Congrats Ravindra!!
    :-)
    malathi S

    ReplyDelete
    Replies
    1. thanks..ಏನಾದರೂ ಓದಿದ್ರಾ ಇತ್ತೀಚಿಗೆ..? ನಾನು ಹೇಮರೆಡ್ಡಿ ಮಲ್ಲಮ್ಮ್ಮ ಓದ್ತಾನೆ ಇದ್ದೀನಿ...

      Delete
  3. ಅಭಿನ೦ದನೆಗಳು. ನಿರಾಕೃತ ಚೆನ್ನಾಗಿದೆ :)

    ReplyDelete
  4. ಆತ್ಮೀಯರಾದ ರವೀಂದ್ರ,
    ನಿಮ್ಮ ಚಿತ್ರಕ್ಕೆ ಪ್ರಶಸ್ತಿ ಸಿಕ್ಕಿದ್ದು ತಿಳಿದು ಬಹಳ ಸಂತೋಷವಾಗಿದೆ. ನಿಮಗೆ ಅಭಿನಂದನೆಗಳು. ನನಗೂ ಒಮ್ಮೆ ಯಾರೊ ಹೇಳಿದ್ದು ನೆನಪಿದೆ. I like movies but I do not like to get inside the circle. Then it gets tedious. ನೀವು ಭಟ್ಟರ ಬಗ್ಗೆ ಬರೆದಾಗ ಆ ಮಾತು ನೆನೆಪಾಯಿತು. ಬರೆಯುವುದರಿಂದ ಓದುವ ಸವಿಯನ್ನು ಕಳೆದುಕೊಳ್ಳುವುದಿಲ್ಲವೆಂದು ನನ್ನ ಅಭಿಪ್ರಾಯ. ಓದುಗ ಯಾವತಿದ್ದರೂ ತನ್ನ ಓದಿನ ಅನುಭವವನ್ನು ಕಂಡುಕೊಳ್ಳುತ್ತಾನೆ ಅನಿಸುತ್ತದೆ.

    ಮಧು

    ReplyDelete
  5. ನಾನು ಹಲವು ಬಾರಿ ಈ ಪ್ರಶ್ನೆ ಎದುರಿಸಿದ್ದಿದೆ. ಸಿನಿಮಾ ನಿರ್ಮಾಣದ ಒಳಗೆ ಕೆಲಸ ಮಾಡಿಕೊಂಡು ಸಿನಿಮಾ ಹೇಗೆ ಅನುಭವಿಸಲು ಸಾಧ್ಯ ಎಂದು? ಇದಕ್ಕೆ ನನಗೆ ನಿರ್ಧಿಷ್ಟ ಉತ್ತರವಿಲ್ಲವಾದರು.. ಸಿನಿಮಾದೊಳಗೆ ಕೆಲಸ ಮಾಡುವಾಗ ನಾನು ತಂತ್ರಜ್ಞನಾಗಿ ಮಾತ್ರ ಉಳಿದು.. ಸಿನಿಮಾ ನೋಡುವಾಗ ನಾನೊಬ್ಬ ತಂತ್ರಜ್ಞ ಎಂಬುದನ್ನು ಮರೆತು ಸಿನಿಮಾ ನೋಡುಲು ಪ್ರಯತ್ನಿಸುತ್ತೇನೆ. ಹಲವು ಬ್ಆರಿ ಈ ಪ್ರಕ್ರಿಯೆಯು ಅದಲು ಬದಲು ಆಗುವ ಸಾಧ್ಯತೆಯೂ ಇಲ್ಲದಿಲ್ಲ. ಪ್ರಶಸ್ತಿ ಬಂದುದಕ್ಕೆ ಅಭಿನಂದನೆಗಳು.

    ಮಂಸೋರೆ

    ReplyDelete
  6. Dear Ravindra:
    Started with GopalKrishna pai maam's 'swapna saraswath'...a must read for all especially a konkani person like me...:-)neevu Odiddeera??
    malathi S

    ReplyDelete
  7. ಅಭಿನಂದನೆಗಳು.

    ReplyDelete