Monday, October 15, 2012

ಸಿನೆಮಾ ಮತ್ತು ಪ್ರೊಜೆಕ್ಟರ್....

ನನಗೆ ನಿರ್ದೇಶಕರೊಬ್ಬರು ಹೇಳಿದ ಘಟನೆ ಇದು. ತಮಿಳಿನ ಖ್ಯಾತ ನಿರ್ದೇಶಕರೊಬ್ಬರ ಸಿನೆಮಾ ಅದು.  ಅದರ ನಾಯಕ ಪಾರ್ತಿಬನ್.ಅದು ಕನ್ನಡದಲ್ಲೂ ರೀಮೇಕ್ ಆಯಿತು. ಜೊತೆಗೆ ಅದಕ್ಕೆ ರಾಷ್ಟ್ರಪ್ರಶಸ್ತಿ ಕೂಡ ಗಳಿಸಿತ್ತು. ಅದು ತಮಿಳುನಾಡಿಗಿಂತ  ಕರ್ನಾಟಕದ ಚಾಮರಾಜನಗರದ ಚಿತ್ರಮಂದಿರವೊಂದರಲ್ಲಿ ಅಭೂತ ಪೂರ್ವ ಯಶಸ್ಸುಗಳಿಸಿತ್ತಂತೆ. ಇದನ್ನು ಕಂಡ ಆ ಚಿತ್ರದ ನಿರ್ದೇಶಕರಿಗೆ ಅಚ್ಚರಿ. 'ತಮಿಳುನಾಡಿಗಿಂತ ಅದೇಗೆ ಇಲ್ಲಿ ಅಷ್ಟೊಂದು ಯಶಸ್ಸು ಕಾಣಲು ಸಾಧ್ಯ ' ಏನಿಸಿದ್ದೆ ಸೀದಾ  ಚಾಮರಾಜನಗರದ ಆ ಚಿತ್ರಮಂದಿರಕ್ಕೆ ಬಂದು ಒಂದು ಕುರ್ಚಿಯಲ್ಲಿ ಆಸೀನರಾದರು. ಅವರಿಗೆ ಜನರ ಪ್ರತಿಕ್ರಿಯೆಯನ್ನು ಗಮನಿಸುವುದಿತ್ತು. ಚಿತ್ರ ಪ್ರಾರಂಭವಾಯಿತು. ಹಾಗೆ ಮುಗಿಯಿತು. ಜನರೆಲ್ಲಾ ಚಿತ್ರದ ಭಾವಕ್ಕೆ ಪರವಶರಾಗಿದ್ದರು. ಹಾಗೆಯೇ ಚಿತ್ರದ ಉದ್ದವೂ ಮೊಟಕಾಗಿತ್ತು. ಕೆಲವು ಶಾಟ್ ಗಳು ಇರಲೇ ಇಲ್ಲ . ಇದೇನು ಎನಿಸಿ ನಿರ್ದೇಶಕ ಚಿತ್ರಮಂದಿರದ ಮಾಲೀಕನಲ್ಲಿ ತಮ್ಮ ಪರಿಚಯ ಮಾಡಿಕೊಂಡು ಅಲ್ಲಿನ ಪ್ರೊಜೆಕ್ಟರ್ ಕೊನೆಗೆ ಹೋಗಿ ಅಲ್ಲಿದ್ದ ಆಪರೇಟರ್ ನನ್ನು ಕೇಳಿದರಂತೆ. 'ಅಲ್ಲಪ್ಪಾ..ಅದೇಕೆ ಕೆಲವ್ವೊಂದು ಕಡೆ ಕಟ್ ಹಾಗಿರೋಹಂಗಿದೆ...' ಅದಕ್ಕೆ ಆ ಪ್ರೊಜೆಕ್ಟರ್ ಆಪರೇಟರ್ 'ಸಾರ್..ಅಲ್ಲೆಲ್ಲಾ ಬೋರ್ ಹೊಡಿತಿತ್ತು..ಮತ್ತದು ಬೇಕೂ ಇರ್ಲಿಲ್ಲಾ. ಫಸ್ಟ್ ದಿನ ಜನ ಎಲ್ಲಾ ಎದ್ದುಹೊಗ್ತಿದ್ರು. ಅದಕ್ಕೆ ಇಷ್ಟೊಳ್ಳೆ ಸಿನಿಮಾ ಬೋರ್ ಅಯ್ತೈತಲ್ಲಾ...ಅನ್ನಿಸ್ತು. ಎಲ್ಲೆಲ್ಲಿ ಜನ ಹೋಯ್ತಾ ಅವರೋ ಅದನ್ನು ನೋಡ್ಕಂಡು ಹೆಚ್ಚುಕಮ್ಮಿ ಆಗದಿರೋ ಹಂಗೆ ನಾನೇ ಕಟ್ ಮಾಡ್ಬಿಟ್ಟೆ....'ಅಂದನಂತೆ. ನಿರ್ದೇಶಕರು ಅವನನ್ನು ಮೆಚ್ಚಿದ್ದೆ ಅಲ್ಲ ಇನ್ನು ಮುಂದೆ ನನ್ನೆಲ್ಲಾ ಸಿನೆಮಾವನ್ನು ಬಿಡುಗಡೆಗೆ ಮುನ್ನ ಪ್ರೊಜೆಕ್ಟರ್ ಆಪರೇಟರ್ ಗೆ ತೋರಿಸಿ ಅವರ ಸಲಹೆ ಪಡೆಯುತ್ತೇನೆ ಎಂದು ನಿರ್ಧರಿಸಿದರಂತೆ.
ನಮ್ಮ ಚಿತ್ರ ಮಾರ್ಚ್ 23 ರ  ಗ್ರೇಡಿಂಗ್ ಮುಗಿದಿತ್ತು. ಅದರ ಎರಡು ರೀಲುಗಳನ್ನೊಮ್ಮೆ ಪರೀಕ್ಷೆ ಮಾಡೋಣ ಎಂದು ನಮ್ಮ ಕ್ಯಾಮೆರಾಮನ್ ನಿರಂಜನ ಬಾಬು ಹೇಳಿದರು. ಸರಿ ಎಂದದ್ದೆ   ಅಲ್ಲೇ ಇದ್ದ ಪ್ರೊಜೆಕ್ಟರ್ ನಲ್ಲಿ ಆ ಎರಡು ರೀಲುಗಳನ್ನು ನೋಡೇಬಿಡೋಣ ಎನಿಸಿದ್ದರಿಂದ ನಾನು, ನಮ್ಮ ನಿರ್ಮಾಪಕರು, ಸಂಭಾಷಣೆಗಾರ ಗಿರಿಬಾಲು ಮೂವರು ಪ್ರಸಾದ್ನಲ್ಲಿನ ಪೂರ್ವ ವೀಕ್ಷಣಾ ಚಿತ್ರಮಂದಿರದ ಕುರ್ಚಿಗಳಲ್ಲಿ ಆಸೀನರಾದೆವು. ಮೊದಲ ಬಾರಿಗೆ ದೊಡ್ಡ ಪರದೆಯಲ್ಲಿ ನಮ್ಮದೇ ಸಿನಿಮಾ ನೋಡುವ ಖುಷಿ ನಮ್ಮದು. ಅಲ್ಲೀವರೆಗೆ ನಮ್ಮ ಸಿನೆಮಾವನ್ನು ಸಂಕಲನ ಮೇಜಿನ ಮೇಲೆ ನೂರಾರು ಬಾರಿ ನೋಡಿದ್ದಾಗಿತ್ತಾದರೂ ದೊಡ್ಡ ಪರದೆಯಲ್ಲಿ ಡಿಟಿಎಸ್ ಶಬ್ಧದೊಂದಿಗೆ ನೋಡುವ ಖುಷಿಯೇ  ಬೇರೆ. ಸಿನೆಮಾ ಶುರುವಾಯಿತು ಎರಡು ರೀಲು ಮುಗಿಯಿತು. ವರ್ಣವಿನ್ಯಾಸದಲ್ಲಿ ನಮಗೆ ತೃಪ್ತಿಯಿತ್ತು. ನಮ್ಮ ಸಿನೆಮಾದ ಕಥೆ ಮೂರು ಟ್ರಾಕ್ ನಲ್ಲಿ ಹೋಗುವುದರಿಂದ ಮೂರು ಟ್ರಾಕುಗಳೂ ಮೂರು ವಿಧದಲ್ಲಿದ್ದರೆ ಚೆಂದ ಮತ್ತು ಪರಿಣಾಮಕರ ಎಂಬುವುದು ನನ್ನ ಆಶಯವಾಗಿತ್ತು. ಅದಕ್ಕೆ ನಮ್ಮ ತಂತ್ರಜ್ಞರೂ ಹೌದು ಎಂದು ಕೊಂಡಾಡಿದ್ದರು. ಹಾಗಾಗಿ ಕೊನೆಯ ಸಾರಿ ಓಕೆ ಎನ್ನುವ ಮೊದಲು ನೋಡುವವರೆಗೂ ನಮ್ಮೆಲ್ಲರಿಗೂ ಒಂದು ರೀತಿಯ ಕಳವಳ-ಕುತೂಹಲ ಇದ್ದೇ ಇತ್ತು. ಬಹುಶ ಪ್ರತಿ ಪ್ರಯೋಗದ ಹಿಂದೆ ಈ ತೆರನಾದುದದೊಂದು ಭಯ ಕುತೂಹಲ ಇದ್ದೆ ಇರುತ್ತದೆನಿಸುತ್ತದೆ .
ಹೊರಗೆ ಬಂದೆವು. ಆಗ ಪ್ರಸಾದ್ ಪೂರ್ವ ವೀಕ್ಷಣ ಚಿತ್ರಮಂದಿರದ ಪ್ರೊಜೆಕ್ಟರ್ ನನ್ನ ಬಳಿ ಬಂದರು . ಬಂದವರು 'ಸಾರ್ ನೀವು ಮಾರ್ಚ್ 23 ಚಿತ್ರದ ನಿರ್ದೇಶಕರ..?' ಎಂದರು. ನಾನು ಹೌದೆಂದೆ. 'ಸಾರ್ ಯಾವತ್ತು ಇದರ ಪ್ರೀಮಿಯರ್ ಷೋ ಅಥವಾ ಪ್ರೊಜೆಕ್ಷನ್ ?'ಎಂದರು. 'ಗ್ರೇಡಿಂಗ್ ಮುಗೀಲಿ ಮಾಡೋಣ ' ಎಂದೇ. 'ಯಾಕೆ ಎನ್ನುವ ಪ್ರಶ್ನೆಯನ್ನೂ ಕೇಳಿದೆ .' ಸರ್ ನಾನು ಬಹುತೇಕ ಕನ್ನಡದ ಎಲ್ಲಾ ಸಿನೆಮಾನೂ ಇಲ್ಲಿ  ನೋಡ್ತೇನೆ.ಸೆನ್ಸಾರ್ ಮುಂಚೆ, ಸೆನ್ಸಾರ್ ಅದಮೇಲೆ ನೋಡೇ ನೋಡ್ತೀನಿ. . ಸುಮಾರು ಸಿನೆಮಾಗಳು ಎರಡ್ಮೂರು ರೀಲು ನೋಡ್ತಿದ್ದ ಹಾಗೆ ಅದರ ಕಥೆ ಮುಂದಾಗಬಹುದಾದ ಸಾಧ್ಯತೆಗಳು ಗೊತ್ತಾಗಿಬಿಡ್ತವೆ. ಇದರ ಸ್ಟೋರಿ ಇಷ್ಟೇ ಅನ್ಸಿಬಿಡುತ್ತೆ. ಆದರೆ ನಿಮ್ಮ ಸಿನೆಮಾದ ಎರಡು ರೀಲು ನೋಡಿದೆ. ಏನೂ ಅರ್ಥ  ಆಗ್ಲಿಲ್ಲ..ಅಷ್ಟೇ ಅಲ್ಲ. ಮುಂದೇನಾಗಬಹುದು ಅನ್ನೋ ಕ್ಯೂರಿಯಾಸಿಟೀ ಬಂತು...ಅದಕ್ಕೆ ನೋಡಬೇಕನ್ನಿಸುತ್ತೆ. ..ಏನೋ ಇದೆ ಅನ್ನಿಸ್ತು ಸಾರ್ ಅದಕ್ಕೆ ನಾನೇ ಕಾಯೋಹಾಗ್ ಮಾಡ್ತು ನಿಮ್ ಸಿನಿಮಾ ..' ಎಂದರು. ನಾನು ಒಳಗೊಳಗೇ ಖುಷಿಯಾದೆ. ನಮ್ಮತಂಡದವರಲ್ಲದ ಪ್ರೇಕ್ಷಕರೊಬ್ಬರು ಆಡಿದ ಮಾತು ನನಗೆ ಭರವಸೆ ತುಂಬಿತು. ಉಸಿರು ನಿರಾಳವಾಯಿತು. ನಾನಂದೆ 'ಸಾರ್ ಇಷ್ಟರಲ್ಲೇ ಮಾಡ್ತೀವಿ. ನೋಡಿದ ಮೇಲೆ ಎಲ್ಲಿ  ಯಾವ್ಯಾವ್ದು ಹೆಚುಕಡಿಮೆ ಆಯಿತು  ಅನ್ನೋದನ ಪ್ರಾಮಾಣಿಕವಾಗಿ ಹೇಳ್ಬೇಕು..' ಎಂದು ಮೇಲಿನ ಘಟನೆಯನ್ನು ಅವರಿಗೆ ಹೇಳಿದೆ.
ಈಗ ಮುಂದಿನ ತಿಂಗಳು ಬಿಡುಗಡೆಗೆ ತಯಾರಾಗುತ್ತಿದ್ದೇವೆ ...
ಬದುಕು ಯಾವ ತಿರುವು ಪಡೆಯುವುದೋ ಎನ್ನುವ ಕುತೂಹಲ ಹಾಗೆ ಇದೆ..?


7 comments:

  1. ಕೆಲವು ನಿರ್ದೇಶಕರುಗಳಿಗಿಂತಾ ಉಳಿದವರಿಗೇ ಉತ್ತಮ ಅಭಿರುಚಿ ಇರುತ್ತದೆ, ಅವಕಾಶವಿರುವುದಿಲ್ಲ ಅಷ್ಟೇ.

    ReplyDelete
    Replies
    1. ನಿಜ. ಆದರೆ ನನಗೊಂದು ಗೊಂದಲವಿದೆ. ಅವಕಾಶವನ್ನೂ ನಾವು ಹುಡುಕಿಕೊಂಡು ಹೋಗಬೇಕಾ..? ಅಥವಾ ಸೃಷ್ಟಿಸಿಕೊಳ್ಳಬೇಕಾ...ಎಂಬುದು.

      Delete
  2. ನಿಮ್ಮ ಬ್ಲಾಗನ್ನು ತಪ್ಪದೇ ಓದುತ್ತೇನೆ. ನಿಮ್ಮ ಸಿನೆಮಾ ಅಭಿರುಚಿಯ ಬಗ್ಗೆ ಎರಡು ಮಾತಿಲ್ಲ. ಕನ್ನಡದ ಸೀಮಿತ ಮಾರುಕಟ್ಟೆಯ ಮಿತಿಯಲ್ಲಿ ನೀವು ನಿಮ್ಮ ಮೊದಲ ಸಿನೆಮಾ ಮಾಡಿದ್ದೀರಿ. ಆಲ್ ದ ಬೆಸ್ಟ್! ನಿಮ್ಮ ಸಿನೆಮಾ ಇಂಗ್ಲಂಡಿಗೂ ಬರಲಿ, ನಾವೂ ನೋಡುವಂತಾಗಲಿ.

    ReplyDelete
  3. HOSA NIRDESHAKA KARTIK SARAGOOR.VEVAKANADARA BAGGE ATHYUTTAMA CHITRA MAADIDDARE.. NODI MITRARE,,9481457616

    ReplyDelete
    Replies
    1. ಖಂಡಿತ ಸರ್. ಅದರ ಬಗ್ಗೆ ಇನ್ನಷ್ಟು ಮಾಹಿತಿ ಕೊಡುವಿರಾ..?ಯಾವಾಗ ಬಿಡುಗಡೆ...ಅದರ ಹೆಸರು?

      ಧನ್ಯವಾದಗಳೊಂದಿಗೆ
      ರವೀಂದ್ರ

      Delete