Tuesday, May 7, 2013

ರಹಸ್ಯಮಯ ರೀಮೇಕುಗಳು...

ರೀಮೇಕ್ ಎಂಬುವುದು ಚಿತ್ರರಂಗದಲ್ಲಿ ಸರ್ವೇ ಸಾಮಾನ್ಯ. ಬಹುತೇಕ ಎಲ್ಲಾ  ದೇಶದ, ಎಲ್ಲಾ ಭಾಷೆಯ ಚಿತ್ರರಂಗದಲ್ಲೂ ರೀಮೇಕ್ ಎನ್ನುವುದು ಇದ್ದಇದೆ. ಯಾವುದೋ ಕಥೆ ಸಿನೆಮಾಕ್ಕೆ ತಕ್ಕುದಾದರೆ ಅದನ್ನು ಸಿನೆಮಾರೂಪಕ್ಕೆ ತರಲು ಒಬ್ಬ ಚಿತ್ರಕರ್ಮಿ ಮುಂದಾಗುತ್ತಾನೆ. ಇಲ್ಲಿ ಕಥೆ ಯಾವುದೇ ಭಾಷೆಯದಾದರೂ ಅಭ್ಯಂತರವಿರುವುದಿಲ್ಲ. ಹಾಗೆಯೇ ರೀಮೇಕ್.  ಈಗಾಗಲೇ ಬೇರೆ ಭಾಷೆಯಲ್ಲಿ ಬಂದ ಚಿತ್ರವೂ ನಮ್ಮ ನಾಡಿಗೆ ಭಾಷೆಗೆ ಅಗತ್ಯ ಎನಿಸಿದಾಗ ಅದನ್ನು ಪುನರ್ನಿರ್ಮಾಣ ಮಾಡುವುದು ತಪ್ಪಲ್ಲ. ಆದರೆ ಕೇವಲ ಯಶಸ್ಸನ್ನಷ್ಟೇ ಮಾನದಂಡವನ್ನಾಗಿಟ್ಟುಕೊಂಡು ಸ್ವಂತ ಕಥೆ ಮಾಡುವ ರಿಸ್ಕು ತೆಗೆದುಕೊಳ್ಳದೆ ಸುಖಾ ಸುಮ್ಮನೆ ರೀಮೇಕ್ ಮಾಡುವುದು ಸೃಜನಶೀಲತೆಯ ದಾರಿದ್ರ್ಯ ಎನ್ನಬಹುದು.ಟೈಟಾನಿಕ್ ಚಿತ್ರ ಆರನೆಯ ಬಾರಿ ನಿರ್ಮಿತವಾದ ಚಿತ್ರ. ಹಾಗೆಯೇ ಬಹಳಷ್ಟು ಶ್ರೇಷ್ಠ ಚಿತ್ರಗಳು ಇನ್ನೊಂದು ಭಾಷೆಯಿಂದ ಬಂದವುಗಳೇ ಆಗಿವೆ. ಇನ್ನೂ ಒಂದಿದೆ. ಅದು ಸ್ಫೂರ್ತಿ.. ಒಂದು ಸಿನೆಮಾ ನೋಡುವಾಗ ಅದರಲ್ಲಿನ ಕೆಲವು ದೃಶ್ಯ, ಸನ್ನಿವೇಶಗಳಿಂದಾಗಿ ಬೇರೆಯದೇ ಆದ ಕಥೆಯೊಂದು ಹೊಳೆದುಬಿಡಬಹುದು.ಆಗ ಅದು ಸ್ಫೂತಿಯಾಗುತ್ತದೆ.ಕನ್ನಡದ ಓಂ ಚಿತ್ರ, ಹಿಂದಿಯ ಸತ್ಯ ಚಿತ್ರಕ್ಕೆ ಸ್ಫೂರ್ತಿ ಎಂದು ಸ್ವತಹ ರಾಮ್ ಗೋಪಾಲ್ ವರ್ಮರವರೆ ಹೇಳಿಕೊಂಡಿದ್ದಾರೆ. ಮೈನೆ ಪ್ಯಾರ್ ಕಿಯಾ ಚಿತ್ರಕ್ಕೆ ಪ್ರೇಮಲೋಕ ಸ್ಫೂರ್ತಿ..ಹೀಗೆ.
ಮೊನ್ನೆ ಶರಣ್ ಅಭಿನಯದ ಸುಂದರಿ ಗಂಡ ಸದಾನಂದ ಎನ್ನುವ ಸಿನೆಮಾ ವಾಹಿನಿಯೊಂದರಲ್ಲಿ ನೋಡುತ್ತಿದ್ದೆ. ನೋಡುತ್ತಾ ನೋಡುತ್ತಾ ನನಗೆ ಗೊತ್ತಾದ ವಿಷಯವೆಂದರೆ ಅದು ಹಾಲಿವುಡಿನ ಕಾಲಿನ್ ಫೆರೆಲ್ ಅಭಿನಯದ ಫೋನ್ ಬೂತ್ ಚಿತ್ರದ ಕನ್ನಡದ ಅವತರಣಿಕೆ ಎಂಬುದು. ನೋಡಿ ಒಂದು ಗಂಭೀರ, ಥ್ರಿಲ್ಲರ್ ಚಿತ್ರವನ್ನು ಹಾಸ್ಯ ಲೇಪನದ ಜೊತೆಗೆ ನಿರೂಪಿಸುವ ವಿಫಲ ಯತ್ನ ಎನ್ನಬಹುದು. ಬಹುಶ ಈ ಸಿನೆಮಾ ಫೋನ್ ಬೂತ್ ನಕಲು ಎಂಬುದು ಸುಮಾರು ಜನರಿಗೆ ಗೊತ್ತಿಲ್ಲ ಎನ್ನಬಹುದು. ಯಾಕೆಂದರೆ ಸಿನೆಮಾ ತಯಾರಕರೂ ಅದರ ಬಗ್ಗೆ ಮಾತಾಡಿಲ್ಲ, ಸಿನೆಮಾ ಜನರನ್ನೂ ತಲುಪಿಲ್ಲ. 
ಆಶಿಕಿ ಚಿತ್ರದ ಹಾಡುಗಳು ಈವತ್ತಿಗೂ ಮೈ ರೋಮಾಂಚನಗೊಳಿಸುತ್ತವೆ.ಹನ್ನೆರೆಡು ಹಾಡುಗಳೂ ಸೂಪರ್ ! ಅನು ಅಗರವಾಲ್, ರಾಹುಲ್ ರಾಯ್ ಅಭಿನಯವನ್ನು ಮರೆಯುವುದಾದರೂ ಹೇಗೆ..? ಕನ್ನಡದಲ್ಲಿ ಆಶಿಕಿ ರೋಜಾ ಎಂಬ ಹೆಸರಿನಲ್ಲಿ ಪುನರ್ನಿರ್ಮಾಣವಾಗಿದೆ ಮತ್ತು ನೀರಸವಾಗಿದೆ.
ಕೆಲವೇ ದಿನಗಳ ಹಿಂದೆ ಬೆಂಕಿ ಬಿರುಗಾಳಿ ಎಂಬೊಂದು ಸಿನಿಮಾ ಬಂದಿತ್ತು. ನನಗೋ ಆ ಸಿನೆಮಾದ ಬಗ್ಗೆ ಕೆಟ್ಟ ಕುತೂಹಲ. ಒಬ್ಬ ಅದೇಗೆ ಆ ತರಹದ ಸಿನೆಮಾ ಮಾಡಲು ಸಾಧ್ಯ..? ಮಾಡಿದ್ದರೂ ಕಥೆ ಹೇಗೆ ಹೆಣೆದಿರಬಹುದು ಎಂದು ತಲೆಕಡಿಸಿಕೊಂಡು ನೋಡಿಯೇ ಬಿಡೋಣ ಎಂದು ಚಿತ್ರಮಂದಿರಕ್ಕೆ ನುಗ್ಗಿಯೇ ಬಿಟ್ಟಿದ್ದೆ. ಅನಾಮತ್ತು ಎರಡು ಘಂಟೆಗಳ ಭರ್ಜರಿ ಮನರಂಜನೆ ಆ ಚಿತ್ರ. ತಲೆಬುಡವಿಲ್ಲದ , ಅರ್ಥಹೀನ ಸಿನೆಮಾ ಅದು. ಕನ್ನಡ ಚಿತ್ರರಂಗದ ಅಧೋಗತಿಗೆ ಅಂತಹ ನಾಲ್ಕಾರು ಚಿತ್ರಗಳು ಸಾಕು ಎಂದು ಹೇಳಬಹುದು. ಇರಲಿ. ಆದರೂ ಆ ಸಿನೆಮಾದಲ್ಲಿನ ಕಥೆ ಏನಿರಬಹುದು..? ಅದು ಯಾವುದಾದರೂ ಸಿನೆಮಾದ ಸ್ಫೂರ್ತಿಯೇ..?
ನಿಜಾಂಶ ಗೊತ್ತಾದರೆ ನೀವೇ ಬೆಚ್ಚಿ ಬೀಳುತ್ತೀರೀ..ಅನುರಾಗ್ ಬಸು ನಿರ್ದೇಶನದ ಅದ್ಭುತ ಚಿತ್ರಕಥೆಯ ಗ್ಯಾಂಗ್ ಸ್ಟರ್ ಸಿನೆಮಾ ನಿಮಗೆ ಗೊತ್ತಲ್ಲಾ..ಅದರಲ್ಲಿನ ನಿರೂಪಣೆ ಭಾವವನ್ನು ಮರೆಯಲಾದರೂ ಹೇಗೆ ಸಾಧ್ಯ..ಅದನ್ನೇ ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ಕನ್ನಡೀಕರಿಸಿದ್ದಾರೆ ಪುಣ್ಯಾತ್ಮರು. ಅಬ್ಬಾ ದೇವರೇ..? ಎನಿಸದಿರಲಿಲ್ಲ.
ಹೇರಾ ಪೆರಿ ಚಿತ್ರವೂ ಕನ್ನಡದಲ್ಲಿದೆ. ಆಪ್ತಮಿತ್ರಕ್ಕೂ ಮುನ್ನ ಮಣಿ ಚಿತ್ರತಾಲ್ ಚಿತ್ರವೂ ಸಾಗರಿ ಹೆಸರಲ್ಲಿ ಕನ್ನಡಕ್ಕೆ ಬಂದಿತ್ತು.ಹಾಗೆಯೇ ವರ್ಮಾ ಕಂಪನಿಯಿಂದ ಬಂದಂತಹ ಅತ್ಯುತ್ತಮ ಚಿತ್ರ ಏಕ್ ಹಸೀನಾ ತಿ ಕೂಡ ಕನ್ನಡದಲ್ಲಿ ಪ್ರೇಮ ಅಭಿನಯದಲ್ಲಿ ಬಂದಿದೆ.
ಕೆಲವು ಸಿನೆಮಾಗಳು ಮೂಲ ಭಾಷೆಯಲ್ಲಿ ಮಾಸ್ಟರ್ ಪೀಸ್ ಎನಿಸಿಕೊಳ್ಳುತ್ತವೆ.ಅವುಗಳನ್ನು ನಮ್ಮ ಭಾಷೆಗೆ ತರುವುದು ಸುಲಭದ ಕೆಲಸವಲ್ಲ. ಅಂತಹ ಸಿನೆಮಾಗಳಲ್ಲಿನ ಪಾತ್ರಧಾರಿಗಳ ಆಯ್ಕೆಯೇ ಸವಾಲಿನ ಕೆಲಸ. ಆದರೆ ಕನ್ನಡದ ಕೆಲವರು ಯಾವ ಯಗ್ಗು ಸಿಗ್ಗಿಲ್ಲದೆ ಅಂತಹ ಮಾಸ್ಟರ್ ಪೀಸ್ ಗಳನ್ನೇ ಕನ್ನಡಕ್ಕೆ ತಂದಿರುವುದು ಆಶ್ಚರ್ಯ ಎನಿಸುತ್ತದೆ.
ಇವು ನಾನು ಬಿಡುಗಡೆಯಾಗುವ ಬಹುತೇಕ ಚಿತ್ರಗಳನ್ನು ನೋಡುವುದರಿಂದ ಗೊತ್ತಾಗುತ್ತದೆ. ಆದರೆ ಗೊತ್ತಿಲ್ಲದೆಯೇ ಇನ್ನೂ ಯಾವ್ಯಾವ ಮಹಾನ್ ಚಿತ್ರಗಳು ಕನ್ನಡೀಕರಣಗೊಂಡಿವೆಯೋ..
ನಿಮ್ಮ ಅನುಭವಕ್ಕೆ ಬಂದಿರುವ ಅಂತಹ ಸಿನಿಮಾ ಯಾವುವು..? 

19 comments:

 1. ಒಳ್ಳೆಯ ಪ್ರಶ್ನೆಯನ್ನೇ ತ೦ದಿದ್ದೀರಿ. ಈ ರೀತಿಯ ರೀಸರ್ಚ್ ಕನ್ನಡಕ್ಕೆ ಬೇಕು.
  ಕಾರ್ನಾಡ್ ರ ಒ೦ದಾನೊ೦ದು ಕಾಲದಲ್ಲಿ ಕುರೋಸವ ಚಿತ್ರಗಳಿ೦ದ ಇ೦ಸ್ಪೈರ್ಡ್. ಮಾಸ್ಟರ್ ಪೀಸ್
  ಏಳು ಸುತ್ತಿನ ಕೋಟೆ - ರಷ್ಯನ್ ಕ್ರೈ೦ ಆ೦ಡ್ ಪನಿಶ್ ಮೆ೦ಟ್ ನ ಒ೦ದು ಅತ್ಯುತ್ತಮ ಅಡಾಪ್ಟೇಷನ್. ಅ೦ಬರೀಷ್ ಅಭಿನಯ ಇಲ್ಲಿ ಸೂಪರ್.
  ಆಪ್ತಮಿತ್ರ ಕೂಡ ಒಳ್ಳೆಯ ಚಿತ್ರ. ಮಾಸ್ಟರ್ ಪೀಸೋ ಹೇಳೋದಿಕ್ಕೆ ನಾನು ಉಳಿದ ಭಾಷೆಯ ಒರಿಜಿನಲ್ಸ್ ನೋಡಿ ತೂಗಿಲ್ಲ.
  ಚಿಗುರಿದ ಕನಸು ಹಿ೦ದಿಯಲ್ಲೇ ಸ್ವದೇಸ್ ಆಗಿ ಉತ್ತಮವಾಗಿ ಮೂಡಿ ಬ೦ದಿದೆ.

  ಕನ್ನಡ ಮಾಸ್ಟರ್ ಪೀಸ್ ಚಿತ್ರಗಳ ಲೀಸ್ಟ್ ರೆಡಿ ಮಾಡಬೇಕು. :)

  ReplyDelete
 2. ಇನ್ನೂ ಇವೆ... ಕುಚ್ ಕುಚ್ ಹೋತಾ ಹೈನ್ ನ ತುಂಟಾಟ ಮಾಡಿದ್ರಲ್ಲಾ :)
  ನನಗೇನೋ ಚಿಗುರಿದ ಕನಸೆ ಇಷ್ಟ ಆಯ್ತು

  ReplyDelete
 3. ದರ್ಶನ್ ಸಾರಥಿ, ೧೯೯೫ರಲ್ಲಿ ಬಿಡುಗಡೆಯಾದ Lion King ಚಿತ್ರದ remake

  ReplyDelete

 4. ಸುಂದರ ಲೇಖನ. ಇಷ್ಟವಾಯಿತು ನಿಮ್ಮ ಬರವಣಿಗೆ. ನಿಮ್ಮ ಹಿಂದಿನ ಲೇಖನಗಳನ್ನು ನೋಡಬೇಕೆನ್ನುವ ತವಕ ಹೆಚ್ಚಾಗುತ್ತಿದೆ. ರವಿ ಮಾಮ ಆರಂಭದಲ್ಲಿ ಅನೇಕ ಯಶಸ್ಸಾದ ತೆಲುಗು ತಮಿಳು ಚಿತ್ರಗಳನ್ನು ರಿಮೇಕ್ ಮಾಡಿ ಗೆದ್ದಿದ್ದಾರೆ. ಕೆಲವೊಮ್ಮೆ ಕಳೆದು ಕೊಂಡಿದ್ದಾರೆಕೂಡ.

  ಸ್ಲೀಪಿಂಗ್ ವಿಥ್ ದಿ ಎನಿಮಿ = ಹಿಂದಿ (ಅಗ್ನಿಸಾಕ್ಷಿ, ಯಾರಾನ (ಮಾಧುರಿ ದೀಕ್ಷಿತ್), ಕನ್ನಡ (ಮದುವೆ)
  ಹೀರೋ = ರಣಧೀರ
  ಗ್ರೀಸ್ - 2 = ಪ್ರೇಮಲೋಕ
  ಅಲೋನ್ (ಥಾಯ್ ಭಾಷೆ)=ಚಾರುಲತ
  ಸರ್ಫ್ಹರೋಶ್ = ಕನ್ನಡದಲ್ಲಿ (ಕೆಟ್ಟದಾಗಿ) ಸತ್ಯ ಮೇವ ಜಯತೆ
  (ತಮಿಳು) ಘಜನಿ+ (ತೆಲುಗು)ಮನ್ಮಥುಡು = ಐಶ್ವರ್ಯ (ಕನ್ನಡ)
  ಕಯಾಮತ್ ಸೆ ಕಯಾಮತ್ = ಯುಗ ಯುಗಗಳೇ ಸಾಗಲಿ
  ದಿಲ್ = ಶಿವರಂಜಿನಿ
  ಕಿಲಾಡಿ = ಆಟ ಹುಡುಗಾಟ
  ಗೋಲ್ ಮಾಲ್ ( ಅಮೋಲ್ ಪಾಲೇಕರ್)= ಆಸೆಗೊಬ್ಬ ಮೀಸೆಗೊಬ್ಬ
  ಜಾನಿ ಮೇರ ನಾಮ್ (ದೇವಾನಂದ್)=ಅಪೂರ್ವ ಸಂಗಮ
  ಯಾದೊಂಕಿ ಬಾರತ್ =ಮುಯ್ಯಿಗೆ ಮುಯ್ಯಿ (ಕೆಲ ಬದಲಾವಣೆಗಳೊಂದಿಗೆ)
  ಪಡೋಸನ್ = ಪಕ್ಕದಮನೆ ಹುಡುಗಿ
  ಕನ್ನಡದಲ್ಲಿ ಬಂದ ಓಂ = ಹಿಂದಿಯಲ್ಲಿ ಅರ್ಜುನ್ ಪಂಡಿತ್ ಆಯಿತು

  ReplyDelete
  Replies
  1. ಈ ತರಹ ಲೀಸ್ಟ್ ಮಾಡ್ತಾ ಹೋದ್ರೆ ಬಹಳಷ್ಟು ಚಿತ್ರಗಳಿವೆ.
   ಆದರೆ ಒಳ್ಳೆಯ, ಮಾಸ್ಟರ್ ಪೀಸ್ ಅ೦ದಾಗ ಬಹಳಷ್ಟು ವಿಷಯಗಳ ಮೇಲೆ ಆಧರಿಸಿ ನಿರ್ಧರಿಸಬೇಕಲ್ಲವೆ?

   ಉದಾಹರಣೆಗೆ 1934 ನಲ್ಲಿ ಬ೦ದ It Happened One Night ತಿಕ್ಕಲು ಹಾಸ್ಯಚಿತ್ರ, ಹಿ೦ದಿಯಲ್ಲಿ Dil Hai Ke Manta Nahin[1991] ಆಗಿ ಕನ್ನಡದಲ್ಲಿ ಹುಡುಗಾಟ ಆಯಿತು[2007]. ಆ ತುದಿಯಿ೦ದ ಇಲ್ಲಿಯವರೆಗೂ ಯಥಾವತ್ತಾಗಿ ಭಟ್ಟಿ ಇಳಿಸಿ ಹಾಡುಗಳನ್ನು ಸೇರಿಸಿ ಹಿಟ್ ಮಾಡಿಸಿದ್ದಾರೆ. ಇದಕ್ಕೆ ಒಳ್ಳೆಯ ಚಿತ್ರವೆ೦ದರೆ ಒಳ್ಳೆಯ ನಿರ್ದೇಶಕರಿಗೆ ಅವಮಾನ ಮಾಡಿದ ಹಾಗೆ

   Delete
 5. ಸಿಟಿ ಲೈಟ್ಸ್ 1931(ಚಾರ್ಲಿ ಚಾಪ್ಲಿನ್ )=ಅನುರಾಗ ಸಂಗಮ 1995 good movie
  ಡೈ ಹಾರ್ಡ್=ನಿಷ್ಕರ್ಷ
  ಶಟ್ಟರ್ ಐಲ್ಯಾಂಡ್=ಆರಕ್ಷಕ
  ಮಚ್ಕೆನ್ನ 'ಸ್ ಗೋಲ್ಡ್ = ಗಂಡು ಬೀರುಂಡ
  ಡೆತ್ ವಿಶ್ =ನಾನ್ ಸಿಗಪ್ಪು ಮನಿಥನ್ (Tamil)=ಮಹಾತ್ಮ (Kannada)
  ಟೇಕನ್=ಚಿಂಗಾರಿ
  ಫಸ್ಟ್ ಬ್ಲಡ್ = ಖೈದಿ
  ೧೨ ಆಂಗ್ರಿ ಮೆನ್=ದಶಮುಖ
  ಟ್ವಿನ್ ಡ್ರ್ಯಾಗನ್ = ಚೆಲುವ
  ಮಗ್ನಿಫ಼ಿಚಿಎನ್ತ್ ಸೆವೆನ್= ಶೊಲೆಯ್(hindi)=ವೀರಾದಿ ವೀರ (kannada)
  ಕಾಳಿಂಗ(kannada)=ಪೋಲಿಸ್ ಮತ್ತು ದಾದ (kannada)

  ReplyDelete
 6. FEDLER ON THE ROOF - MATAAD MATAAD MALLIGE IN KANNADA

  ReplyDelete
 7. sudeep direct shanthi nivasa and Shashi kumar acted kannada movie (name forgotten) both are same

  ReplyDelete
 8. Simpallag ond love story is adaptation of '50 First Dates'

  ReplyDelete
 9. Rajesh khanna 'Bawarchi' official agi Sudeep remake madidare Shanthi nivasa antha (Ade makki ka makki of course) ide Bawarchi na Shashi Kumar kuda haage batti ilsidare itteeche ge Udaya TV li nodide, hesaru marthogide.

  ReplyDelete
 10. Bawarchi=Sakalakala vallabha=Shanti nivasa

  ReplyDelete
 11. This comment has been removed by the author.

  ReplyDelete
 12. kaadalikku mariyadai = Preetigaagi,
  Mallammana pavaada=Beta=Annayya ,
  Dilwale dulhaniya lejayenge = Sankranthi . (Jaggesh son movie).

  ReplyDelete
 13. ಮಲ್ಲಮ್ಮನ ಪವಾಡ Mallammana pavaada (rajkumar-kannada) -> enga chinna raasa (Tamil)-> abbayigaaru (telugu) -> Beta (hindi) -> Annayya (kannada)

  ReplyDelete
 14. anuraaga aralithu (raj kumar-kannada) -> Mannan (rajanikanth- tamil) -> Gharana mogudu (chiranjeevi- Telugu) -> Ladla (anil kapoor - Hindi)

  ReplyDelete
 15. school master _ kannada original movie, remaked in many language, it gave life to NTR also

  ReplyDelete
 16. Nagarahaavu (Kannada) -> Zehreela Insaan -> Raaja Naagam (tamil) ->Kode Nagu

  ReplyDelete
 17. ಅಂತ- ಹಿಂದಿ ಮತ್ತು ತೆಲುಗಿಗೆ ರೀಮೇಕ್ ಆಯಿತು

  ReplyDelete
 18. ಚಕ್ರವ್ಯೂಹ (ಅಂಬರೀಷ್) ಚಿತ್ರ ಹಿಂದಿಗೆ ರೀಮೇಕ್ ಆಗಿತ್ತು. ಅಲ್ಲಿ ಅಂಬರೀಷ್ ಪಾತ್ರ ಮಾಡಿದ್ದು, ಅಮಿತಾಬ್ ಬಚ್ಚನ್ ಚಿತ್ರ ಇನ್‌ಕ್ವಿಲಾಬ್ -ನಿರ್ಮಾಪಕರು ನಮ್ಮ ವೀರಾಸ್ವಾಮಿ-ರವಿಚಂದ್ರನ್

  ReplyDelete