
ಅಷ್ಟರಲ್ಲಿ ಬಾಗಿಲು ಬಡಿದ ಶಬ್ದವಾಗಿ ಬಾಗಿಲು ತೆರೆದಾಗ
ಎದುರಿಗೆ ಕಂಡದ್ದು ಪಕ್ಕದಲ್ಲಿ ವಾಸವಾಗಿದ್ದ ಗಣಿತ ಶಿಕ್ಷಕ. ಒಂದೇ ಮಾತಿಗೆ ಆತ ಹೇಳಿದ್ದಿಷ್ಟೇ.
ಮುಂದೇನು ಮಾಡುತ್ತೀರಿ.. ಆಕೆ ನಡುಗಿ ಹೋದಳು. ಸೀದಾ ಹೋಗಿ ಪೋಲಿಸ್ ಗೆ ಶರಣಾಗತಿ ಆಗುವುದೇ ಸರಿ
ಎಂದಳು. ಆತ ಸುಮ್ಮನೆ ಸ್ವಲ್ಪ ಹೊತ್ತು ಇದ್ದವನು ನೀವೇನು ಹೆದರಬೇಡಿ, ನಾನು ಹೇಳಿದಂತೆ ಮಾಡಿ,
ಮುಂದಿನದ್ದನ್ನು ನಾನು ನೋಡಿಕೊಳ್ಳುತ್ತೇನೆ ಎಂದ.
ಮಾರನೆಯ ದಿನ ಪಕ್ಕದ ಕೆರೆಯ ಪಕ್ಕ ಅನಾಥ ಶವವೊಂದು
ಸಿಕ್ಕಿತ್ತು. ಆತನ ಬಟ್ಟೆ ಕಳಚಿ ವಿವಸ್ತ್ರಗೊಳಿಸಲಾಗಿತ್ತು. ಆತನ ಮುಖದ ಗುರುತು ಸಿಗದಂತೆ ಜಜ್ಜಿ
ಹಾಕಲಾಗಿತ್ತು. ಕೈ ಬೆರಳುಗಳನ್ನು ಸುಟ್ಟುಹಾಕಲಾಗಿತ್ತು. ಆತನ ದವಡೆ ಹಲ್ಲುಗಳೂ
ಗೊತ್ತಾಗದಂತೆ ಜಜ್ಜಿ ಹಾಕಲಾಗಿತ್ತು. ಅಂದರೆ
ಯಾವೊಂದು ಗುರುತೂ ಸಿಗದಂತೆ ಮುನ್ಸೂಚನೆ ತೆಗೆದುಕೊಂಡಿದ್ದರೂ ಕೆಲವೊಂದು ಕುರುಹನ್ನು
ಉಳಿಸಲಾಗಿತ್ತು.
ಅದು ನಿಜಕ್ಕೂ ತಂತ್ರವಾ..?
ಇದು ಕೀಗೋ ಹಿಗಾಶಿನೋ ಬರೆದ ಕಾದಂಬರಿ ದಿ ಡಿವೋಷನ್ ಆಫ್
ಸಸ್ಪೆಕ್ಟ್ ಎಕ್ಷ್ ಕಾದಂಬರಿ ಪ್ರಾರಂಭವಾಗುವ ರೀತಿ. ಸರಿ ಸುಮಾರು ನೂರೆಪ್ಪತ್ತು ಪುಟಗಳ ಈ
ಕಾದಂಬರಿ ಓದುತ್ತಾ ಓದುತ್ತ ತನ್ನ
ತೆಕ್ಕೆಗೆ ಸೆಳೆದುಕೊಂಡು ಬಿಡುತ್ತದೆ. ಮೂಲ ಜಪಾನಿ
ಕಾದಂಬರಿಯನ್ನು ಇಂಗ್ಲಿಷ್ ಗೆ ಭಾಷಾಂತರ ಮಾಡಿದವರು ಅಲೆಕ್ಸಾಂಡರ್ ಓ.ಸ್ಮಿತ್ ಮತ್ತು ಎಲ್ಯೇ
ಜೆ.ಅಲೆಕ್ಸಾಂಡರ್.
ಇದು ಈಗಾಗಲೇ ಈ ಕಾದಂಬರಿ 2008 ಮತ್ತು 2012 ರಲ್ಲಿ ಚಿತ್ರ
ರೂಪಕ್ಕೆ ತಾಳಿ ಯಶಸ್ವಿಯಾಗಿದೆ.ಇದರ ಬಗ್ಗೆ ಹೇಳಬೇಕೆಂದರೆ ಇದೀಗ ಭಾರತದಲ್ಲಿಯೂ ಕೂಡ ಅಧಿಕೃತವಾಗಿ
ಸಿನಿಮಾ ರೂಪು ತಾಳಲಿದೆ. ಆದರೆ ಈಗಾಗಲೇ ಈ ಚಿತ್ರದ ಜೀವಾಳವನ್ನು ಮಲಯಾಳಂ ಚಿತ್ರದವರೂ ಎರವಲು
ಪಡೆದುಬಿಟ್ಟಿದ್ದಾರೆ. ಮೋಹನ್ ಲಾಲ್ ಅಭಿನಯದ ದೃಶ್ಯಂ ಚಿತ್ರ ಇದೆ ಕಾದಂಬರಿಯ ಎರವಲು ಎನ್ನಬಹುದು.
ಅದನ್ನು ಭಾರತೀಯ ಸೊಗಡಿಗೆ ರೂಪಾನತರ ಮಾಡಿದ್ದಾರೆ ನಿರ್ದೇಶಕ ಜೀತು ಜೋಸೆಫ್. ಇದೆ ಚಿತ್ರ
ಕನ್ನಡದಲ್ಲಿ ರವಿಚಂದ್ರನ್ ಅಭಿನಯದಲ್ಲೂ ತೆಲುಗಿನಲ್ಲಿ ವೆಂಕಟೇಶ್ ಅಭಿನಯದಲ್ಲೂ ತೆರೆಕಂಡು ಯಶಸ್ವಿಯಾಗಿದೆ.
ಅಷ್ಟೇ ಅಲ್ಲ ಈಗ ತಮಿಳು ಭಾಷೆಯಲ್ಲಿ ಖ್ಯಾತ ನಟ ಕಮಲ್ ಹಾಸನ್ ಅಭಿನಯದಲ್ಲಿ ಚಿತ್ರೀಕರಣ
ಪೂರ್ಣಗೊಂಡಿದ್ದು , ಹಿಂದಿಯಲ್ಲೂ ರಿಮೇಕ್ ಆಗುವ ಲಕ್ಷಣಗಳಿವೆ.
This comment has been removed by a blog administrator.
ReplyDeleteThis comment has been removed by a blog administrator.
ReplyDelete