Saturday, April 28, 2012

ಈ ಸಾರಿಯ ಆಸ್ಕರ್ ಕಣದ ಚಿತ್ರಗಳು..ಭಾಗ -1

. ಸಾರಿಯ ಆಸ್ಕರ್ ಚಿತ್ರಗಳ ಕೊನೆಯ ಸುತ್ತಿನಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು  ಚಿತ್ರಗಳಿದ್ದವು.ಎರಡು ಚಿತ್ರಗಳು ಆಸ್ಕರ್ ಕಣದಲ್ಲಿ ಬಂಪರ್ ಭಾರಿಸಿದವು.ಅವುಗಳಲ್ಲಿ ಮೊದಲನೆಯದು ಆರ್ಟಿಸ್ಟ್ ಮತ್ತು ಹ್ಯೂಗೋ.ಎರಡು ಐದೈದು ವಿಭಾಗಗಳ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊ೦ಡವು.
ಆರ್ಟಿಸ್ಟ್ ಚಿತ್ರ ಕಥಾವಸ್ತುವಿನಿ೦ದ ಅದ್ಭುತ ಚಿತ್ರವೇನಲ್ಲ.ನಮ್ಮದೇ ಡರ್ಟಿ ಪಿಕ್ಚರ್ ನ ಕಥೆ ಇರಬಹುದು..ಅಥವಾ ಯಾವುದೇ ಭಾಷೆಯಲ್ಲಿ ಬಂದ ಕಲಾವಿದ, ಸ್ಟಾರ್ ಒಬ್ಬನ ಏಳುಬೀಳಿನ ಕಥೆ ಇರಬಹುದು.ನೀವು ಮರಾಠಿಯ ಹರಿಶ್ಚ೦ದ್ರಾಚ್ಚಿ ಫ್ಯಾಕ್ಟರಿ ಸಿನೆಮಾ ನೋಡಿದ್ದರೆ ನಮ್ಮ ನೆಲದಲ್ಲೇ ನಡೆದ ಸಿನಿಮಾ ಪಿತಾಮಹಾನ ಜೀವನ ಚರಿತ್ರೆಯ ಅದ್ಭುತವಾದ ಕಥನ ನೆನಪಿಗೆ ಬರಬಹುದು. ಹಾಗೆ ಅವರ ಜೀವನ ಚರಿತ್ರೆ ಓದಿದವರಿಗೆ ಸಾಧಕನ ಅಂತಿಮ ದಿನಗಳ ಕಷ್ಟ, ಹತಾಶೆ ಸೋಲುಗಳು ಬದುಕಿನ ವೈಚಿತ್ರದ ಅರಿವು ಮಾಡಿಕೊಡುವುದಷ್ಟೇ ಅಲ್ಲ, ಸಾಧಕನನ್ನು  ನಾವು ನಡೆಸಿಕೊಂಡ ರೀತಿಗೆ ನಮ್ಮ ಬಗ್ಗೆಯೇ ಬೇಸರವಾಗುತ್ತದೆ. ಭಾರತದ ಚಿತ್ರರಂಗದ ಉಗಮಕ್ಕೆ ಕಾರಣರಾದ ಫಾಲ್ಕೆಯವರ ಕೊನೆಯ ದಿನಗಳು ಭಾರಿ ಕೆಟ್ಟದಾಗಿದ್ದವು ಎಂದೆ ಹೇಳಬಹುದು..ಸಶಬ್ಧ ಚಿತ್ರಗಳು ಮೂಕಿ ಚಿತ್ರಗಳನ್ನು ಮೂಲೆಗೆ ತಳ್ಳಿದ್ದವು. ಫಾಲಕೆಯವರ ಸಿನಿಮಾಗಳು ಅವರಿಗೆ ಆರ್ಟಿಸ್ಟ್ ಟ್ರೈಲರ್ ಗಾಗಿ ಇಲ್ಲಿ ಕ್ಲಿಕ್ ಮಾಡಿ..ಬಹುನಷ್ಟ ತಂದಿದ್ದವು. ಆದರೆ ಅವರಿಗೆ ಬೇರೇನೂ ಮಾಡುವುದಕ್ಕೂ  ಇಷ್ಟವಿರಲಿಲ್ಲ. ಸಿನಿಮಾ ಅವರ ಉಸಿರಾಗಿತ್ತು..ಕೊನೆಯಲ್ಲಿ ಬೇರೆ ದಾರಿ ಕಾಣದೆ ಚಿತ್ರ ನಿರ್ಮಿಸಲು ಫಾಲ್ಕೆ ಯೋಚಿಸಿದಾಗ ಅವರು ಸಿನೆಮಾ ಮಾಡಲು ಸರ್ಕಾರ ಅನುಮತಿ ನೀಡಲಿಲ್ಲ. ನೋಡಿ ವಿಪರ್ಯಾಸ !
ಇರಲಿ ಆರ್ಟಿಸ್ಟ್ ಉತ್ತಮ ಮನರಂಜನಾ ಚಿತ್ರ. ಇಡೀ ಸಿನೆಮಾದಲ್ಲಿ ಎರಡೇ   ಮಾತಿರುವುದು. ಅದು 'ಆಕ್ಷನ್ ' ಮತ್ತು ಕಟ್. ಇದರ ನಿರ್ದೇಶನ, ಅಭಿನಯ ಮುಂತಾದವುಗಳ ಬಗ್ಗೆ ಬರೆದಿದ್ದನ್ನು ಓದಿ ತಿಳಿದುಕೊಳ್ಳುವುದಕ್ಕಿ೦ತ  ನೋಡಿ ತಿಳಿಯುವುದು, ಅನುಭವಿಸುವುದು ಉತ್ತಮ..ಏನಂತೀರಾ..?
ಆರ್ಟಿಸ್ಟ್ ಟ್ರೈಲರ್
ಹರಿಶ್ಚಂದ್ರಾಚ್ಚಿ ಫ್ಯಾಕ್ಟರಿ ಯ ಟ್ರೈಲರ್ ಗಾಗಿ ಇಲ್ಲಿ ಕ್ಲಿಕ್ಕಿಸಿ.



Friday, April 27, 2012

ನೋಡಲೇ ಬೇಕಾದ ಚಿತ್ರಗಳು-2

ಕೆಲವು ಸಿನೆಮಾಗಳು ಬರೀ ಸಿನೆಮಾಗಳಷ್ಟೇ ಆಗಿರುವುದಿಲ್ಲ.ಅವುಗಳು ಉತ್ತಮ ಸಾಕ್ಷ್ಯಚಿತ್ರಗಳೂ ಆಗಿರುತ್ತವೆ. ಅಂದರೆ ಇತಿಹಾಸದ ಶಾಸನದ ರೀತಿಯಲ್ಲಿದ್ದು ನಮ್ಮ ಮುಂದಿನ ಪೀಳಿಗೆಗೆ ಮಾರ್ಗದರ್ಶಿಯಾಗಲು, ಜಗತ್ತು ಹೀಗಿತ್ತು ಎಂದು ತೋರಿಸಲು ಬೇಕಾದ ಅಂಶಗಳಾಗುತ್ತವೆ.ದೃಶ್ಯಮಾಧ್ಯಮ ತುಂಬಾ ಪ್ರಬಲವಾದ ಮಾಧ್ಯಮ ಎನ್ನುವುದು ನಮಗೆಲ್ಲ ಗೊತ್ತಿರುವ ವಿಷಯವೇ ಸರಿ. ಆ ನಿಟ್ಟಿನಲ್ಲಿ ಲಿಯೋ ಟಾಲ್ಸ್ ಟಾಯ್ ರವರ ಮಹೋನ್ನತ ಕೃತಿ 'ವಾರ್ ಅಂಡ್ ಪೀಸ್ ' ನಿಮಗೆ ಗೊತ್ತಿರಬಹುದು.ಸುಮಾರು ಸಾವಿರಗಟ್ಟಲೆ ಪುಟವಿರುವ ಮಹಾನ ಕಾದಂಬರಿ ಅದು.ಅದನ್ನು ಆಧರಿಸಿ,ಸ್ಪೂರ್ತಿಯಾಗಿಟ್ಟುಕೊ೦ಡು ಸುಮಾರು ಸಿನಿಮಾಗಳು ಬಂದಿವೆ. ಆದರೆ ಇಡೀ ಕಾದಂಬರಿಯನ್ನ ವಸ್ತುನಿಷ್ಠವಾಗಿ, ವಿವರವಾಗಿ ಆಧರಿಸಿದ ಸಿನೆಮಾ ಎಂದರೆ ಅದು 1965ರಲ್ಲಿ ಬಿಡುಗಡೆಯಾದ ವಾರ್ ಅಂಡ್ ಪೀಸ್. ರಶಿಯನ್ ಭಾಷೆಯಲ್ಲಿದೆ . ಸರ್ಜಿಯೋ ಬ೦ದಾರ್ಚುಕ್ ಈ ಚಿತ್ರದ ನಿರ್ದೇಶಕ. ಅಂದಹಾಗೆ ಈ ಸಿನೆಮಾದ ಯುದ್ಧದ ಸನ್ನಿವೇಶವಂತೂ ಅದ್ಭುತ ಎನ್ನಬಹುದು. ಆದರೆ ಸಂಪೂರ್ಣ ಸಿನೆಮಾದ ಉದ್ದಮಾತ್ರ 8 ಘಂಟೆಗೂ ಹೆಚ್ಚು.  ಈ  ಸಿನೆಮಾವನ್ನು ನೋಡಲು ಇಡೀ ದಿನವನ್ನು ಮೀಸಲಿಡಬೇಕು..
ಚಿತ್ರದ ತುಣುಕನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ.. 
ಈ ಸಿನೆಮಾದ ಇನ್ನೊಂದು ವಿಶೇಷವೆಂದರೆ ಅತೀ ಹೆಚ್ಚು ಸಹನಟರು ಅಭಿನಯಿಸಿದ ಚಿತ್ರ ಎಂದು ಗಿನ್ನೆಸ್ ದಾಖಲಾಗಿರುವುದು. ಸುಮಾರು 1,20,000 ಸಹನಟರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ..ಸಿಕ್ಕರೆ ನೋಡಿ.

  ಚಿತ್ರದ dvd ದೊರಕದೆ ಇದ್ದರೆ, ನೋಡಬೇಕೆನಿಸಿದರೆ ನನ್ನನ್ನು ಸಂಪರ್ಕಿಸಬಹುದು. swapnageleya@gmail.com .

Thursday, April 26, 2012

ಓಶೋ ರಜನೀಶರ ಜೋಕುಗಳು..

ಮುಲ್ಲಾ ನಸೀರುದ್ದೀನ್ ಮತ್ತವನ ಪತ್ನಿ ಇಬ್ಬರೂ ಚಲನಚಿತ್ರವೊ೦ದಕ್ಕೆ ಹೋಗಿದ್ದರು.ಅಲ್ಲಿ ನಾಯಕ ನಾಯಕಿಯ ಮಧುರವಾದ ಸನ್ನಿವೇಶ ಬಂದಾಗ ಗಂಡನ ಕಡೆಗೆ ತಿರುಗಿದ ಪತ್ನಿ  "ನೀವು ನನ್ನೊಡನೆ ಎಂದಿಗೂ ಹೀಗೆ ಒ೦ದು ಸಾರಿಯೂ ಪ್ರೀತಿಯಿಂದ ನಡೆದುಕೊಳ್ಳಲಿಲ್ಲ." ಎಂದು ಆರೋಪಿಸಿದಳು..
ಮುಲ್ಲಾ  "ನಿನಗಿನ್ನು ಅರ್ಥವಾಗಿಲ್ಲ..ಪೆದ್ದಿ ಆ ಕೆಲಸಕ್ಕೆ ಅವನಿಗೆ ಹಣ ಕೊಡುತ್ತಾರೆ..ನನಗ್ಯಾರೂ ಕೊಡ್ತಾರೆ..? ಆಮೇಲೆ ಇನ್ನೊಂದು ವಿಷಯ ಅವರಿಬ್ಬರೂ ಗಂಡ-ಹೆ೦ಡಿರಲ್ಲ..ಅವನು ತನ್ನ ನಿಜವಾದ ಹೆ೦ಡತಿಯಾ ಜತೆಗೆ ಹಾಗೆ ನಡೆದುಕೊಳ್ಳಲಿ ನೋಡೋಣ..' ಎಂದು ಮರು ಪ್ರಶ್ನೆ ಬೀಸಾಕಿದ..
ಎಷ್ಟಾದರೂ ಮುಲ್ಲಾನ ಪತ್ನಿ  ಅವಳು " ..ಅವರು ನಿಜ ಜೀವನದಲ್ಲೂ ದಂಪತಿಗಳು ಗೊತ್ತಾ.., ' ಎಂದು ಜೋರಾಗಿ ಕೂಗಾಡಿದಳು..

ಅದಕ್ಕೆ ಮುಲ್ಲಾನ ಉದ್ಗಾರ.."ಹೌದಾ ! ಹಾಗಾದರೆ ಆತ ಮಹಾನ ನಟ.ಎಂದು ಯಾವ ಅವಾರ್ಡ್ ಕೊಟ್ಟರೂ ಕಡಿಮೆಯೇ..."
*****
ಶಾಂತಿ ಪ್ರಿಯ ಮುಲ್ಲಾ ಪತ್ನಿ ಕೊಂದು ನಂತರ ನ್ಯಾಯಾಲಯದ ಮೆಟ್ಟಿಲೇರಿದ್ದ ಆ ಸಂದರ್ಭದಲ್ಲಿ  ನ್ಯಾಯಾಧೀಶರು 'ನೀನು  ಶಾಂತಿಪ್ರಿಯ  ಮನುಷ್ಯ ಎಂದು ಮತ್ತೆ ಮತ್ತೆ ಹೇಳಿಕೊಳ್ಳುತ್ತೀ ಅದೇಕೆ ಕೊಲೆ ಮಾಡಿದೆ..? ಈಗ ನೀನು ಶಾಂತಿ ಪ್ರಿಯ ಎಂದು ಹೇಗೆ ಸಮರ್ಥಿಸಿಕೊಳ್ಳುತ್ತೀ.." 
'ಸ್ವಾಮಿಗಳೇ..ಈಗ ನಮ್ಮ ಮನೆಗಲ್ಲ..ಇಡೀ ಓಣಿಗೆ ಬಂದು ನೋಡಿ ನಾನೆಂಥ ಶಾಂತಿಪ್ರಿಯ ಎಂದು ಗೊತ್ತಾಗುತ್ತೆ..ನನ್ನ ಹೆಂಡತಿ ಸತ್ತ ಮೇಲೆ ಇಡೀ ಓಣಿಯಲ್ಲೀಗ ಸಂಪೂರ್ಣ ಶಾಂತಿ ನೆಲೆಸಿದೆ..''

Wednesday, April 25, 2012

ಲಲಿತ ಪ್ರಬಂಧ.


ತಾವು ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರಿಂದ ನಾನೂ ಕೂಡ ಅವರಂತೆಯೇ ಶಿಕ್ಷಕರಾಗಬೇಕೆಂಬುದು ನಮ್ಮ ತಂದೆಯವರ ಮಹತ್ವಾಕಾಂಕ್ಷೆಯಾಗಿತ್ತು. ಆದರೆ ನನಗೋ ಸಿನೆಮಾ ಪತ್ರಿಕೋದ್ಯಮದ ಕಡೆ ಅತೀವ ಹುಚ್ಚು. ಪ್ರತಿ ಸಾರಿ ಊಟಕ್ಕೆ ಒಟ್ಟಿಗೆ ಕುಳಿತಾಗಲೂ ಶಿಕ್ಷಕರಿಗಿರುವ ಗೌರವ, ಇರಬೇಕಾದ ಜವಾಬ್ದಾರಿ ಮತ್ತು ಶಿಕ್ಷಕ ವೃತ್ತಿಯ ಮಹತ್ವವನ್ನು ವಿವರಿಸುತ್ತಿದ್ದರು. ನಾನು ಸುಮ್ಮನೆ ಹೂಂಗುಡುತ್ತಿದ್ದೆ. ಆಮೇಲೆ ಮಲಗಿಕೊಂಡಾಗ ನಿದ್ರೆ ಬರುವವರೆಗೂ ಯೋಚಿಸುತ್ತಿದ್ದೆ , ಅಪ್ಪ"ಹೇಳಿದ್ದೆಲ್ಲಾ ಸರೀನಾ' ಎಂದು. ಅದರಲ್ಲಿ ಸತ್ಯ ಎಷ್ಟಿದೆ? ಎಂಬುದರ ಪರೀಕ್ಷೆಗೆ ಬೀಳುತ್ತಿದ್ದೆ. ಆದರೆ, ಕೆಲವೊಂದು ಸರಿ ಎನಿಸಿದರೂ ಕೆಲವೊಂದು ವಿಷಯಗಳನ್ನು ಒಪ್ಪಿಕೊಳ್ಳಲು ಆಗುತ್ತಿರಲಿಲ್ಲ.

ಇಡೀ ಊರಲ್ಲಿ ಅಪ್ಪನನ್ನು "ಮೇಸ್ಟ್ರೇ...' ಎಂದೇ ಕರೆಯುತ್ತಿದ್ದರು. ಅವರ ಮಗನಾದ ನನ್ನನ್ನು ಎಲ್ಲರೂ ಪ್ರೀತಿಯಿಂದ, ಗೌರವದಿಂದ ನೋಡುತ್ತಿದ್ದರು. ಊರಲ್ಲಿ ಹೊಸ ಬೆಳೆ ಬಂದಾಗಲೆಲ್ಲ "ಒಂದು ಕೊಳಗ ಮೇಸ್ಟ್ರ ಮನೆಗೆ'  ಎಂದು ಎತ್ತಿಟ್ಟುಬಿಡುತ್ತಿದ್ದರು. ಒಂದು ಹೊರೆ ಸೌದೆಯನ್ನು ನಮ್ಮ ಹಿತ್ತಲಿಗೆ ತಂದಿಟ್ಟು ಮಾತಾಡಿ ಹೋಗುತ್ತಿದ್ದರು. ಇಡೀ ಊರಲ್ಲಿ ಏನೇ ತೊಂದರೆಯಾದರೂ ಅಪ್ಪನ ಹತ್ತಿರ ಬಂದು ವಿವರಿಸಿ ಅಭಿಪ್ರಾಯ, ಪರಿಹಾರಗಳನ್ನು ಕೇಳುತ್ತಿದ್ದರು.

ಆದರೆ, ನಮ್ಮಪ್ಪಶಿಕ್ಷಕರಾಗಿದ್ದ ಶಾಲೆಯಲ್ಲಿ ನಾನು ಓದಲಾಗಲೇ ಇಲ್ಲ.
ನಾನು ಮೂರನೆಯ ತರಗತಿಯಲ್ಲಿದ್ದಾಗ ಆರ್‌. ಗೌಡ ಎಂಬ ಶಿಕ್ಷಕ ರೊಬ್ಬರಿದ್ದರು. ಉದ್ದಕ್ಕೆ ಸಣ್ಣಕಿದ್ದ ಅವರ ಕಣ್ಣುಗಳು ಮಾತ್ರ ತೀಕ್ಷ್ಣವಾಗಿದ್ದವು. ಊರಿನ ಜನ, ಅದರಲ್ಲೂ ಹೆಂಗಸರು ಅವರನ್ನು ಬಿದಿರುಪೀಪಿ ಮೇಸ್ಟ್ರೆ ಎಂದೇ ಕರೆಯುತ್ತಿದ್ದರು. ಅವರ ವಿಶೇಷವೆಂದರೆ ಅವರು ಪ್ರತಿಯೊಬ್ಬ ವಿದ್ಯಾರ್ಥಿಗೂ ಒಂದೊಂದು ಅಡ್ಡ ಹೆಸರು/ಉಪನಾಮ ಇಟ್ಟೇ ತೀರುತ್ತಿದ್ದರು. ಅವರ ಸ್ಮರಣಶಕ್ತಿ ಅದೆಷ್ಟು ಶಕ್ತಿಯುತವಾಗಿತ್ತೆಂದರೆ ರಿಜಿಸ್ಟರಿನಲ್ಲಿ ಹೆಸರು ಕೂಗುವಾಗಲೂ ಅದೇ ಅಡ್ಡನಾಮದಿಂದ ಕರೆಯುತ್ತಿದ್ದರು ಮತ್ತು ಆ ವಿದ್ಯಾರ್ಥಿ ಆ ಅಡ್ಡನಾಮವನ್ನೆ ಅಧಿಕೃತವಾಗಿ ಒಪ್ಪಿಕೊಂಡು "ಯಸ್‌ ಸಾರ್‌' ಎನ್ನಲೇಬೇಕಾದ ಅನಿವಾರ್ಯ ಪರಿಸ್ಥಿತಿ ತಂದೊಡ್ಡುತ್ತಿದ್ದರು. ""ಕರೆಕ್ಟಾಗಿ ಪಾಟ ಯೋಳು ಅಂದ್ರ ಎಲಿÅಗೂ ಅಡ್ಡ ಹೆಸ್ರಿಟಕೊಂಡು ಕುಣೀತಾವ°ಲ್ಲಾ ಆ ಪೀಪಿ ಮೇಸ್ಟ್ರೆ... ನನ್‌ ಮಗನ್‌ ಹೆಸ್ರಿಗೇನಾಗಿದ್ದು...' ಎಂದು ಅದೆಷ್ಟೋ ಹೆಂಗಸರು, ತಾಯಂದಿರು ಶಾಲೆಯ ಮುಂದೆ ಬಂದು ಜಗಳ ಆಡಿದ್ದೂ ಉಂಟು. ಆಗೆಲ್ಲಾ "ಅಮೌ¾... ನಿನ್‌ ಮಗ ಸರಿಯಾಗಿ ಓದಿನ ಇಲ್ವ ಅನ್ನದ್ನ ತಿಳ್ಕಂಡು ವಿಚಾರಿಸ್ಕ... ಅದ ಬಿಟ್ಟೂ ಹಿಂಗ ಇಸ್ಕೂಲ್‌ ಮುಂದ ಬಂದು ಜಗಳಾಡಿದ್ರ ಹುಚ್ಚುಮಾರಿ ಅಂತ ನಿಂಗೇ ಹೆಸರಿಡಬೇಕಾಯ್ತದೆ...' ಎಂದು ಅವರಿಗೇ ಜೋರು ಮಾಡಿ ಕಳುಹಿಸಿಬಿಡುತ್ತಿದ್ದರು. ಆಮೇಲೆ ಒಂದು ವಾರದವರೆಗೆ ಆ ವಿದ್ಯಾರ್ಥಿಗೆ 17ನೇ ಮಗ್ಗಿ, 21ನೇ ಮಗ್ಗಿ ಹೇಳಿಸಿ ತಪ್ಪು$ಮಾಡಿಸಿ ದೊಣ್ಣೆಯಿಂದ ಚಚ್ಚುತ್ತಿದ್ದರು. ಹುಡುಗರೂ ಏನೂ ಕಡಿಮೆಯಿರಲಿಲ್ಲ. ಮೇಸ್ಟ್ರೆ ಮಧ್ಯಾಹ್ನದ ಹೊತ್ತಿಗೆ ಲೋಟ ಕೊಟ್ಟು , "ಹಾಲು ತೆಗೆದುಕೊಂಡು ಬಂದು ಟೀ ಮಾಡು' ಎಂದಾಗ ತೀರಾ ಕೋಪವಿದ್ದವರು "ಸಾರ್‌, ನಾವು ಹಾಲು ತರುತ್ತೇವೆ' ಎಂದು ಹೇಳಿ, ಹಾಲು ತರುವಾಗ ಆ ಲೋಟಕ್ಕೆ ಕಳ್ಳಿàಗಿಡದ ಹಾಲು ಹಾಕಿ, ಅದು ಸರಿಯಾಗಿ ಟೀ ಆಗದೆ ಗೌಡರು ಅದನ್ನೇ ಕುಡಿದಾಗ, ""ಈವತ್ತು ರಾತ್ರಿಗೆ ಐತೆ ನಿಮಗೆ...' ಎಂದು ಸಂತಸದಿಂದ ಕುಣಿದಾಡಿ, ""ನಾಳಿಗೆ ಪೀಪಿ ಮೇಸ್ಟ್ರೆ ಬರಲ್ವಂತೆ...' ಎಂದು ಖಡಾಖಂಡಿತವಾಗಿ ಅನೌನ್ಸ್‌ ಮಾಡುತ್ತಿದ್ದರು.

ಊರಲ್ಲಿ ಮನೆ ಪಾಠಕ್ಕೆ ಹುಚ್ಚುಮೇಸ್ಟ್ರೆ ಇದ್ದರು. ತಲೆಯಲ್ಲಿ ಶಾಸ್ತ್ರಕ್ಕೆಂದರೂ ಒಂದು ಕಪ್ಪಗಿನ ಕೂದಲು ಸಿಕ್ಕುತ್ತಿರಲಿಲ್ಲ. ಮದುವೆಯಾಗಿರಲಿಲ್ಲವೋ, ಅಥವಾ ಹೆಂಡತಿ ಬಿಟ್ಟು ಹೋಗಿದ್ದಳ್ಳೋ ಅಂತೂ ಊರಿಗೆ ಬಂದದ್ದು ಒಂಟಿಯಾಗಿಯೇ! ಅದೆಲ್ಲಿ ಅದ್ಯಾವ ಶಾಲೆಯಲ್ಲಿ ಶಿಕ್ಷಕರಾಗಿದ್ದರೋ, ಅದ್ಯಾವ ವಿಷಯ ಬೋಧಿಸು ತ್ತಿದ್ದರೋ ಅವರು ನಿವೃತ್ತರಾಗಿದ್ದರೋ ಅಥವಾ ಕೆಲಸ ಬಿಟ್ಟಿದ್ದರೋ ಯಾರಿಗೂ ಗೊತ್ತಿರಲಿಲ್ಲ. ಆದರೆ ಬಂದದ್ದೇ ತಾನು ಮೇಸ್ಟ್ರೆ ಮನೆಪಾಠದ ಮೇಸ್ಟ್ರೆ ಎಂದು ಪರಿಚಯಿಸಿಕೊಂಡಿದ್ದರು. ಆದರೆ, ಅವರ ಹಿಂಸಾವಿನೋದಿಯ ಗುಣ ಮಾತ್ರ ವಿದ್ಯಾರ್ಥಿಗಳ ಚಡ್ಡಿಯಲ್ಲಿ ಉಚ್ಚೆಮಾಡುವಂತೆ ಮಾಡುತ್ತಿತ್ತು.
""ಸರಿಯಾಗಿ ಓದಲ್ವಾ... ನಾಳೆಯಿಂದ ಹುಚ್ಚುಮೇಸ್ಟ್ರ ಹತ್ರ ಮನೆಪಾಠಕ್ಕೋಗು...' ಎಂದರೆ ಸಾಕು ಆವತ್ತೆಲ್ಲಾ ಮೈ ಗಢಗಢ. ಮನೆ ಪಾಠಕ್ಕೆ ಕಾಲಿಡುತ್ತಿದ್ದಂತೆಯೇ ಮೊದಲಿಗೆ ಕಾಣುತ್ತಿದ್ದದ್ದು ತಲೆ ಕೆಳಗೆ ಹಾಕಿ ಕಾಲು ಮೇಲೆ ಹಾಕಿ ಗೋಡೆಗೊರಗಿ ಕಣ್ಣೀರು ಸುರಿಸುತ್ತಿದ್ದ ವಿದ್ಯಾರ್ಥಿಗಳು... ಮುಂದಿನ ಸಾಲಿನಲ್ಲಿ ಕುಕ್ಕರಗಾಲಿನಲ್ಲಿ ಕುಳಿತು ಕಾಲ ಕೆಳಗಿಂದ ಕೈ ತಂದು ಕುಂಡೆ ಎತ್ತಿ ಕಿವಿ ಹಿಡಿದು ಅಳುತ್ತಿದ್ದವರು...
ಅನಂತರ ಒಂದಿಬ್ಬರು ಕೈ ಉಜ್ಜಿಕೊಂಡು ಅಳುತ್ತ ಮಗ್ಗಿ ಒಪ್ಪಿಸುತ್ತಿದ್ದರೆ ಮೇಸ್ಟ್ರೆ ಬೆತ್ತವನ್ನು ಮೇಲೆ ಕೆಳಗೆ ಆಡಿಸುತ್ತ ಆರಾಮಾಗಿ ಕುರ್ಚಿಯಲ್ಲಿ ಕುಳಿತಿರುತ್ತಿದ್ದರು.

ಅವರು ತರಗತಿ ಪ್ರಾರಂಭವಾಗುವುದಕ್ಕೆ ಮುನ್ನ ಎಲ್ಲರ ಎದುರಿಗೆ ಬೆತ್ತವನ್ನು ದಿನವೂ ಪರೀಕ್ಷಿಸುತ್ತಿದ್ದರು. ಅದನ್ನು ಬಗ್ಗಿಸಿ, ಮುರಿಯುವಂತೆ ಮಾಡಿ ಆನಂತರ ಗೋಡೆಗೆ ಪಠೀರ್‌ ಪಠೀರ್‌ ಎಂದು ಬಾರಿಸಿ "ಗಟ್ಟಿಯಾಗಿದೆ' ಎಂಬಂತೆ ನಮ್ಮಗಳ ಕಡೆಗೆ ನೋಡುತ್ತಿದ್ದರು... ಈ ಹುಚ್ಚುಮೇಸ್ಟ್ರ ಹುಚ್ಚಾಟಗಳು ಇನ್ನೂ ಇದ್ದವು. ಮಗ್ಗಿಯನ್ನು ಉಲ್ಟಾ ಉರುಹೊಡೆಸುತ್ತಿದ್ದರು, ಪಾಠವನ್ನು ಹತ್ತತ್ತು ಬಾರಿ ಬರೆಸುತ್ತಿದ್ದರು, ತಪ್ಪು ಮಾಡಿದರೆ ರೂಮಲ್ಲಿ ಕೂರಿಸಿ, ಬಾಗಿಲು ಹಾಕಿ ಮೆಣಸಿನಕಾಯಿ ಹೊಗೆ ಹಾಕುತ್ತಿದ್ದರು... ಊರಿನ ಜನರೂ "ತಮ್ಮ ಪುಂಡು ಮಕ್ಕಳಿಗೆ ಬುದ್ಧಿ ಕಲಿಸಲು ಹುಚ್ಚು ಮೇಸ್ಟ್ರೆ ಸರಿ' ಎಂಬ ತೀರ್ಮಾನಕ್ಕೆ ಬಂದುಬಿಟ್ಟಿದ್ದರು.
ಹೊಡೆಯುವುದಕ್ಕೆ ಮನೆಯವರ ಅಧಿಕೃತ ಅನುಮತಿ ಸಿಕ್ಕಮೇಲೆ ಕೇಳಬೇಕೆ? ಹುಚ್ಚುಮೇಸ್ಟ್ರ ಹುಚ್ಚಾಟ ಹದ್ದು ಮೀರುತ್ತಿತ್ತು.

ಅವನನ್ನು ಓಲಾಡದಂತೆ ಒಂಟಿಕಾಲಲ್ಲಿ ನಿಲ್ಲಿಸುತ್ತಿದ್ದರು. ಅವನ ಕಿವಿ ಹಿಸಿದುಹೋಗುವಂತೆ ಹಿಂಡಿಬಿಡುತ್ತಿದ್ದರು. ಅದಕ್ಕಿಂತ ಘನಘೋರ ಶಿಕ್ಷೆಯೆಂದರೆ ಅವನಿಗಿಂತ ಕಿರಿಯವಯಸ್ಸಿನವನ ಕೈಯಲ್ಲಿ ಕಪಾಲಕ್ಕೆ ಹೊಡೆಸುತ್ತಿದ್ದುದಷ್ಟೆ ಅಲ್ಲ , ಅವನ ಕಾಲ ಕೆಳೆಗೆ ಆ ಕಡೆಯಿಂದ ಈ ಕಡೆಗೆ ಈ ಕಡೆಯಿಂದ ಆ ಕಡೆಗೆ ಮೂರು ಮೂರು ಬಾರಿ ನುಗ್ಗಿಸುತ್ತಿದ್ದರು, ಅದೂ ಮನೆಪಾಠದ ಮನೆಯಿಂದ ಹೊರಗೆ... ಎಲ್ಲರಿಗೂ ಕಾಣುವಂತೆ. ಇವೆಲ್ಲದ್ದರಿಂದಲೋ ಏನೊ, ಮಾರನೇ ದಿನ ಶಾಲೆಯಲ್ಲಿ ನಮ್ಮ ಮೇಸ್ಟ್ರೆ ಇತಿಹಾಸ ಪಾಠ ಮಾಡುತ್ತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೋರಾಡಿದವರು ಅದೆಷ್ಟು ಕಷ್ಟಪಟ್ಟರು ಎಂದು ವಿವರಿಸುತ್ತಿದ್ದರೂ ಹುಚ್ಚುಮೇಸ್ಟ್ರ ಮುಂದೆ ಯಾವ ಬ್ರಿಟಿಷರು ಸಾಟಿಯಿಲ್ಲ ಎನಿಸಿಬಿಡುತ್ತಿತ್ತು.

ನನ್ನ ಹೈಸ್ಕೂಲ್‌ ಜೀವನವಂತೂ ವರ್ಣರಂಜಿತ ಎಂದೇ ಹೇಳಬಹುದು.ಅದು ಮಠದವರು ನಡೆಸುತ್ತಿದ್ದ , ಆಗತಾನೆ ಪ್ರಾರಂಭವಾಗಿದ್ದ ಶಾಲೆಯಾದ್ದ ರಿಂದ ಶಾಲೆಗೆ ಕಟ್ಟಡವೇ ಇರಲಿಲ್ಲ. ಅದಕ್ಕೆ ಊರಿನ ಜಮೀನಾªರರ ಮನೆ ಯಲ್ಲಿ , ಕೊಟ್ಟಿಗೆಯಲ್ಲಿ ತೋಟದ ಮನೆಯಲ್ಲಿ, ಅರ್ಧ ಕಟ್ಟಿದ ಮನೆಗಳಲ್ಲಿ ಸರ್ಕಾರಿ ಆಸ್ಪತ್ರೆಗೆಂದು ಕಟ್ಟಿಸಿದ್ದ ಪೂರ್ತಿಯಾಗಿರದ ಕಟ್ಟಡ ಹೀಗೆ ಎಲ್ಲೆಂದ ರಲ್ಲಿ ತರಗತಿಗಳು ನಡೆಯುತ್ತಿದ್ದವು. ಕೊಟ್ಟಿಗೆಯಲ್ಲಿ ಎಂಟನೆಯ ತರಗತಿ, ಪಾಳುಮನೆಯಲ್ಲಿ ಒಂಬತ್ತು ಮತ್ತು ತೋಟದ ಮನೆಯಲ್ಲಿ ಹತ್ತು...
ಆದರೆ ಪ್ರಾರ್ಥನೆ ಬೇರೊಂದು ಕಡೆ. ಅಲ್ಲಿಂದ ಪ್ರಾರ್ಥನೆ ಮುಗಿಸಿ ಸಾಲಾಗಿ ಇರುವೆ ಗಳಂತೆ ಒಂದು ಕಿಲೋಮೀಟರು ನಡೆದು ಊರಜನರೆಲ್ಲಾ ನೋಡುವಂತೆ ತರಗತಿಗೆ ಹೋಗಬೇಕಿತ್ತು. ಅದು ಕೆಲವರಿಗೆ ಲಾಭದಾಯಕವೂ ಆಗಿತ್ತು. ಕೆಲವರು ಮನೇಲೇ ಇದ್ದು ತಮ್ಮ ಕೆಲಸವನ್ನು ಮಾಡಿಕೊಂಡು ಪ್ರಾರ್ಥನೆ ಮುಗಿಸಿ ಕ್ಲಾಸ್‌ ರೂಮಿಗೆ ಹೋಗುವಾಗ ಅವರ ಮನೆಮುಂದೆ ಸಾಲು ಬಂದಾಗ ಮೆಲ್ಲಗೆ ಕಳ್ಳತನದಲ್ಲಿ ಸಾಲಿನಲ್ಲಿ ನುಸುಳಿಕೊಳ್ಳುತ್ತಿದ್ದರು. ನಮ್ಮ ತರಗತಿಯ ಹತ್ತಿರ ಹೋದಂತೆ ಕೊಕ್ಕರೆಯಂತೆ ಸೆಗಣಿ-
ಗಂಜಲವನ್ನು ದಾಟಿ ನಮ್ಮ ನಮ್ಮ ಡೆಸ್ಕಿಗೆ ಹಾರಿಕೊಳ್ಳಬೇಕಿತ್ತು. ಆಮೇಲೆ ಅಪ್ಪಿತಪ್ಪಿಯೂ ಡೆಸ್ಕಿಗೆ ಕಾಲು ಸೋಕಿಸುವಂತಿರಲಿಲ್ಲ. ಬ್ಯಾಗು, ಪುಸ್ತಕ ಅಪ್ಪಿತಪ್ಪಿ$ಕೆಳಗೆ ಬಿದ್ದರಂತೂ ಮುಗೀತು. ಎಲ್ಲವೂ ಸಗಣಿಮಯ. ಇದನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದವರೆಂದರೆ ಹೋಮ್‌ವರ್ಕ್‌ ಮಾಡದಿರುತ್ತಿದ್ದವರು!

ಹೋಮ್‌ವರ್ಕ್‌ ಪುಸ್ತಕವನ್ನು ಮೇಸ್ಟ್ರಿಗೆ ಕೊಡುವಾಗ ಕೈತಪ್ಪಿ$ಕೆಳಗೆ ಬೀಳುವಂತೆ ಮಾಡಿ ಸಗಣಿಮಯ ಮಾಡುತ್ತಿದ್ದರು. ಆಮೇಲೆ ಆತುರಾತುರವಾಗಿ ಅದನ್ನ ಎತ್ತಿಕೊಳ್ಳುವಂತೆ ಮಾಡಿ ಇನ್ನಷ್ಟು ಸಗಣಿ ಮೆತ್ತಿಸಿ ಮೇಸ್ಟ್ರೆ ಮುಟ್ಟದಂತೆ ಮಾಡಿ "ಸರಿ ನಾಳೆ ತಂದು ತೋರಿಸು...' ಎಂದು ಮೇಸ್ಟ್ರೇ ಹೇಳುವಂತೆ ಮಾಡುತ್ತಿದ್ದರು. ಅಲ್ಲಿದ್ದ ಮೇಸ್ಟ್ರೆಗಳಾದರೂ ಯಾರು? ಆಗತಾನೆ ಬಿ.ಎಡ್‌ ಮುಗಿಸಿದವರು, ಬಿ.ಎ. ಮುಗಿಸಿ ಊರಲ್ಲೇ ಇದ್ದವರು. ಮಠಕ್ಕೆ ಬಂದು ಪಾಠ ಮಾಡಿ ಎಂದು ಸ್ವಾಮಿಗಳಿಂದ ಅಪ್ಪಣೆಯಾಗುತ್ತಿದ್ದಂತೆ ಪ್ಯಾಂಟುಶರ್ಟು ತೊಟ್ಟು ಪಾಠ ಮಾಡಲು ಶಾಲೆಗೆ ಬಂದುಬಿಡುತ್ತಿದ್ದರು.

ಅದರಲ್ಲಿ ನನಗೆ ಚೆನ್ನಾಗಿ ನೆನಪಿರುವುದು ರಮೇಶ ಮೇಸ್ಟ್ರೆ. ನಿನ್ನೆಯೆಲ್ಲಾ ಊರಾಚೆಯ ಕಂಪೌಂಡಿನ ಮೆಲೆ ಕುಳಿತು ಬೀಡಿ ಸೇದುತ್ತಿದ್ದವನಿಗೆ ಏಕಾಏಕಿ ಮರ್ಯಾದೆ ಕೊಡುವುದಾದರೂ ಹೇಗೆ...? ಅವನೊ ಪಕ್ಕಾ ಮೇಸ್ಟ್ರಿಗಿಂತ ಹೆಚ್ಚಾಗಿಯೇ ಮೆರೆಯುತ್ತಿದ್ದನು. ""ಲೋ..ನಿಂಗೆ ರಾತ್ರಿ ಸ್ವಲ್ಪ$ಹೊರೆ ಎತ್ಕಂಡ್‌ ಬಾ ಅಂದ್ರೆ ಬರಕ್ಕಾಗ್ಲಿಲ್ಲ ಹೋಮ್‌ವರ್ಕ್‌ ಮಾಡದೆ ಬಂದ್‌ ನಿಂತಿದ್ದೀಯಾ... ಮೊನ್ನೆ ನಮ್‌ ಹೊಲಕ್ಕೇ ದನ ನುಗ್ಸಿಯ... ಗಡಿಭೈರವನ ಜೂಜಾಟ ದಲ್ಲಿ ಜಾತ್ರೇಲಿ ಮುನ್ನೂರುಪಾಯ್‌ ಗೆಲ್ಲಕಾಯ್ತದೆ ಹೋಮ್‌ವರ್ಕ್‌ ಮಾಡಕಾ ಗಲ್ವಾ...?' ಹೀಗೆ ವೈಯಕ್ತಿಕ ವಿಷಯಗಳನ್ನು ಹೋಮ್‌ವರ್ಕ್‌ ಜೊತೆ ಸೇರಿಸಿ ಬಡಿಯುತ್ತಿದ್ದುದಕ್ಕೆ ಇನ್ನೂ ಒಂದು ಕಾರಣವಿತ್ತು. ಗಡಿ ಭೈರವನ ಜಾತ್ರೆಯಲ್ಲಿ ಆಡುವ ಜೂಜಾಟದಲ್ಲಿ ಸ್ವತಃ ಗುರು ಶಿಷ್ಯರಿಬ್ಬರೂ ಪಾಲ್ಗೊಳ್ಳುತ್ತಿದ್ದದ್ದು.

""ಲೋ ಈ ಸಿದ್ದಪ್ಪನ ಮಗ ಬೇಜಾನ್‌ ಆಡ್ತಾನೆ ಕಣಾÉ... ಅವ್ನಿಗೆ ಡಿಗ್ರೀಲಿ ಇನ್ನೂ ಎರಡು ಸಬೆjಕುr ಉಳ್ಕಂಡಿದ್ದಂತೆ...' ಹುಡುಗರು ಮಾತಾಡಿಕೊಳ್ಳುತ್ತಿದ್ದೆವು. ಶಾಲೆ ಬಿಟ್ಟ ಮೇಲೆ ನಾವು ನಮ್ಮೂರಿಗೆ ಹೋಗಲು ಬಸ್ಸಿಗೆ ಕಾಯುತ್ತಿದ್ದರೆ ಇದೇ ರಮೇಶ ಮೇಸ್ಟ್ರೆ ಸೌದೆ ಹೊರೆ ಹೊತ್ತುಕೊಂಡೋ, ದನಗಳನ್ನು ಹೊಡೆದು ಕೊಂಡೋ ಹೋಗುವುದನ್ನು ನೋಡುತ್ತಿದ್ದೆವು. ಆಗೆಲ್ಲಾ ನಮಸ್ಕಾರ ಮಾಡಿದರೆ ಏನೋ ಒಂದು ರೀತಿಯ ಬಿಗುಮಾನದ ನಗೆ ನಗುತ್ತಿದ್ದದ್ದುಂಟು. ಕೆಲವೊಮ್ಮೆ ಬೆಳಿಗ್ಗೆಯೇ ದನಕ್ಕೇ ನೇಗಿಲು ಹೇರಿಕೊಂಡು ಹೋಗುತ್ತಿದ್ದದ್ದೂ ಉಂಟು. ಆಗ ""ಸಾರ್‌, ಈವತ್ತು ಸ್ಕೂಲಿಗೆ ಬರಲ್ವಾ...?' ಎಂದರೆ, ""ಇಲ್ಲಾ ಕಣೊÅà ಸ್ವಲ್ಪ$ಹೊಲದಲ್ಲಿ ಕೆಲ್ಸ ಐತೆ... ಆಳುಗಳು ಬಂದಿಲ್ಲಾ...' ಎಂದುತ್ತರಿಸುತ್ತಿದ್ದರು. ಆಗ ನಾವೆಲ್ಲ , ""ಸಾ...
ನೀವು ಪ್ಯಾಂಟ್‌ ಹಾಕಿರೋದು ನೋಡಿ ಸ್ಕೂಲಿಗೆ ಬಂದರೇನೋ ಅನ್ಕೊಂಡ್ವಿ...' ಎಂದು ಕಾಣದಂತೆ ನಗುತ್ತಿದ್ದೆವು.

ಹಾಗೆ ಮಹದೇವಪ್ಪಎಂಬ ಇನ್ನೊಬ್ಬ ಶಿಕ್ಷಕರಿದ್ದರು.ಶಿವರಾಜು ಕುಮಾರ್‌ ಹೇರ್‌ ಕಟ್‌ ಅವರದು. ಅವರು ಶಾಲೆಯ ಕ್ಲರ್ಕ್‌ ಆಗಿದ್ದರೂ ಒಂದೊಂದು ಪಿರಿಯಡ್‌ ಜನರಲ್‌ ಕ್ಲಾಸ್‌ ಮಾಡುತ್ತೇನೆ ಎಂದು ಬಂದುಬಿಡುತ್ತಿದ್ದರು. ಅವರು ಬಂದರೆಂದರೆ ನಮಗೆಲ್ಲಾ ಪುಕ್ಕಟ್ಟೆ ಮನರಂಜನೆ.

ಅವರು ನಮಗೆ ಗೊತ್ತಾಗುವಷ್ಟು ಪೆದ್ದರಾಗಿದ್ದರು. ""ಸಾರ್‌ ಇವನು ಚೆನ್ನಾಗಿ ಹಿಂದಿ ಹಾಡು ಕಲ್ತಿದ್ದಾನೆ ಸಾರ್‌...' ಎಂದು ಗೆಳೆಯ ಪುಟ್ಸಾಮಿಯನ್ನು ತೋರಿಸುತ್ತಿದ್ದೆವು. ""ಬಾರೊ... ಹಾಡು' ಎಂದಾಕ್ಷಣ ಚಿಗರೆಯಂತೆ ಹಾರುತ್ತಿದ್ದ ಪುಟ್ಸಾಮಿ ಗಂಟಲು ಸರಿಪಡಿಸಿಕೊಂಡು ಬಾಯಿಗೆ ಬಂದದ್ದು ಹಾಡಿನ ತರದಲ್ಲಿ ಪೇಚಾಡುತ್ತಿದ್ದರೆ ನಾವು ಮುಸಿಮುಸಿ ನಗುತ್ತಿದ್ದೆವು. ಆದರೆ ಮಹದೇವಪ್ಪ ಮಾತ್ರ ನಮ್ಮೆಡೆಗೆ ಕೆಂಗಣ್ಣು ಬಿಟ್ಟು ನೋಡ್ರೋ ಎಷ್ಟ್ ಚೆನ್ನಾಗಿ ಕಲ್ತಿದ್ದಾನೆ ಹಿಂದಿ ಹಾಡನ್ನಾ... ನೀವೂ ಇದ್ದೀರಾ... ಎಂದು ಬೈಯುತ್ತಿದ್ದರು. ನಮಗಂತೂ ನಗು ತಡೆಯಲು ಆಗುತ್ತಲೇ ಇರಲಿಲ್ಲ.

ಮೀನಾ ನಮ್ಮ ತರಗತಿಯಲ್ಲಿದ್ದ ಹದಿನಾರು ಹುಡುಗಿಯರ ಪೈಕಿ ಸ್ವಲ್ಪ$ ಬೆಳ್ಳಗೆ ಸುಂದರವಾಗಿದ್ದಳು.ಅವಳನ್ನು ಭಾನುವಾರದಂದು ಮದುವೆಗೆ ಹೆಣ್ಣು ನೋಡಲು ಈ ಮಹದೇವಪ್ಪ ಹೋಗಿದ್ದರು.ಆಗ ಮೀನಾ ಮಹದೇವಪ್ಪನನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಕ್ಕೆ ಎರಡು ಕಾರಣಗಳನ್ನು ಕೊಟ್ಟಿದ್ದಳು. ಅವರನ್ನು ಈಗಾಗಲೇ ಸಾರ್‌... ಸಾರ್‌ ಎಂದು ಕರೆದು ರೂಢಿಯಾಗಿರುವುದರಿಂದ ಮದುವೆಯ ನಂತರ ಹಾಗೆ ಕರೆಯಲಿಕ್ಕೆ ಆಗದು ಎನ್ನುವುದು ಮೊದಲನೆಯ ಕಾರಣವಾಗಿದ್ದರೆ ಎರಡನೆಯದು ಮೇಸ್ಟ್ರೆಪೆದ್ದು ಎಂಬುದು. ಆದರೆ ಮಹದೇವಪ್ಪ ಮೇಸ್ಟ್ರೆ ಮೀನಾ ತನ್ನ ವಿದ್ಯಾರ್ಥಿನಿಯಾದ್ದರಿಂದ ತನ್ನನ್ನು ಒಪ್ಪೆಧೀ ಒಪ್ಪುತ್ತಾಳೆ, ಈ ಮದುವೆ ನಡೆಯುತ್ತದೆ ಎಂದು ಬಲವಾಗಿ ನಿರ್ಧರಿಸಿಬಿಟ್ಟಿದ್ದರು. ಆದರೆ, ಫ‌ಲಿತಾಂಶ ತಿಳಿದ ಮೇಲೆ ಅವರ ವರ್ತನೆಯೆ ಬೇರೆಯಾಗಿತ್ತು. ತರಗತಿಗೆ ಬಂದರೆ ಏನಾದರೊಂದು ವಿಷಯ ತೆಗೆದು "ಈಗಿನ ಕಾಲದ ಹುಡುಗೀರು ಸರಿಯಿಲ್ಲ..ಅವರ ಎಕ್ಸ್‌ಪೆಕ್ಟೇಷನ್‌ ಜಾಸ್ತಿ... ಅಂಥವರಿಗೆ ಸರಿಯಾಗೇ ಆಗುತ್ತೆ...' ಎಂದು ವಾರೆಗಣ್ಣಿಂದ ಮೀನಾಳೆಡೆಗೆ ನೋಡಿದರೆ, ಮೀನಾ ತಲೆತಗ್ಗಿಸುತ್ತಿದ್ದಳು. ನಾವು ಮುಸಿಮುಸಿ ನಗುತ್ತಿದ್ದೆವು.

ಕೊನೆಗೂ ಮೀನಾಳ ಮದುವೆಗೆ ಇಡೀ ನಮ್ಮ ಶಾಲೆಯೇ ನೆರೆದಿದ್ದರೂ ಮಹದೇವಪ್ಪ ಮಾತ್ರ ತನಗೆ ಕೆಲಸವಿದೆಯೆಂದು ತಪ್ಪಿಸಿಕೊಂಡರು.

ಇವರ ಜೊತೆಗೆ ನಮಗೆ ಪಾಠ ಚೆನ್ನಾಗಿ ಕಲಿಸಿದ ಗುರುಗಳು ಇದ್ದಾರೆ. ಆದರೆ, ಅವರಿಗಿಂತ ನೆನಪಿಗೆ ಬರುವುದು ಈ ಮೇಸ್ಟ್ರೆಗಳೇ... ನೆನಪಾದಾಗಲೆಲ್ಲ ನಗು ಬಂದರೂ ಅಮೇಲೆ ಯಾಕೋ ಕಣ್ತುಂಬಿ ಬರುತ್ತದೆ..ಅದು ಖುಷಿಗೋ, ಕಳೆದುಹೋದ ಕಾಲವನ್ನು ನೆನೆದೋ ಇಂದಿಗೂ ಗೊತ್ತಾಗಿಲ್ಲ.[ಇದು ನವಂಬರ 13 ರ೦ದು  ಉದಯವಾಣಿಸಾಪ್ತಾಹಿಕದಲ್ಲಿ ಪ್ರಕಟವಾಗಿದೆ.]

ನೋಡಲೇಬೇಕಾದ ಚಿತ್ರಗಳು-1

ಕೆಲವೊಂದು ಸಿನಿಮಾಗಳು ಬರೀ ಮನರ೦ಜನೆಯನ್ನಷ್ಟೇ ನೀಡುವುದಿಲ್ಲ.ಅದರ ಜೊತೆಗೆ ಚಿಂತನೆಯನ್ನೂ ಹಚ್ಚುತ್ತವೆ.  ಪಾತ್ರಗಳು ನಮ್ಮ ಮುಂದೆ ಬಂದು ಎಡಬಿಡದೆ ಕಾಡುತ್ತವೆ..ನನಗಂತೂ ಕೆಲವು ಚಿತ್ರಗಳು ಅದರಲ್ಲಿನ ಪಾತ್ರಗಳು ನನ್ನ ಪಕ್ಕದಲ್ಲಿ ಇದೆಯೇನೋ ಅನ್ನಿಸುತ್ತದೆ.ನನ್ನ ಜೊತೆ ಮಾತಾಡಿದಂತೆ ಭಾಸವಾಗುತ್ತದೆ.ಭಾಷೆ, ದೇಶ , ಪರಿಸರ  ಯಾವ ಹಂಗೂ ಇಲ್ಲದೆ ಯಾವ ಮಿತಿಯನ್ನೂ ಹೇರದೆ ಅದು ನಮ್ಮವೇ ಆಗಿಬಿಡುತ್ತವೆ. ಜಪಾನಿನಲ್ಲಿ ಶಿಯಾನ್ ಸೋನು ಎನ್ನುವ ನಿರ್ದೇಶಕನಿದ್ದಾನೆ. ಆತನ ಸಿನೆಮಾಗಲೆ೦ದರೆ ನನಗೆ ಭಾರಿ ಇಷ್ಟ. ಅದರಲ್ಲೂ ಅವನ ಲವ್ ಎಕ್ಸ್ ಪೋಸೆರ್ ಎಂಬ ಚಿತ್ರವನ್ನು ಸುಮಾರು ಭಾರಿ ನೋಡಿಬಿಟ್ಟಿದ್ದೇನೆ. ಸುಮಾರು ನಾಲ್ಕು ಘ೦ಟೆಯಷ್ಟು ಉದ್ದವಿರುವ ಈ ಸಿನಿಮಾ ನೀವು ನೋಡುತ್ತಾ ಕುಳಿತುಬಿಟ್ಟರೆ ಅವಧಿಯ ಯಾವ ಇರವನ್ನೂ ತೋರಗೊಡದ೦ತೆ ಅನುಭವಕ್ಕೆಡೆಮಾಡದ೦ತೆ  ನೋಡಿಸಿಕೊಂಡು ಹೋಗಿಬಿಡುತ್ತದೆ.ಚಿತ್ರದಲ್ಲೊಂದು ಸನ್ನಿವೇಶವಿದೆ. ಚರ್ಚೋ೦ದರಲ್ಲಿ ಪಾದ್ರಿಯಾಗಿ ಕೆಲಸ ಮಾಡುವ ಅಪ್ಪ ಹೆಂಡತಿ ದೂರವಾದ ಮೇಲೆ ಒ೦ದು ರೀತಿಯಲ್ಲಿ ಸ್ಯಾಡಿಸ್ಟ್ ಆಗಿಬಿಡುತ್ತಾನೆ. ಅಷ್ಟೊಂದು ಪ್ರೀತಿಸುತ್ತಿದ್ದ ಮಗನನ್ನು ದೂರವಿಡಲು ಪ್ರಾರಂಭಿಸುತ್ತಾನೆ. ಆದರೆ ಮಗನಿಗೆ ಅಪ್ಪನ ಮೇಲೆ ಅತೀವ ಪ್ರೀತಿ.ದಿನವೂ ಅಪ್ಪನನ್ನು ಮಾತಾಡಿಸಬೇಕು, ಕಾಣಬೇಕೆಂಬ ತವಕ ಆತನದು. ಅಪ್ಪನನ್ನು ಭೇಟಿ ಮಾಡುವ ಒಂದೆ ಒಂದು ಮಾರ್ಗವೆಂದರೆ ಚರ್ಚಿನಲ್ಲಿ ತಪ್ಪೊಪ್ಪಿಗೆ ಪೆಟ್ಟಿಗೆಯ ಮುಂದೆ ಹೋಗಿ ತಪ್ಪೋಪ್ಪಿಕೊಳ್ಳುವುದು. ಅದಕ್ಕಾಗಿ ದಿನವೂ ಒಂದೊಂದು ತಪ್ಪು ಮಾಡತೊಡಗುವ ಮಗ ಅಪ್ಪನ ಭೇಟಿಗೆ ಅವನ ತೃಪ್ತಿಗಾಗಿ ತನ್ನನ್ನೇ ದ೦ಡಿಸಿಕೊಳ್ಳಲು ಪ್ರಾರಂಭಿಸುತ್ತಾನೆ. ಇಡೀ ಸಿನೆಮಾ, ಅದರಲ್ಲಿನ ಚಿತ್ರಕಥೆ ಎಲ್ಲೂ ದಿಕ್ಕು ತಪ್ಪುವುದಿಲ್ಲ. ನಾಲ್ಕು ಘ೦ಟೆಗಳಷ್ಟು ಉದ್ದವಿದ್ದರೂ ಎಲ್ಲೂ ಬೋರ್ ಆಗುವುದಿಲ್ಲ. ಬದಲಿಗೆ ಅಲ್ಲಿನ ಪಾತ್ರಗಳು ಸನ್ನಿವೇಶಗಳು ನಮ್ಮನ್ನು ಎವೆಯಿಕ್ಕದ೦ತೆ ಮಾಡಿಬಿಡುತ್ತದೆ. ಹಾಗೆ ಚಿತ್ರಿಕೆಗಳ ಸಂಯೋಜನೆ ಮತ್ತು ಹಿನ್ನೆಲೆ ಸಂಗೀತವೂ ಸಿನಿಮಾಕ್ಕೆ ದೊಡ್ಡ ಕೊಡುಗೆಯನ್ನೇ ನೀಡಿದೆ ಎನ್ನಬಹುದು..2008ರಲ್ಲಿ ತೆರೆಗೆ ಬಂದ ಈ ಯಶಸ್ವೀ ಚಿತ್ರವನ್ನೊಮ್ಮೆ ನೋಡಿ..
 

Monday, April 23, 2012

ಮಾರ್ಚ್ 23...

ಮ್ಮ ಮಾರ್ಚ್ 23 ಚಿತ್ರದಲ್ಲೊಂದು ಸನ್ನಿವೇಶವಿದೆ. ಚಿತ್ರದ ನಾಯಕ ಒಬ್ಬ ಸರಣಿ ಹಂತಕನನ್ನು ಒಂದು ಕಬ್ಬಿಣದ ಕುರ್ಚಿಗೆ ಕಟ್ಟಿಹಾಕಿ ಅವನನ್ನು ಮುಳ್ಳಿನ ತಂತಿಯಿ೦ದ  ಬಿಗಿದು ಕಟ್ಟಿಹಾಕಿ ಅವನ ಹಿಂಬಾಗದಲ್ಲಿ ಕೊರಳಿಗೆ ಸರಿಯಾಗಿ ಡ್ರಿಲ್ಲಿಂಗ್ ಮೆಷಿನ್ ಇಟ್ಟು ಸತ್ಯ ಹೇಳದಿದ್ದರೆ ಡ್ರಿಲ್ಲಿಂಗ್ ಮೆಷಿನ್ ಆನ್ ಮಾಡಿ  ಕೊರಳನ್ನು ಡ್ರಿಲ್ ಮಾಡಿ ಸಾಯಿಸುತ್ತೇನೆ ಎಂದು ಹೆದರಿಸುವ ದೃಶ್ಯ. ಅಲ್ಲಿ ನಾಯಕ ಇರುವುದಿಲ್ಲ. ಬರೀ ಅವನ ಧ್ವನಿ ಮಾತ್ರ ಇರುತ್ತದೆ. ಗೆಳೆಯ ಅರ್ಜುನ್ ಸರಣಿ ಹಂತಕನ ಪಾತ್ರ ಮಾಡುತ್ತಿದ್ದ. ಎಲ್ಲವನ್ನೂ ಶೂಟ್ ಮಾಡಿದರು ಡ್ರಿಲ್ಲಿಂಗ್ ಮೆಷಿನ್ ಅವನ ಕೊರಳ ಹಿಂಭಾಗದಲ್ಲಿ ಸುತ್ತುವ ಶಾಟ್ ಅನ್ನು ಚಿತ್ರೀಕರಿಸಿರಲಿಲ್ಲ. ನನ್ನ ಪ್ರಕಾರ ಅದನ್ನು ಗ್ರಾಫಿಕ್ ಮುಖಾಂತರ ಪೂರ್ಣ ಮಾಡುವುದೇ ಸರಿ ಅನ್ನಿಸಿತ್ತು.ಮೊದಲೇ ನನ್ನ ಮೊದಲ ಚಿತ್ರ. ಅದರಲ್ಲಿ ಯಾವುದೇ ತರಹದ ಅನಾಹುತಗಳಾಗುವುದು ನನಗಿಷ್ಟವಿರಲಿಲ್ಲ.. ಅದರಲ್ಲೂ ಡ್ರಿಲ್ಲಿಂಗ್ ಮೆಷಿನ್ ತುದಿಗೂ ಅವನ ಕೊರಳಿಗೂ ಒ೦ದಿ೦ಚಿಗಿಂತಲೂ ಕಡಿಮೆ ಅ೦ತರವಿದ್ದುದರಿ೦ದ  ಆ ರಿಸ್ಕ್ ತೆಗೆದುಕೊಳ್ಳುವುದೇ ಬೇಡ ಎಂದು ನಾನು ಖಢಖಂಡಿತವಾಗಿ ಹೇಳಿಬಿಟ್ಟಿದ್ದೆ. ನಾವು ಚಿತ್ರೀಕರಣ ಮಾಡುತ್ತಿದ್ದದ್ದು ಭೂತಬಂಗಲೆಯಲ್ಲಿ. ಅಲ್ಲಾಗಲೇ ದೆವ್ವದ ಕಾಟವಿದೆ ಆ ಸಿನೆಮಾದ ಶೂಟಿಂಗ್ ಸಮಯದಲ್ಲಿ ಹಾಗಾಯಿತ೦ತೆ  ಈ ಚಿತ್ರದ ಶೂಟಿಂಗ್ ಸಮಯದಲ್ಲಿ ಹೀಗಾಯಿತ೦ತೆ ಎಂದೆಲ್ಲ  ಗುಸುಗುಸು ಪಿಸುಪಿಸುಗಳಿದ್ದವು. ಅ೦ತದ್ದರಲ್ಲಿ ನನಗೆ ರಿಸ್ಕ್ ತೆಗೆದುಕೊಳ್ಳುವ ಯಾವ ಉಮ್ಮೇದು ಇರಲಿಲ್ಲ. ಎಲ್ಲ ಶಾಟ್ ಗಳನ್ನೂ ತೆಗೆದಿದ್ದಾಗಿತ್ತು. ಕೇವಲ ಕೆಲವು ಕ್ಲೋಸ್ ಅಪ್ ಶಾಟ್ ಬಾಕಿಯಿತ್ತು. ನಾನು ಕ್ಯಾಮೆರಾಮನ್ ಗೆಶಾಟ್ ವಿವರಿಸಿ ರೆಡಿ ಆಗಲು ಹೇಳಿ ಹೊರಗಡೆ ಇದ್ದೆ..ಅಷ್ಟರಲ್ಲಿ ನಮ್ಮ ಕ್ಯಾಮೆರಾಮನ್ ನಿರಂಜನ್ ಬಾಬು ಮತ್ತು ನಮ್ಮ ಸಹನಿರ್ದೇಶಕರು ಸೇರಿಕೊಂಡು ತಾವು ತಾವೇ ಮಾತಾಡಿಕೊಂಡು ಹೇಗಾದರೂ ಮಾಡಿ ಅದೊಂದು ಶಾಟ್ ಡ್ರಿಲ್ಲಿಂಗ್ ಮೆಷಿನ್ ತಿರುಗುವಾಗಲೇ ತೆಗೆದುಬಿಡೋಣ , ನೈಜವಾಗಿರುತ್ತೆ ಎಂದು ಮಾತಾದಿಕೊಡಿದ್ದಾರೆ. ಹಾಗೆಯೇ ಡ್ರಿಲ್ಲಿಂಗ್ ಮೆಷಿನ್ ಕೂಡ ರೆಡಿ ಮಾಡಿಕೊಂಡಿದ್ದಾರೆ..ಆದರೆ ಅರ್ಜುನ್ ಗೂ ಅದರ ಬಗ್ಗೆ ಏನೂ ಹೇಳಿಲ್ಲ. ಸರ್ ರೆಡಿ ಎಂದು ನಮ್ಮ ಸಹಾಯಕ ಹೇಳಿದಾಗ ನಾನು ಸ್ಪಾಟ್ ಗೆ ಹೋದೆ. ಆದರೆ ಆಕ್ಷನ್ ಹೇಳುವ ಮೊದಲು ಎಲ್ಲ ಸರಿಯಿದೆಯೇ ಎಂದೊಮ್ಮೆ ಪರೀಕ್ಷಿಸಿದೆ.ಡ್ರಿಲ್ಲಿಂಗ್ ಮೆಷಿನ್ ನ ಕೇಬಲ್  ಸ್ವಿಚ್ ಬೋರ್ಡಿಗೆ ಕನೆಕ್ಟ್ ಆಗಿತ್ತು. ನನಗ್ಯಾಕೋ ಅನುಮಾನ ಬಂತು. ಪಕ್ಕದಲ್ಲಿದ್ದ ಆರ್ಟ್ ಡಿಪಾರ್ಟ್ ಮೆಂಟಿನ ಪ್ರಭುವಲ್ಲಿ ಸ್ವಿಚ್ ಆನ್ ಮಾಡಿಬಿಟ್ಟೆಯಪ್ಪ ಹುಷಾರ್ ಎಂದದ್ದಕ್ಕೆ.ಈವಾಗ ಹಾಕಲ್ಲ ಸಾರ್ ಶಾಟಲ್ಲಿ  ಹಾಕ್ತೀನಿ ಎಂದು ಬಾಯಿಬಿಟ್ಟುಬಿಟ್ಟ. ನಾನು ತಕ್ಷಣ ಪ್ಲಗ್ ಕಿತ್ತು ಬೀಸಾಕಿದವನೇ ಶೂಟಿಂಗ್ಗ್ ಪೂರ್ಣ ಮಾಡಿದೆ. ಆಮೇಲೆ ಅರ್ಜುನ್ ಕೂಡ ನನಗೆ ಗೊತ್ತಿರಲಿಲ್ಲ ಮಾರಾಯಾ..ಅಟ್ ಲೀಸ್ಟ್ ನನಗಾದರೂ ಹೇಳಿರಬೇಕಿತ್ತು..ನಾನು ಇದೇನು ಸದ್ದು ಅಂತ ಸ್ವಲ್ಪ ತಲೆ ಹಿಂದೆ ವಾಲಿಸಿದ್ದರೂ ಸ್ವರ್ಗವಾಸಿಯಾಗಿರುತ್ತಿದ್ದೆ ಎಂದ. ನನಗೂ ಹೌದೆನಿಸಿತು. ಅದಾದ ಮೇಲೆ ಇನ್ನಿ೦ತ ಹ  ಸಾಹಸಗಳಿಗೆ ದಯವಿಟ್ಟು ಕೈಹಾಕಬೇಡಿ ಎಂದು ಬಾಬುಗೆ ಹೇಳಿದಾಗ ಬಾಬು ಮಾತಾಡಲಿಲ್ಲ. ಈಗಲೂ ಆ ಘಟನೆ ನೆನಪಿಸಿಕೊಂಡರೆ ಎದೆ ಝಲ್ ಎನ್ನುತ್ತದೆ.
ಆದರೂ ಸಿನಿಮಾದ , ಚಿತ್ರೀಕರಣದ ಸ್ಥಳ ಕೊಡುವ ಥ್ರಿಲ್ ಉತ್ಸಾಹವನ್ನು ನನಗೆ ಬೇರೆ ಯಾವುದೂ ಇಲ್ಲೀವರೆಗೆ ಕೊಟ್ಟಿಲ್ಲ ಎಂದೆ ಹೇಳಬಹುದು. ನಾನು ಸಹಾಯಕನಾಗಿ ಕೆಲಸಮಾಡುತ್ತಿದ್ದ ಆಗಿನ ಅನುಭವವೇ ಬೇರೆ. ಸ್ವತಂತ್ರವಾಗಿ ನಿರ್ದೇಶಕನನಾದಾಗಿನ ಅನುಭವವೇ ಬೇರೆ. ಸಹಾಯಕನಾಗಿದ್ದಾಗ ಅಂತಹ ಜವಾಬ್ದಾರಿಗಳಿಲ್ಲದಿದ್ದರೂ ನಮ್ಮ ನಮ್ಮ ನಿರ್ದೇಶಕರ ಮುಂದೆ ಅದೇನು ಜವಾಬ್ದಾರಿಯಪ್ಪ ಎಂದು ಮಾತಾಡಿಕೊಳ್ಳುವಷ್ಟರ ಮಟ್ಟಿಗೆ ತೋರಿಸಿಕೊಳ್ಳುವುದು ನಮ್ಮ ಮೊದಲ ಕಲೆ ಎನ್ನಬಹುದು. ಅದರಲ್ಲೂ ಕೆಲವು ಕಿಲಾಡಿಗಳಿದ್ದಾರೆ..ನಿರ್ದೇಶಕರು ಎದುರಿದ್ದಾಗ ಅವರ ಅಬ್ಬರವೇ ಬೇರೆ. ಇಲ್ಲದಿದ್ದಾಗ ಆರಾಮವಾಗಿ ನಮಗೂ ಶೂಟಿಂಗ್ ಗೂ ಸಂಬಂಧವಿಲ್ಲ ಎನ್ನುವ೦ತಿರುತ್ತಾರೆ.ಒಟ್ಟಿನಲ್ಲಿ ಸಿನಿಮಾದ ಸೆಟ್ಟಿನಲ್ಲಿರುವ ಮಜಾವೇ ಬೇರೆ...


ಅಚ್ಚರಿಯ ಬದುಕಿದು... ಬದುಕಿಬಿಡು ಒಮ್ಮೆ !-ಭಾಗ-1


{ಈ ಕಥೆ ಕಳೆದ ಭಾನುವಾರ[22/4/2012]ದ ಉದಯವಾಣಿಯ ಸಾಪ್ತಾಹಿಕ ಸಂಚಿಕೆಯಲ್ಲಿ  ಪ್ರಕಟವಾಗಿದೆ.} ರೆನ್ಸಿಯಿದ್ದೂ, ನೆಟ್‌ವರ್ಕ್‌ ಇದ್ದೂ ಬ್ಯಾಟರಿ ಸತ್ತ ಮೊಬೈಲಿನಂತಾಗಿರುವ ನಟರಾಜ ಅಲಿಯಾಸ್‌ ನಟ್ಟೂನನ್ನು ನೋಡಿ ಸುಶೀಲಮ್ಮನಿಗೇ ಅಯ್ಯೋ ಎನಿಸಿತು. ಬೆಳಗ್ಗಿಂದ ಸಂಜೆವರೆಗೆ ಟಿವಿಯಲ್ಲಿ ಒದರಿದ್ದನ್ನೇ ಒದರುವ ನ್ಯೂಸ್‌ ಚಾನಲ್ಲಿನಂತೆ ನಟ್ಟೂ ಏನೇನೋ ಗೊಣಗುವುದು, ತಲೆಯ ಮೇಲೇನೋ ಗಟ್ಟಿಯಾಗಿ ಅಂಟಿಸಿದ್ದನ್ನು ಕೆಳಬೀಳಿಸುವವನಂತೆ ತಲೆಯನ್ನು ಅತ್ತಿಂದಿತ್ತ ಜೋರಾಗಿ ಅಲ್ಲಾಡಿಸುವುದನ್ನು ಸುಮ್ಮನೇ ನೋಡುತ್ತಿದ್ದ ಸುಶೀಲಮ್ಮನಿಗೆ ಯಾಕೆ ಯಾರು ಅವನಲ್ಲಿ ಏನನ್ನೂ ಹೇಳುತ್ತಿಲ್ಲ ಎನಿಸಿ ಬಹುಶಃ ಈಗ ಹೇಳುತ್ತಾರೇನೋ ಎಂದು ಮಗ ಅಶೋಕನ ರೂಮಿನ ಕಡೆಗೊಮ್ಮೆ ಸೊಸೆ ಕಾವ್ಯಾಳ ಕೊನೆಗೊಮ್ಮೆ ನೋಡುವುದು, ಅದೇ ಸ್ಪೀಡಿನಲ್ಲಿ ಟಿವಿಯ ಕಡೆಗೆ ಕಣ್ಣು ಹಾಯಿಸಿ ಅಲ್ಲಿನ ಕಥೆಯನ್ನು ಫ‚ಾಲೋ ಮಾಡುವುದು ಮಾಡುತ್ತಿದ್ದಳು. ಸುಮಾರು ಹೊತ್ತು ಅದೇ ಪ್ರಕ್ರಿಯೆಯನ್ನು ಅತ್ಯಂತ ನಿಷ್ಠೆಯಿಂದ ನಿರ್ವಹಿಸಿದ ನಟ್ಟೂ ಆಮೇಲೆ ತಲೆ ಒದರಿಕೊಳ್ಳುತ್ತಲೇ ಎದ್ದುಹೊರಗಡೆ ಹೋಗಿಬಿಟ್ಟ. ಅವನು ಹೋದದ್ದನ್ನು ಖಾತರಿ ಮಾಡಿಕೊಂಡು ಜುರಾಸಿಕ್‌ ಪಾರ್ಕಿನ ಡೈನೋಸಾರ್‌ನಂತೆ ನಿಧಾನಕ್ಕೆ ಹೆಜ್ಜೆಹಾಕುತ್ತ, ಸದ್ಯ ಜೀವ ಬಂತೆಂಬುವಂತೆ ಹೊರ ಬಂದ ಅಶೋಕ ತನ್ನನ್ನೇ ರಿಯಾಲಿಟಿ ಶೋನಲ್ಲಿ ಹಸಿಮಾಂಸ ಕಚ್ಚಿ ತಿನ್ನುತ್ತಿದ್ದ ಪೇಟೆಯ ಅನಾಗರಿಕರನ್ನು ನೋಡುವಂತೆ ನೋಡುತ್ತಿದ್ದ ಅಮ್ಮನನ್ನು ನೋಡಿ, ಬೈದರೂ ಅಂದರೂ ನಗುನಗುತ್ತಲೇ ಉತ್ತರಿಸುವ ನಿಯತ್ತಾಗಿ "ವಂದನೆಗಳು ಶುಭದಿನ' ಎನ್ನುವ ಕಸ್ಟಮರ್‌ಕೇರ್‌ ಗಿರಾಕಿಯಂತೆ, "ವರ್ಕ್‌ ಟೆನÒನ್‌ ಕಣವ್ವಾ... ನಿಂಗೇನೂ ಅರ್ಥ ಆಗಲ್ಲಾ...' ಎಂದ. ಕಾರ್ಯಕ್ರಮದ ಮಧ್ಯಮಧ್ಯ ಇಣುಕಿಹಾಕುವ ಟ್ರೆ„ಲರಿನಂತೆ ಆ ಮಾತನ್ನು ಅಮ್ಮನಿಗೇ ಈಗಾಗಲೇ ನೂರಾರು ಬಾರಿ ಹೇಳಿಬಿಟ್ಟಿದ್ದ. ಸುಶೀಲಮ್ಮ ಮಾತನಾಡಲಿಲ್ಲ. ಬದಲಿಗೆ ಯಾಕೆ ಹೀಗೆ ಅಪ್ಪಮಗನಿಗೇ ಬುದ್ಧಿ ಹೇಳಲು ಅಥವಾ ಗದರಿಸಲು ಹೆದರುತ್ತಿರುವನಾ? ಅಥವಾ ಇದ್ಯಾಕೆ ಯಾರೂ ನಟ್ಟೂನನ್ನು ಕೂರಿಸಿಕೊಂಡು ಏನಾಯಿತು... ಯಾಕೆ ಹಿಂಗೆ ಎಂದು ಕೇಳುತ್ತಿಲ್ಲ ಎನ್ನುವುದು ಕರೋಡಪತಿ ಸ್ಪರ್ಧೆಯ ಕೋಟಿ ರೂಪಾಯಿಯ ಪ್ರಶ್ನೆಯಂತೆ ಕಾಡತೊಡಗಿತು.

ಸುಶೀಲಮ್ಮ ಬೆಂಗಳೂರಿಗೆ ಬಂದು ಕೇವಲ ಆರು ತಿಂಗಳಾಗಿತ್ತು.ಅದೂ ಗಂಡ ಸತ್ತು ಒಂಬತ್ತು ವರ್ಷದ ನಂತರ. ಮಗ ಅದೆಷ್ಟೇ ಹೇಳಿದ್ದರೂ ತನ್ನೂರು ತನ್ನ ಜನ ಬಿಟ್ಟು ಬರಲು ಸುಶೀಲಮ್ಮನಿಗೇ ಯಾಕೋ ಮನಸ್ಸೇ ಒಪ್ಪಿರಲಿಲ್ಲ. ಇರುವ ಒಬ್ಬನೆ ಒಬ್ಬ ಮಗನನ್ನು ಕಷ್ಟಪಟ್ಟು ಕೂಲಿ ಮಾಡಿಯೇ ಓದಿಸಿದ್ದರು ಸಿದ್ದಪ್ಪ ಮತ್ತು ಸುಶೀಲಮ್ಮ. ಇಡೀ ತಮ್ಮ ವಂಶದಲ್ಲಿಯೇ ಯಾರು ಜಾಸ್ತಿ ಓದಿದವರಿಲ್ಲದಿದ್ದರಿಂದ ಮಗ ಅಶೋಕನನ್ನು ಓದಿಸಿಯೇ ತೀರಬೇಕೆಂಬ ಹಠ ಗಂಡ-ಹೆಂಡತಿಯರದಾಗಿತ್ತು. ಮಗ ಚೆನ್ನಾಗಿ ಓದಿ ಒಳ್ಳೆಯ ಕೆಲಸ ಹಿಡಿದು ಊರಲ್ಲಿ ಓಡಾಡಿಕೊಂಡಿದ್ದರೆ ಅದೆಷ್ಟು ಚೆನ್ನ. ತಮ್ಮ ಮೈಲೇಜು ಸರೀಕರ, ಸಂಬಂಧಿಕರ ಮುಂದೆ ಮನಸಿನ ವೇಗದಲ್ಲಿ ಓಡುತ್ತದೆ ಎಂದು ಕನಸುಕಟ್ಟಿಕೊಂಡಿದ್ದರು. ಆದರೆ, ಅಶೋಕ ಅಂಥ ಯಾವ ಆಫ‚‌ರ್‌ಗಳನ್ನೂ ತನ್ನ ತಾರೀಫಿ‚ನಲ್ಲಿ ಸೇರಿಸಿರಲಿಲ್ಲ. ಅಪ್ಪಾ$ಇದು ಚೆನ್ನಾಗಿದೆ... ಇದನ್ನ ಓದಿದರೆ ಒಳ್ಳೇ ಲಾಭವಿದೆ... ಅದಕ್ಕೆ ಇಷ್ಟು ಖರ್ಚಾಗುತ್ತದೆ ಎಂದಷ್ಟೇ ಹೇಳಿ ದುಡ್ಡು ನಮ್ಮದಾದರೂ ತರಹೇವಾರಿ ಆಫ‚‌ರ್‌ ಇಟ್ಟು ತಮಗಿಷ್ಟವಾದದ್ದನ್ನೇ ಗಿರಾಕಿಗಳಿಗೆ ತಗಲಾಕುವ ಸೂಪರ್‌ಬಜಾರುಗಳಂತೆ ಹೇಳಿ ಹಣ ಕೀಳುತ್ತಿದ್ದ. ಮೈಸೂರಿನ ಹಾಸ್ಟೆಲ್ಲಿನಲ್ಲಿಯೇ ಉಳಿದುಕೊಂಡು ವಾರಕ್ಕೊಮ್ಮೆ ರಜೆಯಿದ್ದರೂ ಮನೆಗೆ ಬರದೇ ತಾನಿಲ್ಲಿಯೇ ಓದಿಕೊಳ್ಳುತ್ತಿದ್ದೇನೆಂದು ಹೇಳಿಕಳುಹಿಸುತ್ತಿದ್ದ ಅಶೋಕ ರಜಾದಿನವನ್ನು ಮಾತ್ರ ಕಾವ್ಯಾಳಿಗಾಗಿ ಮೀಸಲಾಗಿಟ್ಟಿದ್ದ. ಕಾವ್ಯಾ ಅವನ ಸಹಪಾಠಿ. ಇನ್ನೇನು ಓದು ಮುಗಿಯಿತು, ಕೆಲಸವೂ ಸಿಗುತ್ತದೆ... ಇದೇ ಸಂದರ್ಭದಲ್ಲಿ ಸ್ಕೋಪ್‌ ತೆಗೆದುಕೊಳ್ಳುವ ಕಾರ್ಯಕ್ರಮಗಳಾದ ಮದುವೆಗೆ ಹುಡುಗಿ ನೋಡುವುದು, ಮದುವೆ-ಸಮಾರಂಭಗಳಿಗೆ ಹೋಗಿ ನಿಮ್ಮ ಮಗ ಓದುತ್ತಿದ್ದಾನಾ ಎನ್ನುವ ಪ್ರಶ್ನೆಯನ್ನು ತನ್ನ ಮಗನ ಇಂಟ್ರಡಕ್ಷನ್ನಿಗಾಗಿ ಬಳಸಿಕೊಂಡು, ಆನಂತರ ಮಗ ಹೇಗೇಗೆಲ್ಲಾ ಓದಿದ ಎನ್ನುವುದನ್ನು ಸಿನೆಮಾದ ಅವಧಿಗಿಂತ ತುಸು ಜಾಸ್ತಿಯಾಗಿ, ಧಾರಾವಾಹಿಗಿಂತ ತುಸು ಕಡಿಮೆಯಾಗಿ, ಯಕ್ಷಗಾನಕ್ಕಿಂತ ಕಡಿಮೆ ಅಬ್ಬರದಲ್ಲಿ ಕೊರೆಯಬೇಕೆಂಬ ಹುನ್ನಾರಗಳನ್ನು ಯಶಸ್ವಿಯಾಗಿಸಬೇಕೆಂದು ಸುಶೀಲಮ್ಮ ಸರ್ವರೀತಿಯಲ್ಲೂ ಸಿದ್ಧಗೊಳ್ಳುತ್ತಿದ್ದರೆ ಅತ್ತ ಮಗರಾಯ ಓದು-ಮದುವೆ-ಕೆಲಸಗಳನ್ನು ಒಂದೇ ಟೈಂಲ್ಯಾಪ್ಸಿನಲ್ಲಿ ಮುಗಿಸಿಯೇಬಿಟ್ಟು ಸುಶೀಲಮ್ಮನ ಸರ್ವ ಯೋಜನೆಗಳಿಗೂ ಸ್ಟೇ ಆರ್ಡರ್‌ ತಂದುಬಿಟ್ಟಿದ್ದನಲ್ಲದೇ ಯಾವ ಸಭೆಸಮಾರಂಭಗಳಿಗೂ ಹೋಗಲಾಗದಂತೆ ಮಾಡಿಬಿಟ್ಟಿದ್ದ.  ಆವತ್ತು ಗಂಡ-ಹೆಂಡಿರಿಬ್ಬರಿಗೂ ಎದೆಯೆ ಒಡೆದುಹೋಗಿತ್ತು. ಆದರೆ, ಅವರಿಬ್ಬರು ಯಾವ ಬೀದಿನಾಟಕದ ಪಾತ್ರಧಾರಿಗೂ ಕಮ್ಮಿಯಿಲ್ಲದಂತೆ ಒಬ್ಬರ ಮುಂದೊಬ್ಬರು ಮಗನನ್ನು  ಹೊಗಳುವ ಕೆಲಸ ಮಾಡಿದ್ದರು. ಮದುವೆಯ ಮೂರನೆಯ ದಿನಕ್ಕೇ ಬೆಂಗಳೂರಿಗೆ ಹೊರಟುನಿಂತ ಮಗ-ಸೊಸೆ ಅದೆಷ್ಟು ಬಾರಿ ತಮ್ಮೊಡನೆ ಬರಲೇಬೇಕೆಂದು ರಚ್ಚೆ ಹಿಡಿದರೂ ಬರುವುದಿಲ್ಲವೆಂದು ಇವರಿಬ್ಬರು ತಾವೂ ರಚ್ಚೆ ಹಿಡಿದು ಗೆದ್ದುಬಿಟ್ಟಿದ್ದರು. 

ಇದೆಲ್ಲಾ ಮುಗಿದ ಮೇಲೆ ಒಂದೇ ನಿಟ್ಟಿನಲ್ಲಿ ಇಪ್ಪತ್ತಮೂರು ವರ್ಷಗಳು ಕಳೆದುಹೋಗಿದ್ದವು. ಅಷ್ಟೂ ದಿನಗಳನ್ನು ಮಗನ ಓದಿಗಾಗಿ ಮಾಡಿದ ಸಾಲವನ್ನು ತಮ್ಮಲ್ಲಿರುವ ಮೊಬೈಲ್‌ ಪರದೆಯಗಲದ ಜಮೀನಿನಲ್ಲಿ ದುಡಿದು ತೀರಿಸುವುದಕ್ಕೆ ಮುಡಿಪಾಗಿಟ್ಟುಬಿಟ್ಟಿದ್ದರು. ಮಗ ಪೇಟೆಯಲ್ಲಿ ಸಾವಿರಗಳನ್ನು ಬರೀ
ಮೊಬೈಲಿನಲ್ಲಿ ಮಾತಾಡಿ ಕಳೆಯುವ ಹಣವನ್ನು ಇಲ್ಲಿವರು ಕಂತುಗಳಂತೆ ತಿಂಗಳುತಿಂಗಳು ಕಟ್ಟುತ್ತಿದ್ದರು.
ಮಗ ಅಶೋಕನಿಗೆ ಗೊತ್ತಾಗಿದ್ದರೆ ಒಂದೇ ಸಾರಿ ಕಟ್ಟಿ ಚಾಪ್ಟರ್‌ ಕ್ಲೋಸು ಮಾಡುತ್ತಿದ್ದನೇನೋ... ಆದರೆ, ಸುಶೀಲಮ್ಮ ಸಿದ್ದಪ್ಪದಂಪತಿಗಳಿಗೆ ಅದ್ಯಾಕೋ ಹೇಳಬೇಕೆನ್ನಿಸಿರಲಿಲ್ಲ. ಸಾಲ ತೀರಿದ ಮೇಲೆ ಮಗ ಹಾಕುವ ಊಟ ತಿಂದುಕೊಂಡು ಅದ್ಹೇಗೆ ಸಾಯುವವರೆಗೆ ಕಾಲ ತಳ್ಳುವುದು ಎನ್ನಿಸಿದ್ದರಿಂದ ದುಡಿಯುವ ಮತ್ತು ಸಾಲ ತೀರಿಸುವ ಕಾಯಕದಲ್ಲಿ ಕೈಲಾಸ ಕಂಡುಕೊಂಡಿದ್ದರು.
 ಅಶೋಕನಿಗೆ ಮಗುವಾಯಿತು. ಮಗ, ಬೆಂಗಳೂರಿನ ಪ್ರತಿಷ್ಠಿತ ಸ್ಕೂಲಿಗೆ ದುಬಾರಿ ಹಣತೆತ್ತು ಸೇರಿಯೂ ಆಯಿತು, ಮಗನ ಕಣ್ಣಿಗೆ ಅಪ್ಪನಿಗಿಂತ ಮೊದಲೇ ಕನ್ನಡಕವೂ ಬಂದಿತು, ಮಗ ಗುಂಡುಗುಂಡಗೆ ಬೆಳೆದುಮುದ್ದಾಗಿದ್ದವನು ಬರುಬರುತ್ತ ಡುಮ್ಮನಾಗಿದ್ದದ್ದೂ ಆಯಿತು... ಹೀಗೆ. ಪ್ರತಿಸಾರಿಯೂ ಅಜ್ಜಿಯ ಊರಿಗೆ ಬಂದಾಗ ಆಗುತ್ತಿದ್ದ ಬದಲಾವಣೆಗಳು ಮಾತ್ರ ಸುಶೀಲಮ್ಮನಿಗೆ ಅಚ್ಚರಿ ತರಿಸುತ್ತಿದ್ದವು. ಹೊರಗೆ ಹೋಗಿ ಒಂದು ಆಟವಾಡದ ಮೊಮ್ಮಗ ಮಾತ್ರ ಟಿವಿಯ ನ್ಯೂಸ್‌ ರೀಡರಿನಂತೆ ಇಂಗ್ಲೀಷ್‌ ಮಾತಾಡುವುದು ಹೆಮ್ಮೆಯೆನಿಸುತ್ತಿತ್ತು. ಗೋಡೆಯ ಮೇಲೆ ಕೈಗೆ ಸಿಕ್ಕಿದ್ದರಲ್ಲಿ ಮೊಮ್ಮಗ ನಟರಾಜು ಶಿವಪಾರ್ವತಿ ಚಿತ್ರ ಬಿಡಿಸುತ್ತಿದ್ದರೆ ಸುಶೀಲಮ್ಮನಿಗೆ ಅವನ ಕೈಚಳಕ ನೋಡಿ ಅಚ್ಚರಿಯಾಗುತ್ತಿತ್ತು. ಆದರೆ ಕಾವ್ಯಾ ಮಾತ್ರ "ಓದೊRà ಅಂದ್ರೆ ಇಲ್ಲಿ ಬಂದು ಗೀಚಿ¤àಯ...' ಎಂದು ದೊಣ್ಣೆ ಹಿಡಿದು ಟಾಮ್‌ ಅಂಡ್‌ ಜೆರ್ರಿಯ ಟಾಮ್‌ನಂತೆ ಅಟ್ಟಾಡಿಸುತ್ತಿದ್ದಳು. "ನೋಡ್ತಿರಿ ಅತ್ತೆ, ನನ್ನ ಮಗ ದೊಡ್ಡ ಇಂಜಿನಿಯರಾಗ್ತಾನೆ...
ಇವ್ರಂಗೆ ಗಂಟಲು ಹರ್ಕಂಡು ಪಾಠ ಮಾಡಿ ತಿಂಗಳಿಗೆ ಸಾವ್ರ ಎಣಿಸಲ್ಲ... ಏಸಿ ರೂಮಲ್ಲಿ ಕೂತ್ಕಂಡು ಲಕ್ಷಲಕ್ಷ ಎಣಿಸ್ತಾನೆ...' ಎನ್ನುತ್ತಿದ್ದರೆ ಸುಶೀಲಮ್ಮನಿಗೆ ಅದೇಕೋ ಮುಳ್ಳಿನ ಚಪ್ಪಲಿಯನ್ನು ರೇಷ್ಮೆಯ ಬಟ್ಟೆಗೆ ಸುತ್ತಿ ಹೊಡೆದಂತಾಗುತ್ತಿತ್ತು.

*

ಬೆಂಗಳೂರಿಗೆ ಬೆಂಗಳೂರೇ ಒಂದು ಮಾಯಾನಗರಿಯಂತೆ ಸುಶೀಲಮ್ಮನಿಗೆ ಮಗನ ಮನೆಗೆ ಬಂದ ವಾರದಲ್ಲೇ ಅನ್ನಿಸತೊಡಗಿತ್ತು. ಎಲ್ಲವನ್ನೂ ಕೈಯೊಳಗಿನ ಮೊಬೈಲೆ ಮಾಡಿ ಮುಗಿಸುತ್ತಲ್ಲಾ ಎನಿಸಿ ಆ ಮಾಯಾದಂಡದ ಮೇಲೆ ಆಸಕ್ತಿ ಮೂಡಿತ್ತು. "ಈವತ್ಯಾಕೋ ಅಡಿಗೆ ಮಾಡಕ್ಕಾಗ್ಲಿಲ್ಲ ಕಣ್ರೀ ಅದ್ಕೆà ಹೋಟೆಲ್ಲಿಂದ ಏನಾದ್ರೂ ತರಿಸ್ತಿದ್ದೀನಿ ನಿಮಗೇನು ಬೇಕು?' ಎಂಬೊಂದು ಕರೆ ಗಂಡನಿಗೆ, "ಎರಡು ಪಿಜಾ, ಒಂದು ಬರ್ಗರ್‌' ಎಂದು ಹೊಟೇಲಿನವನಿಗೆ ಕುಳಿತಲ್ಲೆ ಕರೆ ಮಾಡಿದರೆ ಮುಗಿಯಿತು... ಅಲ್ಲಿಂದ ಏಳುವಷ್ಟರಲ್ಲಿ ಮನೆಗೆ ಶರವೇಗದಲ್ಲಿ ಊಟ ತಂದು ಬೀಸಾಕಿಹೋಗುವ ಯಕ್ಷಿಣಿ ದೇವತೆಗಳು...! ಬೇಗ ಏಳಲು ಅಲಾರ್ಮ್, ರೇಡಿಯೋ, ಲೆಕ್ಕ ಮಾಡುವ ಕ್ಯಾಲ್ಕುಲೇಟರ್‌, ಟೈಮು ತೋರಿಸುವ ಗಡಿಯಾರ, ದಿನ ಲೆಕ್ಕಗಳಿಗೆ ಕ್ಯಾಲೆಂಡರು... ಹೀಗೆ, ಅದೆಷ್ಟು ಕೆಲಸಗಳನ್ನು ಮೊಬೈಲೆಂಬ ಆ ಪುಟ್ಟ ಕರೆಸಾಧನ ಮಾಡುತ್ತದಲ್ಲ ಎನಿಸಿತ್ತು. ಒಂದೇ ಏಟಿಗೆ ಬೆಳಿಗೆದ್ದು ಕೂಗುವ ಕೋಳಿ, ಅಜ್ಜಿ ಕಥೆ, ಹಬ್ಬದ ಜಾನಪದದ ಹಾಡುಗಳು, ಹತ್ತು ಬೆರಳುಗಳು, ಮತ್ತದರ ಮೂರುಮೂರು ಗೀರುಗಳು, ಅಮಾವಾಸ್ಯೆ ಹುಣ್ಣಿಮೆ, ಸೂರ್ಯ ಹೀಗೆ ಎಲ್ಲವನ್ನು ಹೊಡೆದು ಬಿಸಾಡಿಬಿಟ್ಟ ಆ ಕರೆಸಾಧನ ಯಂತ್ರರೂಪದ ರಜನೀಕಾಂತ್‌ನಂತೆ ಸುಶೀಲಮ್ಮನಿಗೆ ಭಾಸವಾಗತೊಡಗಿತ್ತು. ಆದರೆ, ಪಕ್ಕದ ಮನೆಯ ಪುಟ್ಟ ಹುಡುಗ ಬಂದು ಅಜ್ಜಿ ಈವತ್ತು ಗೊತ್ತಾ ಕುಸ್ತೀಲಿ ನಾನೇ ಗೆದ್ದಿದ್ದು.. ಎಂದಾಗ ಎಲ್ಲಿ ಆಡಿದೆ ಎಂದು ಕೇಳಿದ್ದಕ್ಕೆ ಕಂಪ್ಯೂಟರಿನಲ್ಲಿ ಎಂದುತ್ತರಿಸಿದ್ದು ಅದೇನೆಂದು ತಿಳಿದುಕೊಂಡ ಸುಶೀಲಮ್ಮನಿಗೆ ಕಂಪ್ಯೂಟರಿನ ಮುಂದೆ ಮೊಬೈಲ್‌ ತುತ್ಛವಾಗಿ ಕಾಣಿಸಿತ್ತು. ಅಲ್ಲೆ ಆಟವಾಡಬಹುದು, ಓದಬಹುದು, ಸಿನೆಮಾ ನೋಡಬಹುದು ಮದುವೆ ಹೆಣ್ಣೂ ಹುಡುಕಬಹುದು, ಕರೆಂಟುಬಿಲ್‌, ವಾಟರ್‌ಬಿಲ್‌ ಸಕಲವನ್ನೂ ಕಂಪ್ಯೂಟರೆನ್ನುವ ಡಬ್ಬವೇ ಮಾಡುತ್ತದೆ ಎಂದಾಗ ಸುಶೀಲಮ್ಮ ನಿಬ್ಬೆರಗಾಗಿ ಹೋಗಿದ್ದಳು. ದಿನ ಕಳೆದಂತೆ ಬೆಂಗಳೂರಿಗೆ ಬೆಂಗಳೂರೇ ಯಂತ್ರದ ಚಕ್ರಗಳಿಗೆ ತನ್ನನ್ನು ಅರ್ಪಿಸಿಕೊಂಡಿದೆಯೆನಿಸತೊಡಗಿತ್ತು. ವಾರಗಟ್ಟಲೆ ತಿಂಗಳುಗಟ್ಟಲೇ ಊರಿನಲ್ಲಿ ಕರೆಂಟಿಲ್ಲದಿದ್ದಾಗ ಬೇಗನೇ ಊಟ ಮುಗಿಸಿ ಮಕ್ಕಳನ್ನು ಮಲಗಿಸಿಕೊಂಡು ಕಥೆ ಹೇಳುತ್ತ ಮಲಗಿಸುತ್ತಿದ್ದದ್ದು ಸುಶೀಲಮ್ಮನಿಗೆ ನೆನಪಿಗೆ ಬಂದಿತ್ತು. ಆದರೆ, ಇಲ್ಲಿ ಅರ್ಧ ದಿನ ಕರೆಂಟಿಲ್ಲದಿದ್ದರೆ ಇಡೀ ಬದುಕೇ ಅಸ್ತವ್ಯಸ್ತವಾಗುತ್ತಿದ್ದದು ಕಂಡು ಅಚ್ಚರಿಯ ಜೊತೆಜೊತೆಗೆ ಬೇಸರವೂ ಆಗುತ್ತಿತ್ತು. ಆದರೆ, ತಿಂಗಳು ಕಳೆಯುವಷ್ಟರಲ್ಲಿ ಬೆಂಗಳೂರು ಹಣವನ್ನೇ ಅಡಿಪಾಯಮಾಡಿಕೊಂಡಿದೆ ಎನಿಸಲು ಪ್ರಾರಂಭವಾಗಿತ್ತು.
"ಅಮ್ಮ ನಾಳೆಯಿಂದ ಇವಳ ಜೊತೆ ವಾಕಿಂಗ್‌ ಹೋಗಿ ಬಾ... ನಡೆಯೋದು ಆರೋಗ್ಯಕ್ಕೇ ಒಳ್ಳೇದು...'
ಎಂದು ಮಗ ಅಶೋಕ ಅದೊಂದು ದಿನ ಹೇಳಿದಾಗ ಅವನೆಡೆಗೆ ಅಚ್ಚರಿಯ ರಿಯಾಕ್ಷನ್‌ ಕೊಟ್ಟಿದ್ದಳು. ಮೈಲುಗಟ್ಟಲೆ ನಡೆದು, ಹೊಲದ ಕೆಲಸ ಮಾಡುತ್ತಿದ್ದವಳಿಗೆ ನಡೆಯಲು ಹೇಳಿದ್ದು ಇಂಟೆರೆಸ್ಟಿಂಗಾಗಿ ಟಿವಿ ನೋಡುವಾಗ ಕರೆಂಟಿದ್ದು ಕೇಬಲ್‌ ಕನೆಕ್ಷನ್‌ ಕಡಿದುಹೋದಂತೆನಿಸಿತ್ತು.