Friday, April 27, 2012

ನೋಡಲೇ ಬೇಕಾದ ಚಿತ್ರಗಳು-2

ಕೆಲವು ಸಿನೆಮಾಗಳು ಬರೀ ಸಿನೆಮಾಗಳಷ್ಟೇ ಆಗಿರುವುದಿಲ್ಲ.ಅವುಗಳು ಉತ್ತಮ ಸಾಕ್ಷ್ಯಚಿತ್ರಗಳೂ ಆಗಿರುತ್ತವೆ. ಅಂದರೆ ಇತಿಹಾಸದ ಶಾಸನದ ರೀತಿಯಲ್ಲಿದ್ದು ನಮ್ಮ ಮುಂದಿನ ಪೀಳಿಗೆಗೆ ಮಾರ್ಗದರ್ಶಿಯಾಗಲು, ಜಗತ್ತು ಹೀಗಿತ್ತು ಎಂದು ತೋರಿಸಲು ಬೇಕಾದ ಅಂಶಗಳಾಗುತ್ತವೆ.ದೃಶ್ಯಮಾಧ್ಯಮ ತುಂಬಾ ಪ್ರಬಲವಾದ ಮಾಧ್ಯಮ ಎನ್ನುವುದು ನಮಗೆಲ್ಲ ಗೊತ್ತಿರುವ ವಿಷಯವೇ ಸರಿ. ಆ ನಿಟ್ಟಿನಲ್ಲಿ ಲಿಯೋ ಟಾಲ್ಸ್ ಟಾಯ್ ರವರ ಮಹೋನ್ನತ ಕೃತಿ 'ವಾರ್ ಅಂಡ್ ಪೀಸ್ ' ನಿಮಗೆ ಗೊತ್ತಿರಬಹುದು.ಸುಮಾರು ಸಾವಿರಗಟ್ಟಲೆ ಪುಟವಿರುವ ಮಹಾನ ಕಾದಂಬರಿ ಅದು.ಅದನ್ನು ಆಧರಿಸಿ,ಸ್ಪೂರ್ತಿಯಾಗಿಟ್ಟುಕೊ೦ಡು ಸುಮಾರು ಸಿನಿಮಾಗಳು ಬಂದಿವೆ. ಆದರೆ ಇಡೀ ಕಾದಂಬರಿಯನ್ನ ವಸ್ತುನಿಷ್ಠವಾಗಿ, ವಿವರವಾಗಿ ಆಧರಿಸಿದ ಸಿನೆಮಾ ಎಂದರೆ ಅದು 1965ರಲ್ಲಿ ಬಿಡುಗಡೆಯಾದ ವಾರ್ ಅಂಡ್ ಪೀಸ್. ರಶಿಯನ್ ಭಾಷೆಯಲ್ಲಿದೆ . ಸರ್ಜಿಯೋ ಬ೦ದಾರ್ಚುಕ್ ಈ ಚಿತ್ರದ ನಿರ್ದೇಶಕ. ಅಂದಹಾಗೆ ಈ ಸಿನೆಮಾದ ಯುದ್ಧದ ಸನ್ನಿವೇಶವಂತೂ ಅದ್ಭುತ ಎನ್ನಬಹುದು. ಆದರೆ ಸಂಪೂರ್ಣ ಸಿನೆಮಾದ ಉದ್ದಮಾತ್ರ 8 ಘಂಟೆಗೂ ಹೆಚ್ಚು.  ಈ  ಸಿನೆಮಾವನ್ನು ನೋಡಲು ಇಡೀ ದಿನವನ್ನು ಮೀಸಲಿಡಬೇಕು..
ಚಿತ್ರದ ತುಣುಕನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ.. 
ಈ ಸಿನೆಮಾದ ಇನ್ನೊಂದು ವಿಶೇಷವೆಂದರೆ ಅತೀ ಹೆಚ್ಚು ಸಹನಟರು ಅಭಿನಯಿಸಿದ ಚಿತ್ರ ಎಂದು ಗಿನ್ನೆಸ್ ದಾಖಲಾಗಿರುವುದು. ಸುಮಾರು 1,20,000 ಸಹನಟರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ..ಸಿಕ್ಕರೆ ನೋಡಿ.

  ಚಿತ್ರದ dvd ದೊರಕದೆ ಇದ್ದರೆ, ನೋಡಬೇಕೆನಿಸಿದರೆ ನನ್ನನ್ನು ಸಂಪರ್ಕಿಸಬಹುದು. swapnageleya@gmail.com .

2 comments:

  1. ರೆಕಮ೦ಡೇಷನ್ ಗೆ ಧನ್ಯವಾದಗಳು. idi i smotri ಎ೦ಬ ರಷ್ಯನ್-ಜರ್ಮನ್ ವಾರ್ ಚಿತ್ರವಿದೆ. ನಿಮಗಿಷ್ಟವಾಗಬಹುದು

    ReplyDelete
  2. idi i smotri ನೋಡಿರಲಿಲ್ಲ..ಈಗ ಖಂಡಿತ ನೋಡುತ್ತೇನೆ..ತುಂಬಾ ಧನ್ಯವಾದಗಳು..ಹೀಗೆ ಒಂದಷ್ಟು ಸಿನಿಜ್ಞಾನ ಹಂಚುತ್ತಾ ಇರಿ...

    ReplyDelete