
ಆರ್ಟಿಸ್ಟ್ ಚಿತ್ರ ಕಥಾವಸ್ತುವಿನಿ೦ದ ಅದ್ಭುತ ಚಿತ್ರವೇನಲ್ಲ.ನಮ್ಮದೇ ಡರ್ಟಿ ಪಿಕ್ಚರ್ ನ ಕಥೆ ಇರಬಹುದು..ಅಥವಾ ಯಾವುದೇ ಭಾಷೆಯಲ್ಲಿ ಬಂದ ಕಲಾವಿದ, ಸ್ಟಾರ್ ಒಬ್ಬನ ಏಳುಬೀಳಿನ ಕಥೆ ಇರಬಹುದು.ನೀವು ಮರಾಠಿಯ ಹರಿಶ್ಚ೦ದ್ರಾಚ್ಚಿ ಫ್ಯಾಕ್ಟರಿ ಸಿನೆಮಾ ನೋಡಿದ್ದರೆ ನಮ್ಮ ನೆಲದಲ್ಲೇ ನಡೆದ ಸಿನಿಮಾ ಪಿತಾಮಹಾನ ಜೀವನ ಚರಿತ್ರೆಯ ಅದ್ಭುತವಾದ ಕಥನ ನೆನಪಿಗೆ ಬರಬಹುದು. ಹಾಗೆ ಅವರ ಜೀವನ ಚರಿತ್ರೆ ಓದಿದವರಿಗೆ ಸಾಧಕನ ಅಂತಿಮ ದಿನಗಳ ಕಷ್ಟ, ಹತಾಶೆ ಸೋಲುಗಳು ಬದುಕಿನ ವೈಚಿತ್ರದ ಅರಿವು ಮಾಡಿಕೊಡುವುದಷ್ಟೇ ಅಲ್ಲ, ಸಾಧಕನನ್ನು ನಾವು ನಡೆಸಿಕೊಂಡ ರೀತಿಗೆ ನಮ್ಮ ಬಗ್ಗೆಯೇ ಬೇಸರವಾಗುತ್ತದೆ. ಭಾರತದ ಚಿತ್ರರಂಗದ ಉಗಮಕ್ಕೆ ಕಾರಣರಾದ ಫಾಲ್ಕೆಯವರ ಕೊನೆಯ ದಿನಗಳು ಭಾರಿ ಕೆಟ್ಟದಾಗಿದ್ದವು ಎಂದೆ ಹೇಳಬಹುದು..ಸಶಬ್ಧ ಚಿತ್ರಗಳು ಮೂಕಿ ಚಿತ್ರಗಳನ್ನು ಮೂಲೆಗೆ ತಳ್ಳಿದ್ದವು. ಫಾಲಕೆಯವರ ಸಿನಿಮಾಗಳು ಅವರಿಗೆ ಆರ್ಟಿಸ್ಟ್ ಟ್ರೈಲರ್ ಗಾಗಿ ಇಲ್ಲಿ ಕ್ಲಿಕ್ ಮಾಡಿ..ಬಹುನಷ್ಟ ತಂದಿದ್ದವು. ಆದರೆ ಅವರಿಗೆ ಬೇರೇನೂ
ಮಾಡುವುದಕ್ಕೂ ಇಷ್ಟವಿರಲಿಲ್ಲ. ಸಿನಿಮಾ ಅವರ ಉಸಿರಾಗಿತ್ತು..ಕೊನೆಯಲ್ಲಿ ಬೇರೆ ದಾರಿ ಕಾಣದೆ ಚಿತ್ರ ನಿರ್ಮಿಸಲು ಫಾಲ್ಕೆ ಯೋಚಿಸಿದಾಗ ಅವರು ಸಿನೆಮಾ ಮಾಡಲು ಸರ್ಕಾರ ಅನುಮತಿ ನೀಡಲಿಲ್ಲ. ನೋಡಿ ವಿಪರ್ಯಾಸ !

ಇರಲಿ ಆರ್ಟಿಸ್ಟ್ ಉತ್ತಮ ಮನರಂಜನಾ ಚಿತ್ರ. ಇಡೀ ಸಿನೆಮಾದಲ್ಲಿ ಎರಡೇ ಮಾತಿರುವುದು. ಅದು 'ಆಕ್ಷನ್ ' ಮತ್ತು ಕಟ್. ಇದರ ನಿರ್ದೇಶನ, ಅಭಿನಯ ಮುಂತಾದವುಗಳ ಬಗ್ಗೆ ಬರೆದಿದ್ದನ್ನು ಓದಿ ತಿಳಿದುಕೊಳ್ಳುವುದಕ್ಕಿ೦ತ ನೋಡಿ ತಿಳಿಯುವುದು, ಅನುಭವಿಸುವುದು ಉತ್ತಮ..ಏನಂತೀರಾ..?
ಆರ್ಟಿಸ್ಟ್ ಟ್ರೈಲರ್
ಹರಿಶ್ಚಂದ್ರಾಚ್ಚಿ ಫ್ಯಾಕ್ಟರಿ ಯ ಟ್ರೈಲರ್ ಗಾಗಿ ಇಲ್ಲಿ ಕ್ಲಿಕ್ಕಿಸಿ.
ಆರ್ಟಿಸ್ಟ್ ಟ್ರೈಲರ್
ಹರಿಶ್ಚಂದ್ರಾಚ್ಚಿ ಫ್ಯಾಕ್ಟರಿ ಯ ಟ್ರೈಲರ್ ಗಾಗಿ ಇಲ್ಲಿ ಕ್ಲಿಕ್ಕಿಸಿ.
No comments:
Post a Comment