
ಹಾಗೆ ಚಿತ್ರದ ನಾಯಕನಿಗೂ ಒಂದು ದಿವ್ಯ ಶಕ್ತಿಯಿದೆ. ಅದೆಂದರೆ ಆತ ಯಾರ ಸಮ್ಮೋಹನಕ್ಕೂ ಒಳಗಾಗದೆ ಇರುವುದು. ಅದೊಂದು ಸನ್ನಿವೇಶದಲ್ಲಿ ನಾಯಕ -ಖಳನಾಯಕ ಮುಖಾಮುಖಿಯಾಗುತ್ತಾರೆ. ಆಗ ಖಳನಿಗೆ ಗೊತ್ತಾಗುತ್ತದೆ, ತನ್ನಲ್ಲಿರುವ ಅದ್ಭುತ ಶಕ್ತಿಗೆ ನಾಯಕನ ಬಳಿ ಕವಡೆ ಕಾಸಿನ ಕಿಮ್ಮತ್ತಿಲ್ಲ ಎನ್ನುವುದು. ಆದವನ ಈಗೋವನ್ನು ಹರ್ಟ್ ಮಾಡುತ್ತದೆ. ಹೇಗಾದರೂ ಮಾಡಿ ತನ್ನ ಶಕ್ತಿಯನ್ನು ನಾಯಕನಿಗೆ ತೋರಿಸಬೇಕು, ಅವನನ್ನು ಮುಗಿಸಲೇ ಬೇಕು ಎಂಬ ನಿರ್ಧಾರಕ್ಕೆ ಬಂದ ಖಳನಾಯಕ ವಿನಾಕಾರಣ ನಾಯಕನನ್ನು ಎದುರುಹಾಕಿಕೊಳ್ಳುತ್ತಾನೆ. ಬಾಲ್ಯದಲ್ಲಿಯೇ ತನ್ನಪ್ಪನನ್ನು ಅವನೇ ಸಾಯುವಂತೆ ಮಾಡಿದ್ದ ಖಳನಿಗೆ ನಾಯಕ ಸವಾಲಾಗುತ್ತಾನೆ. ಮುಂದೆ..? ಹೌದು ಮಜಾ ಇರುವುದು ಇಲ್ಲೇ. ಕೊನೆಯಲ್ಲಿ ಏನೋ ಒಂದು ಆಗುತ್ತದೆ. ಆದರೆ ಅಲ್ಲಿಯವರೆಗೆ ನಡೆಯುವ ಘಟನೆಗಳು ನಮ್ಮನ್ನು ಕಣ್ಣು ರೆಪ್ಪೆ ಮುಚ್ಚದಂತೆ ಆವರಿಸಿಬಿಡುತ್ತದೆ. ಪ್ರತಿ ಸನ್ನಿವೇಶವೂ ಕುತೂಹಲ ಕೆರಳಿಸುತ್ತಾ ಸಾಗುತ್ತದೆ. ಇದರಿಂದಾಗುವ ಅನಾಹುತಗಳು, ಅದನ್ನೆಲ್ಲಾ ನಾಯಕ ಎದುರಿಸುವುದು...ಚಿತ್ರದ ಕಥೆಯನ್ನು ಮುಂದಿನ ದೃಶ್ಯಾವಳಿಗಳನ್ನು ನೋಡೇ ಅನುಭವಿಸಬೇಕು. 2010ರಲ್ಲಿ ಬಿಡುಗಡೆಯಾದ, ಒಂದು ಘಂಟೆ ಐವತ್ತೈದು ನಿಮಿಷಗಳ ಈ ಥ್ರಿಲ್ಲರ್ ಚಿತ್ರವನ್ನು ತಪ್ಪದೆ ನೋಡಿ...
ಇದೆ ಸಿನಿಮಾದ ಕಥೆಯ ಎಳೆಯನ್ನು ಆಧರಿಸಿ ತಮಿಳಿನಲ್ಲಿ ಖ್ಯಾತ ನಿರ್ದೇಶಕ ಮುರುಗದಾಸ್ , ಸೂರ್ಯ ಅಭಿನಯದಲ್ಲಿ 'ಏಳಾಯಂ ಅರಿವು' ಮಾಡಿದ್ದು ನಿಮಗೆ ಗೊತ್ತಿರಬಹುದು.
Hi Ravi,, hmm naanu aa movie nodidini, 7th Sense anta Telugu bhashenalli,, tumba chenagide aa cinema
ReplyDeleteha smitha..nanu nodiddeeni..neevimme haunters nodi...
ReplyDeleteamele neevyaava cinema nodidree recent aagi..
Hi paa,, naanu movies nododu tumbaane kadime,, but nimma blog nodoke shuru maadid mele nodo aase aagtide nange. tumba chennagi baritira neevu, :)
ReplyDeletehouda? thanks... cinema nododu, ododu, ondashtu harate...mamuli kelsa...chennaagirutte.illandre lifu interesting ansalla..enanteera..?
ReplyDeletehmmm,,, houdu Ravi,, nimma ella articles nodi/odi mugsidini, inmele time adjust madkondu movies ella nodbeku, I wud like to see all the movies in ur "nodale bekada chitragalu" list,
ReplyDelete