ಕನ್ನಡದ ಮಹಾತ್ಮ ಕಬೀರ್ ಚಿತ್ರವು ಬಿಡುಗಡೆಯಾದದ್ದು 1962ರಲ್ಲಿ .ಅನುಸೂಯ ದೇವಿ ಯವರು ಸಂಗೀತ ನೀಡಿದ್ದ ಈ ಚಿತ್ರದಲ್ಲಿ 22 ಹಾಡುಗಳಿವೆ...
ಖ್ಯಾತ ಕಾದಂಬರಿಕಾರ ಚದುರಂಗ ಚಲನಚಿತ್ರವನ್ನೂ ನಿರ್ದೇಶನ ಮಾಡಿದ್ದಾರೆ. ಅದರ ಹೆಸರು ಸರ್ವ ಮಂಗಳ ..ಬಿಡುಗಡೆಯಾದ ವರ್ಷ 1968.
ಡಾ.ರಾಜ್ ಅಭಿನಯದ ಚಿತ್ರ ಬಿಡುಗಡೆ.ನಾಯಕ ಗಲ್ಲು ಶಿಕ್ಷೆ ಯನ್ನು ಅಮಾನವೀಯ ಎಂದು ಪರಿಗಣಿಸಿ ಅದು ಬೇಡ ಎಂದು ಹೋರಾಡುವ ಕಥೆ ಇರುವ ಸಿನೆಮಾ.. ಸಿನೆಮಾ ಮೊದಲು ಬಿಡುಗಡೆಯಾದಾಗ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ರಾಜಕುಮಾರ್ ತನ್ನ ತಂದೆಯ ಗಲ್ಲು ಶಿಕ್ಷೆಯ ತಡೆಯಾಜ್ಞೆಯನ್ನು ಹಿಡಿದುಕೊಂದು ಓಡೋಡಿ ಬರುವ ಹೊತ್ತಿಗೆ ಶಿಕ್ಷೆ ಆಗಿಬಿಟ್ಟಿರುತ್ತದೆ. ಅಂದರೆ ಡಾ.ರಾಜರ ತಂದೆ ನಿಧನರಾಗಿರುತ್ತಾರೆ. ಆದರೆ ಚಿತ್ರ ಬಿಡುಗಡೆಯಾದ ಮೇಲೆ ಅಭಿಮಾನಿಗಳು, ಚಿತ್ರರಸಿಕರಿಗೆ ಸಿನೆಮಾದ ಕ್ಲೈಮ್ಯಾಕ್ಸ್ ಸರಿ ಅನಿಸಲಿಲ್ಲ , ಅಷ್ಟೆಲ್ಲಾ ಕಷ್ಟ ಪಟ್ಟು ಹೋರಾಡಿ ಗೆದ್ದು ಬರುವ ನಾಯಕ ತನ್ನ ತಂದೆಯನ್ನೇ ಉಳಿಸಿಕೊಳ್ಳದೇ ವಿಫಲನಾಗುವುದು ಉತ್ತಮ ಕ್ಲೈಮ್ಯಾಕ್ಸ್ ಅನಿಸಲಿಲ್ಲ. ಹಾಗಾಗಿ ಚಿತ್ರ ಪ್ರೇಮಿಗಳು, ಅಭಿಮಾನಿಗಳು ಕ್ಲೈಮ್ಯಾಕ್ಸ್ ಬದಲಿಸುವಂತೆ ಒತ್ತಾಯಿಸಿದಾಗ ಬೇರೆ ದಾರಿ ಕಾಣದೆ ಬದಲಾಯಿಸಿದರಂತೆ..

ಹಾಗಾಗಿ ಅವರೊಡನೆ ಮಾತಾಡುತ್ತ ಕುಳಿತರೆ ಆ ಕಾಲಘಟ್ಟವೆ ನನ್ನ ಮುಂದೆ ತೆರೆದುಕೊಳ್ಳುತ್ತದೆ.
ಪುಸ್ತಕದಲ್ಲಿ ನೂರೊಂದು ಸಿನೆಮಾಗಳ ಪಟ್ಟಿಮಾಡಿ ಅದನ್ನು ನೋಡಲು ಪ್ರೇಕ್ಷಕರಿಗೆ ಹೇಳಿಬಿಡೋಣ ಎಂದಷ್ಟೇ ಮೊದಲಿಗೆ ಅಂದುಕೊಂಡಿದ್ದು. ಆದರೆ ಈಗೀಗ ಆ ಸಿನೆಮಾದ ವಿಶೇಷಗಳು, ಕಿರುಪರಿಚಯ ಮುಂತಾದವುಗಳನ್ನು ಸೇರಿಸುತ್ತಿದ್ದೇನೆ. ಹಾಗಾಗಿ ಪುಸ್ತಕ ಇನ್ನೂ ಆಸಕ್ತಿದಾಯಕವಾಗಿ ಮೂಡಿಬರುತ್ತಿದೆ.
ಇಲ್ಲಿ ಇನ್ನೊಂದು ವಿಷಯ ಹೇಳಬೇಕಾದ್ದಿದೆ. ನಾನು ಪುಸ್ತಕ ಬರೆಯುತ್ತಿರುವ ವಿಷಯ ಕೇಳಿ ಹಲವಾರು ಗೆಳೆಯರು ಉತ್ತಮ ಸಲಹೆ ನೀಡಿದ್ದಾರೆ. ಪ್ರಮೋದ್, ಫಿಲಿಪ್, ಗಿರಿಬಾಲು ಮುಂತಾದವರು. ಖ್ಯಾತ ನಿರ್ದೇಶಕರಾದ ಬಿ.ಸುರೇಶ ಕೂಡ ಒಂದು ಅತ್ಯುತ್ತಮ ಸಲಹೆ ನೀಡಿದ್ದಾರೆ...ಒಟ್ಟಿನಲ್ಲಿ ಖುಷಿಯಾಗುತ್ತಿದೆ.
Looking forward to ur book. seems interesting!
ReplyDelete:-)
malathi S
gurugale pusthaka bega namma kaige kodi
ReplyDelete