Sunday, May 13, 2012

ಅಪರೂಪದ ನಿರ್ದೇಶಕರು-1


ಚಿತ್ರಗಳಲ್ಲಿ ನನಗಿಷ್ಟವಾದ genre ಎಂದರೆ ನಾನ್ ಲೀನಿಯರ್ ಅಥವಾ ಅಂಕುಡೊಂಕು ನಿರೂಪಣೆಯನ್ನು ಹೊಂದಿರುವ ಚಿತ್ರಗಳು.ಜಾಗತಿಕ ಸಿನಿಮಾಗಳಲ್ಲಿ ಮೊದಮೊದಲಿಗೆ ವಿಭಿನ್ನ ಎನಿಸಿದ್ದೇ ಈ ಚಿತ್ರಗಳು.ಯಾವುದೋ ಒ೦ದು ಕಥೆಯನ್ನು ನೇರವಾಗಿ ಹೇಳದೆ ಅದನ್ನ ತಿರುಚಿ-ಮುರುಚಿ ಹೇಳಿದಾಗ ಅದು ಹೆಚ್ಚು ಪರಿಣಾಮಕಾರಿ ಎನಿಸಿದ್ದು ನಿಜ..ಅಲೆನ್ ರೆಸ್ನಾಯಿಸ್ ಎಂಬ ರಷಿಯನ್ ಚಲನಚಿತ್ರ ನಿರ್ದೇಶಕನೊಬ್ಬ ಮೊದಮೊದಲಿಗೆ ದಿ ಲಾಸ್ಟ್ ಇಯರ್ ಅಟ್ ಮರೀನಾಬಾದ್[1961] ಎಂಬ ವಿಚಿತ್ರ ನಿರೂಪಣೆಯ ಚಿತ್ರವೊ೦ದನ್ನು ತೆರೆಗೆ ಕೊಟ್ಟಾಗ ವೀಕ್ಷಕರು ವಿಮರ್ಶಕರು ದಂಗುಬಡಿದೆದ್ದು ಹೋಗಿದ್ದರಂತೆ..ಹಾಗೆ ಕ್ರಿಸ್ಟೋಪರ್ ನೋಲನ್‌ಫಾಲೋಯಿಂಗ್, ಮೆಮೆಂಟೋ ಹಾಗೆ ಇತ್ತೀಚಿನ ಇನ್ಸೆಪ್ಷನ್ ಚಿತ್ರಗಳನ್ನು ನೋಡಿದಾಗ ಯಾರೇ ಆದರೂ  ನಿರ್ದೇಶಕನ ಕ್ರಿಯಾಶೀಲತೆಗೆ , ಚಿಂತನಾ ಶೈಲಿಗೆ ಮಾರು ಹೋಗದಿರಲು ಸಾಧ್ಯವಿಲ್ಲ..
ಒಬ್ಬೊಬ್ಬ ನಿರ್ದೇಶಕ ಅವನದೇ ಆದ ನಿರೂಪಣಾ ಶೈಲಿಯಿ೦ದ, ಕಥಾ ಆಯ್ಕೆಯಿ೦ದ ಗುರುತಿಸಿಕೊಳ್ಳುತ್ತಾನೆ. ಹಿಚ್ ಕಾಕ್  ತನ್ನ ಪತ್ತೆಧಾರಿ, ಸಸ್ಪೆನ್ಸ್ ಚಿತ್ರಗಳಿ೦ದ ಯಶಸ್ವಿಯಾಗಿ ಮನೆಮಾತಾದರೆ ಜಾನ್ ಕಾರ್ಪೆ೦ಟರ್ ತನ್ನ ಹಾರರ್, ಮಿಸ್ಟರಿ ಸಿನೆಮಾಗಳಿ೦ದ  ಗುರುತಿಸಿಕೊ೦ಡಿದ್ದಾನೆ.ನಿರ್ದೇಶಕರು, ಅವರ ಶೈಲಿ, ಅವರ ಮಾಸ್ಟರ್ ಪೀಸ್ ಗಳ ಬಗ್ಗೆ ಲೇಖನವನ್ನ ಕನ್ನಡದ ನಿರ್ದೇಶಕ ಉಪೆ೦ದ್ರರಿ೦ದಲೇ ಪ್ರಾರ೦ಭಿಸೋಣ . ಒಮ್ಮೆ ಉಪ್ಪಿ ಚಿತ್ರರಂಗದಲ್ಲಿ ಬೆಳೆದುಬಂದ ಹಾದಿ ಗಮನಿಸಿದರೇ ಅಚ್ಚರಿಯಾಗದೇ ಇರದು.ನನಗಂತೂ ಉಪ್ಪಿ ಒಬ್ಬ ನಿರ್ದೇಶಕನಾಗಿ ಅದ್ಭುತ.ಸುಮ್ಮನೆ ಗಮನಿಸಿ.ಅವರ ಮೊದಲ ಚಿತ್ರ ತರ್ಲೆ ನನ್ಮಗ.ಒ೦ದು ಕಡಿಮೆವೆಚ್ಚದ ಹಾಸ್ಯ ಚಿತ್ರ.ಅದರ ಹಿ೦ದೆಯೇ ಬಂದಂತಹ ಚಿತ್ರ ಶ್.ಕುತೂಹಲ ಕೆರಳಿಸುವ ಕಥಾವಸ್ತುವನ್ನೊಂದಿರುವ ಚಿತ್ರ.ಹೊಸನಾಯಕ, ಹೊಸನಾಯಕಿ, ಹೊಸ ಸಂಗೀತ ನಿರ್ದೇಶಕ ಹೀಗೆ ಎಲ್ಲಾ ಹೊಸಬರ  
ತಂಡವನ್ನು ಕಟ್ಟಿಕೊಂಡು ನಿದೇಶಿಸಿರುವ ಈ ಚಿತ್ರ ಕನ್ನಡಕ್ಕೆ ಒಂದು ವಿಭಿನ್ನ ಚಿತ್ರವಾಗಿ ಎಲ್ಲರ ಗಮನಸೆಳೆದಿತ್ತು.ಅಪರೇಷನ್ ಅ೦ತ. ಭ್ರಷ್ಟಾಚಾರ, ಅನಾಚಾರದ ವಿರುದ್ಧಾ ಹೋರಾಡುವ ನಾಯಕನ ಚಿತ್ರ.ಅದಾದ ನಂತರದ್ದು ಓಂ.ಬಹುಶ ಭಾರತೀಯ ಚಿತ್ರರಂಗದಲ್ಲಿ ಭೂಗತಲೋಕ ಕಥಾವಸ್ತು ಹೊ೦ದಿರುವ ಚಿತ್ರಗಳಿಗೆ ಹೊಸದಾದ, ವಾಸ್ತವಿಕ ಆಯಾಮ ಕೊಟ್ಟಂತಹ ಚಿತ್ರ. ಹಿಂದಿಯ ರಾಮ್ ಗೋಪಾಲ್ ವರ್ಮಾರ ಸತ್ಯಾ ಚಿತ್ರಕ್ಕೊ ಕನ್ನಡದ ಓಂ ಸ್ಪೂರ್ತಿ ಎಂದು ವರ್ಮಾರೆ ಹೇಳಿಕೊಂಡಿದ್ದಾರೆ.. ಅದಾದ ಮೇಲೆ ಬಂದದ್ದೆ ಉಪೇಂದ್ರ ಮಾಸ್ಟರ್‌ಪೀಸ್ ಎನ್ನಬಹುದಾದ  .ನಾನ್ ಲೀನಿಯರ್ ಚಿತ್ರಕಥೆಯನ್ನು ಹೊಂದಿರುವ ಈ ಚಿತ್ರವನ್ನು ಉಪ್ಪಿ ನಿರ್ದೇಶಿಸಿದ್ದಷ್ಟೇ ಅಲ್ಲ ನಟಿಸಿದ್ದರು ಕೂಡ..ಆನಂತರ ಬಂದ ಚಿತ್ರ ಉಪೇಂದ್ರ..
ನೋಡಿ ..ಒ೦ದು ಚಿತ್ರದಿ೦ದ ಇನ್ನೊ೦ದು ಚಿತ್ರಕ್ಕೆ genre ಯನ್ನು ಬದಲಿಸುತ್ತಲೇ ಹೋದರು ಉಪೇಂದ್ರ.ಇಪ್ಪತ್ತು ವರ್ಷಗಳ ಹಿಂದೆಯೇ ಇಷ್ಟೊ೦ದು innovative ಆಗಿ , ವಿಭಿನ್ನವಾಗಿ ಯೋಚಿಸಿದ ನಿರ್ದೇಶಕ ಉಪೇಂದ್ರ.
 ಈವತ್ತು ನಾವು ವಿಶಿಷ್ಟ ನಿರ್ದೇಶಕರು ಎಂದರೇ ಒ೦ದಷ್ಟು ಹಾಲಿವುಡ್, ಬಾಲಿವುಡ್ ನಿರ್ದೇಶಕರ ಪಟ್ಟಿಯನ್ನೆ ಕೊಡುತ್ತೇವೆ. ಅವರಿಗೆ ಸಿಕ್ಕಂತಹ ಮಾನ್ಯತೆ ಕನ್ನಡದ ನಿರ್ದೇಶಕರಿಗೆ ವಿಶೇಷವಾಗಿ ಉಪ್ಪಿಗೆ ಸಿಗದಿದ್ದದು ಬೇಸರದ ಸಂಗತಿಯೆನಿಸುತ್ತದೆ. ಕಾಮಿಡಿ, ಹಾರರ್, ಆಕ್ಷನ್, ಅಂಡರ್ ವರ್ಲ್ಡ್, ಹೀಗೆ ಉಪ್ಪಿಯ ಪಟ್ಟಿಯಲ್ಲಿರುವ ಮೊದಲ ಆರು ಚಿತ್ರಗಳು ಶೈಲಿಯಲ್ಲಾಗಲಿ, ಕಥಾವಸ್ತುವಿನಲ್ಲಾಗಲಿ ನಿರೂಪಣೆಯಲ್ಲಾಗಲಿ ಪ್ರತ್ಯೇಕವಾದಂತವು.ಬೇರಾವ ಭಾಷೆಯಲ್ಲೂ ಒಂದೊಂದು ಚಿತ್ರವನ್ನು ಒ೦ದೊಂದು ಶೈಲಿಯಲ್ಲಿ ನಿರ್ದೇಶಿಸಿದ ಇನ್ನೊಬ್ಬ ನಿರ್ದೇಶಕರನ್ನು ನಾವು ಕಾಣಲಾರೆವು.ಈವತ್ತೇನೋ ನಮಗೆ ಜಗತ್ತಿನ ಎಲ್ಲಾ ಸಿನೆಮಾಗಳು ಅ೦ತರ್ಜಾಲದಿ೦ದ ಸಿಕ್ಕಿಬಿಡುತ್ತವೆ. ಆದರೆ ಉಪೆ೦ದ್ರರ ಸಮಯದಲ್ಲಿ ಬರೀ ಫಿಲಂ ಸೊಸೈಟಿ, ಚಿತ್ರೋತ್ಸವಗಳಲ್ಲಷ್ಟೇ ಜಗತ್ತಿನ ಸಿನೆಮಾಗಳು ಸುಲಭಕ್ಕೆ ಸಿಗುತ್ತಿದ್ದದ್ದು. ಆ ಸಮಯದಲ್ಲೇ ಒ೦ದೊ೦ದು ಸಿನೆಮಾದ ನಿರೂಪನೆಯನ್ನು, ಕಥೆಯನ್ನೂ ವಿಭಿನ್ನವಾಗಿ ಯೋಚಿಸಿದ, ಚಿತ್ರರಸಿಕರ ಮು೦ದಿಟ್ಟ ಅಪರೂಪದ ನಿರ್ದೇಶಕ ಉಪ್ಪಿ.

4 comments:

  1. ಉಪೇ೦ದ್ರ ಕನ್ನಡ ಕ೦ಡ ಕೆಲವೇ ಕೆಲವು ಅದ್ಭುತ ನಿರ್ದೇಶಕರಲ್ಲೊಬ್ಬ. ವರ್ಸಟೈಲ್.
    ಆದ್ರೆ ಮೈನ್ ಸ್ಟ್ರೀಮ್ ಗೆ ಬ೦ದಾಗಿನಿ೦ದ ಜಾಸ್ತಿ ಎಕ್ಸ್ ಪೆರಿಮೆ೦ಟ್ ಅಥವಾ ರಿಸ್ಕ್, ಸ್ಟ್ರಾ೦ಗ್ ಕ೦ಟೆ೦ಟ್ ಏನೂ ಇಲ್ಲ ಉಪ್ಪಿ ಚಿತ್ರಗಳಲ್ಲಿ.

    ಉಪ್ಪಿ ಚಿತ್ರಗಳನ್ನು ಇ೦ಗ್ಲೀಷ್ ಸಬ್ ಟೈಟಲ್ ಹಾಕಿ ರಿಲೀಸ್ ಮಾಡಿದರೆ ಅ೦ತರಾಷ್ಟ್ರಿಯ ಮಟ್ಟದಲ್ಲಿ ಒಳ್ಳೆಯ ಮನ್ನಣೆ ಸಿಗಬಹುದು

    ReplyDelete
    Replies
    1. ನಮಗೂ ಹಾಗೆ ಅನ್ನಿಸುತ್ತೆ..ಈವತ್ತಿನ ಸೂಪರ್ ನೋಡಿದಾಗ ಉಪ್ಪಿ ಹತ್ತು ವರ್ಷ ಹಿ೦ದೆಯೇ ಇದ್ದಾರೇನು ಅನಿಸ್ತು. ಅದೇ ತಿರುವುಗಳು, ಹೆಣ್ಣನ್ನು ಮೊದಲಿಗೆ ಕೆಟ್ಟೆವಳೆ೦ದು ತೋರಿಸಿ, ಆನಂತರ ಅವಳ ಆ ವರ್ತನೆಗೊ೦ದು ಕಾರಣ ಕೊಟ್ಟು ಶುಭಂ ಹೇಳುವುದು ಇದೆಲ್ಲವೂ ಅವರದೇ ಹಳೆಯ ಸ್ಟೈಲ್ ಅಲ್ಲವೇ..

      Delete
  2. I think non-linear narration existed way back. Not sure when, but I had noticed it as earlier as in the 1956 movie - Kubrick's fantastic 'The Killing'. The way the movie unfolds and pieces fall into place was superb.

    ReplyDelete
  3. yes. ಹೌದು...ಆದ್ರೆ ನೀವೊಮ್ಮೆ ಲಾಸ್ಟ್ ಇಯರ್ ಅಟ್ ಮರೀನಾಬಾದ್ ನೋಡಿ.

    ReplyDelete