Tuesday, May 15, 2012

ನೋಡಲೇ ಬೇಕಾದ ಚಿತ್ರಗಳು-6ನಿಮಗೆ ನಿರ್ದೇಶಕ ಸ್ಟ್ಯಾನ್ಲಿಕ್ಯೂಬ್ರಿಕ್ ಗೊತ್ತಿರಬಹುದು.ಕ್ಲಾಕ್ವರ್ಕ್ ಆರೇಂಜ್,2001-ಸ್ಪೇಸ್ ಒಡಿಸ್ಸಿ,ದಿ ಶೈನಿಂಗ್ ಆತನ ಪ್ರಸಿದ್ಧ ಚಿತ್ರಗಳು. ಇದೇ ನಿರ್ದೇಶಕನ ಅತ್ಯುತ್ತಮ ಪ್ರೇಮಕಥೆಯನ್ನು ಹೊಂದಿರುವ ಚಿತ್ರವೇ ಲೋಲಿಟಾ. 1962ರಲ್ಲಿ ತೆರೆಗೆ ಬಂದ ಈ ಚಿತ್ರ ಕಾದಂಬರಿ ಅಧಾರಿತ. ಇದೇ ಕಾದಂಬರಿ ಆಧರಿಸಿ 1997ಲ್ಲೂ ಒ೦ದು ಲೋಲಿಟಾ ತೆರೆಗೆ ಬಂದಿದೆ. ಆದರೆ ಅದು ಯಾವ ದೃಷ್ಟಿಯಿಂದಲೂ ಸ್ಟ್ಯಾನ್ಲಿಕ್ಯೂಬಿಕ್ ನ ಲೋಲಿಟಾಗೆ ಸಮವಿಲ್ಲ.
ಪ್ರೀತಿ-ಪ್ರೇಮಕ್ಕೆ ಕಣ್ಣಿಲ್ಲ ಎನ್ನುವ ಮಾತಿನಂತೆಯೇ ಇಲ್ಲಿನ ಕಥೆ ನಡೆಯುತ್ತದೆ. ಚಿತ್ರದ ನಾಯಕ ಒಬ್ಬ ನಡುವಯಸ್ಕ ಪ್ರೊಫೆಸ್ಸರ್. ನಾಯಕಿಯನ್ನು ಮನಸಾರೆ ಪ್ರೀತಿಸುತ್ತಾನೆ.ಅವನ ಪ್ರೀತಿಯಲ್ಲಿ ಅದೆಷ್ಟು ಉತ್ಕಟತೆ ಇರುತ್ತದೆಯೆಂಬುದನ್ನು ನೋಡಿಯೇ ಅನುಭವಿಸಬೇಕು. ಅವಳ ಪ್ರೀತಿ ಪಡೆಯಲು ಏನನ್ನ ಬೇಕಾದರೂ ಕಳೆದುಕೊಳ್ಳಲು, ತ್ಯಾಗ ಮಾಡಲು, ಸಂಪಾದಿಸಲು ಪ್ರೊಫಸ್ಸರ್ ರೆಡಿ. ಅವನಿಗೆ ಅವಳ ಸಾಂಗತ್ಯ ಬೇಕು, ಪ್ರೀತಿ ಬೇಕು, ಯಾವಾಗಲೂ ಅವಳು ಆತನ ಜೊತೆಯೇ ಇರಬೇಕು...ಇದವನ ಪರಮ ಬಯಕೆ. ಆದರೆ ಲೋಲಿಟಾ ..!! ಆಕೆಗೆ ಪ್ರೊಫಸರ್ ನನ್ನು ಆ ದೃಷ್ಟಿಯಿಂದ ನೋಡಲು ಸಾಧ್ಯವೇ ಆಗುವುದಿಲ್ಲ. ವಯಸ್ಸಿನಲ್ಲಿ ತನಗಿಂತ ಎರಡು ಪಟ್ಟಿಗೂ ಹಿರಿಯನಾದವನ ಮೇಲೆ ಆ ಭಾವ ಹುಟ್ಟುವುದಾದರೂ ಹೇಗೆ..?  ಆದರೆ
ಸ್ಟ್ಯಾನ್ಲಿಕ್ಯೂಬ್ರಿಕ್
ನಾಯಕ ಬಿಡಬೇಕಲ್ಲ. ಆಕೆಯ ಹತ್ತಿರವಾಗುವುದಕ್ಕಾಗಿಯೇ ಆಕೆಯ ವಿಧವೆಯಾದ ತಾಯಿಯನ್ನು ಮದುವೆಯಾಗುತ್ತಾನೆ. ಆಮೇಲೆ ಆಕೆಯನ್ನೇ ಕೊಲ್ಲಲು ಯೋಚಿಸುತ್ತಾನೆ..ಈ ಎಲ್ಲಾ ಪ್ರಯತ್ನಗಳಿಂದ ಅವನು ಲೋಲಿಟಾಳ ಪ್ರೀತಿಯನ್ನು ಗೆಲ್ಲುತ್ತಾನಾ..?
1962ರ ಪೋಸ್ಟರ್
ಇಡೀ ಸಿನೆಮಾ ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುತ್ತಾ ಸಾಗುತ್ತದೆ. ಅದ್ಭುತವಾದ ಹಿನ್ನೆಲೆ ಸಂಗೀತ ಈ ಚಿತ್ರದ ಪ್ರಮುಖ ಆಸ್ತಿ. ಹಾಗೆ ಕಲಾವಿದರೆಲ್ಲರ ಮನೋಜ್ಞ ಅಭಿನಯ, ಕ್ಯೂಬ್ರಿಕ್‌ನ ಸಮರ್ಥ ನಿರ್ದೇಶನ ಒಂದು ಸಾಮಾನ್ಯ ಚಿತ್ರವನ್ನು ಮಹೋನ್ನತ ಚಿತ್ರವನ್ನಾಗಿ ಮಾಡಿದೆ ಎಂದರೆ ತಪ್ಪಾಗಲಾರದು. ಚಿತ್ರದ ಕೊನೆಯಲ್ಲಿ ನಾಯಕನ ಅಭಿನಯ ನಿಮ್ಮ ಕಣ್ಣಂಚಿನಲ್ಲಿ ಒಂದೆರೆಡು ಕಂಬನಿ ಮಿಡಿಸದಿದ್ದರೆ ಕೇಳಿ..ಎರಡೂವರೆ ಘಂಟೆಗಳ ಈ ಸಿನೆಮಾವನ್ನು ತಪ್ಪದೇ ನೋಡಿ. ಹಾಗೆಯೇ ಸಮಯವಿದ್ದರೆ, ಕುತೂಹಲವಿದ್ದರೆ 1997ರ ಲೋಲಿಟಾವನ್ನೂ ನೋಡಿ

.
 


6 comments:

 1. Compared to Kubrick's celebrated movies, I like his lesser talked about movies more - Paths of Glory, The Killing, Eyes Wide Shut, Full Metal Jacket (first half)...in that order. What are your personal favorites of Kubrick?

  ReplyDelete
 2. ಎರಡು ಮಾತಿಲ್ಲ...ಲೋಲಿಟಾ...
  paths of glory, killer's kiss

  ReplyDelete
 3. ಸ್ಪೇಸ್ ಒಡಿಸ್ಸಿ, ಸ್ಟ್ರೇ೦ಜ್ ಲವ್, ಕ್ಲಾಕ್ ವರ್ಕ್, ಫುಲ್ ಮೆಟಲ್ ಜಾಕೆಟ್, ಕಿಲ್ಲಿ೦ಗ್, ಶೈನಿ೦ಗ್, ಪಾಥ್ಸ್ ಆಫ್ ಗ್ಲೋರಿ, ಬೇರಿ ಲಿ೦ಡನ್ ಇವೆಲ್ಲಾ ನನ್ನ ಫೇವರಿಟ್ ಇದೇ ಆರ್ಡರ್ ನಲ್ಲಿ. ಲೋಲಿಟಾ, ಐಸ್ ವೈಡ್ ಶಟ್ ನೋಡಬೇಕಷ್ಟೇ.
  ಸ್ಪಾರ್ಟಕಸ್ ಫೇಮಸ್ ಚಿತ್ರ ಆದ್ರೆ ಸಾಧಾರಣ. ವರ್ಸಟೈಲ್ ಡೈರಕ್ಟರ್ ಲೀಸ್ಟ್ ನಲ್ಲಿ ನ೦ಬರ್ ಒನ್. ಪರ್ಫೆಕ್ಷನಿಸ್ಟ್. ಒಬ್ಶೆಷನ್ ವಿದ್ ಡಿಟೈಲ್. ಒ೦ದೊ೦ದು ಸೀನ್ ಗೆ ಹತ್ತತ್ತು ಟೇಕ್ ಗಳು. ಸಿನಿಮಾ ನಡುವೆ 3-4 ವರ್ಷಗಳ ಅ೦ತರ.

  ReplyDelete
 4. @pradmodc I felt '2001 space odessey' to be extremely slow paced...may be it was technically an achievement, but as a viewer, it did not hold my attention.

  ReplyDelete
  Replies
  1. Yes. It tests our patience. But Kubrick slowed it intentionally. Need to have mood for film :)
   BTW Your videos(Satya Narayana Pooje) are awesome funny and super.

   Delete
 5. u r right.ನಿಜ ಕೆಲೆವೊಮ್ಮೆ ಟೆನ್ಶನ್ ಕ್ರಿಯೇಟ್ ಮಾಡಾಕ್ಕೊಸ್ಕರ ಸನ್ನಿವೇಶವನ್ನೂ ಹಿಗ್ಗಿಸ್ತಾರೆ..ಆದರೆ ಈವತ್ತಿನ ನೋಡುಗನಿಗೆ ಅದು ತೀರ ಬೋರ್ ಅನ್ಸುತ್ತೆ..

  ReplyDelete