Monday, September 9, 2013

ಮೆಮೆಂಟೊ-ಒಂದು ವಿಶ್ಲೇಷಣೆ.


ಹುಶ: ನಾನು ನೋಡಿದ ಚಿತ್ರ್ರಗಳಲ್ಲೇ ಅದ್ಭುತವಾದ ಅನೇರ ಚಿತ್ರ್ರಕಥೆನ್ನು ಹೊ0ದಿರುವ ಚಿತ್ರ್ರವೆ0ದರೆ ಮಮೆ0ಟೋ. ವಿಭಿನ್ನ ವೈದ್ಯಕೀ ವಿಷಯಾಧಾರಿತ  ಕಥಾವಸ್ತು, ವಿಭಿನ್ನ ನಿರೂಪಣಾ ತಂತ್ರ ಮತ್ತು ನೋಡುಗನಿಗೇ ಹೀಗೆಯೇ ನೋಡಬೇಕೆ0ಬ ಸಿದ್ಧ ಸೂತ್ರವನ್ನು  ಹೊದಿರುವುದು ಈ ಚಿತ್ರದ ವಿಶೇಷ. ನೊಲನ್ ಮೊದಲ ಚಿತ್ರ 'ಫಾಲೋಯಿಂಗ್'    ಮುದುವರೆದ ಭಾಗದ೦ತೆ ಭಾಸವಾಗುವ ನಿರೂಪಣೆ  ಮತ್ತು ಕಥಾ ಹಂದರ ಅವನ ಚಿತ್ರ್ರಕಥೆಗಾರಿಕೆ ಕುಸುರಿನ್ನು ಇನ್ನಷ್ಟು ವಿಶದೀಕರಿಸುವಲ್ಲಿ ಯಶಸ್ವಿಯಾಗಿದೆ.
ಮೆಮೆಂಟೋ 2000 ದಲ್ಲಿ ತೆರೆಗೆ ಬಂದ ಮನೋವೈಜ್ಣಾನಿಕ ರೋಮಾಂಚಕ ಚಲನಚಿತ್ರ. ಕ್ರಿಸ್ಟೋಪರ್ ನೊಲನ್ ಇದರ ನಿರ್ದೇಶಕ.. ಮೊದಲಿಗೆ ಸಿನಿಮಾದ ಬಗ್ಗೆ, ಕಥೆಯ ಬಗ್ಗೆ ಮಾತಾಡೋಣ..
ನಾಯಕ  ಲಿಯೊನಾರ್ಡೋ ಶೆಲ್ಬಿ ಒಬ್ಬ ಇನ್ಷೂರೆನ್ಸ್ ಇನ್ವೆಸ್ಟಿಗೇಟರ್. ಇವನ ಸೇಡಿನ ಸುತ್ತ ಇಡೀ ಕಥೆ ಸುತ್ತುತ್ತದೆ. ಅವನ ಹೆಂಡತಿಯನ್ನು ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ, ಆ ಸಂದರ್ಭದಲ್ಲಿ ಕಾಪಾಡಲು ಹೋದ ಶೆಲ್ಬಿಯ ತಲೆಗೆ ಯಾವುದೋ ಹತ್ಯಾರದಿಂದ ಹೊಡೆದದ್ದರಿಂದ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಅವನಿಗೆ ಅಲ್ಪಕಾಲಿಕ ನೆನಪಿನ ಶಕ್ತಿಯ ರೋಗ ಅಡರಿಕೊಂಡಿದೆ. ಈಗವನ ನೆನಪಿನಕೋಶಕ್ಕೆ ಯಾವುದೇ ಹೊಸ ಘಟನಾವಳಿಗಳ ದಾಖಲೆಗಳನ್ನು ಹದಿನೈದು ನಿಮಿಷಕ್ಕೂ ಹೆಚ್ಚಿಗೆ ಹಿಡಿದಿಟ್ಟು ಕೊಳ್ಳಲಾಗುವುದಿಲ್ಲ. ಅವನ ತಲೆಗೆ ಪೆಟ್ಟು ಬಿದ್ದಾಗಿನಿಂದ ಹಿಂದಿನ ಘಟನೆಗಳು ಅಚ್ಚಳಿಯದೆ ಹಾಗೇ ಕುಳಿತುಬಿಟ್ಟವೇ.. ಅದರಿಂದಾಚೆಗಿನ ಹೊಸ ಹೊಸ ನೆನಪುಗಳು ಅವನಲ್ಲಿ ಉಳಿಯುವುದೇ ಇಲ್ಲ.  ಇಂಥ ಪರಿಸ್ಥಿತಿಯಲ್ಲಿರುವ ಶೆಲ್ಬಿಯು ಆ ಕೊಲೆಗಾರನನ್ನು ಹಿಡಿಯುವುದಾದರೂ ಹೇಗೆ ? ಆದರೆ ದ್ವೇಷಾಗ್ನಿ ದಿನದಿನಕ್ಕೆ , ಕ್ಷಣಕ್ಷಣಕ್ಕೆ ಅವನಲ್ಲಿ ದ್ವಿಗುಣಗೊಳ್ಳುತ್ತಲೇ ಇರುತ್ತದೆ.. ಆ ನೆನಪಿನ ತುಣುಕುಗಳು , ಆ ಆರ್ತನಾದ ಮರುಕಳಿಸಿದರೆ ಸಾಕು ಶೆಲ್ಬಿ ಹುಚ್ಚನಾಗಿ ಬಿಡುತ್ತಾನೆ.. ಅದಕ್ಕಾಗಿ ಶೆಲ್ಬಿ ಕೆಲವೊಂದು ವ್ಯವಸ್ಥೆ ಮಾಡಿಕೊಳ್ಳುತ್ತಾನೆ. ಹೆಗಲಿಗೆ ಒಂದು ಪೊಲಾರಾಯಿಡ್ ಕ್ಯಾಮೆರಾ ನೇತುಹಾಕಿ ಕೊಳ್ಳುತ್ತಾನೆ. ಜೇಬಿನಲ್ಲಿ  ಒಂದಷ್ಟು ಕಾಗದದ ತುಂಡುಗಳು ಮತ್ತು ಮೈಮೇಲೆಲ್ಲ ಹಚ್ಚೆಗಳನ್ನು ಹಾಕಿಸಿಕೊಂಡಿದ್ದಾನೆ. ಏನು ಮಾಡಬೇಕು, ಯಾವಾಗ ಮಾಡಬೇಕು ಎಂಬುದೆಲ್ಲಾ ಕನ್ನಡಿಯ ಮುಂದೆ ನಿಂತುಕೊಂಡುಬಿಟ್ಟರೆ ತಿಳಿದುಹೋಗಿಬಿಡುತ್ತದೆ. ಇಂಥ ಶೆಲ್ಬಿಯ ಹಂತಕನ ಬೇಟೆಯ ರೋಮಾಂಚಕ ಪಯಣದಲ್ಲಿ ಹಲವಾರು ಘಟನೆಗಳ ಜೊತೆಗೆ ಮುಖ್ಯವಾಗಿ ಸ್ಯಾಮ್ ಎನ್ನುವವನೊಬ್ಬನ ಉಪಕಥೆ ಬಂದುಹೋಗುತ್ತವೆ. ತನ್ನ ದೌರ್ಬಲ್ಯಗಳ ನಡುವೆಯೂ ಛಲ ಬಿಡದೆ ತ್ರಿವಿಕ್ರಮನಂತೆ ಕೊಲೆಗಾರನನ್ನು ಹುಡುಕಿ ಅವನ ತಲೆಗೆ ಶೂಟ್ ಮಾಡುವುದರೊಂದಿಗೆ ಚಿತ್ರ ಮುಗಿಯುತ್ತದೆ!!
ಹೌದು ! ಮೊದಲ ವೀಕ್ಷಣೆಗೆ ಪ್ರೇಕ್ಷಕನ ಗ್ರಹಿಕೆಗೆ ಬರುವ ಕಥಾಹಂದರ ಇದು. ಸುಮ್ಮನೆ ನೋಡುತ್ತಾ ಹೋದಂತೆ ಇದಿಷ್ಟೆ ಕಥೆ ಅವನ ತೆಕ್ಕೆಗೆ ಸಿಕ್ಕಿ ಒಂದು ಸಾಮಾನ್ಯ ಸೇಡಿನ ಕಥೆ. ಒಂದು ವಿಚಿತ್ರ-ಅಪರೂಪದ ಖಾಯಿಲೆಯ ಜೊತೆಗೆ ಮಿಳಿತವಾಗಿರುವುದು ಗೋಚರಿಸುತ್ತದೆ. ಆದರೆ ಕ್ರಿಸ್ಟೋಪರ್ ನೊಲನ್ ಎನ್ನುವ ಅಸಾಮಾನ್ಯ ಬುದ್ದಿವಂತ ನಿದರ್ೆಶಕ ಇಡೀ ಚಿತ್ರವನ್ನು 2 ಆಯಾಮಗಳಲ್ಲಿ ನಿರ್ದೆಶಿಸಿದ್ದಾನೆ.. ಚಿತ್ರಕಥೆಯೂ ಕೂಡ ಎರಡು ಆಯಾಮದಲ್ಲಿದೆ.
ಪ್ರತ್ಯಕ್ಷ ನೋಡಿದರೂ ಪ್ರಮಾಣಿಸಿ ನೋಡು ಎನ್ನುವ ಗಾದೆ ಈ ಚಿತ್ರಕ್ಕೆ ಕರಾರುವಕ್ಕಾಗಿ ಅನ್ವಯವಾಗುತ್ತದೆ. ಕಣ್ಣಮುಂದೆ ನಡೆಯುವ ದೃಶ್ಯದರ್ಥವೇ ಬೇರೆ, ಅದರ ಅಂತರಾರ್ಥವೇ ಬೇರೆ! ಮೇಲ್ನೋಟಕ್ಕೆ ಅರ್ಥವಾಗುವ ಚಿತ್ರದ

ಕಥೆಯ ತಿರುಳಾದ ಹೆಂಡತಿಯ ಕೊಲೆ, ಸೇಡು ಇದಾವುದು ನಿಜದಲ್ಲಿ ಇಲ್ಲವೇ ಇಲ್ಲ. ನಾಯಕ ಶೆಲ್ಬಿಯ ಹೆಂಡತಿಯನ್ನು ಯಾರೂ ಕೊಂದೇ ಇರುವುದಿಲ್ಲ ಎನ್ನುವುದು ಪ್ರೇಕ್ಷಕನಿಗೆ ಮೊದಲ ಶಾಕ್ ! ಹಾಗೆ ಅವಳ ಸಾವಿಗೆ ಕಾರಣವಾದವನು  ಅಥವ ಕೈಯಾರೆ ಕೊಂದವನು ಬೇರೆ ಯಾರೂ  ಅಲ್ಲ ಶೆಲ್ಬಿಯೇ.. ಎನ್ನುವುದು ಎರಡನೇ ಶಾಕ್ ! ಮೊದಲು ಹೇಳಿದ ಕಥೆಗೂ, ಈಗ ಹೇಳುತ್ತಿರುವ ಕಥಾಹಂದರಕ್ಕೂ ಸಾಮ್ಯತೆಯೇ ಬರುತ್ತಿಲ್ಲವಲ್ಲ ಎನಿಸಬಹುದು ಅಥವಾ ಒಂದೇ ಸಿನಿಮಾದಲ್ಲಿ ಎರೆಡೆರೆಡು ಕಥಾಹಂದರ ಕಾಣಿಸುವಂತಹ ಚಿತ್ರಕಥೆ ರಚಿಸಿ ನಿರೂಪಿಸುವುದು  ಸುಲಭದ ಮಾತಲ್ಲ. ನೊಲನ್ ಅದನ್ನಿಲ್ಲಿ ಸಾಧಿಸಿ ಭೇಷ್ ಎನಿಸಿಕೊಂಡಿದ್ದಾನೆ. ಈ ಎರಡನೇ ಕಥೆಯು ನಿಮಗೆ ಅರ್ಥವಾಗಬೇಕಾದರೆ ಸಿನಿಮಾವನ್ನು ಬೇರೆ ರೀತಿಯಲ್ಲಿ ನೋಡಬೇಕಾಗುತ್ತದೆ. ಸುಮ್ಮನೆ ಸಿನಿಮಾ ಕಣ್ಣ ಮುಂದಿದೆ ನೋಡಬೇಕಷ್ಟೆ.. ಎಂದು ನೋಡಿದರೆ ನಿಮಗೆ ಲವಲೇಶವೂ ಅರ್ಥವಾಗದು. ಸಿನಿಮಾದ ದೃಶ್ಯಗಳು ಮನಸ್ಸಿನಲ್ಲೇ ಹಿಂದೆ-ಮುಂದೆ ಮಾಡಿಕೊಳ್ಳಬೇಕಾಗುತ್ತದೆ. ಹಿಂದಿನ ಯಾವುದೋ ದೃಶ್ಯಕ್ಕೆ ಮುಂದಿನ ಯಾವುದೋ ದೃಶ್ಯವನ್ನು ಮನದಲ್ಲಿಯೇ ಜಂಟಿಮಾಡಿ , ಅರ್ಥೈಸಿಕೊಳ್ಳಬೇಕಾಗುತ್ತದೆ.
ಅಂದರೆ ಸಿನಿಮಾವನ್ನು ಅದರದೇ ಆದ ವಿಶೇಷವಾದ ಕ್ರಮದಲ್ಲಿ ನೋಡಬೇಕು. ಅಂದರೆ ಚಿತ್ರದಲ್ಲಿ ಕಪ್ಪು-ಬಿಳುಪು ಮತ್ತು ಬಣ್ಣದ ದೃಶ್ಯಗಳ ಮಿಳಿತವಿದೆ. ಮೊದಲಿಗೆ ಚಿತ್ರದಲ್ಲಿ ಬರುವ ಕಪ್ಪು-ಬಿಳುಪು ದೃಶ್ಯಗಳನ್ನಷ್ಟೆ ನೋಡುತ್ತಾ ಅಥರ್ೆಸಿಕೊಳ್ಳುತ್ತಾ ಸಾಗಬೇಕು. ಚಿತ್ರದ ಕೊನೆಯ ದೃಶ್ಯದಲ್ಲಿ ಕಪ್ಪು-ಬಿಳುಪಿನ ದೃಶ್ಯವು ಬಣ್ಣದ ದೃಶ್ಯವಾಗಿ ಬದಲಾಗುತ್ತದೆ. ಆಗ ಬಣ್ಣದ ದೃಶ್ಯಗಳನ್ನು ಹಿಂದಿನಿಂದ ಮೊದಲನೇ ದೃಶ್ಯದವರೆಗೆ ನೋಡುತ್ತಾ ವಾಪಸ್ ಬರಬೇಕು ಅಂದರೆ ಇಡೀ ಚಿತ್ರದ ದೃಶ್ಯಗಳ ಜೋಡಣೆ ಒಂದು ವೃತ್ತದಂತಿದೆ ಎಲ್ಲಿ ಪ್ರಾರಂಭವಾಗುತ್ತದೋ ಅಲ್ಲೆ ಚಿತ್ರ ಮುಗಿಯುತ್ತದೆ ಅಥವ ಎಲ್ಲಿ ಮುಗಿಯುತ್ತದೋ ಅಲ್ಲೇ ಪ್ರಾರಂಭವಾಗುತ್ತದೆ. ಒ0ದರ್ಥದಲ್ಲಿ ಸಿನಿಮಾ ನೋಡಲು ಕೂಡ ಅದರದೇ ಆದ ಸಿದ್ಧಸೂತ್ರ ಹೊಂದಿರುವ ಅಪರೂಪದ ಚಿತ್ರ ಈ ಮೆಮೆಂಟೋ.
ಚಿತ್ರದ ಒಳಹೂರಣ ಇಂತಿದೆ.
ನತಾಲಿ ಕೈ ಬರಹ.
 ಶೆಲ್ಬಿ ಒಬ್ಬ ಇನ್ಷೂರೆನ್ಸ್ ಇನ್ವೆಸ್ಟಿಗೇಟರ್. ಅವನ ಹೆಂಡತಿಗೆ ಮದುಮೇಹದ ತೊಂದರೆ ಇರುವುದರಿಂದ  ಇನ್ಸುಲಿನ್ ಕೊಡಬೇಕಾಗಿರುತ್ತದೆ.ಆದರೆ ಈ ಖಾಯಿಲೆ ಶೆಲ್ಬಿಯನ್ನು ಆವರಿಸಿದಾಗ ಅವನ ನೆನಪಿನ ಶಕ್ತಿ ಹದಿನೈದು ನಿಮಿಷಕ್ಕಿಳಿಯುತ್ತದೆ. ಆತನ ಹೆಂಡತಿಗೆ ಇದರ ಅರಿವಾದರೂ ಹೊರಗಿನ ಸಮಾಜ, ಮುಖ್ಯವಾಗಿ ಇನ್ಷೂರೆನ್ಸ್ ಕಂಪನಿಯವರು ನಂಬುವುದಿಲ್ಲ. ಹಣ ಹೊಡೆಯುವುದಕ್ಕಾಗಿ ನಾಟಕ ಮಾಡುತ್ತಿದ್ದಾನೆ ಎಂದು ತಿಳಿದುಕೊಳ್ಳುತ್ತಾರೆ. ಆದರೆ ಅತೀವವಾಗಿ ಪ್ರೀತಿಸುವ ಹೆಂಡತಿಗೆ ಗಂಡನ ಪರಿಸ್ಥಿಯ ಬಗ್ಗೆ ಯಾವುದೂ ಸ್ಪಷ್ಟವಾಗುವುದಿಲ್ಲ. ನಿಜಕ್ಕೂ ಆ ತರಹದ್ದೊಂದು ಖಾಯಿಲೆ ಇದೆಯಾ ? ಅಥವ ಗಂಡನೇ ನಾಟಕವಾಡುತ್ತಿದಾನಾ..? ಎಂಬ ಗೊಂದಲಕ್ಕೆ ಬೀಳುತ್ತಾಳೆ. ಆದರೆ ಇದು ಉಲ್ಬಣವಾದಾಗ ತಾನೇ  ತನ್ನ ಗಂಡನನ್ನು  ಪರೀಕ್ಷೆ ಮಾಡುವ ನಿಧರ್ಾರಕ್ಕೆ ಬರುತ್ತಾಳೆ. ಹದಿನೈದು ನಿಮಿಷಕ್ಕೊಮ್ಮೆ ಗಂಡನಿಗೆ ಮರೆತು ಹೋಗುವುದಾದರೆ ತನ್ನ ಇನ್ಸುಲಿನ್ ಇಂಜೆಕ್ಷನ್ ಅನ್ನು ಪ್ರತಿ ಹದಿನೈದು ನಿಮಿಷಕ್ಕೊಮ್ಮೆ ಪದೆ ಪದೇ ಕೊಡುವಂತೆ ಕೇಳುವುದು..ನಿಜವಾಗಲೂ ಮರೆವಿನ ಖಾಯಿಲೆ ಇದ್ದರೆ ಇ0ಜೆಕ್ಷನ್ ಕೊಡುತ್ತಾನೆ.. ತನ್ನನ್ನು ತುಂಬಾ ಪ್ರೀತಿಸುವ ತನ್ನ ಗಂಡ ನಾಟಕವಾಡುತ್ತಿದ್ದರೆ ಹಾಗೆ ಮಾಡುವುದಿಲ್ಲವೆಂಬ ನಂಬಿಕೆ ಆಕೆಯದು. ಆದರೆ ಆ ಪ್ರಯೋಗದಲ್ಲಿ ಆಕೆ ಇನ್ಸುಲಿನ್ ಓವರ್ ಡೋಸ್ ಆಗಿ  ಸಾಯುತ್ತಾಳೆ. ಆಕೆ ಸತ್ತ ಮೇಲೆ ಶೆಲ್ಬಿ ಆಸ್ಪತ್ರೆ ಸೇರುತ್ತಾನೆ. ದಿನಕಳೆದಂತೆ ಅವನಿಗೆ ತನ್ನ ಪರಿಸ್ಥಿತಿಯ ಸಂಪೂರ್ಣ ಅರಿವು ಮೂಡುತ್ತದೆ. ಹದಿನೈದು ನಿಮಿಷದ ಮೇಲೆ ತನ್ನ ನೆನಪಿನ ಕೋಶದಲ್ಲಿ ಯಾವೊಂದು ಘಟನೆಯೂ ದಾಖಲಾಗುವುದಿಲ್ಲವೆಂಬ ಕಟುಸತ್ಯ ಅರಿವಿಗೆ ಬರುತ್ತದೆ. ಮೊದಮೊದಲಿಗೆ ತಾನಿನ್ನು ಯಾವ ಪುರುಷಾರ್ಥಕ್ಕೆ ಬದುಕಬೇಕು ಅನಿಸುತ್ತದೆ. ತಾನು ಬದುಕಲಿಕ್ಕೆ ಏನಾದರೂ ಕಾರಣ ಅತ್ಯವಶ್ಯ ಎಂದು ಕೊಳ್ಳುವ ಶೆಲ್ಬಿ ಅದಕ್ಕಾಗಿ ತನ್ನ ಹೆಂಡತಿಯನ್ನು ಯಾರೋ ಅತ್ಯಾಚಾರವೆಸಗಿ, ಕೊಲೆ ಮಾಡಿದ್ದಾರೆ ಎಂದು ಸುಳ್ಳು ಕಥೆ ಸೃಷ್ಟಿಸುತ್ತಾನೆ. ನಂತರ ತನ್ನ ಎದೆಯ ಮೇಲೆ ಅದನ್ನೇ ಹಚ್ಚೆಯನ್ನಾಗಿ ಹಾಕಿಸಿಕೊಳ್ಳುತ್ತಾನೆ. ಅವನಿಗೆ ತನ್ನ ದುಸ್ಥಿತಿಯ ಅರಿವು ಚೆನ್ನಾಗಿ
ಮೀಸೆ ಇಲ್ಲದಿರುವುದು ಇರುವುದು.
ಗೊತ್ತಿರುವುದರಿಂದ ಏನೇ ಮಾಡಿಕೊಂಡರೂ ಹದಿನೈದು ನಿಮಿಷದ ನಂತರ ಅದು ಮರೆತು ಹೋಗುವ
, ಮತ್ತದು ಸತ್ಯವೇ ಆಗಿಬಿಡುತ್ತದೆಂಬುದು ನಿಚ್ಚಳ ಸತ್ಯ..ಹಾಗೆ ತನ್ನನ್ನು ತಾನೇ ನಿಯಂತ್ರಿಸಿಕೊಳ್ಳುವ ಶೆಲ್ಬಿಯ ಎದೆಯ ಮೇಲಿನ ಹಚ್ಚೆ 'ನಿನ್ನ ಹೆಂಡತಿಯ ಕೊಲೆಗಾರನನ್ನು ಹುಡುಕು'ದ ಪ್ರಕಾರ ತನ್ನ ಹೆಂಡತಿ ನಿಜವಾಗಲೂ ಕೊಲೆಯಾಗಿದ್ದಾಳೆ ಎ0ದು ಭ್ರಮಿಸಿ, ಆ ಸ0ಗತಿಯನ್ನು  ನಿಜವೆಂದೇ ನಂಬಿ ಅದರಂತೆ ಹುಡುಕಲು ಪ್ರಾರಂಭಿಸುತ್ತಾನೆ. ಒಂದು ಸುಳ್ಳು ತುಂಬಾ ದಿನದವರೆಗೆ ಜೀವಂತವಾಗಿದ್ದರೆ ಸತ್ಯವಾಗಿಬಿಡುತ್ತದೆನ್ನುವ ಮಾತು ಇಲ್ಲಿ ನಿಜವಾಗುತ್ತದೆ. ಹಾಗೆ ಹುಡುಕುತ್ತಾ ಸಾಗುವ ಶೆಲ್ಬಿಗೆ ಪರಿಚಯವಾಗುವವನು ಟೆಡ್ಡಿ, ಪೋಲೀಸ್ ಅಧಿಕಾರಿ. ಇವನ ದೌರ್ಬಲ್ಯವನ್ನು ಅರಿತು ಶೆಲ್ಬಿಯನ್ನು ದುರುಪಯೋಗ ಮಾಡಿಕೊಳ್ಳುತ್ತಾನೆ. ಸ್ಥಳೀಯ ಡಾನ್ನನ್ನು 'ಇವನೇ ನಿನ್ನ ಹೆಂಡತಿಯ ಕೊಲೆಗಾರ' ಎಂದು ತೋರಿಸಿ ಅವನನ್ನು ವಿನಾಕಾರಣ ಕೊಲ್ಲಿಸುವ ಮೂಲಕ ತನ್ನ ಬೇಳೆ ಬೇಯಿಸಿಕೊಳ್ಳುತ್ತಾನೆ.. ಅವನನ್ನು ಕೊಲೆಗೈದ ನಂತರ ಅವನ ಅಂದರೆ ಸತ್ತ ಡಾನ್ ನ ಜಾಕೆಟ್ ಧರಿಸಿಕೊಳ್ಳುವ ನಾಯಕ ಅವರ ಜೇಬಲ್ಲಿದ್ದ ಪೇಪರ್ ತುಣುಕೊಂದರಿಂದ DON ಪ್ರೇಯಸಿ ನತಾಲಿಯನ್ನ ಸಂಧಿಸುತ್ತಾನೆ. ನಡೆದ ಎಲ್ಲಾ ವಿಷಯಗಳನ್ನು ತಿಳಿದುಕೊಂಡು ಹಾಗೆ ನಾಯಕನ ದೌರ್ಬಲ್ಯವನ್ನು ತಿಳಿದುಕೊಳ್ಳುವ ನತಾಲಿ ತನ್ನ ಪ್ರಿಯಕರನನ್ನು ಕೊಲ್ಲಿಸಿದ ಟೆಡ್ಡಿಯ ಕೊಲೆಗೆ ಸಂಚುರೂಪಿಸಿ, ಟೆಡ್ಡಿಯೇ ಶೆಲ್ಬಿಯ ಹೆಂಡತಿಯನ್ನು  ಕೊಂದದ್ದೆಂದು ಹೇಳಿ , ಅವಳನ್ನು ನಂಬಬೇಡ , ಸುಳ್ಳುಗಾರ ಎಂದು ಟೆಡ್ಡಿ ಮೇಲೆ ಎತ್ತಿಕಟ್ಟುತ್ತಾಳೆ.
ತಪ್ಪು ವಿಳಾಸ ಬರೆದುಕೊಳ್ಳುವುದು.
ಇದನ್ನೆಲ್ಲಾ ಕೇಳಿದ ನಾಯಕ ಶೆಲ್ಬಿ ಟೆಡ್ದಿಯ ಫೋಟೋದ ಮೇಲೆ ಕೊಲೆಗಾರನೆಂದು ಬರೆದುಕೊಂಡು ಟೆಡ್ದಿಯನ್ನು ಕೊಲ್ಲಲು ನಿರ್ಧರಿಸುತ್ತಾನೆ. ಟೆಡ್ದಿ ಅದೆಷ್ಟೆ ಬಡಿದುಕೊಂಡರೂ ಕೇಳದೆ ಅವನ ತಲೆಗೆ ಶೂಟ್ ಮಾಡಿ ಅವನನ್ನು ಕೊಲೆಗೈದು ತನ್ನ ಪೊಲಾರಾಯಿಡ್ ಕ್ಯಾಮೆರದಿಂದ ಸತ್ತವನ ಫೋಟೋ ತೆಗೆದು ಅದರ ಮೇಲೆ ಕೊಂದದ್ದಾಯಿತೆಂದು ದಾಖಲಿಸಿದರೂ ಆ ಕ್ಷಣದಲ್ಲಿ ಶೆಲ್ಬಿ ಕುಳಿತು ಯೋಚಿಸುತ್ತಾನೆ. ಇನ್ನು ಮೇಲೆ ಆ ಫೋಟೋ ತನ್ನ ಬಳಿಯಿದ್ದರೆ, ತನ್ನ ಸೇಡು ಮುಗಿದು ಹೋದರೆ  ನಾಳೆಯಿಂದ ತಾನು ಬದುಕುವುದಾದರೂ ಏತಕ್ಕೆ ! ಮುಂದಿನ ಹದಿನೈದು ನಿಮಿಷದ ನಂತರ ತಾನು ಯೋಚಿಸಿದ್ದು, ಯೋಜಿಸಿದ್ದು, ಕಾರ್ಯರೂಪಕ್ಕೆ ತಂದಿದ್ದು ಎಲ್ಲವೂ ತನಗೆ ನೆನಪೇ ಇರುವುದಿಲ್ಲವೆನ್ನುವ ಕಹಿಸತ್ಯದ ಅರಿವು ಅವನಿಗಿದೆಯಾದ್ದರಿಂದ ತನ್ನ ಜೀವನದ ಧ್ಯೇಯೋದ್ದೇಶವನ್ನು ಜೀವಂತವಾಗಿಡಲು, ತನ್ನ ಗುರಿಯನ್ನು ಎಂದೂ ಸಾಯಗೊಡದಿರಲು ಯೋಚಿಸಿ 'ಕೊಂದದ್ದಾಯಿತು' ಎಂದು ಬರೆದಿದ್ದ ಫೋಟೋವನ್ನು ಸುಟ್ಟು ಹಾಕಿಬಿಡುತ್ತಾನೆ. ಆ ಮೂಲಕ ತನ್ನ ಗುರಿಯನ್ನು ತನ್ನ ಸೇಡನ್ನು ಜೀವಂತಗೊಳಿಸುತ್ತಾನೆ.
ಮುದ್ರಿತ ಬರಹದ ಶೈಲಿ.

ಇಂಥ ಸಂಕೀರ್ಣವಾದ ಕಥೆಯನ್ನು ನೊಲನ್ ಅಷ್ಟೆ ಸಂಕೀರ್ಣವಾಗಿ, ಸೂಕ್ಷ್ಮವಾಗಿ ನಿರೂಪಿಸುತ್ತಾನೆ. ಮೊದಲನೆಯದಾಗಿ ತಿರುಗು ಮುರುಗಾದ ಚಿತ್ರಕಥೆಯನ್ನು ಜೋಡಿಸಿಕೊಂಡು ದೃಶ್ಯದ ಬಾಲವನ್ನು  ಮಧ್ಯದಲ್ಲಿ ಬರುವ ಇನ್ನೊಂದು ದೃಶ್ಯದ ತಲೆಗೆ ಅಂಟಿಸಿ, ತಾಳೆ ನೋಡಿ ಅಥರ್ೆಸಿಕೊಳ್ಳಬೇಕಾದ ಶ್ರಮ ಪ್ರೇಕ್ಷಕನದು. ಎರಡನೆಯದಾಗಿ ಪ್ರತಿಯೊಂದು ದೃಶಿಕೆಯನ್ನು ಎವೆಯಿಕ್ಕದೆ ನೋಡಲೇಬೇಕಾದ ಅನಿವಾರ್ಯತೆ ಇದೆ ಯಾಕೆಂದರೆ ಕ್ಷಣಾರ್ಧದಲ್ಲಿ ಮಾಯವಾಗುವ ಒಂದು ದೃಶಿಕೆಯಲ್ಲಿ ಇಡೀ ಚಿತ್ರದ ಗಂಟೊಂದನ್ನು ಬಿಡಿಸುವ ಸೂತ್ರದಾರವಿರುತ್ತದೆ  ಅದಕ್ಕೆ ಎಲ್ಲೂ, ಯಾವುದನ್ನೂ ಮಿಸ್ ಮಾಡಿಕೊಳ್ಳದೆ ಚಿತ್ರಪರದೆಗೆ ಕಣ್ಣಂಟಿಸಿಕೊಂಡು ಕುಳಿತುಬಿಡಬೇಕಾಗುತ್ತದೆ..ಯಾಕೆಂದರೆ ಚಿತ್ರದ ನಾಯಕ ತನ್ನದೇ ಜೀವನದ ಕಥೆಯನ್ನು ಬೇರೊಬ್ಬ ವ್ಯಕ್ತಿಯ ಕಥೆಯೊಂದಿಗೆ ಸಮೀಕರಿಸಿಕೊಳ್ಳುತ್ತಾನೆ. ಚಿತ್ರ ನೋಡುತ್ತಾ ಹೋದಂತೆ ಅದು ಬೇರೊಂದು ಕಥೆಯಾಗಿಯೇ ಸಾಗುತ್ತದೆ. ಚಿತ್ರದಲ್ಲಿ ಆ ಕಥೆಯು ಅಂತ್ಯವಾಗುವಲ್ಲಿ ಒಂದೇ ಒಂದು ಫ್ರೇಮ್ನಲ್ಲಿ ಆಸ್ಪತ್ರೆಯಲ್ಲಿ ಕುಳಿತ ಆ ವ್ಯಕ್ತಿಯ ಬದಲಿಗೆ, ನಾಯಕ ಕುಳಿತಿರುವುದನ್ನು ತೋರಿಸಿ, ನಿದರ್ೆಶಕ ಇದು ನಾಯಕನ ಕಥೆಯೇ ಎಂಬುದನ್ನು ಬಿಚ್ಚಿಡುತ್ತಾನೆ. ಕ್ಷಣಮಾತ್ರದಲ್ಲಿ ಬಂದು ಹೋಗುವ ಆ ಒಂದು ಚಿತ್ರಿಕೆ, ಚಿತ್ರದ ಇಡೀ ತಿರುಳನ್ನು ವಿವರಿಸುವಲ್ಲಿ ಯಶಸ್ವಿಯಾಗುತ್ತದೆ, ಹಾಗೆ ತನ್ನ ಹೆಂಡತಿಗೆ ಇನ್ಸುಲಿನ್ ಇಂಜೆಕ್ಟ್ ಮಾಡುವುದೂ ಕೂಡ ಕ್ಷಣಾರ್ಧದಲ್ಲಿ ತೋರಿಸಿ, ನಂತರ ಬೇರೆ ದೃಶಿಕೆಯನ್ನು ಅಂಟಿಸಿ, ಪ್ರೇಕ್ಷಕರ ಗಮನವನ್ನು ಬೇರೆಡೆಗೆ ತಿರುಗಿಸಿಬಿಡುತ್ತಾನೆ ನಿದರ್ೆಶಕ. ಇಷ್ಟೆಲ್ಲವನ್ನೂ ಅಥರ್ೆಸಿಕೊಂಡು, ಸರ್ಕಸ್ಸು ಮಾಡಿಕೊಂಡು ಸಿನಿಮಾ ನೋಡತೊಡಗಿದರೆ ಸಿನಿಮಾ ಕೊಡುವ ಮಜವೇ ಬೇರೆ ! ನಾಯಕ ತನ್ನನ್ನೇ ತಾನೇ ನಿಯಂತ್ರಿಸಿಕೊಳ್ಳುವುದು, ತನ್ನ ದೌರ್ಬಲ್ಯವನ್ನು ಸಾಮಾನ್ಯ ಎನ್ನುವಂತೆ ಹೇಳುವುದು, ಓಡುತ್ತಾ ಓಡುತ್ತಾ ಯಾಕೆ ಓಡುತ್ತಿದ್ದೇನೆಂಬುದನ್ನ ಮರೆತುಬಿಡುವುದು, ನತಾಲಿ ನಾ ನಿನಗೆ ಹದಿನೈದು ನಿಮಿಷದ ನಂತರ ಬಂದು, ಸುಳ್ಳು ಹೇಳಿ ಮೋಸಮಾಡುತ್ತೇನೆಂದು ಹೇಳಿ, ಪೇಪರು-ಪೆನ್ನುಗಳು ಕೈಗೆ ಸಿಗದಂತೆ ಮಾಡಿದಾಗ, ತನಗೆ ನತಾಲಿ ಮೋಸ ಮಾಡುತ್ತಾಳೆ ಎಂಬುದು ಗೊತ್ತಾಗಿ, ಅದನ್ನ ಬರೆದಿಡಲು ಕಾಗದ-ಪೆನ್ನಿಗಾಗಿ ಹುಡುಕಾಡುವುದು.. ಮುಂತಾದ ದೃಶ್ಯಗಳು ನಾಯಕನ ಮೇಲೆ ಕರುಣೆ, ಪ್ರೀತಿಯ ಮಿಶ್ರಭಾವ ಮೂಡಿಸುತ್ತವೆ.
ಬಾಗಿಲು ಒಮ್ಮೆ ಎಡಕ್ಕೆ ಒಮ್ಮೆ ಬಲಕ್ಕೆ
ಹಾಗೆ ಆ ದೃಶ್ಯಗಳನ್ನ ಹೆಣೆದಿರುವುದು, ಚಿತ್ರೀಕರಿಸಿರುವ ರೀತಿ ನೊಲನ್ ನಿರ್ದೇಶನದ ದಕ್ಷತೆಯ ಬಗ್ಗೆ ಹೆಮ್ಮೆ ಮೂಡಿಸುತ್ತದೆ.
ಯಾಕಿಂಥ ಸರ್ಕಸ್ಸು ಸಿನಿಮಾ ನೋಡಲು.. ಸರಳವಾಗಿ ನಿರೂಪಿಸಬಹುದಿತ್ತಲ್ಲ..? ಎಂಬ ಪ್ರಶ್ನೆಯನ್ನು ಪತ್ರಕರ್ತರು ನಿದರ್ೆಶಕ ನೊಲನ್ ಮುಂದಿಟ್ಟಾಗ, ಅವನು ಕೊಟ್ಟ ಉತ್ತರ ಇಂತಿದೆ.
 ನಮ್ಮ ಚಿತ್ರದಲ್ಲಿರುವ    ಮುಮ್ಮುಖ ಮರೆವು ಅಥವ ಆಂಟೆರೋಗ್ರೇಡ್ಖಾಯಿಲೆ ಅಥವಾ ಅರೆಕಾಲಿಕ ನೆನಪಿನ ಶಕ್ತಿ ಎಂಬ ಖಾಯಿಲೆ ತುಂಬಾ ಅಪರೂಪವಾದದ್ದು. ಪ್ರೇಕ್ಷಕರಿಗೆ ಈ ತರಹದ್ದೊಂದು ಖಾಯಿಲೆ ವಾಸ್ತವವಾಗಿ ಇದೆಯಾ? ಎಂಬ ಸಂಶಯ ಬರುವುದು ಸಹಜ. ಆ ನಿಟ್ಟಿನಲ್ಲಿ ಆ ಖಾಯಿಲೆಯ ಪ್ರಭಾವ ಅವರಿಗೆ ನೇರವಾಗಿ ಆಗುವಂತೆ ಸಣ್ಣದೊಂದು ಪ್ರಯೋಗವನ್ನು ಚಿತ್ರಕತೆಯ ಮೂಲಕ ಮಾಡಿದ್ದೇನೆ. ನೋಡುನೋಡುತ್ತಲೇ ಪ್ರೇಕ್ಷಕನಿಗೆ ತಾನೇ ಹದಿನೈದು ನಿಮಿಷದ ಹಿಂದೆ ನೋಡಿದ ದೃಶ್ಯ ಮರೆತುಹೋಗುತ್ತದೆ, ಅಥವ ಕಥೆ ಹಿಡಿತಕ್ಕೆ ಸಿಗುವುದಿಲ್ಲ. ಪ್ರೇಕ್ಷಕ ಹಿಂದಿನ ದೃಶ್ಯವನ್ನು ಸರಿಯಾಗಿ ನೆನಪಿಟ್ಟುಕೊಳ್ಳದ ಹೊರತು ಮುಂದಿನ ದೃಶ್ಯಕ್ಕೆ ಲಿಂಕ್ ಸಿಗುವುದಿಲ್ಲ ಅಂದರೆ ತೆರೆಯ ಮೇಲೆ ನಾಯಕ ನೆನಪಿಟ್ಟುಕೊಳ್ಳಲು ಕಾಗದ, ಹಚ್ಚೆ, ಫೋಟೋಗಳನ್ನು ಬಳಸುವಂತೆ, ತೆರೆಯ ಮುಂದೆ ಕುಳಿತ ಪ್ರೇಕ್ಷಕ ತನ್ನ ಬುದ್ಧಿಮತ್ತೆಯನ್ನು ಬಳಸಬೇಕು. ಚಿತ್ರದಲ್ಲಿ ನಾಯಕನ ಮೇಲೆ ಆ ಖಾಯಿಲೆ ಬೀರುವ ಪರಿಣಾಮವನ್ನೂ ನೋಡುಗ ಕೂಡ ಸಿನಿಮಾ ನೋಡುವವರೆಗೆ ಪ್ರಾಯೋಗಿಕವಾಗಿ ಅನುಭವಿಸಬೇಕಾಗುತ್ತದೆ. ಚಿತ್ರ ಮುಗಿಯುವಷ್ಟರಲ್ಲಿ  ಈ ತರಹದ ರೋಗ ಎಲ್ಲಿದೆ ಎಂಬ ಪ್ರಶ್ನೆಗೆ ಸ್ವಾನುಭವದ ಉತ್ತರ ದೊರಕಿರುತ್ತದೆ.. ಅದೇ ನನ್ನ ಉದ್ದೇಶ....
ಬಿದ್ದಿರುವವನಿಗೂ ಅಲ್ಲೇ ತೆಗೆದ ಫೋಟೋ ಕ್ಕೂ ಇರುವ ವ್ಯತ್ಯಾಸ...
ಎಂಥ ಬುದ್ಧಿವಂತಿಕೆಯಿಂದ ಕೂಡಿದ ಉತ್ತರ ನೋಡಿ !
ಸಿನಿಮಾದೊಳಗಿನ ಸಮಸ್ಯೆಯನ್ನು ಸಿನಿಮಾದ ಹೊರಗೆ ಕುಳಿತ ಪ್ರೇಕ್ಷಕನಿಗೆ ದಾಟಿಸಿ ಅವನನ್ನೇ ನಾಯಕನನ್ನಾಗಿಸಿ ಅವರ ಪ್ರಶ್ನೆಗಳಿಗೆ ಅನುಭವರೂಪದ ಉತ್ತರ ಕೊಡುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ.ಇಷ್ಟೆಲ್ಲಾ ಬುದ್ಧಿವಂತಿಕೆಯಿ0ದ ಕೂಡಿದ ಚಿತ್ರಕಥೆ ಹೊಂದಿರುವ ಮೆಮೆಂಟೋ ಚಿತ್ರ ತಾಂತ್ರಿಕ ಅಂಶದಲ್ಲೂ ಅಷ್ಟೆ ಶ್ರೀಮಂತವಾಗಿದೆ. ಚಿತ್ರದ ಮೊದಲ ದೃಶ್ಯವೇ 'ಹಿಂದೆ' ಚಲಿಸುವ ಮೂಲಕ ಇಡೀ ಚಿತ್ರವೇ 'ಹಿಂದೆ-ಮುಂದೆ' ಎಂಬ ಸೂಕ್ಷ್ಮವನ್ನು ತೆರೆದಿಡುತ್ತದೆ. ನಾಯಕನ
ಪಾತ್ರಧಾರಿ ಗೈ ಪಿಅರ್ಸ್ ತನ್ನ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾನೆ. ಮೊದಲಿಗೆ 'ಬ್ರಾಡ್ ಪಿಟ್' ನಿರ್ವಹಿಸಬೇಕಾಗಿದ್ದ ಪಾತ್ರವದು. ಕಾರಣಾಂತರಗಳಿಂದ ಆ ಪಾತ್ರ ಗೈ ಪಿಯಸರ್್ ಪಾಲಾಯಿತು. ನತಾಲಿಯಾಗಿ ಆನ್ ಮೋಸ್, ಟೆಡ್ಡಿಯಾಗಿ ಜೋ ಪಾಂಟೋಲಿಯಾನೋ ತಮ್ಮ ತಮ್ಮ ಪಾತ್ರಗಳನ್ನು ಪಾತ್ರೋಚಿತವಾಗಿ ಅಭಿನಯಿಸಿದ್ದಾರೆ.

ಸುಮಾರು 25 ದಿನಗಳಲ್ಲಿ ಚಿತ್ರೀಕರಿಸಿರುವ ಈ ಚಿತ್ರ ಮೊದಲಿಗೆ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರೇಕ್ಷಕ, ವಿಮರ್ಶಕರ ಮೆಚ್ಚುಗೆ ಗಳಿಸಿದ್ದಷ್ಟೇ ಅಲ್ಲ ಗಲ್ಲಾಪೆಟ್ಟಿಗೆಯನ್ನೂ    ಕೊಳ್ಳೇ ಹೊಡೆದು ಅತ್ಯಂತ ಯಶಸ್ವಿ ಚಿತ್ರವಾಯಿತು. ಪ್ರಾರಂಭದಲ್ಲಿ ಕೇವಲ ಹನ್ನೊಂದೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಮೆಮೆಂಟೋ ಬರುಬರುತ್ತಾ ಚಿತ್ರಮಂದಿರಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಾ ಕೊನೆಕೊನೆಗೆ ಐದುನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುವ ಮೂಲಕ ತನ್ನ ಪ್ರಾಬಲ್ಯ ಮೆರೆಯಿತು.
ಅತ್ಯುತ್ತಮ ಮೂಲ ಚಿತ್ರಕಥೆ ಮತ್ತು ಸಂಕಲನ ಕ್ಷೇತ್ರಗಳಿಗೆ 'ಆಸ್ಕರ್'ಗೆ ನಾಮಾಂಕಿತವಾಯಿತಾದರೂ 'ಜೊನಾಥನ್ ನೊಲನ್'ನ ಸಣ್ಣಕತೆ ಮೆಮೆಂಟೋ ಬಿಡುಗಡೆಗೆ ಮುನ್ನಾ ಎಲ್ಲೂ ಮುದ್ರಣಗೊಂಡಿರಲಿಲ್ಲವಾದ್ದರಿಂದ ಸ್ವಲ್ಪದರಲ್ಲಿ ಕೈ ತಪ್ಪಿ ಹೋಯಿತು. ಆದರೂ ಬರೀ ಚಿತ್ರಕತೆಗಾಗಿ ಸುಮಾರು 13 ಪ್ರತಿಷ್ಠಿತ ಪ್ರಶಸ್ಥಿಗಳನ್ನೂ, ಉತ್ತಮ ಚಿತ್ರಕ್ಕಾಗಿ 5 ಪ್ರಶಸ್ತಿಗಳನ್ನೂ ಮುಡಿಗೇರಿಸಿಕೊಂಡಿತಲ್ಲದೆ,
ನೊಲನ್ನನ್ನು ವಿಶಿಷ್ಟ ನಿದರ್ೆಶಕ ಎಂಬ ಪಟ್ಟಕ್ಕೇರಿಸಿತು ಮತ್ತು 'ಸಾರ್ವಕಾಲಿಕ 100 ಅತ್ಯುತ್ತಮ ಸಿನಿಮಾಗಳು' ಪಟ್ಟಿಯಲ್ಲಿ 61 ನೇ ಸ್ಥಾನದಲ್ಲಿರುವ ಮೆಮೆಂಟೋ ಸಿನಿಪ್ರಿಯರು, ಸಿನಿಮಾದವರೂ ನೋಡಲೇ ಬೇಕಾದ ಚಿತ್ರವಾಗಿದೆ.
ಕ್ರಿಸ್ಟೋಪರ್ನೊಲನ್ನ ಸಹೋದರ ಜೊನಾಥನ್ನೊಲನ್ ಬರೆದ ಸಣ್ಣಕತೆಯಾಧಾರಿತ ಸಶಕ್ತ ಕಥೆಯ ಈ ಚಿತ್ರವನ್ನು ಅದರ ಕ್ರಮದಲ್ಲೇ ನೋಡಿ, ಸಂಪೂರ್ಣ ಅರ್ಥ ಮಾಡಿಕೊಂಡರೂ ಕೆಲವೊಂದು ಪ್ರಶ್ನೆಗಳು ಹಾಗೆಯೇ ಉಳಿದುಬಿಡುತ್ತವೆ.. ಬಹುಶಃ ಆ ಪ್ರಶ್ನೆಗಳಿಗೆ ನೊಲನ್ ಸ್ವತಃ ಉತ್ತರಿಸಬೇಕೇನೋ..?
   ಶಾರ್ಟ್ ಟೈಮ್ ಮೆಮೊರಿ ಲಾಸ್ಸ್ ಖಾಯಿಲೆಯಿಂದ ಬಳಲುತ್ತಿರುವ ನಾಯಕ ನಮಗೆ ನಿರೂಪಿಸುವ ಕಥೆ ಎಷ್ಟರ ಮಟ್ಟಿಗೆ ಸತ್ಯವಾದದ್ದು..? ಅಥವ ಎಷ್ಟರ ಮಟ್ಟಿಗೆ ನಂಬಲರ್ಹವಾದುದು.
    ಟೆಡ್ಡಿ ತನ್ನ ಕಾರನ್ನು ಪಾಳುಬಿದ್ದ ಕಟ್ಟಡದ ಮುಂದೆ ನಿಲ್ಲಿಸಿದಾಗ ನಾಯಕ ಆ ಕಾರಿನ ಸಂಖ್ಯೆ
SG137IU0ದಿರುತ್ತದೆ. ಆದರೆ ಅದನ್ನು SG1371U ಎಂದು ಕಾಗದದ ಮೇಲೆ ಬರೆದುಕೊಳ್ಳುತ್ತಾನೆ. ಹಾಗೆ ತೊಡೆಯ ಮೇಲೆ SG1371U ಎಂದು ಹಚ್ಚೆ ಹಾಕಿಸಿಕೊಳ್ಳುತ್ತಾನೆ. ಮುಂದಿನ ದೃಶ್ಯದಲ್ಲಿ ಮತ್ತದೇ ಕಾರಿನ ನಂಬರ್ ಪ್ಲೇಟ್ನಲ್ಲಿ SG1371U ಎಂದೇ ಇರುತ್ತದೆ. ಇದು ಉದ್ದೇಶಪೂರ್ವಕವಾಗಿ ಮಾಡಿದ್ದಾ.?    ಟೆಡ್ಡಿಯ ಡ್ರೈವರ್ ಲೈಸನ್ಸ್ ಮೇಲೆ ಎಕ್ ಸ್ಪೈರಿ ದಿನಾಂಕ 02/29/01 ಎಂದಿರುತ್ತದೆ.. ಆದರೆ 2001 ರ ಫೆಬ್ರವರಿ ಅಧಿಕವರ್ಷ ಅಲ್ಲ. ಆದ್ದರಿಂದ 29 ಬರುವುದು ಸಾಧ್ಯವೇ ಇಲ್ಲ.. ಇದು ಹೇಗೆ..?
     ಬಾತ್ ರೂಮಿನಲ್ಲಿ ಹೆಂಡತಿಯ ಕೊಲೆಯಾದ ಘಟನೆಯ ಪ್ಲಾಶ್ ಬ್ಯಾಕ್ನಲ್ಲಿ ಬಾತ್ ರೂಮಿನ ಬಾಗಿಲು ಒಂದು ಸಾರಿ ತೋರಿಸುವಾಗ ಬಲಗಡೆಯಿಂದ ತೆರೆದಿದ್ದರೆ, ಮತ್ತೊ0ದು ಸಾರಿ ತೋರಿಸುವಾಗ ಎಡಗಡೆಯಿಂದ ತೆರೆದಿರುತ್ತದೆ.  ನತಾಲಿಯ ಅಪಾರ್ಟ್ಮೆಂಟ್ ನಲ್ಲಿ ಲ್ಯಾರಿ ಜೊತೆಗಿನ ಫೋಟೋದಲ್ಲಿ ಒಂದು ಸಾರಿ ಮೀಸೆ ಇದ್ದರೆ ಮತ್ತೊಂದು ಸಾರಿ ಮೀಸೆ ಇರುವುದಿಲ್ಲ.
       ನತಾಲಿ, ನಾಯಕ ಲೆನ್ನಿಗೆ ಡಾಡ್ ನನ್ನು ಹುಡುಕಲು ಹೇಳಿ, ಅವನು (ಪ್ರೇಕ್ಷಕರಿಗೆ ಗೊತ್ತಾಗುವಂತೆ) ಸಿಗುವ ವಿಳಾಸವನ್ನು ಮಾ0ಟ್ ರೆಸ್ಟ್ ಇನ್0ದು ಬರೆದುಕೊಟ್ಟರೆ ನಾಯಕ ಅದನ್ನು 'ಮಾಂಟ್ ಕ್ರೆಸ್ಟ್ ಇನ್' ಎಂದು ಉಚ್ಚರಿಸುತ್ತಾನೆ.. ಆದರೆ ಆ ಹೋಟೆಲ್ ಹತ್ತಿರ ಹೋದಾಗ ಅದರ ಹೆಸರು 'ಮಾಂಟ್ ಕ್ರೆಸ್ಟ್ ಇನ್' 0ದೇ ಇರುತ್ತದೆ
   
ಇಡೀ ಚಿತ್ರದಲ್ಲಿ 'ನತಾಲಿ'ಯ ಕೈ ಬರಹ ಬೇರೆ, ಬೇರೆಯಾಗಿರುತ್ತದೆ. ಅದು ಪ್ರೇಕ್ಷಕರ ಗಮನಕ್ಕೆ ಬರುವಂತೆ..!!
   ಚಿತ್ರದಲ್ಲಿ ಶೆಲ್ಬಿ ತನ್ನ ಮೈಮೇಲೆಲ್ಲಾ ನೆನಪಿಡಬೇಕಾದ ಸಂಗತಿಗಳನ್ನು ಹಚ್ಚೆ ಹಾಕಿಸುಕೊಂಡಿರುವ ಬರಹದ ಶೈಲಿ ಮುದ್ರಿತ ಅಕ್ಷರದಲ್ಲಿವೆ.ಆದರೆ ಕೈ ಮೇಲೆ ಮಾತ್ರ ಕೈಬರಹದ ರೂಪದಲ್ಲಿದೆ..!!
 ಈ ಮೇಲ್ಕಂಡವು ಮೇಲ್ನೋಟಕ್ಕೆ ಚಿತ್ರೀಕರಣದ ಹಂತದಲ್ಲಾದ ತಪ್ಪುಗಳೆನಿಸುವುದು ಸಹಜ. ಆದರೆ ಸೂಕ್ಷ್ಮವಾಗಿ ಅವಲೋಕಿಸಿದರೆ ಅವೆಲ್ಲವನ್ನು ನಿರ್ದೇಶಕನ ಪ್ರಜ್ಞಾಪೂರ್ವಕವಾಗಿಯೇ ಬೇಕಂತಲೇ ಮಾಡಿದ್ದಾನೆನ್ನುವುದು. ಹೇಗೆ ಲಿಯೋನಾರ್ಡೋ ಶೆಲ್ಬಿಯ ನೆನಪಿನ ಶಕ್ತಿಯನ್ನು ನಂಬುವ ಹಾಗಿಲ್ಲವೋ.. ಹಾಗೆ ನಮ್ಮ ನೆನಪಿನ ಶಕ್ತಿಯೂ ನೂರಕ್ಕೆ ನೂರು ನಂಬಲರ್ಹವಲ್ಲ. ಅವು ಕಾಲಕಾಲಕ್ಕೆ ಬದಲಾಗುತ್ತವೆ. ನಮ್ಮ ಗ್ರಹಿಕೆಗೂ ವಾಸ್ತವ ಸಂಗತಿಗೂ ಅಜಗಜಾಂತರ ವ್ಯತ್ಯಾಸವಿದೆ ಎಂಬುದನ್ನು ಸೂಚ್ಯವನ್ನು ವಿಶದೀಕರಿಸಲು ನಿರ್ದೇಶಕನ ಜಾಣ್ಮೆಯಿಂದ ಚಿತ್ರಕಥೆ ಹೆಣೆದಿದ್ದಾನೆ. ಮತ್ತದರಲ್ಲಿ ಯಶಸ್ವಿಯೂ ಆಗಿದ್ದಾನೆ. ಈಗಾಗಲೇ ಸುಮಾರು ಜನ 'ಮೆಮೆಂಟೋ' ಚಿತ್ರವನ್ನುನೋಡಿರಬಹುದು, ಅರ್ಥೈಸಿಕೊಂಡಿರಬಹುದು. ಈಗ ಮತ್ತೊಮ್ಮೆ   ಮಗದೊಮ್ಮೆ ನೋಡಿ..
ಪ್ರತಿಸಾರಿಯು ಕೊಡುವ ಹೊಸಹೊಸ ಅನುಭವವನ್ನು ಎಂಜಾಯ್ ಮಾಡಿ.

ಕೊಸರು : ನಿರ್ದೇಶಕ ನೊಲನ್ ಬರೀ ಸಿನಿಮಾಕ್ಕಷ್ಟೇ ಅಲ್ಲ ಚಿತ್ರದ ಪ್ರತಿಯೊಂದು ಅಂಶಕ್ಕೂ ತುಂಬಾ ತಲೆ ಕೆಡಿಸಿಕೊಂಡಿದ್ದಾನೆ.  ಮೊದಲನೆಯದಾಗಿ ಚಿತ್ರದ ಪೋಸ್ಟರ್, ಫೋಟೋದೊಳಗೆ ಫೋಟೋ.. ನೀವು ಅದನ್ನು zoom in ಮಾಡುತ್ತಾ ಹೋದರೂ ಒಳಗೊಂದು ಚಿತ್ರದೊಳಗೊಂದು, ಚಿತ್ರದೊಳಗೊಂದು ಚಿತ್ರ.. ಹೀಗೆ ಸಾಗುತ್ತ ಹೋಗುತ್ತದೆ. ಎರಡನೆಯದಾಗಿ ಈ ಸಿನಿಮಾದ 'ವೆಬ್ಸೈಟ್'ಗೆ ಉಲ್ಟಾ ಹೆಸರು OTNEMEM’ ' ಎಂದು ಹೆಸರಿಟ್ಟಿರುವುದು.
         ಮೂರನೆಯದಾಗಿ 'ಮೆಮೆಂಟೊ' ಸಿನಿಮಾದ 'DVD' ಯಲ್ಲೂ ಹೊಸತನ ತೋರಿದ್ದಾನೆ.ಅದರಲ್ಲಿ ಸಿನಿಮಾದ ಎರಡು ವಿಧದ ಆವೃತ್ತಿಯ ಜೊತೆಗೆ  ಅದರಲ್ಲೇ 'ಗೇಮ್ ಕೂಡ ಇಟ್ಟು ಮೆದುಳಿಗೂ' ಕಸರತ್ತು ನೀಡಿದ್ದಾನೆ.
[ನನ್ನ ಎರಡನೆಯ ಪುಸ್ತಕ ಚಿತ್ರವಿಚಿತ್ರ-ಜಗತ್ತಿನ ಅಪೂರ್ವ ಚಿತ್ರಗಳ ಬಗೆಗಿನ ಲೇಖನಗಳು -ದಿಂದ ಆಯ್ದ ಒಂದು ಲೇಖನ]

2 comments:

  1. I wish I can watch this movie once with you :)
    And very eagerly waiting for your second book. When is it releasing?

    ReplyDelete
  2. ತುಂಬಾ ಒಳ್ಳೆಯ ಬರಹ ಮತ್ತು ಮಾಹಿತಿಯುಕ್ತ ವಿಮರ್ಶೆ ನೀಡಿದ್ದೀರ . ಇಷ್ಟವಾಯಿತು .

    ReplyDelete