Sunday, March 17, 2013

2012-ನೋಡಿದ ಚಿತ್ರಗಳು-1

ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ ಸಿನೆಮಾ ನೋಡುತ್ತಿದ್ದೆ. ನಮ್ಮ ಕಾಲೇಜು ಮದ್ಯಾಹ್ನ ಎರಡಕ್ಕೆ ಮುಗಿಯುತ್ತಿದ್ದರಿಂದ ತರಗತಿಗೆ ಚಕ್ಕರ್ ಹಾಕುವ ಪ್ರಮೇಯ ಬಂದಿರಲಿಲ್ಲ. ಊಟ ಮಾಡಿದ ನಂತರ ಬಸ್ಸು ಹಿಡಿದು ಮನೆಗೆ ಹೋಗಬೇಕಾಗಿತ್ತು. ಆದರೆ ಅಷ್ಟು ಬೇಗ ಹೋಗಿ ಮಾಡುವುದಾದರೂ ಏನಿತ್ತು. ಹಾಗಾಗಿ ಲಕ್ಷಣವಾಗಿ ಚಿತ್ರಮಂದಿರಕ್ಕೆ ಹೋಗಿ ಕುಳಿತುಬಿಡುತ್ತಿದ್ದೆ. ಸಿನೆಮಾ ಯಾವುದಾದರೇನು..? ನೋಡುತ್ತಿದ್ದೆ .ನೋಡಿದ ನಂತರ ಸಿನೆಮಾದ ಟಿಕೇಟಿನ ಅರ್ಧಭಾಗ ನಮ್ಮ ಬಳಿ ಇರುತ್ತಿತ್ತಲ್ಲ.. ಅದರ ಹಿಂದೆ ಸಿನೆಮಾದ ಹೆಸರು, ನೋಡಿದ ದಿನಾಂಕ ಬರೆದಿಡುತ್ತಿದ್ದೆ. ನನ್ನ ಪದವಿ ಮುಗಿಯುವವರೆಗೆ ಆ ತರಹದ ಟಿಕೆಟ್ ಗಳು ಬೇಜಾನ್ ಆಗಿದ್ದವು. 
ಈಗಲೂ ಅಷ್ಟೇ ಸಿನೆಮಾ ನೋಡಿದ ತಕ್ಷಣ ಅದರ ಬಗ್ಗೆ ಚಿಕ್ಕಾದಾದ ಟಿಪ್ಪಣಿ ಬರೆದಿಡುತ್ತೇನೆ. ಇಲ್ಲವಾದಲ್ಲಿ ಆ ಸಿನೆಮಾದ ಹೆಸರು ದಿನಾಂಕವನ್ನು ಡೈರಿಯಲ್ಲಿ ಬರೆದು ಬಿಡುತ್ತೇನೆ.ಕಳೆದ ವರ್ಷ ನನಗೆ ಅಂತಹ ಕೆಲಸವಿರಲಿಲ್ಲ. ಕೈಯಲ್ಲಿದ್ದದ್ದು ಒಂದೇ ಚಿತ್ರ. ಹಾಗಾಗಿ ಸಿನೆಮಾ ನೋಡಲು ಸಾಕಷ್ಟು ಸಮಯ ಸಿಕ್ಕಿತ್ತು. ಆಗ ನೋಡಿದ ಹಾಲಿವುಡ್ ಸಿನೆಮಾಗಳಿವು.
1.ಕಾಂಟ್ರಬ್ಯಾಂಡ್:
ಶೂಟರ್  ಚಿತ್ರ ನೋಡಿದ ನಂತರ ಮಾರ್ಕ್ ವಾಲ್ಬರ್ಗ್ ನನಗೆ ಇಷ್ಟವಾದದ್ದು. ಒಬ್ಬ ಮಾಸ್ ಹೀರೋ ಆಗಿ. ನಂಗೆ ಜಾತನ್ ಸ್ತಾಥಂ ಬಿಟ್ಟರೆ ಮಾರ್ಕ್ ವಾಲ್ ಬರ್ಗೆ ಇಷ್ಟವಾಗುವುದು. ಅದರಲ್ಲೂ ಒಂದು ಕಮರ್ಶಿಯಲ್ ಎಲಿಮೆಂಟಿರುವ ಚಿತ್ರಗಳೆಂದರೆ ನನಗೆ ಯಾವಾಗಲೂ ಖುಷಿ ತರುವ ವಿಚಾರವೇ.ಈ ಚಿತ್ರದ ಕಥೆಯ ಬಗ್ಗೆ ಅಷ್ಟು ತಲೆಕೆಡಿಸಿಕೊಳ್ಳುವ ಹಾಗಿಲ್ಲ. ಮಾದಕ ವಸ್ತುವಿನ ಸಾಗಣೆಯನ್ನೂ ಮುಖ್ಯ ಎಳೆಯನ್ನಾಗಿ ಹೊಂದಿರುವ ಚಿತ್ರದಲ್ಲಿ ನಾಯಕ ಮಾಜಿ ಸ್ಮಗ್ಲರ್. ಆದರೆ ಈವಾಗ ದಂಧೆ ಬಿಟ್ಟು ತನ್ನ ಹೆಂಡತಿ ಮಕ್ಕಳೊಂದಿಗೆ ಆರಾಮವಾಗಿದ್ದಾನೆ. ಆದರೆ ಮೈದುನ ಕೂಡ ಒಬ್ಬ ಸಾಗಣೆದಾರನಾಗಿದ್ದು ಪೋಲಿಸರಿಂದ ತಪ್ಪಿಸಿಕೊಳ್ಳುವಾಗ ಮಾದಕವಸ್ತುವನ್ನು ನದಿಗೆ ಬೀಸಾಕಿಬಿಡುತ್ತಾನೆ. ಆದರೆ ಅವನ ಬಾಸ್ ಬಿಡಬೇಕಲ್ಲ...ಅವನ ಹಿಂದೆ ಬೀಳುತ್ತಾನೆ...ನಾಯಕ ಇನ್ನೂ ಸುಮ್ಮನಿದ್ದರೆ ನಾಯಕನೆನಿಸಿಕೊಳ್ಳುವುದಿಲ್ಲವಲ್ಲ...ಮೈದುನನ್ನುಳಿಸಲು ಹೋರಾಟಮಾಡುತ್ತಾನೆ...ಚಿತ್ರ ಕೆಲವೊಂದು ಕಡೆ ಕುತೂಹಲ ತರಿಸಿದರೂ ಸುಮಾರು ಕಡೆ ಬೋರ್ ಹೊಡೆಸುತ್ತದೆ. ಸಂಭಾಷಣೆ ಅಂತಹ ಹೇಳಿಕೊಳ್ಳುವಹಾಗಿಲ್ಲ. ಹಾಗೆ ಹೊಡೆದಾಟದ ಸನ್ನಿವೇಶಗಳೂ ಅಷ್ಟೇ. ಹಾಗಾಗಿ ಚಿತ್ರ ಒಂದು ಸಾಮಾನ್ಯ ಚಿತ್ರವೆನಿಸಿಕೊಳ್ಳುತ್ತದೆ.
2.ಹೇ ವೈರ್:
ಇದೊಂದು ಪಕ್ಕ ಆಕ್ಷನ್ ಚಿತ್ರ. ನಮ್ಮಲ್ಲಿ ಮಾಲಾಶ್ರೀ ಚಿತ್ರಗಳ ರೀತಿ ಇರುವ ಚಿತ್ರವಿದು. ಒಂದು ಕೇಡಿಗಳ ಗ್ಯಾಂಗ್ ..ನಾಯಕಿ ಹೊಡೆದಾಟ...ಇಷ್ಟೇ ಸಿನೆಮಾ.ಆರು ಅಡಿಗೆ ಕೇವಲ ಇಂಚುಗಳಷ್ಟು ಕಡಿಮೆಯಿರುವ ನಾಯಕಿ ಗಿನಾ ಕ್ಯಾರೆನೋ ಅಭಿನಯದ ಈ ಚಿತ್ರದಲ್ಲಿ ಒಂದೆರೆಡು ಹೊಡೆದಾಟದ ದೃಶ್ಯ ಬಿಟ್ಟರೆ ಬೇರೇನೂ ಹೇಳಿಕೊಳ್ಳುವ ಹಾಗಿಲ್ಲ. ಚಿತ್ರಕಥೆಯೂ ಅಷ್ಟೇ . ನಿಂತಲ್ಲೇ ಸುತ್ತುತ್ತದೆ. ಅಂತಹ ತಿರುವುಗಳಿಲ್ಲ. ಎಲ್ಲವೂ ನಿರೀಕ್ಷಿತವೇ. ಒಮ್ಮೆ ನೋಡಿ ಮರೆತುಬಿದಬಹುದಾದ ಚಿತ್ರ ಹೇ ವೈರ್. ಓಶಿಯನ್1,2,3, ಇನ್ ಫಾರ್ಮಂಟ್ ಮುಂತಾದ ಚಿತ್ರಗಳ ನಿರ್ದೇಶಕ ಸ್ಟೀವನ್ ಸೋಡರ್ಬರ್ಗ್ ನಿರ್ದೇಶನದ ಅತ್ಯಂತ ಸಾಮಾನ್ಯ ಚಿತ್ರವಿದು.
3.ವುಮನ್ ಇನ್ ಬ್ಲಾಕ್:
 ಹ್ಯಾರಿ ಪಾಟರ್ ನಾಯಕ ಡೆನಿಯಲ್ ರಾಡ್ಕ್ಲಿಫ್ ಅಭಿನಯದ ಈ ಚಿತ್ರ .ವಕೀಲ ವೃತ್ತಿಯ ನಾಯಕ ವಿಧುರ. ಕಾರ್ಯ ನಿಮಿತ್ತ ಒಂದು ಹಳ್ಳಿಗೆ ಹೋದಾಗ ಕಪ್ಪು ಧಿರಿಸಿನ ದೆವ್ವವೊಂದು ಅಲ್ಲಿ ಭಯಾನಕ ವಾತಾವರಣ ಸೃಷ್ಟಿಸಿರುವುದು ತಿಳಿದುಬರುತ್ತದೆ. ಮುಂದೆ ಅದೇ ಒಂದಷ್ಟು ಭಯಾನಕ ಸನ್ನಿವೇಶಗಳು.. ಕೊನೆಗೊಂದು ರಹಸ್ಯ..ಚಿತ್ರ ಒಂದು ಹಾರರ್ ವಿಭಾಗದ ಚಿತ್ರವಾದರೂ ಅಂತಹ ಪ್ರಭಾವನ್ನೇನೂ ಬೀರುವುದಿಲ್ಲ. ಹ್ಯಾರಿ ಪಾಟರ್ ನಾಯಕ ನಮಗೆ ಈ ಚಿತ್ರದಲ್ಲೆಲ್ಲೂ ದೊಡ್ದವನೆನಿಸುವುದಿಲ್ಲ. ಹಾಗಾಗಿ ಚಿತ್ರ ಅಲ್ಲಲ್ಲಿ ಶಾಕ್ ಕೊಟ್ಟರೂ ಪರಿಪೂರ್ಣ ಭಯಾನಕ ಚಿತ್ರ ನೋಡಿದ ಭಾವ ಮೂಡಿಸುವುದಿಲ್ಲ.
4.ಕ್ರೋನಿಕಲ್:
ಜೋಶ ಟ್ರಂಕ್ ನಿರ್ದೇಶನದ ಮೊತ್ತಮೊದಲ ಚಿತ್ರವಿದು. ಮೂರು ಜನ ಗೆಳೆಯರು. ಅವರಲ್ಲೊಬ್ಬ ಪುಕ್ಕಲ. ಅವನನ್ನು ಎಲ್ಲರೂ ರೇಗಿಸುವವರೇ. ತಂದೆಯ ನಿರ್ಲಕ್ಷ್ಯಕ್ಕೊಳಗಾದ ಆತನಿಗೆ ಎಲ್ಲವನ್ನೂ ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿಯುವ ಹುಚ್ಚು. ಮುಂದೆ ಮೂವರಿಗೂ  ಅದ್ಭುತ ಶಕ್ತಿ ದೊರೆತಾಗ ಅದನ್ನು ಮೊದಲಿಗೆ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಆನಂತರ ಆ ಶಕ್ತಿಯಿಂದ ತಮಗಿಷ್ಟ ಬಂದಹಾಗೆ ಆಡಲು ಶುರುಮಾಡುತ್ತಾರೆ. ಮುಂದೆ ಅದೇ ದುರಂತಕ್ಕೆ ಕಾರಣವಾಗುತ್ತದೆ.
ನನಗೆ ಈ ಚಿತ್ರ ಇಷ್ಟವಾದದ್ದು ಅದರ ವಿಶುಯಲ್ ಎಫೆಕ್ಟ್ ನಿಂದ. ಇಡೀ ಚಿತ್ರವನ್ನ ಬ್ಲೇರ್ ವಿಚ್ ಪ್ರಾಜೆಕ್ಟ್ ಮಾದರಿಯಲ್ಲಿ ಅಂದರೆ ಯಾವುದು ಮುದ್ರಿತ ಟೇಪಿನಲ್ಲಿದ್ದ ವೀಡಿಯೊ ತರಹ ನಿರೂಪಿಸಲಾಗಿದೆ. ಆದರೂ ದೃಶ್ಯ ವೈಭವ ಮನಸ್ಸಿಗೆ ತಟ್ಟುತ್ತದೆ. ಒಮ್ಮೆ ಆರಾಮವಾಗಿ ನೋಡಬಹುದಾದ ಚಿತ್ರವಿದು.

4 comments:

  1. film gaLa bagge neevu bareyOdu Ododde ondu chendada anubhava. shooter movie naanu 5 sala nODiddene.Only movie i watched many times. dont know why. Contraband watched half.could not continue
    yesterday watched Revolver and Trouble with the curve.And whole of last week i watched one movie of Clint Eastwood everyday. like his dialogues..
    :-)
    ms

    ReplyDelete
    Replies
    1. ನನಗೂ ಶೂಟರ್ ಸಿಕ್ಕಾಪಟ್ಟೆ ಇಷ್ಟ.ನಾನೂ ತುಂಬಾ ಸಲ ನೋಡಿದ್ದೀನಿ. ರಿವಾಲ್ವರ್ ನನಗಿಷ್ಟ.ಗೈ ರಿಚಿ ನನ್ನ ಮೆಚ್ಚಿನ ನಿರ್ದೇಶಕರಲ್ಲೊಬ್ಬರು.Trouble with the curve ನಾನೂ ನೋಡಿದೆ.ಅಂದಹಾಗೆ ಯಾವ ಕನ್ನಡ, ಹಿಂದಿ, ತಮಿಳು ತೆಲುಗು ಚಿತ್ರ ನೋಡಿದ್ರೇ..?

      ಧನ್ಯವಾದಗಳು...

      Delete
  2. ಹೊಸ ಚಿತ್ರ ನೋಡಿಲ್ಲ. ಮೊನ್ನೆಯಷ್ಟೇ ಜೊಡಿಯಾಕ್(ಫಿ೦ಚರ್), ಡ್ರೈವ್ ನೋಡಿದೆ. ಅಚ್ಛುಕಟ್ಟಾಗಿದೆ. ಉತ್ತಮ ಚಿತ್ರಗಳಿವು.

    ReplyDelete
    Replies
    1. ನಾನೂ ಡ್ರೈವ್ ನೋಡಿದೆ.
      @ Ravindra:
      ಹಿಂದಿ - ಬವಂದರ್
      ಕನ್ನಡ- ಕಾಡು, ಅಬಚೂರಿನ ಪೋಸ್ಟ್ ಆಫೀಸು
      ತಮಿಳು- ನಿಲ್
      ತೆಲುಗು- ನಿಲ್
      ಬೆಂಗಾಲಿ - ಗೋಪಿ ಗಯ್ನೆ ಬಾಘಾ ಬೈನೆ
      ಮತ್ತೆ BIFFES ನಲ್ಲಿ ಮಿಸ್ ಆದ Pieta ನೋಡಿದೆ. what do u think of that movie?? also watched 'potiche'
      :-)
      ಮಾಲತಿ ಎಸ್

      Delete