
ಕಳೆದ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ನನಗೆ ಭಾಗವಹಿಸಲು ಸಾಧ್ಯವಾಗಿರಲಿಲ್ಲ . ಹಾಗಾಗಿ ಆಲ್ಲಿ ಪ್ರದರ್ಶನಗೊಂಡಿದ್ದ ಎಲ್ಲಾ ಸಿನೆಮಾಗಳನ್ನು ಪಟ್ಟಿ ಮಾಡಿಕೊಂಡು ಒಂದು ತಿಂಗಳಲ್ಲಿ ನೋಡಿಬಿಟ್ಟಿದ್ದೆ. ಆದರೆ ಈ ಸಾರಿಯ ಚಿತ್ರೋತ್ಸವದ ಪಟ್ಟಿಯಲ್ಲಿರುವ ಬಹುತೇಕ ಚಿತ್ರಗಳನ್ನು ನಾನು ಈಗಾಗಲೇ ನೋಡಿಬಿಟ್ಟಿದ್ದರೂ ಅದನ್ನು ತೆರೆಯ ಮೇಲೆ ಚಿತ್ರಮಂದಿರದಲ್ಲಿ ನೋಡುವ ಮಜವೇ ಬೇರೆ. ಈ ಸಾರಿ ಸುಮಾರು ಏಳು ದೇಶಗಳ ನೂರೈವತ್ತಕ್ಕೂ ಹೆಚ್ಚು ಸಿನೆಮಾಗಳಿವೆ. ಅವುಗಳಲ್ಲಿ ಸುಮಾರು ಗಮನಾರ್ಹವೆನಿಸಿರುವ ಚಿತ್ರಗಳಿವೆ .ನನಗೆ ಗೊತ್ತಿರುವಂತೆ[ನೋಡಿರುವ] ಚಿತ್ರಗಳಾದ
ಹೆಡ್ ಶಾಟ್[2012],ಕಿಮ್ ಕಿ ಡುಕ್ ನಿರ್ದೇಶನದ
ಪಿಯೇಟ [2012], ಜರ್ಮನ್ ಭಾಷೆಯ
ಬಾರ್ಬರಾ[2012], ರಶಿಯಾ ದ
ಹೋಂ [2012], ಕೆನಡಾ ದೇಶದ
ಕ್ಯಾಮಿಒನ್ [2012], ಇರಾನ್ ನ
ಆರೆಂಜ್ ಸೂಟ್ [2012],
ಸೈಲೆನ್ಸ್ ಮುಂತಾದ ನೋಡಲೇ ಬೇಕಾದ ಚಿತ್ರಗಳಿವೆ. ಅವುಗಳಲ್ಲಿ ಸೋದರ-ಕಾಮಿ
ಶೇಮೆಲೆಸ್ಸ್[2012/ಪೋಲೆಂಡ್]ತರಹದ ಸ್ವಲ್ಪ ಮುಜುಗರ ತರಿಸುವ ಚಿತ್ರವೂ ಇದೆ. ಒಟ್ಟಿನಲ್ಲಿ ದಿನಕ್ಕೈದು ಸಿನೆಮಾದಂತೆ ನೋಡಲು ತೊಡಗಿದರೆ ಅದೆಷ್ಟು ನಮ್ಮನ್ನು ನೋಡಿಸಿಕೊಳ್ಳುತ್ತವೋ ಗೊತ್ತಿಲ್ಲ . ನೋಡಿರುವ ಚಿತ್ರಗಳಿಂದಾಗಿ ಸ್ವಲ್ಪ ವಿರಾಮವೂ ದೊರೆಯುವುದರಿಂದ ಏಳು ದಿವಸಗಳಲ್ಲಿ ಸಾಧ್ಯವಾದಷ್ಟು ಚಿತ್ರಗಳನ್ನು ನೋಡಿಬಿಡಬೇಕೆನ್ನುವ ಆಸೆಯಂತೂ ಇದೆ.


ಇವೆಲ್ಲಾ ಇತ್ತೀಚಿನ ಅಂದರೆ 2010ರ ಮೇಲಿನ ಚಿತ್ರಗಳು. ಇವುಗಳ ಜೊತೆಗೆ ರಾಬರ್ಟ್ ಬೆನಿನಿ ಯಾ ಮಾಸ್ಟರ್ ಪೀಸ್ '
ಲೈಫ್ ಇಸ್ ಬ್ಯೂಟಿ ಫುಲ್ [1997], ಮೈಕೆಲ್ಯಾಂಜೆಲೊ ಅನ್ತೊನಿನಿಯ
ಐಡೆಂಟಿಫಿಕೇಶನ್ ಆಫ್ ಎ ವುಮನ್[1982],
ರೆಡ್ ಡೆಸರ್ಟ್[1964],
ಹಲ ಅಷ್ಬಿ ನಿರ್ದೇಶನದ
ಕಮಿಂಗ್ ಹೋಂ[1974], ಜೆಅನ್ ಪಾಲ್ ರಪ್ಪೆನೆಔ ನಿರ್ದೇಶನದ ದಿ
ಹಾರ್ಸ್ ಮ್ಯಾನ್ ಆನ್ ದಿ ರೂಫ್[1995],
ಓಲ್ಡ್ ಬಾಯ್ [೨೦೦೩]ಮುಂತಾದ ಚಿತ್ರಗಳೂ ಇರುವುದರಿಂದ ಹೊಸ-ಹಳೆಯ ಸಂಗಮವೂ ದೊರೆಯುತ್ತದೆ. ಅದರ ಜೊತೆಗೆ ನಿರ್ದೇಶಕರಾದ
ಫಾತಿಹ್ ಅಕಿನ್ ,
ಅಕಿರಾ ಕುರುಸೋವ ರ ಚಿತ್ರಗಳು, ಭಾರತದ
ಜಾನ್ ಬರುವ, ರಾಮು ಕಾರಿಯತ್, ಗಿರೀಶ್ ಕಾಸರವಳ್ಳಿ, ಸಿದ್ದಲಿಂಗಯ್ಯನವ ಚಿತ್ರಗಳೂ ಇವೆ.
ಎಲ್ಲ ಚಿತ್ರಗಳನ್ನು ನೋಡಿದ ಮೇಲೆ ಮಾತಾಡಲು, ಚರ್ಚೆ ಮಾಡಲು ಸಾಕಷ್ಟು ವಿಷಯವಂತೂ ಇರುತ್ತದೆ . ಜೊತೆಗೆ ಒಂದು ಹೊಸ ಪ್ರಪಂಚವೂ ತೆರೆದುಕೊಂಡಿರುತ್ತದೆ .
ಓದಿ ಮೆಚ್ಚಿದ್ದು:
ನಾನು ಕವನ ಬರೆದಿದ್ದು ತೀರಾ ಕಡಿಮೆ. ಆದರೆ ಓದಿ ಖುಷಿ ಪಡುತ್ತೇನೆ. ಗೆಳೆಯ ಚಂದ್ರ ಆಗಾಗ ಒಳ್ಳೆಯ ಕವನಗಳನ್ನು ಬರೆಯುತ್ತಿದ್ದ.ಅದು ಬಿಟ್ಟರೆ ಪತ್ರಿಕೆಯಲ್ಲಿ ಬರುವ ಕವನಗಳನ್ನು ಓದಿಯೇ ಓದುತ್ತೇನೆ .
ತೆರೆದ ಮನ ಬ್ಲಾಗಿನಲ್ಲಿರುವ ಒಂದೆರೆಡು ಕವನಗಳು ನನಗಂತೂ ತುಂಬಾ ಹಿಡಿಸಿತು. ಹಾಗೆ ಬೀಟಾ ಮಹಿಳೆ ಎನ್ನುವ ಲೇಖನವೂ.ಅಲ್ಲಿನ
ಹಿತ ವಚನಗಳು ಚೆನ್ನಾಗಿದೆ ಅಷ್ಟೇ ಅಲ್ಲ, ಅರ್ಥ ಗರ್ಭಿತವಾಗಿಯೂ ಇದೆ. ಒಮ್ಮೆ ನೀವು ಓದಿ.
No comments:
Post a Comment