Friday, December 14, 2012

ಮಾಂಜ್ಹಾ-ಕಿರುಚಿತ್ರ.

ಈ ಕಿರುಚಿತ್ರ ಭಾರತದಲ್ಲಿ ನಿಷೇಧಕ್ಕೊಳಗಾಗಿದೆ.
ಅದರ ಅರ್ಥ ಈ ಚಿತ್ರದಲ್ಲಿ ಏನೋ ಕಠೋರವಾದ ಸತ್ಯವಿರಬೇಕು. ಅಥವಾ ಸಮಾಜದ ಕರಾಳ ಮುಖವನ್ನೂ ಹಸಿಹಸಿಯಾಗಿಯೇ ತೋರಿಸಿರಬಹುದು.ಯಾವ ಬೆದರಿಕೆಗೆ, ಆಮಿಷಕ್ಕೆ ಒಳಗಾಗದೆ ನಿರ್ದೇಶಕ ತನಗನಿಸಿದ್ದನ್ನು ಚಿತ್ರೀಕರಿಸಿರಬೇಕು.
ಹೌದು ಇದೆಲ್ಲವೂ ಈ ಕಿರುಚಿತ್ರದ ಮಟ್ಟಿಗೆ ಸತ್ಯ.
ಈ ಕಿರುಚಿತ್ರವನ್ನು ನೋಡಿದ ಸ್ಲಂ ಡಾಗ್ ಖ್ಯಾತಿಯ ನಿರ್ದೇಶಕ ಡ್ಯಾನಿ ಬೊಯ್ಲ್ ಮೆಚ್ಚಿದ್ದಲ್ಲದೆ ತಮ್ಮ ಚಿತ್ರ ಸ್ಲಂ ಡಾಗ್ ಮಿಲ್ಲೆನಿಯರ್ ನ ಬ್ಲೂ ರೇ ಡಿವಿಡಿಯಲ್ಲಿ ಹೆಚ್ಚುವರಿ ಅಡಕವಾಗಿ ಈ ಕಿರುಚಿತ್ರವನ್ನು ಸೇರಿಸಿದ್ದರು.
ದರರ್ಥ ಈ ಕಿರು ಚಿತ್ರ ಅತ್ಯುತ್ತಮವಾಗಿದೆ ಎಂಬರ್ಥವಿರಬೇಕು.
ಹೌದು. ಮಾ೦ಜ್ಹಾ ಮರಾಠಿ ಭಾಷೆಯಲ್ಲಿರುವ ಕಿರುಚಿತ್ರ. ಕಪ್ಪುಬಿಳುಪು ವರ್ಣದ ಈ ಚಿತ್ರದ ಕಥೆ, ನಿರೂಪಣೆ ಪ್ರೇಕ್ಷಕರನ್ನು ಕೆಲಕಾಲ ದಿಗ್ಭ್ರಾಂತರನ್ನಾಗಿಸದಿರದು. ಮುಂಬೈನಗರದ ಸ್ಲಮ್ಮಿನ ಇನ್ನೊಂದು ಕರಾಳ ಮುಖವನ್ನೂ ತೆರೆದಿಡುವ ಈ ಚಿತ್ರದ ನಿರ್ದೇಶಕ ರಾಹಿ ಅನಿಲ್ ಬರವೆ.
ಮುಂಬೈ ಮಹಾನಗರಿ ರಂಕಾನ ತಾಯಿಯನ್ನು ವೇಶ್ಯಯನ್ನಾಗಿ ಮಾಡಿರುತ್ತದೆ. ತಂದೆಯನ್ನು ಕಿತ್ತುಕೊಂಡಿರುತ್ತದೆ . ಹಾಗಾಗಿ ರಂಕಾನಿಗಿರುವವಳು ಚಿಕ್ಕ ತಂಗಿ ಮಾತ್ರ. ಗಾಳಿಪಟದ ದಾರವನ್ನು ತಯಾರಿಸುವೆಡೆ  ಕೆಲಸ ಮಾಡುವ ರಂಕಾನಿಗೆ ಒಬ್ಬ ಮತಿಗೆಟ್ಟ ಪೋಲೀಸ್ ಅಧಿಕಾರಿ ಪರಿಚಯವಾಗುತ್ತಾನೆ . ಬಾಲ್ಯದಲ್ಲಿ ತಂದೆಯಿಂದಲೇ ನಿರಂತರ ಅತ್ಯಾಚಾರಕ್ಕೊಳಗಾಗಿದ್ದ ಆತ ರಂಕಾಳ  ಪುಟ್ಟ ತಂಗಿಯನ್ನು ಲೈಂಗಿಕವಾಗಿ ಆಘಾತಗೊಳಿಸುತ್ತಾನೆ ಮುಂದೆ ರಂಕಾ ಹೇಗೆ ಆ ಪೈಶಾಚಿಕ ಮನೋಭಾವದ ಪೋಲೀಸ್ ಮೇಲೆ ಸೇಡು ತೀರಿಸಿಕೊಳ್ಳುತ್ತಾನೆ ಎಂಬುದೇ ಕಥೆ.
ಚಿತ್ರದ ಹಿನ್ನೆಲೆ ಸಂಗೀತ, ನೇರವಂತಿಕೆಯ ಸಂಭಾಷಣೆ ನಮ್ಮನ್ನು ಕಾಡದಿರದು .41 ನಿಮಿಷಗಳಷ್ಟು ಉದ್ದವಿರುವ ಈ ಕಿರುಚಿತ್ರವನ್ನೊಮ್ಮೆ ಅವಶ್ಯ ನೋಡಿ.
ಓದಿ  ಮೆಚ್ಚಿದ್ದು: ಪ್ರಮೋದ ರ ಬ್ಲಾಗ್ CIPHERS SPACE ನಲ್ಲಿನ  ಮೂರ್ಖರ , ಮೂರ್ಖರಿಂದ ಮೂರ್ಖರಿಗಾಗಿ ಈವತ್ತಿನ ಮಾಧ್ಯಮಗಳ ಟಿ .ಆರ್.ಪಿ. ಸರ್ಕಸ್ಸಿನ ಬಗ್ಗೆ ವ್ಯಂಗ್ಯವಾಗಿ ತಿಳಿಸುವ ಅರ್ಥ ಗರ್ಭಿತ ಲೇಖನ. ಓದು ಓದುತ್ತಾ ಹೌದಲ್ಲ ಎನಿಸುವ ಲೇಖನ ಸಕತ್ತು ಮಜಾ ಕೊಡುತ್ತದೆ. ನೀವು ಓದಿ.

5 comments:

 1. Vety interesting....

  ReplyDelete
 2. ಅನುರಾಗ್ ಕಶ್ಯಪ್ ರೆಕಮ೦ಡೇಷನ್ ಅ೦ದ್ರೆ ಮಾಂಜ್ಹಾ ಚಿತ್ರ ಚೆನ್ನಾಗಿರಬೇಕು. :) ನನ್ನ ಬ್ಲಾಗಿನ ಕೊ೦ಡಿ ಹಾಕಿ ಮಾರ್ಕೆಟಿ೦ಗ್ ಮಾಡಿದ್ದಕ್ಕೆ ತು೦ಬಾ ಧನ್ಯವಾದಗಳು ಸರ್ :)

  ReplyDelete
 3. ಕಿರು ಚಿತ್ರ ನೋಡ್ಬೇಕು ನಿಮ್ಮ ಬರಹ ಮತ್ತು ಪರಿಚಯಿಸಿದ ಬ್ಲಾಗು ಚೆನ್ನಾಗಿದೆ

  ReplyDelete
 4. ತುಂಬಾ ಅಧ್ಭುತವಾಗಿದೆ ಚಿತ್ರ ,,, ಸಮಾಜದ ಕಠೊರ ಸತ್ಯ !! ನಿಮ್ಮ ಬರಹ ಓದಿದ ಮೇಲೇನೆ ನೋಡಿದ್ದು ! ತುಂಬಾ ಧನ್ಯವಾದಗಳು ...

  ReplyDelete