Sunday, November 4, 2012

ಕನ್ನಡದ ಕ್ರಾಂತಿಕಾರಿ ರಾಯಣ್ಣ ಮತ್ತು ಇಂಗ್ಲಿಷಿನ 007

ಈ ವಾರ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ  ಬಿಡುಗಡೆಯಾಗಿದೆ. ಚಿತ್ರದ ಬಜೆಟ್ ವಿಷಯದಲ್ಲಾಗಲಿ  ಬಿಡುಗಡೆಯಾದ ಚಿತ್ರ ಮಂದಿರಗಳ
ವಿಷಯದಲ್ಲಾಗಲಿ ಕನ್ನಡಕ್ಕೊಂದು ದಾಖಲೆ ಬರೆದ ಚಿತ್ರ ಎಂದೇ  ಹೇಳಬಹುದು. ಕನ್ನಡದ  ಸೂಪರ್ ಸ್ಟಾರ್ ದರ್ಶನ್   ಚಿತ್ರ ಕನ್ನಡ  ಚಿತ್ರರಂಗದಲ್ಲೇ ಅತ್ಯಂತ ವೆಚ್ಚದ ಚಿತ್ರ ಎನ್ನುವುದು ನಿಜ . ಕನ್ನಡದ ಮಟ್ಟಿಗೆ ಒಂದು ಐತಿಹಾಸಿಕ ಸಿನೆಮಾಕ್ಕೆ ಇಷ್ಟು ಖರ್ಚು ಮಾಡಿರುವುದು ಕನ್ನಡಿಗರಾದ ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯೇ. ತಮಿಳು ತೆಲುಗಲ್ಲಿ ಬಹುವೆಚ್ಚದ ಸಿನೆಮಾಗಳು ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಮೊನ್ನೆ ಮೊನ್ನೆ ಮಲಯಾಳಂ ಭಾಷೆಯಲ್ಲೂ ' ಪಳಸಿ ರಾಜ' ಎನ್ನುವ ಅದ್ದೂರಿ ವೆಚ್ಚದ ಸಿನೆಮಾ ಬಂದಿತ್ತು . ನಮ್ಮ ಕನ್ನಡದಲ್ಲಿ ಆ ಮಟ್ಟಿಗೆ ಅಂದರೆ ಹಣಕಾಸು ವೆಚ್ಚ ಮಾಡಿ ಸಿನಿಮಾ ಮಾಡುವುದು ಸಾಧ್ಯವಾದೀತಾ..? ಎನ್ನುವ ಪ್ರಶ್ನೆಗೆ ಉತ್ತರವಾಗಿ ಸಂಗೊಳ್ಳಿ ರಾಯಣ್ಣ ಬಂದಿದೆ .
 ಇದೊಂದು ಸಿನಿಮಾವನ್ನು ನಾವು ನೋಡಲೇ ಬೇಕು. ಮತ್ತು ಮೂವತ್ತು ಕೋಟಿ ವೆಚ್ಚದ ಸಿನೆಮಾವನ್ನು ನಾವು ಉಳಿಸಿಕೊಳ್ಳಲೇಬೇಕು. ಯಾಕೆಂದರೆ ಈ ಸಿನೆಮಾ  ನಿಂತರೆ ಕನ್ನಡ ಚಿತ್ರರಂಗದ ಮಾರುಕಟ್ಟೆ  ವಿಸ್ತಾರವಾಗುವುದರಲ್ಲಿ ಸಂದೇಶವಿಲ್ಲ . ನಿರ್ಮಾಪಕರಲ್ಲಿ ಕೋಟಿ  ಕೋಟಿ  ಬಂಡವಾಳ ಹೂಡಿದರೂ ನಾವು ಗೆಲ್ಲಬಹುದು ಎಂಬ ಧೈರ್ಯ ಬರುತ್ತದೆ. ಕನ್ನಡದಲ್ಲಿ ಕೋಟಿ ಕೋಟಿ ಬಾಚಿದ ಸಿನೆಮಾಗಳಿವೆ. ಆದರೆ ಅವ್ಯಾವುವು ನಿರೀಕ್ಷಿತವಲ್ಲ . ಗಂಡುಗಲಿ ರಾಮನ ಸೋಲಿನಿಂದಾಗಿ ಕನ್ನಡ ಚಿತ್ರರಂಗ ಒಬ್ಬ ನಿರ್ಮಾಪಕನನ್ನು ದೂರಮಾಡಿಕೊಳ್ಳುವಂತಾಗಿದ್ದು ಎಲ್ಲರಿಗೂ ಗೊತ್ತಿದೆ . ಹಾಗಾಗಿ ಸಂಗೊಳ್ಳಿ ರಾಯಣ್ಣ ನ  ಯಶಸ್ಸು ಕನ್ನಡಿಗರ ಮಟ್ಟಿಗೆ, ಚಿತ್ರರಂಗದ ಮಟ್ಟಿಗೆ  ಅತ್ಯವಶ್ಯವಾಗಿದೆ.
   
ನಿರ್ದೇಶಕ ಸ್ಯಾಮ್ ಮೆಂಡೆಸ್ ಬಾಂಡ್ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆಂಬ ಸುದ್ಧಿ ಬಂದಾಗಲೇ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿತ್ತು . ಕಾರಣ ಸ್ಯಾಮ್ ಮೆಂಡೆಸ್ ಹೊಡೆದಾಟದ ಚಿತ್ರಗಳಿಗಿಂತ ಭಾವಾಭಿನಯದ, ಅತ್ಯುತ್ತಮ ಸೂಕ್ಷ್ಮ ಸಂವೇದಿ  ಕಥೆಯ ಸಿನಿಮಾಗಳಿಗೆ ಹೆಸರುವಾಸಿ. ಆತನ ಅಮೆರಿಕನ್ ಬ್ಯೂಟಿ , ರೋಡ್ ಟು ಪರ್ಡಿಶನ್  ಮತ್ತು ರೆವಲ್ಯೂಷನರಿ ರೋಡ್    ಇದಕ್ಕೆ ಸಾಕ್ಷಿ . ಈಗ ಸ್ಕ್ಯಫಾಲ್  ಬಂದಿದೆ. ಚಿತ್ರದ ವಿಶೇಷವೆಂದರೆ ಇಲ್ಲಿನ ಬಾಂಡ್ ಬೇರೆ ಬಾಂಡ್ ಚಿತ್ರಗಳಂತೆ ದೇಶ ದೇಶ ಸುತ್ತುವುದಿಲ್ಲ . ತೀರಾ  ತಂತ್ರಜ್ಞಾನದ  ಹಿಂದೆ ಬೀಳುವುದಿಲ್ಲ . ಈತ ಹೊಡೆದಾಟಕ್ಕೂ ಸೈ , ಶೂಟ್ ಮಾಡಲು ಸೈ ...ಚಿತ್ರದ ಪ್ರಾರಂಭದಲ್ಲಿ ಬರುವ ಚೇಸ್ ದೃಶ್ಯ ಮೈನವಿರೇಳಿಸುತ್ತದೆ . ಕಥೆ ಹೇಳುವ ಅವಶ್ಯಕತೆ ಇಲ್ಲ . ಒಂದಷ್ಟು ಜನ ಸಮಾಜ ಕಂಟಕರಿದ್ದಾರೆ. ಬಾಂಡ್ ಗೆ ಕೈ ತುಂಬಾ ಕೆಲಸವಿದೆ. ಸಹಾಯಕ್ಕೆ ಬಾಂಡ್ ಹುಡುಗಿಯಿದ್ದಾಳೆ .ನೋಡಲು ನಾವು ನೀವು ಇದ್ದೇವೆ ...


3 comments:

  1. ವರ್ಷದಲ್ಲಿ ಸಂಗೊಳ್ಳಿ ರಾಯಣ್ಣ ದಂತಹ ಕನಿಷ್ಠ ನಾಲ್ಕು ಚಿತ್ರಗಳು ಬಂದರೆ, ಕರ್ನಾಟಕದಲ್ಲಿ ತೆಲುಗು, ತಮಿಳು ಚಿತ್ರಗಳು ಹೇಳ ಹೆಸರಿಲ್ಲದಂತಾಗುವುದು ಖಂಡಿತ,

    ಚೆನ್ನಾಗಿದೆ.

    ಶುಭವಾಗಲಿ

    ReplyDelete
  2. ಇವಾಗ ಅದ್ರು ಕನ್ನಡ ಸಿನಿಮಾದವರು ಬುದ್ದಿ ಕಲಿತುಕೊಳ್ತಾರ ,ಕಥೆ ನೆ ಸಿಗೋಲ್ಲ ಕನ್ನದಲ್ಲಿ ಅಂತಾರೆ
    ಅವರೆಲ್ಲ ಒಮ್ಮೆ ಐತ್ಹಿಹಸಿಕ ಘಟನೆಗಳ ಬಗ್ಗೆ ಗಮನ ಕೊಡಲಿ .
    ಕನ್ನಡ ಹೊಯ್ಸಳ ವಿಷ್ಣುವರ್ಧನ ,ಇಮ್ಮಡಿ ಪುಲಕೇಶಿ, ಮುಂತಾದ ಕನ್ನಡ ರಾಜರ
    ಶೌರ್ಯ ಸಾಹಸ ,ಗಳ ಬಗ್ಗೆ ಸಿನಿಮಾ ಮಂಧಿ ಗಮನ ಹರಿಸಬೇಕು .....

    ReplyDelete