Monday, September 17, 2012

ವಿ'ಚಿತ್ರ'ಗಳು-4

ನಿಮಗೆ ಟುಲ್ಪಾ  ಅಥವಾ thought form ಗೊತ್ತಿರಬಹುದು.ಟಿಬೆಟಿನ ಬೌದ್ಧಧರ್ಮದಲ್ಲಿನ ಉಪಾಯಗಳಲ್ಲೊಂದು.ಮಾನಸಿಕ ಸೃಷ್ಟಿಯನ್ನು ಮೂರ್ತ ರೂಪಕ್ಕೆ ತರುವ ಮಾರ್ಗವೇ ಟುಲ್ಪಾ .ಅಂದರೆ ಮನಸ್ಸಿನಲ್ಲಿನ ಕೋಪ, ತಾಪ, ದುಖ ಸುಖ, ಹಾಗೆ ನಮ್ಮಲ್ಲುಂಟಾಗುವ ಆಲೋಚನೆಗಳನ್ನ ಭೌತಿಕವಾಗಿ ಸಾಕಾರಗೊಳಿಸುವ ಏಕೈಕ ಮಾರ್ಗ.ಮನಸ್ಸಿನಲ್ಲಿ ಏನೇನೋ ಚಿತ್ರಗಳು ಕಲ್ಪಿತವಾಗುತ್ತವೆ. ಅದಕ್ಕೆ ಒಂದು ರೀತಿಯಲ್ಲಿ ಮನಸ್ಸೇ ಸ್ಪಷ್ಟ ರೂಪ ಕೊಟ್ಟುಬಿಡುತ್ತಾದರೂ ಭೌತಿಕವಾಗಿ ಅದನ್ನು ತೋರಿಸಲು ಸಾಧ್ಯವೇ..? ಎಂಬ ಪ್ರಶ್ನೆಗೆ 'ಟುಲ್ಪಾ'ದಲ್ಲಿ 'ಹೌದು' ಎನ್ನುವ ಅಚ್ಚರಿಯ ಉತ್ತರವಿದೆ.
2004 ರಲ್ಲಿ ಬಿಡುಗಡೆಯಾದ ಜರ್ಮನ್ ಭಾಷೆಯ ಚಲನಚಿತ್ರದ ಹೆಸರು 'ಟೀರ್ಸ್  ಆಫ್ ಕಾಳಿ '. ನಮ್ಮ ಪಾರ್ವತಿಯ ಅವತಾರವಾದ ಕಾಳಿ, ದೇವಿ, ಶಕ್ತಿ ಈ ಮೂರು ಅವತಾರಗಳನ್ನಾಧರಿಸಿದ ವಿಚಿತ್ರ ಕಥೆಯನ್ನು ಈ ಚಿತ್ರ ತೆರೆದಿಡುತ್ತದೆ. 1983ರಲ್ಲಿ ಪೂನಾದಲ್ಲಿ ನಡೆಯಿತೆನ್ನಲಾದ ವಿಚಿತ್ರ ಪ್ರಯೋಗಗಳ ಆಧರಿಸಿದ ಈ ಚಿತ್ರ ಕಥೆ ವಿಭಿನ್ನ ಮತ್ತು ವಿಶೇಷವಾದದ್ದು ಎಂದೇ ಹೇಳಬಹುದು. ಸಿನಿಮಾವನ್ನು ಮೂರು ವಿಭಾಗಗಳಾಗಿ ವಿಂಗಡಿಸಿದ್ದಾರೆ ನಿರ್ದೇಶಕರು. ಮೊದಲನೆಯದು ಶಕ್ತಿ.ಟುಲ್ಪಾ ದ ಪ್ರಸ್ತಾಪ ಬರುವುದು ಈ ಕಥೆಯಲ್ಲೇ. ಒಂದು ಕೊಲೆ ಬರ್ಬರವಾಗಿ ನಡೆಯುತ್ತದೆ. ಅದನ್ನು ಮಾಡಿದ ಕೊಲೆಗಾರ್ತಿ ಕೂಡ ಸಿಕ್ಕಿಕೊಂಡರೂ ಆಕೆ ತಾನೇ ಕೊಲೆ ಮಾಡಿದ್ದೆಂದು ಒಪ್ಪಿಕೊಂಡರೂ ಅನುಮಾನಗಳು ಕಾಡದೆ ಬಿಡುವುದಿಲ್ಲ ಯಾಕೆಂದರೆ ಕೊಲೆಯಾದ ಸಮಯದಲ್ಲಿ ಆಕೆ ಅಲ್ಲಿರುವುದೇ ಇಲ್ಲ ..ಅಂದರೆ ಆಕೆ ಶಕ್ತಿಗೆ ರೂಪ ಕೊಟ್ಟಳಾ ...ತನ್ನ ದ್ವೇಷಕ್ಕೆ ಮೂರ್ತ ರೂಪ ಕೊಟ್ಟು ಕೊಲೆ ಮಾಡಲು ಕಳುಹಿಸಿದ್ದಳಾ ...?ಮುಂದಿನ ಕಥೆಯನ್ನು ಸಿನಿಮಾ ನೋಡಿ ಅನುಭವಿಸುವುದೇ ಚಂದ.
ಅಂದಹಾಗೆ ಇದೊಂದು ಹಾರರ್ ಚಿತ್ರ. ದೆವ್ವ ಭೂತಗಳಿಗಿಂತ ಮಾನವನ ಆಂತರಿಕ ಶಕ್ತಿ, ಅಥವಾ ಭಾವನೆ ಅದೆಷ್ಟು ಕ್ರೂರ, ಭಯಾನಕವೆನ್ನುವುದನ್ನು ತೋರಿಸಿಕೊಡುವ ಚಿತ್ರ. ಭಯಾನಕ ಚಿತ್ರಕ್ಕೆ ಬೇಕಾದ ರೀತಿಯ ಛಾಯಾಗ್ರಹಣ ಮತ್ತು ಅದ್ಭುತ ಹಿನ್ನೆಲೆ ಸಂಗೀತ ಈ ಚಿತ್ರದ ಆಸ್ತಿ.
ಆಂಡ್ರಿಯಾಸ್  ಮಾರ್ಷಲ್ ನಿರ್ದೇಶನದ ಈ ಚಿತ್ರ  ಒಂದು ಘಂಟೆ ನಲವತ್ತಾರು ನಿಮಿಷಗಳಷ್ಟು ಉದ್ದವಿದೆ.
ಹಾರರ್ ಪ್ರಿಯರಿಗೆ ಈ ಚಿತ್ರ ಹೇಳಿಮಾಡಿಸಿದ ಚಿತ್ರವಾದರೂ ಚಿತ್ರದಲ್ಲಿ ಬರುವ ಕೆಲದೃಶ್ಯಗಳ ಬರ್ಬರತೆ ಸಹನೀಯವಾಗಿಲ್ಲ.ಕಣ್ಣ ರೆಪ್ಪೆಯನ್ನು ಕತ್ತರಿಯಿಂದ ಕತ್ತರಿಸಿಕೊಳ್ಳುವ, ಇಡೀ ಮೈ ಚರ್ಮವನ್ನು ಬ್ಲೇಡಿನ ಸಹಾಯದಿಂದ ಕುಯ್ದು, ಸುಲಿದುಕೊಳ್ಳುವಂತಹ ಚಿತ್ರಣ ಕಣ್ಣು ಮುಚ್ಚುವಂತೆ ಮಾಡುತ್ತದೆ. ಹಾಗೆ ನಮ್ಮಲ್ಲಿರುವ ವಾಮಾಚಾರದ ವಿದ್ಯೆಗಳನ್ನು, ಮಾಟ  ಮಂತ್ರಗಳನ್ನೂ ಹೊರೆತುಪಡಿಸಿ ಭಾರತದ್ದೆ ಆದ ವಿಭಿನ್ನವಾದ ಭಯಾನಕ ತಾಂತ್ರಿಕ ಪ್ರಯೋಗ ಹುಡುಕಿ ಅದರ ಮೇಲೆ ಕಥೆ ಮಾಡಿ ಜರ್ಮನಿ ಭಾಷೆಯಲ್ಲಿ ಸಿನಿಮಾಮಾಡಿರುವುದು ಅಚ್ಚರಿ ತರಿಸುತ್ತದೆ.


8 comments:

 1. ಪೋಸ್ಟರ್ ನೋಡಿ ಅಸಹ್ಯ ಅನಿಸಿತು. ನಿಮ್ಮ ನಿರೂಪಣೆ ಓದಿ ನನಗೆ ಇದನ್ನು ನೋಡುವಷ್ಟು ಮೀಟರಿಲ್ಲ ಅನಿಸುತ್ತದೆ :)

  ReplyDelete
  Replies
  1. ನೀವು ಹಿಲ್ಲ್ಸ್ ಹ್ಯಾವ್ ಆಯಸ್, ಹಾಸ್ಟಲ್ಸ್, ಪಥಾಳಜಿ ಮುಂತಾದ ಸಿನೆಮಾ ನೋಡಿದ್ದರೆ ಈ ಸಿನೆಮಾ ಆರಾಮವಾಗಿ ನೋಡಬಹುದು. ಬರೀ ಒಂದೆರೆಡು ದೃಶ್ಯ ಬಿಟ್ಟರೆ ಉಳಿದಂತೆ ಸಹನೀಯವಾಗೆ ಇದೆ. ಇರುವೆರೆಡು ದೃಶ್ಯವೂ ಕಾನ್ಸೆಪಟಿನಿಂದ ಮಾತ್ರ ಬರ್ಬರ ಎನಿಸಿಕೊಳ್ಳುತ್ತದೆ ಹೊರೆತು ಚಿತ್ರೀಕರಣದಿಂದಲ್ಲ...

   Delete
  2. ನೀವು ಹೇಳಿದ ಚಿತ್ರಗಳನ್ನು ನೋಡಿಲ್ಲ. ಕೇಳಿದ್ದೇನೆ. ಅಷ್ಟೊ೦ದು ಹೊರರ್ ಫ್ಯಾನ್ ಅಲ್ಲ. ಸಮಯ ಸಿಕ್ಕಾಗ ನೋಡೊಣ :)

   Delete
 2. I like to watch comedy movies,, horror andre tumbane bhaya aagatte, naanu nododillappa, if I see I wont be able to sit in office ;)

  ReplyDelete
  Replies
  1. nangu horror ashtondu ishta agalla....kelavu ok. shyaamalan du ishta padteeni.
   haage comedy ishta agutte. neevu korean comedy nodi.ishta agutte.

   Delete
 3. Hi Ravi,, Gouri Ganesha habbada hardika shubhashayagalu

  ReplyDelete
  Replies
  1. nimagu, nimma ,maneyavarigoo gowri ganesha habbada shubhaashayagalu.........

   Delete