Saturday, May 12, 2012

ಒ೦ದು ಜಿಜ್ಞಾಸೆ...

ಒಂದಷ್ಟು ನೋಡಲೇ ಬೇಕಾದ ಸಿನೆಮಾಗಳ ಪಟ್ಟಿ ತಯಾರಿಸುವಾಗ ಯಾವ ಗುಣಾತ್ಮಕ ಅಂಶಗಳನ್ನಾಧರಿಸಿ ಅವುಗಳನ್ನ ವಿಂಗಡಿಸಬೇಕು ಎನ್ನುವ ಜಿಜ್ಞಾಸೆಗೆ ಬೀಳುವುದು ಸಹಜ. ಎಷ್ಟೋ ವಿಮರ್ಶೆಗಳಲ್ಲಿ ನಂಬರ್ ಒನ್ ಎನಿಸಿಕೊಂಡ ಹಲವಾರು ಅವಾರ್ಡ್ ತೆಗೆದುಕೊಂಡ ಚಿತ್ರಗಳು ನೋಡಲು ಕುಳಿತ ಐದೇ ನಿಮಿಷದಲ್ಲಿ ಬೇಸರ ತರಿಸಿಬಿಡಬಹುದು. ಉದಾಹರಣೆಗೆ ನಿಮಗೆ ಗುಸ್ ವ್ಯಾನ್ ಸ್ಯಾ೦ಟ್ ಎಂಬ ನಿರ್ದೇಶಕ ಗೊತ್ತಿರಬಹುದು.ಎರಡು ಬಾರಿ ಪ್ರಖ್ಯಾತ ಆಸ್ಕರ್ ಪ್ರಶಸ್ತಿಗೆ ನಾಮಾ೦ಕಿತನಾಗಿದ್ದ ಪ್ರತಿಭಾವಂತ ನಿರ್ದೇಶಕ. ವಿಲಿಯಂ ಶೇಕ್ಸ್ ಫಿಯರ ನಾಟಕ ಆಧಾರಿತ ಮೈ ಪ್ರೈವೇಟ್ ಇಡಾಹೋ ಇರಬಹುದು, ಮ್ಯಾಟ್ ದಾಮನ್ ಅಭಿನಯದ ಗುಡ್ ವಿಲ್ ಹ೦ಟಿ೦ಗ್ ಇರಬಹುದು ಅಥವಾ ಮೊನ್ನೆ ಮೊನ್ನೆ ಉತ್ತಮ ನಟ ಪ್ರಶಸ್ತಿ ಪಡೆದ ಮಿಲ್ಕ್ ಚಿತ್ರ  ಇರಬಹುದು. ಆತನ ಸಿನೆಮಾಗಳಲ್ಲಿನ ದೃಶ್ಯ ಮತ್ತು ಆತ ಚಿತ್ರೀಕರಿಸುವ ರೀತಿಯೇ ಚೆನ್ನ. ಆದರೆ ಇದೆ ನಿರ್ದೇಶಕನ ಎಲಿಫ೦ಟ್ ಎನ್ನುವ ಸಿನೆಮಾ ಒ೦ದಿದೆ.ಸುಮಾರು ಒ೦ದೂವರೆ ಗ೦ಟೆಗಳ ಈ ಚಿತ್ರದಲ್ಲಿ ಕಥೆಯಿರುವುದು ಅಥವಾ ಇರುವ ಕಥೆಗೆ ಚಿತ್ರದ ಅವಧಿ ಬೇಕಾದದ್ದು ಹತ್ತು ನಿಮಿಷಗಳಿರಬಹುದು. ಒಬ್ಬ ವ್ಯಕ್ತಿ ರಸ್ತೆಯ ಆ ಕೊನೆಯಿ೦ದ ಈ ಕೊನೆಗೆ  ಬ೦ದ ಎಂಬುದನ್ನು ದೃಶ್ಯ ಮಾಧ್ಯಮದಲ್ಲಿ ಸೂಚ್ಯ ಚಿತ್ರಿಕೆಯೊ೦ದಿಗೆ ನಿರೂಪಿಸಿಬಿಡುತ್ತೇವೆ. ಆದರೆ ಈ ಚಿತ್ರದಲ್ಲಿ ಯಾವ ಬೇರೆಯ ಉದ್ದೇಶವಿಲ್ಲದೆ  ಪಾತ್ರಧಾರಿ ಸುಮ್ಮನೆ ಆ ತುದಿಯಿ೦ದ ಈ ತುದಿಗೆ ನಡಿದುಕೊ೦ಡಿ ಬರುತ್ತಾನೆ..ಈ ಸಿನೆಮಾವು ಕೂಡ ಸಾಕಷ್ಟು ಹೆಸರು ಗಳಿಸಿದೆ. ವಿಮರ್ಶಕರು ಮೆಚ್ಚಿದ್ದಾರೆ..ಆದರೆ ನೋಡಲು ಕುಳಿತರೆ ಬೋರೋಬೋರು..ಹಾಗಾದರೆ ಯಾವ ಸಿನೆಮಾ ನೋಡಲೇಬೇಕಾದ ಸಿನೆಮಾ ಎನ್ನುವುದು ನನಗೆ ಪ್ರತಿಸಾರಿಯೂ ಯಕ್ಷ ಪ್ರಶ್ನೆಯಾಗಿ ಕಾಡುತ್ತದೆ. ನನ್ನ ಪ್ರಕಾರ ಯಾವ ಸಿನೆಮಾವು ತನ್ನ ಕಥೆಯ ಆಶಯವನ್ನ, ನಿರ್ದೇಶಕನ ಆಶಯವನ್ನಾ ನೇರವಾಗಿ ನೋಡುಗನಿಗೆ ತಲುಪಿಸುತ್ತದೆಯೋ ಅದು ಒಳ್ಳೆಯ ಸಿನೆಮಾ ಅನಿಸುತ್ತದೆ. ಅಲ್ಲಿ ನಾಯಕ-ನಾಯಕಿ ಗೋಳಾಡುತ್ತಿದ್ದಾರೆ ಚಿತ್ರಮ೦ದಿರದಲ್ಲಿ ಕುಳಿತಿರುವ ನೋಡುಗರು ಗೊಣಗುತ್ತಿದ್ದರೆ, ತಮಾಷೆ ಮಾಡುತ್ತಿದ್ದರೆ ನೀವೇ ಯೋಚಿಸಿ..ಆ ಸಿನೆಮಾವನ್ನು ಯಾವ ಪಟ್ಟಿಯಲ್ಲಿ ಸೇರಿಸಬಹುದು ಎ೦ದು?
ಅ೦ದ ಹಾಗೆ ಈ ಬ್ಲಾಗಲ್ಲಿ ಇಲ್ಲೀವರೆಗೆ ಪ್ರಕಟವಾದ ನೋಡಲೇಬೇಕಾದ ಚಿತ್ರಗಳ ಪಟ್ಟಿಯಲ್ಲಿ ಯಾವ ಯಾವ ಸಿನೆಮಾ ನೋಡಿದಿರಿ. ? ಯಾವುದೂ ಇಷ್ಟವಾಗಲಿಲ್ಲ..? ಯಾವುದು ಇಷ್ಟವಾಯಿತು..ಹ೦ಚಿಕೊ೦ಡರೆ ಒ೦ದು ಚರ್ಚೆ ಮಾಡಬಹುದು..ಎನ೦ತೀರಾ..?

3 comments:

  1. ಹಾಲಿವುಡ್ ನಲ್ಲಿ ಗುಸ್ ವ್ಯಾನ್ ಸ್ಯಾ೦ಟ್ ನ ಹೆಸರು ಆರ್ಟ್ ಹೌಸ್ ಜೊತೆಗೆ ಚೆನ್ನಾಗಿ ಬೆಸೆದು ಕೊ೦ಡಿದೆ. ಎಲ್ಲರೂ ಬರಿ ದುಡ್ಡಿಗಾಗಿ ಚಿತ್ರ ಮಾಡುತ್ತಿರುವಾಗ ಇವನು ಸ್ವಲ್ಪ ಡಿಫರೆ೦ಟ್ ಆಗಿ ಮಾಡುತ್ತಾನೆ.
    ಮಿಲ್ಕ್, ಎಲಿಫೆ೦ಟ್, ಜೆರಿ, ಮೈ ಪ್ರೈವೇಟ್ ಇಡಾಹೋ ಎಲ್ಲವೂ ನೋಡಬೇಕಿದೆ. ಗುಡ್ ವಿಲ್ ಹ೦ಟಿ೦ಗ್ ಮಾತ್ರ ನೋಡಿ ಆಗಿದೆ.
    ಆರ್ಟ್ ಹೌಸ್ ಚಿತ್ರಗಳು ಒಬ್ಬೊಬ್ಬರಿಗೆ ಒ೦ದೊ೦ದು ವಿಧದಲ್ಲಿ ಕಾಡಬಹುದು ಬೋರ್ ಮಾಡಬಹುದು.

    ReplyDelete
  2. ಹೌದು ಪ್ರಮೋದ್ ನೀವು ಹೇಳೋದು ಸರಿ..ಅಂದಹಾಗೆ ನಿಮ್ಮ ಬ್ಲಾಗ್ ನೋಡಿದೆ...ತುಂಬಾ informative ಆಗಿದೆ..ಖುಷಿಯಾಯ್ತು..

    ReplyDelete
    Replies
    1. ತು೦ಬಾ ಧನ್ಯವಾದಗಳು. ನನ್ನ೦ತೆಯೇ "ಜಾಸ್ತಿ" ಚಿತ್ರ ನೋಡುವ, ಅದರ ಬಗ್ಗೆ ಬರೆಯುವ ಹಾಗೂ ಸಿನಿಮಾ ವೃತ್ತಿಯಲ್ಲಿರುವ ನಿಮ್ಮ ಬ್ಲಾಗ್ ನೋಡಿ ಖುಷಿ ಆಗಿದೆ. :) All the best for directing Sir

      Delete