Thursday, May 31, 2012

ಆಸ್ಕರ್ ಕಣದ ಚಿತ್ರಗಳು-2

ಹ್ಯುಗೊ ಕೂಡ ಉತ್ತಮ ತಾಂತ್ರಿಕ ವಿಭಾಗಗಳಲ್ಲಿ ಐದು ಆಸ್ಕರ್ ಪ್ರಶಸ್ತಿಗಳನ್ನ ತನ್ನದಾಗಿಸಿಕೊಂಡ ಅತ್ಯುತ್ತಮ ಚಿತ್ರ. ಈ ಸಿನೆಮಾದ ಕಥೆ ಕಾಲ್ಪನಿಕವಾದುದಲ್ಲ. ನಿರ್ದೇಶಕ ಮೆಲಿಸ್ ನ ಜೀವನಚಿರಿತ್ರೆಯಾಧಾರಿತ ಚಿತ್ರ. ಸ್ವತ: ಮ್ಯಾಜಿಸಿಯನ್ ಆಗಿದ್ದ ಮೆಲಿಸ್ ಚಿತ್ರರ೦ಗದಲ್ಲಿ ಹಲವಾರು ಇಭಿನ್ನ ಪ್ರಯತ್ನಗಳನ್ನೂ ಮಾಡಿದ. ತಂತ್ರ ಜ್ಞಾನ ತೀರ ಹಿಂದುಳಿದಿದ್ದ ಕಾಲದಲ್ಲೇ ದೃಶ್ಯ ವೈಭವ ಅಥವಾ VISUAL EFFECTSಗೆ ತಲೆ ಕೆಡಿಸಿಕೊಂಡು ಹಲವಾರು ಭ್ರಾಮ್ಯ ಕಥಾನಕಗಳುಲ್ಲ ಸಿನೆಮಾಗಳನ್ನ ತಯಾರಿಸಿದ. ಅವನ TRIP TO THE MOON ಚಿತ್ರ  ಅದರಲ್ಲಿ ಅತುತ್ತಮ ಚಿತ್ರಗಳಲ್ಲಿ ಒ೦ದು. ಆನಂತರ ದಿನಗಳಲ್ಲಿ ಮಹಾಯುದ್ಧ , ಸರಕಾರಗಳ ಅರಾಜಕತೆ, ಅಸ್ಥಿರತೆಗಳು ಆತನ ಸಿನಿಮಾದಿಂದ ದೂರವಿರುವಂತೆ ಮಾಡಿದ್ದವು. ತನ್ನದೆಲ್ಲವನ್ನೂ ಮಾರಿ, ಉಳಿದದ್ದನ್ನು ಸುಟ್ಟಾ ಕಿ ರೈಲು ನಿಲ್ದಾಣವೊ೦ದರಲ್ಲಿ ಆಟಿಕೆಗಳನ್ನು ಮಾರುವ ಅ೦ಗಡಿಯಿಟ್ಟುಕೊ೦ಡು ಬದುಕಲು ತೊಡಗುತ್ತಾನೆ ಮೆಲಿಸ್. ಮತ್ತೆ ಅವನನ್ನು ಅವನ ಹಿಂದಿನ ರ೦ಗು ರ೦ಗಿನ  ಪ್ರಪ೦ಚಕ್ಕೆ ಕರೆದುಕೊಂಡು ಹೋಗುವವನೆ ಈ ಹ್ಯುಗೊ. ಸಿನಿಮಾ ಬರೆ ತಾಂತ್ರಿಕ ದೃಷ್ಟಿಯಿ೦ದಷ್ಟೇ ಅಲ್ಲ..ಅಭಿನಯ, ಚಿತ್ರಕಥೆಯ ವಿಭಾಗಗಲ್ಲೂ ಅಷ್ಟೇ ಅದ್ಧೂರಿಯಾಗಿದೆ.
ಆದರೆ ಅದೆಲ್ಲವನ್ನೂ ಮೀರಿ ನಮ್ಮನ್ನು ಮ೦ತ್ರ ಮುಗ್ಧರನ್ನಾಗಿ ಮಾಡುವುದು ಸಿನೆಮಾದಲ್ಲಿನ ವಿಷುಯಲ್ ಎಫೆಕ್ಟ್.ಚಿತ್ರದ ಮೊಟ್ಟ ಮೊದಲ ಶಾಟಿನಿ೦ದ  ಪ್ರಾರಂಭವಾಗುವ VFX ನಿಮ್ಮನ್ನು ಮ೦ತ್ರ ಮುಗ್ಧರನ್ನಾಗಿಸದಿದ್ದರೆ ಕೇಳಿ. ಅಂದ ಹಾಗೆ ಸುಮ್ಮನೆ ಮಾತನಾಡುವುದಕ್ಕಿಂತ ನೋಡೇ ಬಿಡಿ.ಈಗಾಗಲೇ ನೋಡಿದ್ದರೆ ಬನ್ನಿ...ಚರ್ಚಿಸೋಣ...ಆ ಚಿತ್ರದಲ್ಲಿ ನನಗೆ ಕಾಣದ, ನಿಮಗೆ ಕ೦ಡ ವಿಶೇಷತೆಗಳನ್ನ ಮಾತಾಡೋಣ...
ಅ೦ದಹಾಗೆ  ಮೆಲೀಸನ ಎ  ಟ್ರಿಪ್ ಟು ಮೂನ್  ಚಿತ್ರ ನೋಡಿದಾಗಲೂ ನಾನು ಅಚ್ಚರಿಗೊ೦ಡಿದ್ದೆ ..ಆ ಕಾಲದಲ್ಲೇ ಗ್ರಾಫಿಕ್ಸ್ ಬಳಕೆ ನನಗೆ ಆಶ್ಚರ್ಯ ತರಿಸಿತ್ತು.
ಹ್ಯುಗೊ  ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ  ದೊಡ್ಡ ಯಶಸ್ಸು ಕಂಡಿಲ್ಲವಾದರೂ ಅದರ ಕೆಲವೊ೦ದು ವಿಶೇಷಗಳು ನಿಮಗಾಗಿ.
** ಇಡೀ ಸಿನೆಮಾದ ದೃಶ್ಯ ವೈಭವದ ಗ್ರಾಫಿಕ್ಸ್ ಗಾಗಿ ವೆಚ್ಚವಾದ ಹಣ ಸುಮಾರು 800 ಮಿಲಿಯನ್ ಡಾಲರುಗಳು..
**ಸಿನೆಮಾದಲ್ಲಿನ ಗ್ರಾಫಿಕ್ಸ್ ನ ಸ೦ಸ್ಕರಣೆಗೆ ಬೇಕಾದ ಅವಧಿ ಸರಿ ಸುಮಾರು 171,015 ಘ೦ಟೆಗಳು.
**ಚೈನಾ , ಥಾಯ್ಲ್ಯಾಂಡ್, ಜರ್ಮನಿ, ಅಮೇರಿಕ, ಇಂಗ್ಲೆಂಡ್  ದೇಶಗಳ 400ಕ್ಕೊ ಹೆಚ್ಚು ತ೦ತ್ರಜ್ಞರು ಈ ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ.
**ಪ್ರತಿ ಸಾರಿಯ ಸ೦ಸ್ಕರಣ ಮಾಡಿದಾಗ ತಗಲುತ್ತಿದ್ದ ಬರೆ ವಿದ್ಯುಚ್ಛಕ್ತಿ  ವೆಚ್ಚಾ 35000 ಡಾಲರಿಗೂ ಹೆಚ್ಚು.
**ಇಲ್ಲಿನ ಗ್ರಾಫಿಕ್ಸ್ ನ ಒ೦ದು ದೃಶ್ಯವೇ ಆಗಲಿ ಅದನ್ನು ಒ೦ದೆ ಒ೦ದು ಕಂಪ್ಯೂಟರ್ ನಿ೦ದ ಮಾಡುವುದಾಗಿದ್ದರೆ ಅದರ ಅ೦ತಿಮ ರೂಪ ಪಡೆಯಲು 19.5 ವರ್ಷದ ಸಮಯ ಬೇಕಾಗುತ್ತಿತ್ತ೦ತೆ..
ಹುಗೋ ಚಿತ್ರದ ಟ್ರೈಲರ್
ಎ ಟ್ರಿಪ್ ಟು ದಿ ಮೂನ್ ಚಿತ್ರದ ಟ್ರೈಲರ್2 comments:

  1. ಇದರ ಬಗ್ಗೆ ನಾನೂ ಬರೆದಿದ್ದೆ. http://pramodc.wordpress.com/2012/04/13/%E0%B2%B8%E0%B2%BF%E0%B2%A8%E0%B2%BF%E0%B2%AE%E0%B2%BE-%E0%B2%AA%E0%B2%AF%E0%B2%A3/
    ಮೈಲೀಸ್ ಚಿತ್ರಗಳನ್ನು ನೋಡಿದರೆ ಹ್ಯೂಗೋ ಇನ್ನೂ ತು೦ಬಾ ಇಷ್ಟವಾಗುತ್ತದೆ

    ReplyDelete
  2. ನಾನು ಓದಿದ್ದೆ ನಿಮ್ಮ ಲೇಖನ. ತು೦ಬಾ ಚೆನ್ನಾಗಿತ್ತು..ನನಗೂ ಹಾಗೆ ಅನ್ಸುತ್ತೆ. ಆ ಸಮಯದಲ್ಲಿ ಮೈಲಿಸ್ ಏನೆಲ್ಲಾ ಪ್ರಯತ್ನ ಪಟ್ಟೆನಲ್ಲವಾ..?

    ReplyDelete