Tuesday, April 17, 2012

ಕನಸಿನ ಬೆನ್ನು ಬಿದ್ದು..


ನಾನಾಗ್ಗ ದ್ವಿತೀಯ ಪಿ.ಯು.ಸಿ.ಯಲ್ಲಿದ್ದೆ. ಅದೊಮ್ಮೆ ನಮ್ಮ ಮಾವನ ಮನೆಗೆ ಹೋಗಿದ್ದು ಬಸ್ಸಿನಲ್ಲಿ ಬರುತ್ತಿರುವಾಗ ನಾನು ಸಿನಿಮಾ ನಿರ್ದೇಶಕನಾದರೆ ಹೇಗೆ ಎಂಬ ಆಲೋಚನೆ ಬಂದಿತ್ತು. ಯಾವ ಯಾವ ಸಿನಿಮಾ ಮಾಡಬೇಕು ಹೇಗೆಲ್ಲ ಸಿನಿಮಾ ಇರಬೇಕು ಎಂದೆಲ್ಲ ಯೋಚಿಸುತ್ತ ಯೋಚಿಸುತ್ತ ಬಂದೆ. ನಮ್ಮೂರು ತಲುಪುವಷ್ಟರಲ್ಲಿ ನನ್ನ ನಿರ್ಧಾರ ಅಚಲ ವಾಗಿತ್ತು. 'ಎಸ್ ನಾನು ನಿರ್ದೇಶಕ ಆಗಲೇಬೇಕು..' ನಾನು ನಿರ್ಧರಿಸಿ ಬಿಟ್ಟಿದ್ದೆ. ಆದರೆ ಅದನ್ನು ಯಾರೊಂದಿಗಾದರೂ ಹೇಳುವಂತಿರಲಿಲ್ಲ. ನಂಜನಗೂಡಿನಿಂದ ೯ ಕಿ.ಮೀ/ ದೂರದ ಊರು ನಮ್ಮದು.ಅಲ್ಲಿಂದ ಬೆಂಗಳೂರಿಗೆ ಸರಿ ಸುಮಾರು 180 ಕಿ.ಮೀ.ಗಳ ದೂರದ ಊರು. ಅಲ್ಲಿಂದ ಮೈಸೂರಿಗೆ ಬಂದು ಆನಂತರ ಬೆಂಗಳೂರಿಗೆ ಬಂದು ಬಂಧು ಬಳಗ ಇಲ್ಲದ ಊರಿನಲ್ಲಿ ಸಿನಿಮಾ ಮಾಡುತ್ತೇನೆ ಎಂದರೆ ಯಾರಾದರೂ ನಗುತ್ತಿದ್ದರು..ಹಾಗಂತ ಕನಸನ್ನು ಬಿಟ್ಟು ಬಿಡಲು ಸಾಧ್ಯವೇ..? ಪಿ.ಯು.ಸಿ.ಯಿಂದ ನನ್ನ ಮಾಸ್ತರ್ ಡಿಗ್ರೀವರೆಗೂ ಬರೆ ಕಾಟಾಚಾರಕ್ಕೆ ಓದಿದನೆ ಹೊರೆತು ಕನಸು ಮನಸಿನಲ್ಲೆಲ್ಲ ಸಿನಿಮಾವೇ ತುಂಬಿತ್ತು.
ಆನಂತರ ಬೆಂಗಳೂರಿಗೆ ಬಂದದ್ದು..ಸಿನೆಮಾ ಮಾಡಲು ಓಡಾಡಿದ್ದು ಈವತ್ತು ಮಾರ್ಚ್ ೨೩ ಮಾಡಿದ್ದೆಲ್ಲದರ ಹಿಂದಿನ ಪಯಣವಿದೆಯಲ್ಲ ಅದು ಯಾತನಮಾಯ, ರೋಮಾ೦ಚಕ, ಹಿಂಸಾತ್ಮಕ.

1 comment:

  1. i like ur attitude, i know some part of ur journey
    but everybody should know a full of it
    post it. Good luck Sweeti

    Friend
    Madhu

    ReplyDelete