ಮಾರ್ಚ್ 23 ಆದದ್ದು..
ಹುತಾತ್ಮ ಭಗತ್ ಸಿಂಗ್ ರನ್ನು ಮಾರ್ಚ್ 23ರಂದು ಬ್ರಿಟಿಷರು ಗಲ್ಲಿಗೇರಿಸಿದರು.ಸ್ವಾತಂತ್ರ್ಯ ದ ಹೋರಾಟದಲ್ಲಿ ಹುತಾತ್ಮರಾದ ಭಗತ ಸಿ೦ಗ್ ಇಂದಿಗೂ ಅಜರಾಮರ.ಅವರು ಸತ್ತಾಗ ಅವರಿಗೆ ಕೇವಲ 23 ವರ್ಷಗಳ ಆಸುಪಾಸು.ಅವರ ಸತ್ತ ದಿನದ ನೆನಪನ್ನು ನಮ್ಮ ಸಿನೆಮಾದ ಶೀರ್ಷಿಕೆ ಮಾಡಿದ ಕಾರಣವೆಂದರೆ ನಮ್ಮ ಸಿನೆಮಾದ ಕಥೆಯೂ ಭ್ರಷ್ಟಾಚಾರದ ವಿರುದ್ಧ ಹೋರಾಡುವುದೇ ಆಗಿರುವುದು.
ಚಿತ್ರದ ನಾಯಕ ರಾಘವ. ದೊಡ್ಡ ಶ್ರೀಮಂತರ ಏಕೈಕ ಪುತ್ರ. ಬೇಕಾದಷ್ಟು ಆಸ್ತಿ ಇದೆ.ನೋಡಲು ಸುಂದರ. ಅವನಿಗೊಬ್ಬಳು ಚಂದನೆಯ ಗೆಳತಿಯಿದ್ದಾಳೆ..ಇಲ್ಲಿ ಅವರ ಪ್ರೀತಿಗೆ ಯಾವ ರೀತಿಯ ಅಡೆತಡೆಯೂ ಇಲ್ಲ.ಒಂದು ಸುಖಾಂತವಾಗಬೇಕಿದ್ದ ಬದುಕಿನಲ್ಲಿ ಇದ್ದಕ್ಕಿದ್ದಂತೆ ಬಿರುಗಾಳಿ ಬೀಸಿದಾಗ ನಾಯಕ ಮೊದಮೊದಲಿಗೆ ಮಾನಸಿಕವಾಗಿ ಕುಸಿದುಹೋಗುತ್ತಾನೆ.ತನ್ನ ಜೀವನದಲ್ಲಿ ಸಾವಿನ ಹೊರತಾಗಿ ಬೇರೇನಿಲ್ಲ ಎಂದುಕೊಳ್ಳುತ್ತಾನೆ.. ಆದರೆ ಆ ಒ೦ದು ಪರಿಸ್ಥಿತಿ ಅವನ ಜೀವನದ ದಿಕ್ಕನ್ನೇ ಬದಲಿಸುವುದಲ್ಲದೆ ಅವನು ಇಡೀ ಸಮಾಜಕ್ಕೆ ಪಾಠ ಕಲಿಸಲು ಹೋಗಿಬಿಡುತ್ತಾನೆ.
ಮತ್ತು ಅವನದೇ ರೀತಿಯ ವಿಶಿಷ್ಠ ಶೈಲಿಯಲ್ಲಿ ಪ್ರತಿಯೊಬ್ಬರೂ ಅವರ ತಪ್ಪುಗಳನ್ನೂ ಅವರೆ ಒಪ್ಪಿಕೊಳ್ಳುವಂತೆ ಮಾಡುತ್ತಾನೆ.ಇದು ಒಂದು ನಮ್ಮ ಸಿನೆಮಾದ ಒ೦ದು ಎಳೆ ಎನ್ನಬಹುದು.
ಸಿನಿಮಾದ ಮೊದಲ ದೃಶ್ಯದಲ್ಲಿ ಒಂದು ಹಳ್ಳಿಗೆ ನುಗ್ಗುವ ಬಂಡುಕೋರರು ಎಲ್ಲರಿಗೂ ಹೊಡೆದು ಒ೦ದು ಹುಡುಗನ ಕೈಗೆ ಆಯುಧವೊ೦ದನ್ನು ಕೊಟ್ಟು ನೀನೀಗ ನಿನ್ನಮ್ಮನನ್ನು ಕೊಲ್ಲದಿದ್ದರೆ ನಿನ್ನನ್ನು ನಿನ್ನ ತಮ್ಮನನ್ನು ನಾವು ಕೊಳ್ಳುತ್ತೇವೆ ಎಂದಾಗ ಆ ಅಸಹಾಯಕ ತಾಯಿ ತನ್ನನ್ನೇ ಕೊಲ್ಲುವಂತೆ ಮಗನಿಗೆ ಕಣ್ಣಲ್ಲೇ ಸನ್ನೆ ಮಾಡುವ ದೃಶ್ಯ ಹೃದಯ ಕಲಕಿಬಿಟ್ಟಿತು.
ಎಲ್ಲಾದರೂ ಸಿಕ್ಕರೆ ನೀವು ಒಮ್ಮೆ ನೋಡಿ ..

No comments:
Post a Comment