Wednesday, April 18, 2012

ಮೊನ್ನೆ ಮೊನ್ನೆ ಜೋಗಿಯವರನ್ನು ಯಾವುದೋ ಚಿಕ್ಕ ಸಂದರ್ಶನ ಮಾಡಬೇಕಾಯಿತು. ಆಗ ಅದು ಇದು ಮಾತಾಡುತ್ತಾ ಅವರು ತಾವು ಓದಿರುವ ಪುಸ್ತಕಗಳ ಬಗ್ಗೆ ಮಾತನಾಡಿದರು. ನನಗೆ ಆಶ್ಚರ್ಯವಾದದ್ದೆ ಆವಾಗ. ಅಷ್ಟೆಲ್ಲಾ ಬರೆಯುವ ಜೋಗಿ ಅದ್ಯಾವಾಗ ಓದುತ್ತಾರೋ ಎನಿಸಿತು.ಮೊನ್ನೆ ಮೊನ್ನೆ ಪತ್ತೆದಾರರ ಬಗ್ಗೆ ಬರೆದಿದ್ದರು. ತುಂಬಾ ವಿಸ್ತೃತವಾದ ಲೇಖನವದು.ಮೊನ್ನೆ ಒಂದು ಪುಸ್ತಕ ತೋರಿಸಿ ಇದನ್ನು ಓದುತ್ತಿದ್ದೇನೆ ತುಂಬಾ ಚೆನ್ನಾಗಿದೆ ಎಂದರು .ಪುಸ್ತಕದ ಹೆಸರು spandau ಎಂದು. ಜೈಲ್ ಬ್ರೇಕ್ ಕಥೆಯಿರುವ ಆತ್ಮ ಚರಿತ್ರೆ. ಜೈಲ್ ಬ್ರೇಕ್ ಎಂದಾಗಲೆಲ್ಲ ನನಗೆ ನೆನಪಿಗೆ ಬರುವುದು ಪಾಪಿಲ್ಯಾನ್. ಅದರ ಮುಂದುವರೆದ ಭಾಗವಾದ ಬಾಂಕೋ ಕೂಡ ಚೆನ್ನಾಗಿದೆ. ಪಾಪಿಲಾನ್ ಓದಿದವರಿಗೆ ಅದೇ ಕಾದಂಬರಿ ಆಧಾರಿತ ಚಿತ್ರವಾದ ಪಾಪಿಲಾನ್ ಇಷ್ಟವಾಗುವುದಿಲ್ಲ. ಯಾಕೆಂದರೆ ಕಾದಂಬರಿಯಲ್ಲಿನ ವಿವರಗಳ ಪ್ರತಿಶತ 25 ರಷ್ಟು ಸಿನೆಮಾದಲ್ಲಿಲ್ಲ.ಹಾಗಾಗಿ ಅಷ್ಟೊಂದು ವಿಸ್ತೃತವಾದ ಕಥನವನ್ನು ಮೊಟಕುಗೊಳಿಸಿದರೇನೋ ಎನ್ನಿಸುವುದು ಸಹಜ. ಹಾಗಂತ ಇಡೀ ಕಾದಂಬರಿಯನ್ನು ಸಿನೆಮಾ ಮಾಡಿದರೆ ಕನಿಷ್ಠ ಎಂಟು-ಹತ್ತು  ಗಂಟೆ ಬೇಕಾಗಬಹುದೇನೋ.ಹಾಗೆ ಮೊನ್ನೆ ಮೊನ್ನೆ way back ಎನ್ನುವ ಸಿನೆಮಾ ಬಂತು. ಅದು ಲಾಂಗ್ ವಾಕ್ ಕಾದ೦ಬರಿಯನ್ನಾಧರಿಸಿದ್ದು. ಅದನ್ನು ಕನ್ನಡದಲ್ಲಿ ತೇಜಸ್ವಿಯವರು ಮಹಾ ಪಲಾಯನ ಎಂಬ ಹೆಸರಿನಲ್ಲಿ ಅನುವಾಧಿಸಿದ್ದರು.ತುಂಬಾ ರೋಚಕ ಕಾದಂಬರಿ ಅದು.
 ಸಿನಿಮಾದ ವಿಷಯಕ್ಕೆ ಬಂದರೆ ಏನೇ ಆದರೂ ನಾವು ಹಾಲಿವುಡ್ಡಿನವರ೦ತೆ ತೀರ ವಸ್ತುನಿಷ್ಟವಾಗಿ ಚಿತ್ರೀಕರಿಸಲು ಕಷ್ಟವೆನಿಸುತ್ತದೆ.ಅದಕ್ಕೆ  ಬಜೆಟು ಕೂಡ ಕಾರಣವಿರಬಹುದು.ಒಂದು ಕಥಾನಕವನ್ನು ,ಜೀವನಚರಿತ್ರೆಯನ್ನು ಅದೆಷ್ಟು ನಿಜವಾಗಿ ಚಿತ್ರೀಕರಿಸುತಾರೆ..?ಮೊನ್ನೆ ಇನ್ನೊಂದು ಸಿನೆಮಾ ನೋಡಿದೆ. ಸದ್ದಾಂ ಹುಸೇನ್ ಮಗನಾದ ಉದಯ್ ಸದಾಂ ಹುಸೇನ್ ಬಗೆಗಿನ ಚಿತ್ರ ಅದು.ಇಡೀ ಸಿನೆಮಾ ನೋಡಿದರೆ ಬರೆ ಸದ್ದಾಮ್ ಹುಸೇನ್ ಮಗ ಮಾತ್ರ ಗೊತ್ತಾಗುವುದಿಲ್ಲ. ಜೊತೆಗೆ ಅಲ್ಲಿನ ರಾಜಕೀಯ ಸ್ಥಿತಿಗತಿ ಮನುಷ್ಯರ ಕ್ರೌರ್ಯ , ಅಮಾನವೀಯತೆ ಮುಖವೂ ಪರಿಚಯವಾಗುತ್ತದೆ. ದೊಮಿನಿಕ್ ಕೂಪರ್ ಎಂಬ ಅದ್ಭುತ ನಟ ಸದ್ದಾಮ್ ಹುಸೇನ್ ಮಗನ ಪಾತ್ರ ಮಾಡಿದ್ದಾನೆ.
ಸಿನಿಮಾ ಒ೦ದು ದೊಡ್ಡ ಮನರಂಜನಾ ಮಾಧ್ಯಮವಾದರೂ ಇಂಥ ಪ್ರಯತ್ನಗಳಿಂದಾಗಿ ಮುಂದಿನ ಪೀಳಿಗೆಗೆ ಸಿನಿಮಾಗಳೇ ಸಂಸ್ಕೃತಿ, ಘಟನೆ, ಇತಿಹಾಸವನ್ನು ತೆರೆದಿಡುವ ಶಾಸನಗಳಾಗಿ ಉಳಿದುಕೊಳ್ಳುತ್ತವೆ. ನಮ್ಮಲ್ಲೂ ಈ ರೀತಿಯ ಐತಿಹಾಸಿಕ, ಸತ್ಯ ಘಟನೆಗಲಾಧಾರಿತ ವಸ್ತುನಿಷ್ಠ ಸಿನಿಮಾಗಳು ಬಂದರೆ ಅವು ಮುಂದಿನ ಪೀಳಿಗೆಗೆ ಬರೀ ಸಿನಿಮಾವಷ್ಟೇ ಆಗದೆ ಅದ್ಭುತ documentಗಳಾಗುತ್ತವೆ ಅಲ್ಲವೇ?

3 comments:

 1. Hey this is a good blog..came here from FB-World Cinema...
  u r absolutely right..have read Papillon -The book..movie i feel has not done justice to the Read....
  have not read the book 'the long walk' so maybe i enjoyed the movie 'the way back'
  If i read a book and a movie is made on that ..i as a policy dont watch it..it irks many of my friends..:-)
  thank u...henceforth instead of painstakingly making a list of all movies i can peep in here and watch movies u have written about
  Thanks
  malathi S

  ReplyDelete
 2. thanks a lot...
  i thought there is a different vision n criteria for any movie r book..and literature n media both have their own limitation n strength..so watching is watching and reading is reading..

  ReplyDelete
 3. I have seen Papillon, not read novel. Pretty good jail break movie inspiration for the shawshank redemption and few other movies.

  ReplyDelete