Sunday, April 29, 2012

ನೋಡಲೇ ಬೇಕಾದ ಚಿತ್ರಗಳು..-3

There is nothing sweeter than revenge..!! ಇದು ಕ್ರಿಸ್ತಾಫ್ ಕಿಸ್ಲೋವಸ್ಕಿ ನಿರ್ದೇಶನದ ವೈಟ್ ಚಿತ್ರದ ತಲೆ ಬರಹ..ಅಥವಾ ಅಡಿಬರಹ. ಸಿನಿಮಾ ಕೂಡ ಅಷ್ಟೇ ಥ್ರಿಲ್ ಆಗಿದೆ ಮತ್ತು ಕೂಲಾಗಿದೆ.ನಾನು ಯಾವುದೇ ಸಿನೆಮಾ ಆಗಲಿ ನಿರ್ದೇಶಕರ ಬಗ್ಗೆ ತಿಳಿದುಕೊಳ್ಳದೆ ಸಿನೆಮಾ ನೋಡುವುದಿಲ್ಲ. ಅಥವಾ ಒಂದು ಸಿನೆಮಾ ಇಷ್ಟವಾಗಿ ಬಿಟ್ಟರೆ ಆ ಚಿತ್ರದ ನಿರ್ದೇಶಕನ ಸಿನೆಮಗಳನ್ನೆಲ್ಲಾ ನೋಡುವವರೆಗೆ ನೆಮ್ಮದಿಯಾಗಿ ನಿದ್ದೆ ಮಾಡಲಾಗುವುದಿಲ್ಲ. ಆ ನಿಟ್ಟಿನಲ್ಲಿ ಈ ನಿರ್ದೇಶಕನ ಸಿನಿಮಾ ನಾನು ಮೊದಲು ನೋಡಿದ್ದು ಕ್ಯಾಮೆರಾ ಬಫ್.ಸಿನಿಮಾ ಒಂದು ರೀತಿ ಫನ್ನಿಯಾಗಿದೆ ಅನಿಸಿ ಕ್ರಿಸ್ತಾಫ್ ನ ಉಳಿದ ಸಿನಿಮಾ ಹುಡುಕಿದಾಗ ನನಗೆ ಸಿಕ್ಕಿದ್ದು ಈ ಬ್ಲಾಂಕ್ ಅಥವಾ ವೈಟ್. ಇದು ತ್ರೀ ಕಲರ್ಸ್ ಸರಣಿಯ ಎರಡನೇ ಚಿತ್ರ.ಮೊದಲನೆಯದು ಬ್ಲೂ.ಮೂರನೆಯದು ರೆಡ್.1994ರಲ್ಲಿ ತೆರೆಗೆ ಬಂದ ಈ ಚಿತ್ರದಲ್ಲಿ ಸುಂದರಿ ಜ್ಯೂಲಿ ಡೆಲ್ಫಿ ಇದ್ದಾಳೆ.  ಅಷ್ಟೇ ಅದ್ಭುತ ಅಭಿನಯ ನೀಡಿರುವ ನಾಯಕನಿದ್ದಾನೆ.ಹಾಗೆ ಒಂದು ಅತ್ಯುತಮ ಎನಿಸುವ ಕಥೆಯಿದೆ. ಮತ್ತು ಕಾಡುವ ಸಂಗೀತವಿದೆ.  ಒಂದು ಸಿನೆಮಾ ನೋಡಲು ಇನ್ನೇನು ಬೇಕು..ಆದರೂ ಸಿನೆಮಾದ ಬಗ್ಗೆ ಸಣ್ಣ ಕಿರುಪರಿಚಯ ಮಾಡಿಕೊಡುವದಾದರೆ ಚಿತ್ರದ ನಾಯಕಿ ತನ್ನ ಗಂಡನಿಗೆ ಮೋಸ ಮಾಡಿ ಅವನ ಆಸ್ತಿಯನ್ನ್ನೆಲ್ಲ ಕಿತ್ತುಕೊಂಡು ಅವನನ್ನು ಬೀದಿಪಾಲು ಮಾಡುತ್ತಾಳೆ. ನಾಯಕ ಗೋಗೆರೆಯುತ್ತಾನೆ, ಪರಿಪರಿಯಾಗಿ ಬೇಡಿಕೊಳ್ಳುತ್ತಾನೆ..ಅವಳು ಕರಗುವುದರ ಬದಲಿಗೆ ಇನ್ನಷ್ಟು ಘೋರವಾಗಿ ಅವಮಾನಿಸುತ್ತಾಳೆ. ಆಗ ನಾಯಕ ಆ ಊರೆ ಬಿಟ್ಟುಹೊರತುಹೋಗುತ್ತಾನೆ..ಆನಂತರ ಅವನು ತನ್ನ ದ್ವೇಷವನ್ನು ತೀರಿಸಿಕೊಳ್ಳುವ ರೀತಿಯಿದೆಯಲ್ಲ ಅದನ್ನು ನೋಡಿಯೇ ಸವಿಯಬೇಕು...ನೋಡಿಲ್ಲದಿದ್ದರೆ ಒಮ್ಮೆ ನೋಡಿ.
ಟ್ರೈಲರ್ ಗಾಗಿ ಇಲ್ಲಿ ಕ್ಲಿಕ್ಕಿಸಿ..




9 comments:

  1. The colour Blue nOdiyaaytu...ah enu cinema!!like poetry...

    ReplyDelete
  2. ಹಾಗೆ ಇದನ್ನು ನೋಡಿ..ನಾಯಕ ಅವನ ಹೆಸರನ್ನು ಹೇಗೆ ಉಚ್ಛಾರ ಮಾಡಬೇಕು ಗೊತ್ತಿಲ್ಲ ಕಣ್ರೀ ಎಲ್ಲ ಇಂಗ್ಲಿಷ್ ಅಲ್ಫಬೆಟ್ಸ್ ಇದೆ ಅವನ ಹೆಸರಲ್ಲಿ..Zbigniew Zamachowski ಅಂತ ಅವನ ಹೆಸರು..ನೋಡಿ ಅವನ ಅಭಿನಯ..ಅವನ ಮುಗ್ಧತೆ, ಅಮಾಯಕತೆ, ಒಳ್ಳೆತನ, ಹಾಗೆ ತಣ್ಣಗಿನ ಕೌರ್ಯವನ್ನು ವ್ಯಕ್ತ ಪಡಿಸಿರೋ ರೀತಿ...ಸೂಪರ್..

    ReplyDelete
  3. ಬ್ಲೂ, ವೈಟ್ ಹಾಗು ರೆಡ್ ದೃಶ್ಯ ಕಾವ್ಯಗಳು. ಸೂಪರ್. ಕ್ರಿಸ್ತಾಫ್ ಅದ್ಭುತ ನಿರ್ದೇಶಕ. The Double Life of Veronique, A short film about Love, A short film about Killing ನೋಡಿ ಚೆನ್ನಾಗಿವೆ

    ReplyDelete
  4. ಥ್ಯಾಂಕ್ಸ್ ..A short film about Love, A short film about Killing ನೋಡಿದ್ದೇನೆ..The Double Life of Veronique ನೋಡುತ್ತೇನೆ..ಅಮೇಲೆ ಒಂದಷ್ಟು ಚರ್ಚಿಸೋಣ..

    ReplyDelete
  5. ನಿಮ್ಮ ಬ್ಲಾಗ ನನಗೆ ಮೆಚ್ಹುಗೆಯಾಯಿತು.

    ReplyDelete
  6. ನಿಮ್ಮ ಬ್ಲಾಗ ನನಗೆ ಮೆಚ್ಹುಗೆಯಾಯಿತು. ಧನ್ಯವಾದಗಳು.... ಸರ್

    ReplyDelete