Monday, May 20, 2013

2012-ನೋಡಿದ ಚಿತ್ರಗಳು-2


5.ಮ್ಯಾನ್ ಆನ್ ಅ ಲೆಜ್: ಹೋಟೆಲ್ಲೊ೦ದರ  ಮಹಡಿ ಮೇಲೆ ಹತ್ತಿದ ವ್ಯಕ್ತಿಯೊಬ್ಬ ತಾನು ಅಲ್ಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಕೂಗಿ ಹೇಳುತ್ತಾನೆ. ತಕ್ಷಣ ಪೊಲೀಸರು, ಜನರು ಅಲ್ಲಿ  ಸೇರುತ್ತಾರೆ. ಅವನ ಬೇಕು ಬೇಡಗಳೇನು, ಆತ್ಮಹತ್ಯೆಗೆ ಕಾರಣವೇನು ಎಂಬುದನ್ನು ಕಂಡು ಹಿಡಿಯಲು ಪ್ರಯತ್ನಿಸುತ್ತಾರೆ. ಆದರೆ ಅದನ್ಯಾವುದನ್ನು ಬಾಯಿ ಬಿಡದ ಆತ ಮಾತ್ರ ತಾನು ಸಾಯುವುದು ಶತ ಸಿದ್ಧ ಅದಕ್ಕೂ ಮೊದಲು ನಾನು ಮಾತಾಡುವುದಿದೆ ಎನ್ನುತಾನೆ. ಈಗ ಪೊಲೀಸರಿಗೆ ಪೀಕಲಾಟಕ್ಕಿಟ್ಟುಕೊಳ್ಳುತ್ತದೆ..ಜನರಿಗೆ ಪುಕ್ಕಟ್ಟೆ ಮನರಂಜನೆ .ಆತ ಯಾರು ಎಂಬುದನ್ನು ಆತನ ಹೋಟೆಲಿನ ರೂಮಿನಲ್ಲಿದ್ದ ಬೆರಳಚ್ಚಿನ ಸಹಾಯದಿಂದ ಕಂಡುಹಿಡಿಯುತ್ತಾರೆ.ಆತ ಒಬ್ಬ ಮಾಜಿ ಪೋಲಿಸ್ ಅಧಿಕಾರಿ. ಒಂದು ದರೋಡೆಯ ಆರೋಪದಲ್ಲಿ ಜೈಲಿಗೆ ಹೋದವನು ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ.ಈಗ ಕಟ್ಟಡದ ತುದಿಯಲ್ಲಿ ನಿಂತಿದ್ದಾನೆ.ಆತನ ಅಹವಾಲು ಒಂದೆ.ನಾನು ನಿರಪರಾಧಿ ಎಂಬುದು.
ಅವನೂ ನಿಜಕ್ಕೂ ನಿರಪರಾಧಿಯಾ..?
ಅವನ ಯೋಜನೆ ಏನು.?
ಇದು ಮ್ಯಾನ್ ಆನ ಎ ಲೆಜ್ ಚಿತ್ರದ ಕಥಾ ಸಾರಾಂಶ. ಇಡೀ ಚಿತ್ರದ ಕಥೆ ಒಂದೆ ಜಾಗದಲ್ಲಿ ನಡೆದರೂ ಚಿತ್ರೀಕರಣ ಶೈಲಿ ತುಂಬಾ ಚೆನ್ನಾಗಿದೆ.ಹಾಗೆಯೇ ಕಥೆಯೂ ಕುತೂಹಲ ಕೆರಳಿಸುತ್ತಾ ಸಾಗುತ್ತದೆ. ಕೊನೆಯಲ್ಲಿ ಬಯಲಾಗುವ ರಹಸ್ಯವನ್ನು ಊಹಿಸಬಹುದಾದರೂ ಮಜಾ ಕೊಡುತ್ತದೆ.
ಮೂವ್ ಆನ್ ಚಿತ್ರ ನಿರ್ದೇಶಿಸಿದ್ದ ಆಸ್ಗರ್ ಲೇತ್ ನಿರ್ದೇಶನದ ಈ ಚಿತ್ರದಲ್ಲಿ ಸ್ಯಾಮ್ ವರ್ತಿಂಗ್ಟನ್ ಮುಖ್ಯ ಭೂಮಿಕೆಯಲ್ಲಿದ್ದು, ಚಿತ್ರ ಒಂದು ಘಂಟೆ ನಲವತ್ತು ನಿಮಿಷಗಳಷ್ಟು ಉದ್ದವಿದೆ.
6.ದಿ ಗ್ರೆ : ನಾಯಕ ಲಿಯಾಮ್ ನೀಸನ್ ಅಭಿನಯದ ಈ ಚಿತ್ರ ಒಂದು ಥ್ರಿಲ್ಲರ್ /ಸಾಹಸಮಯ ಚಿತ್ರ. ನನಗೆ ಈ ಬ್ಲುಮೂನ್, ವ್ಯಾ೦ಪರಸ್ ಮುಂತಾದ ಚಿತ್ರಗಳ ಬಗ್ಗೆ ಒಂದು ರೀತಿಯ ಹೇವರಿಕೆ ಇದೆ. ಈ ಚಿತ್ರವೂ ಕೂಡ ಅದೇ ಸಾಲಿಗೆ ಸೇರಿದ್ದು ಎಂದುಕೊಂಡಿದ್ದೆ. ಆದರೆ ಚಿತ್ರ ನೋಡಿದ ಮೇಲೆ ನನ್ನ ಅಭಿಪ್ರಾಯ ಬದಲಿಸಿಕೊಂಡೆ. ಹಾಲಿವುಡಿನಲ್ಲಿನ ಬಹುತೇಕ ಸಾಹಸಮಯ ಚಿತ್ರಗಳಲ್ಲಿ ಒಂದು ವಿಶೇಷವಿರುತ್ತದೆ. ಅಥವಾ ಅದನ್ನೇ ಏಕತಾನತೆಯ ಅಂಶ ಎನ್ನಬಹುದೇನೋ? ಒಂದು ಗುಂಪು ಅದು ಕಾಲೇಜು ಹುಡುಗರೋ, ಕುಟುಂಬವೋ, ಸೇನಾ ತುಕಡಿಯೋ...ಎಲ್ಲೋ ಒಂದು ಕಡೆ ಸಿಕ್ಕಿಕೊಂಡಾಗ ಅಲ್ಲಿ ಎದುರಾಗುವ ವಿಲನ್ ಯಾವ ರೂಪದಲ್ಲೂ ಇರಬಹುದು...ಪ್ರಾಣಿ, ಪಕ್ಷಿ, ಭೂತ, ಪಿಶಾಚಿ, .ಹೀಗೆ...ಅವರೊಡನೆ/ಅದರೊಡನೆ ಹೋರಾಡಿ ಒಂದಷ್ಟು ಜನ ಸತ್ತರೆ ನಾಯಕನೆನಿಸಿಕೊ೦ಡವನು  ಕೈಲಾದರೆ ಒಂದಷ್ಟು ಜನರನ್ನು ರಕ್ಷಿಸಿ ಅವುಗಳ ನಿರ್ನಾಮ ಮಾಡುತ್ತಾನೆ. ಈ ಚಿತ್ರದಲ್ಲೂ ಅದೇ ಕಥೆ. ಆದರೆ ನೋಡಿಸಿಕೊಳ್ಳುತ್ತಾ ಸಾಗುವ ಕಥೆ, ಮೇಕಿಂಗ್ ಮತ್ತು ಹಿನ್ನೆಲೆ ಸಂಗೀತ  ಮಜಾ ಕೊಡುತ್ತದೆ. ಒಂದು ಟೈಮ್ ಪಾಸ್ ಸಿನೆಮಾ.
7.ಡಬ್ಲ್ಯೂ .ಇ:
ಖ್ಯಾತ ಸಂಗೀತ ಗಾರ್ತಿ ನಟಿ ಮಡೋನ್ನ ನಿರ್ದೇಶನದ ಚಿತ್ರ ಇದು. ಕೆಲವೊಂದು ಸಿನೆಮಾಗಳ ಪೋಸ್ಟರ್ ಗಳು ಸಿನೆಮಾವನ್ನು ನೋಡುವಂತೆ ಮಾಡಿಬಿಡುತ್ತವೆ.ನನಗೆ ಈ ಚಿತ್ರದಲ್ಲಿ ಆದದೂ ಅದೇ. ಈ ಚಿತ್ರದ ಪೋಸ್ಟರ್ ಗಳು ತುಂಬಾ ರೋಮಾಂಟಿಕ್ ಆಗಿದ್ದದ್ದರಿಂದ ನನ್ನ ಸೆಳೆದು ಒಮ್ಮೆ ನೋಡೋಣ ಎನಿಸಿತ್ತು. ಇಬ್ಬರು ಮಹಿಳೆಯರು, ಒಬ್ಬಳು ವಿಚ್ಛೇದಿತೆ ಮತ್ತೊಬ್ಬಳು ವಿವಾಹಿತೆ ಅತ್ರುಪ್ತೆ. ಇವರಿಬ್ಬರು ಮತ್ತಿಬ್ಬರ ಜೊತೆ ಜೊತೆ ಹುಟ್ಟುವ ಪ್ರೀತಿ, ಪ್ರೇಮ ವೇ ಕಥೆಯ ವಸ್ತು. ಚಿತ್ರದ ಹೊರಾಂಗಣಗಳು  ಚೆನ್ನಾಗಿದೆ. ಆದರೆ ಸಿನೆಮಾ ಅಲ್ಲಲ್ಲಿ ಬೋರ್ ಹೊಡೆಸುತ್ತದೆ. ಅದಕ್ಕೆ ಕಾರಣ ಚಿತ್ರಕಥೆ. ಚಿತ್ರಕಥೆಯಲ್ಲಿ ಏರಿಳಿತವಿಲ್ಲ. ಏಕಮುಖವಾಗಿ ಸಾಗುವ ಕಥೆ ಎಲ್ಲೂ ಕುತೂಹಲಕಾರಿ, ರಂಜನೀಯ ಎನಿಸುವುದಿಲ್ಲ. ಇದು ನಿಜ ಜೀವನದ ಕಥೆ. ರಾಜ ೭ನೆ ಎಡ್ವರ್ಡ್ ನಡೆ ಕಥೆ. ಸುಮಾರು ಎರಡು ಘಂಟೆಗಳ ಅವಧಿಯ ಈ ಚಿತ್ರ ಅಷ್ಟೇನೂ ಗಮನಸೆಳೆಯುವುದಿಲ್ಲ.
8.ಕೊರಯಾಲೋನಸ್ : ಸ್ಟೀವನ್ ಸ್ಪೀಲ್ ಬರ್ಗ್ ರ ಮಾಸ್ಟರ್ ಪೀಸ್ ಶಿಂಡ್ಲರ್ಸ್ ಲಿಸ್ಟ್ ನ ಕೆಟ್ಟ ಅಮಾನುಷ ಅಧಿಕಾರಿಯ ಪಾತ್ರ ನಿರ್ವಹಿಸಿದ್ದ ರಾಲ್ಫ್ ಫೀನ್ಸ್ ಅತ್ಯುತ್ತಮ ನಟ. ಎರೆಡು ಸಾರಿ ಆಸ್ಕರ್ ಪ್ರಶಸ್ತಿಗೆ ನಾಮಾಂಕಿತಗೊಂಡಿದ್ದ ಮಹಾನ್ ಕಲಾವಿದ. ಇದವನ   ನಿರ್ದೇಶನದ ಮೊದಲ ಚಿತ್ರ. ಶೇಕ್ಸ್ ಫಿಯರ್ ನ ಇದೆ ಹೆಸರಿನ ದುಃಖಾಂತ ನಾಟಕವನ್ನ ಆಧರಿಸಿದ ಚಿತ್ರ. ರೋಮ್ ನಗರದ ಧೀರ ಕೊರಿಯೋಲಾನಸ್ ನ ಹೋರಾಟ ಸಾವಿನ ಕುರಿತಾದ ಚಿತ್ರ ಇದು.ರೋಮ್ ನಗರದಿಂದ ಬಹಿಷ್ಕೃತ ನಾಗುವ ಕೊರಿಯೋಲಾನಸ್ ಆಟಿಯಂ ನ ದೊರೆ ಔಫಿದಸ್  ಜೊತೆ ಸೇರಿ ತನಗೆ ಮೋಸ ಮಾಡಿದವರ ವಿರುದ್ಧ ಸೇಡು ತೀರಿಸಿಕೊಳ್ಳುವ ಕಥೆ ಇದು. ಚಿತ್ರ ಪ್ರಾರಂಭ ಅಂತ್ಯ ಚೆನ್ನಾಗಿದ್ದರೂ ಮಧ್ಯೆ ಮಧ್ಯೆ ಬೋರ್ ಹೊಡೆಸುತ್ತದೆ.
9.ಅಂಡರ್ ವರ್ಲ್ಡ್ :ಅವೆಕನಿಂಗ್-ನಿಜ ಹೇಳಬೇಕೆಂದರೆ  ನಾನು ಈ ಅಂಡರ್ ವರ್ಲ್ಡ್ ಸರಣಿಯ ನಾಲ್ಕು ಚಿತ್ರಗಳನ್ನೂ ನೋಡಿದ್ದೆನದರೂ ಯಾವುದೂ ಸಂಪೂರ್ಣವಾಗಿ ಅರ್ಥವಾಗಿಲ್ಲ. ಬಹುಶ ನಾನು ಕಥೆಯನ್ನೂ, ಚಿತ್ರಕಥೆಯನ್ನು ಗಮನಿಸದೆ ಇರುವುದೇನೋ..? ಇದು ಅದೇ ಸಾಲಿನ ಚಿತ್ರ. ನಾನು ಇಂತಹ ಚಿತ್ರಗಳ ಕಥೆಯನ್ನೂ ಅಷ್ಟಾಗಿ ಗಂಭೀರವಾಗಿ ಪರಿಗಣಿಸುವುದಿಲ್ಲ. ಆದರೆ ಚಿತ್ರದ ಛಾಯಾಗ್ರಹಣ, ಮೇಕಿಂಗ್ , ಗ್ರಾಫಿಕ್ಸ್ ಮುಂತಾದ ತಾಂತ್ರಿಕ ಅಂಶಗಳಿಗಾಗಿ ನೋಡುತ್ತೇನೆ. ಹಾಗಾಗಿ ನನಗೆ ಕಥೆ ನಗಣ್ಯವಾಗಿಬಿಡುತ್ತದೆ. ಇದು ಅಷ್ಟೇ. ಒಂದಷ್ಟು ಮನುಷ್ಯರಲ್ಲದ ಮನುಷ್ಯರು ಎನೇನಕ್ಕೋ ಕಿತ್ತಾಡುತ್ತಾರೆ. ಆಮೇಲೆ ಹೊಡೆದಾಟ ಬಡಿದಾಟ. ಇಲ್ಲಿನ ಸಾವು ಸಾವಲ್ಲ. ನಗರ ನಗರವಲ್ಲ. ಅದರದೇ ಒಂದು ಭ್ರಾಮಕ ಲೋಕ. ನಾನಂತೂ ಟೈಂ ಪಾಸಿಗೆ ನೋಡುತ್ತೇನೆ. ನಿಮಗೂ ತಾಂತ್ರಿಕ ಅಂಶಗಳ ಬಗ್ಗೆ ಆಸಕ್ತಿಯಿದ್ದರೆ ಈ ಚಿತ್ರವನ್ನ ಒಮ್ಮೆ ನೋಡಬಹುದು.
10.ಜರ್ನಿ ಟು ದಿ ಮಿಸ್ಟೀರಿಯಸ್ ಐಲ್ಯಾಂಡ್ :
ಅದೊಂದು ಲೋಕದಲ್ಲಿ ಚಿಕ್ಕವೆಲ್ಲಾ ದೊಡ್ಡವು, ದೊಡ್ದವೆಲ್ಲಾ ಚಿಕ್ಕವು ..ಉದಾಹರಣೆಗೆ ಆನೆಯನ್ನು ನೀವು ಮೊಲದ ರೀತಿಯಲ್ಲಿ ಕೈಯಲ್ಲಿ ಎತ್ತಿಹಿಡಿದು ಆಡಿಸಬಹುದು, ಮುದ್ದಾಡಬಹುದು..ಆದರೆ ಸೊಳ್ಳೆ, ನೊಣ ಎಲ್ಲಾ ಬೃಹತ್ ಗಾತ್ರದವು...ಅಂತಹ ಒಂದು ಲೋಕವನ್ನು ಒಮ್ಮೆ ಸುತ್ತಿಬರಬೇಕೆಂದೆನಿಸಿದರೆ ಈ ಚಿತ್ರವನ್ನೊಮ್ಮೆ ನೋಡಬಹುದು.ಇಡೀ ಚಿತ್ರದ ತುಂಬಾ ಗ್ರಾಫಿಕ್ಸ್ ತುಳುಕಾಡಿದೆ ..ಅದು ಬಿಟ್ಟರೆ ಚಿತ್ರದಲ್ಲಿ ಹೇಳಿಕೊಳ್ಳುವ ವಿಷಯವಿಲ್ಲ..  ನಾಮಕಾವಸ್ತೆಗೆ ಒಂದು ಕಥೆ ಇದೆ..ಒಂದಷ್ಟು ನಟರಿದ್ದಾರೆ...ಆದರೆ ಗಮನಸೆಳೆಯುವುದು ಮಾತ್ರ ಗ್ರಾಫಿಕ್ಸ್..ಚಂದಮಾಮನ ಕಥೆಗಳ ದೃಶ್ಯರೂಪದಂತಿದೆ ಈ ಚಿತ್ರ.


3 comments:

  1. ನೀವು ಹೇಳಿದ ಯಾವ ಚಿತ್ರವನ್ನೂ ನೋಡಿಲ್ಲ.
    ದಿ ಗ್ರೇ ಕೇಳಿದ್ದಿನಿ. ಅ೦ಡರ್ವಲ್ಡ್ - ಸರಣಿ - ಈ ಸರಣಿಗಳೆಲ್ಲವೂ ಹೊಸದನ್ನು ಏನೂ ಹೇಳದೆ ಹೊಸ ಬಾಟಲಿಯಲ್ಲಿ ಹಳೇ ಮದ್ದನ್ನೇ ಕೊಡುತ್ತವೆ ಅನಿಸುತ್ತದೆ.
    ಈ ವರ್ಷ ಜಾಸ್ತಿ ಫ್ರೆ೦ಚ್, ಸ್ಪಾನಿಷ್, ಇಟಾಲಿಯನ್ ಚಿತ್ರಗಳನ್ನು ನೋಡಿದೆ. ಪಟ್ಟಿ ಹನುಮ೦ತನ ಬಾಲದ೦ತೆ ಬೆಳೆದಿದ್ದರಿ೦ದ ಬರೆದಿಲ್ಲ. ಸಮಯವಿದ್ದಾಗ ಬರೆಯುತ್ತೇನೆ.

    ReplyDelete
    Replies
    1. ನಾನಂತೂ ನೋಡ್ತಾ ಇರ್ತೀನಲ್ಲ...ಅದಕ್ಕೆ ಲಿಸ್ಟ್ ಮಾಡ್ತೀನಿ.....ಯಾವುದಾದರೂ ಫ್ರೆಂಚ್, ಸ್ಪಾನಿಶ್ ಇಟಾಲಿಯನ್ ನೋಡಬಹುದಾದ ಚಿತ್ರ ಹೇಳಿ,...ನೋಡಿಲ್ಲದಿದ್ದರೆ ನೋಡುವಾ...

      Delete
    2. ಸದ್ಯಕ್ಕೆ(2013 ವರ್ಷದ ಜನವರಿಯಿ೦ದ) ನೋಡಿದ ಚಿತ್ರಗಳಲ್ಲಿ ನನಗೆ ಫೇವರಿಟ್ ಎನಿಸಿದ ಚಿತ್ರಗಳನ್ನು ಸದ್ಯಕ್ಕೆ ಬರೆಯುತ್ತೇನೆ.
      1. Ordet (1955) ಡ್ಯಾನಿಷ್ ಕಾರ್ಲ್ ಥಿಯೋಡರ್ ಚಿತ್ರ
      2. Spoorloos (1988) ಡಚ್ ಚಿತ್ರ - ಇದರ ಹಾಲಿವುಡ್ ರಿಮೇಕ್ ಬೇರೆ ಇದೆ, ಚೆನ್ನಾಗಿಲ್ಲವ೦ತೆ.
      3. The Big Heat (1953) ಫ್ರಿಟ್ಜ್ ಲ್ಯಾ೦ಗ್ ನ ಹಾಲಿವುಡ್ ಚಿತ್ರ.
      4. The Tree of Life (2011) - ಸಿನೆಮಾಟೋಗ್ರಫಿ, ಬ್ಯಾಕ್ ಗ್ರೌ೦ಡ್ ಸ್ಕೋರ್, ಸಿನೆಮಾದ ಡೆಫಿನೇಶನ್ ಬದಲಾಯಿಸುವ ಚಿತ್ರ. ದೃಶ್ಯ ವೈಭವ. ಯೋಚಾನ ಲಹರಿ ಹೇಗೆ ಅ೦ತ್ಯವಿಲ್ಲದೆ ವಿಹರಿಸುವ೦ತಿದೆ ದೃಶ್ಯಗಳು.
      5. Der blaue Engel (1930) - ಜರ್ಮನ್ - ಟ್ರಾಜಿಡಿ ಕೂಡ ಎಷ್ಟೊ೦ದು ಸು೦ದರ!!
      6. Janghwa, Hongryeon (2003) - ಕೊರಿಯನ್ ಹೊರರ್ - ಅ೦ತರ೦ಗದ ಬೇಗುದಿ
      7. L'armée des ombres (1969) ಫ್ರೆ೦ಚ್ - ಜೀನ್ ಪೀರ್ ನ ಮಿನಿಮಾಲಿಸ್ಟ್ ವಾರ್ ಚಿತ್ರ.
      8. Les enfants du paradis (1945) ಫ್ರೆ೦ಚ್ - ಶಬ್ದಗಳಲ್ಲಿ ಹಿಡಿದಿಡಲಾಗದ್ದು. ಸೂಪರ್.
      9. Underground (1995) - ಸೆರ್ಬಿಯನ್ - ಎರಡನೇ ಮಹಾಯುದ್ಧ - ಲಾಸ್ಟ್ ಸೀನ್ ಸೂಪರ್.

      Delete