‘ಅಡ್ರೆನಾಲಿನ್’ ಹೆಸರೇ ಹೇಳುವಂತೆ ಇದೊಂದು ಸಾಹಸ,
ಕುತೂಹಲಭರಿತ ಚಿತ್ರ. ಬಹಳ ವೇಗವಾಗಿ ಓಡುವ ದೃಶ್ಯಗಳನ್ನೊಳಗೊಂಡಿರುವ ಈ ಚಿತ್ರದ ಕಥೆಯೂ
ಅಂತಹದ್ದೆ. ಚಿತ್ರದ ವಿಶೇಷವೆಂದರೆ ಇಡೀ ಚಿತ್ರವನ್ನು ಕೇವಲ ಒಂದೇ ಒಂದು ಚಿತ್ರಿಕೆಯಲ್ಲಿ ನಿರೂಪಿಸಿರುವುದು
ಇಂಗ್ಲಿಷ್ ನಲ್ಲಿ ಬಂದ ಫೋನ್ ಭೂತ್ ಚಿತ್ರದ ಕಥೆಯ ಹೋಲಿಕೆಯಿರುವ ಈ ಚಿತ್ರದ ಚಿತ್ರಣ ಮಾತ್ರ ಆ ಚಿತ್ರಕ್ಕಿಂತ
ಬೇರೆಯದೆ ಆದ ಶೈಲಿಯಲ್ಲಿದೆ.
ಒಂದೇ ಶಾಟ್ ನಲ್ಲಿ ಚಿತ್ರಿತವಾಗಿರುವ ಈ ಚಿತ್ರದಲ್ಲಿ ದೃಶ್ಯಗಳ
ಬದಲಾವಣೆಯಾಗಲಿ, ಸ್ಥಳಗಳ ಬದಲಾವಣೆಯಾಗಲಿ, 86 ನಿಮಿಷದ ನಾಗಾಲೋಟಕ್ಕೆ ಮತ್ತು ಒಂದೇ ಒಂದು ಚಿತ್ರಿಕೆಯ ಚಿತ್ರೀಕರಣಕ್ಕೆ ಅಡ್ಡಿ
ಮಾಡುವುದಿಲ್ಲ. ಪಾನ್ ಅಂಗಡಿಯಿಂದ, ಕ್ರೀಡೋಪಕರಣಗಳ ಅಂಗಡಿಗೆ, ಅಲ್ಲಿಂದ ಬ್ಯಾಂಕ್ ಗೆ ಹರಿದಾಡುವ ಸಿನಿಮಾದ ಕಥೆಗೆ ತಕ್ಕಂತೆ ಕೆಮೆರಾವನ್ನು ಓಡಾಡಿಸಿರುವ
ಛಾಯಾಗ್ರಾಹಕನ ಕೆಲಸವನ್ನು ಪ್ರಶಂಸಿಸಬೇಕಾಗುತ್ತದೆ.

ಚಿತ್ರದ ಕಥೆಯ ಬಗ್ಗೆ ಹೇಳುವುದಾದರೆ ಕ್ರಿಸ್‌ಥಾಮ್ಸನ್
ತನ್ನ ಹೊಸ ಕಾರೊಂದನ್ನು ಕೊಂಡುಕೊಂಡಿದ್ದಾನೆ.
ಅದನ್ನು ತೆಗೆದುಕೊಂಡು ಖುಷಿಯಿಂದ ಮನೆಗೆ ಹೋಗ ಬೇಕೆನ್ನುವಷ್ಟರಲ್ಲಿ ಅವನಿಗೆ ಗೊತ್ತಾಗುವ ವಿಷಯವೆಂದರೆ
ಕಾರಿನ ಉಪಗ್ರಹ ಸೇವೆಯ ಪಾಸ್ ವರ್ಡನ್ನು ಕದ್ದಿರುವ ವ್ಯಕ್ತಿಯೊಬ್ಬ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾನೆಂಬುದು, ಈಗ ತಾನು ಹೇಳುವ ಹಾಗೆ ಕೇಳದಿದ್ದರೆ
ಅಪಹರಿಸಿರುವ ಕ್ರಿಸ್ ಥಾಮ್ಸನ್ ಮಗಳನ್ನು ಕೊಂದು ಬಿಡುವುದಾಗಿ ಹೆದರಿಸುತ್ತನೆ. ತನ್ನ ಮಗಳ ಪ್ರಾಣ
ರಕ್ಷಣೆಗಾಗಿ ಅಪಹರಣಕಾರನ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಒಂದಾದ ಮೇಲೊಂದು ಅಪರಾಧ ಕೃತ್ಯಗಳನ್ನ
ಮಾಡುತ್ತ ಸಾಗುತ್ತಾನೆ ಕ್ರಿಸ್. ಆದರೆ ಎಲ್ಲೂ ಅಮಾಯಕರಿಗೆ ತೊಂದರೆಯಾಗದಂತೆ ಬೇರೆ ಆಯ್ಕೆಯಿಲ್ಲದೆ
ಅವರ ಕೆಲಸಗಳನ್ನು ನೆರವೇರಿಸಿ ಮಗಳನ್ನು ಕಾಪಾಡಿಕೊಳ್ಳುವುದೇ ಚಿತ್ರದ ಕಥಾವಸ್ತು.

ಅದೇನೆ ಇರಲಿ ಮನರಂಜನೆಯ ಮಾಧ್ಯಮವಾದ ಚಲನಚಿತ್ರ ಕ್ಷೇತ್ರದಲ್ಲಿ
ಆಗಾಗ ಇಂತಹ ಪ್ರಯೋಗಗಳು ಕಾಲಕಾಲಕ್ಕೆ ನಡೆದುಕೊಡೇ ಬಂದಿವೆ. ಒಂದು ಕಥೆಯನ್ನು ಪ್ರೇಕ್ಷಕರ ಮುಂದಿಡಲು
ನಿರ್ದೇಶಕರು ನಾನಾ ಕಸರತ್ತು ಗಳನ್ನು ಮಾಡಿದ್ದಾರೆ. ಮತ್ತು ಯಶಸ್ವಿಯೂ ಆಗಿದ್ದಾರೆ. ಆದರೆ ಇಂತಹ ಸಂದರ್ಭದಲ್ಲಿ
ಚಿತ್ರದ ಒಟ್ಟು ಪರಿಣಾಮವನ್ನ ತುಲನೆ ಮಾಡುವುದಕ್ಕಿಂತ ಅವರ ಪ್ರಯತ್ನಗಳಿಗೆ ನವನವೀನ ನಿರೂಪಣೆ ಶೈಲಿ, ರಚನಾತ್ಮಕ ಚಿಂತನೆಗೆ ಒಂದು ‘ಶಹಬ್ಬಾಸ್’ ನೀಡಲೇಬೇಕಾಗುತ್ತದೆ.
ಈ ಚಿತ್ರ 2007 ರಲ್ಲಿ ಬಿಡುಗಡೆಯಾಯಿತು.
No comments:
Post a Comment