Wednesday, August 29, 2012

'ಮೂಗಮುಡಿ' ನಿರೀಕ್ಷೆಯಲ್ಲಿ....

ಒಬ್ಬ ಶಕ್ತಿಯುತವಾದ ನಾಯಕನನ್ನು ಸೃಷ್ಟಿಸುವುದು ಎಲ್ಲ ನಿರ್ದೇಶಕರ ಕನಸು. ಅದರಲ್ಲೂ ಒಬ್ಬ ಸೂಪರ್ ಮ್ಯಾನ್ ನನ್ನು ತೆರೆ ಮೇಲೆ ತರಲು, ಆತನ ಮೂಲಕ ಜಗತ್ತಿನ ದುಷ್ಟ ಶಕ್ತಿಯನ್ನ ತೊಡೆದು ಹಾಕಿ, ಒಳ್ಳೆಯರಿಗೆ ಅಮಾಯಕರಿಗೆ ರಕ್ಷಣೆ ಕೊಡಿಸುವ ಆಸೆ ಬಹುತೇಕ ನಿರ್ದೇಶಕರ ಕನಸೂ ಆಗಿರುತ್ತದೆ. ಸಮಾಜದಲ್ಲಿನ ದುಷ್ಟ ಶಕ್ತಿಯನ್ನ ಒಬ್ಬ ನಾಯಕ ಕ್ಲೈಮ್ಯಾಕ್ಸನಲ್ಲಿ ಹೊಡಿದಾಕಿಬಿಡಬಹುದೇನೋ...ಆದರೆ ಅದು ತೀರ ಸಿನಿಮೀಯ ಎನಿಸಿಬಿಡುತ್ತದೆ. ಅದೇಗೆ ಅಷ್ಟೂ ಖಳರನ್ನು, ಅದೂ ಅಷ್ಟೋ೦ದು ಶಸ್ತ್ರಾಸ್ತ್ರ ಸಹಿತವಾಗಿದ್ದಾಗೂ ನಾಯಕ ಮಾತ್ರ ಬರಿಗೈಯಲ್ಲಿ ಹೊಡಿದಾಕುವ೦ತೆ ಮಾಡುವುದು ಎನ್ನುವ ಪ್ರಶ್ನೆ ಕಾಡದೆ ಬಿಡುವುದಿಲ್ಲ. ಆಗಲೇ ನಿರ್ದೇಶಕ ಸೂಪರ್ ಮ್ಯಾನ್ ಮೊರೆಹೋಗುವುದು. ಸ್ಪೈಡರ್ ಮ್ಯಾನ್ , ಬ್ಯಾಟ್ ಮ್ಯಾನ್ , ತೋರ್, ಐರನ್ ಮ್ಯಾನ್ , ಇವರೆಲ್ಲಾ ಹೀಗೆ ಸೃಷ್ಟಿಯಾದವರೇ. ನಮ್ಮಲ್ಲಿ ಕ್ರಿಶ್ ಬಿಟ್ಟರೆ ಮತ್ತೊಬ್ಬನ ಸುಳಿವಿಲ್ಲ. ರಾ.ಒನ್ ಚಿತ್ರದ ಜೀ.ಒನ್ ಯ೦ತ್ರ ಮಾನವನಾದ್ದರಿ೦ದ ಅವನು ಸೂಪರ್ ಮ್ಯಾನ್ ಪಟ್ಟಿಗೆ ಸೇರುವುದಿಲ್ಲ.

 ಅ೦ದಹಾಗೆ ನನ್ನ ಸಿನೆಮಾ ಮಾರ್ಚ್ ೨೩ ಕೂಡ ಅನ್ಯಾಯಕ್ಕೊಳಗಾದ ಯುವಕನೊಬ್ಬ ದುಷ್ಟ ಶಕ್ತಿಗಳ, ಸಮಾಜ ಘಾತುಕ ವ್ಯಕ್ತಿಗಳ, ಅವ್ಯವಸ್ಥೆಯ ವಿರುದ್ಧ ಹೋರಾಡುವ ಕಥೆ ಹೊ೦ದಿದೆ. ಹಾಗ೦ತ ನಾಯಕ ಹೊಡಿದಾಡುವುದಿಲ್ಲ. ಅಥವಾ ಅತಿಮಾನವನೂ ಅಲ್ಲ. ಬುದ್ದಿವ೦ತಿಕೆಯ ಮೂಲಕ ತನ್ನ ಗುರಿ ತಲುಪುತ್ತಾನೆ.
ಅ೦ಜಾದೆ
 ಇಷ್ಟರಲ್ಲೇ ಬಿಡುಗಡೆಯಾಗುತ್ತಿರುವ 'ಮೂಗುಮುಡಿ' ಸಿನಿಮಾ ಕುತೂಹಲ ಕೆರಳಿಸಲು ಸಾಕಷ್ಟು ಕಾರಣಗಳಿವೆ. ಅದರಲ್ಲಿ ಮುಖ್ಯವಾದ್ದದೆ೦ದರೆ ನಾಯಕ ಜೀವಾ ಮತ್ತು ನಿರ್ದೇಶಕ ಮಿಸ್ಕಿನ್. ತಮಿಳು ಚಿತ್ರರ೦ಗ ಕ೦ಡ ಅಪರೂಪದ ಚಿತ್ರಕರ್ಮಿಗಳಲ್ಲಿ ಮಿಸ್ಕಿನ್ ಕೂಡ ಒಬ್ಬರು. ತಮ್ಮ ವಿಶಿಷ್ಟ ಚಿತ್ರಕಥೆ, ನಿರ್ದೇಶನದ ಮೂಲಕ ಬೆಳಕಿಗೆ ಬ೦ದ ಅತ್ಯುತಮ ಸಿನಿಮಾ ನಿರ್ದೇಶಕ. ಅವರ ನಿರ್ದೇಶನದ ಎಲ್ಲಾ ಸಿನಿಮಾವು ವಿಚಿತ್ರ ಮತ್ತು ಉತ್ತಮ ನಿರೂಪಣೆ, ಸ್ವ೦ತಿಕೆ ಹೊ೦ದಿರುವ೦ತಹದ್ದೆ. ಚಿತಿರಂ ಪೇಸುದಡಿ, ಅ೦ಜಾದೆ, ನ೦ದಲಾಲ, ಯುದ್ಧಂ ಸೇಯ್ ನೋಡಿದಾಗ ಈ ನಿರ್ದೇಶಕನ ತಾಕತ್ತೇನು ಎಂಬುದು ಅರಿವಾಗುತ್ತದೆ.ಮಿಸ್ಕಿನ ಮೂಲ ಹೆಸರು ಷೆನ್ಮುಗ ರಾಜಾ.ದಸ್ತೋವಸ್ಕಿಯ ಕಾದಂಬರಿ ಈಡಿಯಟ್ ನಲ್ಲಿ ಬರುವ ಪಾತ್ರವಾದ ಮಿಸ್ಕಿನ್ ನಿ೦ದ ಪ್ರೆರೇಪಿತನಾಗಿ ತನ್ನ ಹೆಸರನ್ನು ಮಿಸ್ಕಿನ ಎ೦ದು ಬದಲಾಯಿಸಿಕೊ೦ಡು ಅದೇ ಹೆಸರಿನಲ್ಲಿ ಸಿನೆಮಾಗಳನ್ನೂ ಮಾಡುತ್ತಿರುವ ಶಕ್ತ ನಿರ್ದೇಶಕ. ಇನ್ನು ಜೀವಾ ಕೂಡ ಹೊಸತನಕ್ಕಾಗಿ ತುಡಿಯುವ ಕಲಾವಿದ.ಸ್ವತಹ ನಿರ್ಮಾಪಕರ ಪುತ್ರನಾದರೂ ತನ್ನದೇ ಶೈಲಿಯಲ್ಲಿ ವಿಭಿನ್ನ ಸಿನಿಮಾಗಳಲ್ಲಿ ನಟಿಸುತ್ತಾ ಬ೦ದ ವ್ಯಕ್ತಿ. ಆತನ 'ರಾಮ್', 'ಈ' ಮು೦ತಾದ ಚಿತ್ರಗಳೇ ಇದಕ್ಕೆ ಸಾಕ್ಷಿ. ಈಗ ಈ ಇಬ್ಬರು ದಿಗ್ಗಜರು ಒಟ್ಟಾಗಿದ್ದಾರೆ.
ಸಿನಿಮಾ ನಿರೀಕ್ಷೆ ಹುಟ್ಟಿಸುತ್ತಿದೆ...
ರಾಮ್

ಚಿತ್ತಿರಂ ಪೇಸುದಡಿ 

ನ೦ದಲಾಲ
ಅ೦ದಹಾಗೆ ಚಿತ್ತಿರಂ ಪೇಸುದಡಿ ಕನ್ನಡದಲ್ಲಿ 'ಸುದೀಪ್' ಅಭಿನಯದಲ್ಲಿ 'ಕಿಚ್ಚ ಹುಚ್ಚ' ನಾಗಿಯೂ, ಅ೦ಜಾದೆ 'ಅ೦ಜದಿರು' ಆಗಿಯೂ ಕನ್ನಡದಲ್ಲಿ ರೀಮೇಕ್ ಆಗಿದೆ.









4 comments:

  1. Good luck to ur movie...
    also in ur lesiure pls list out good malayalee, tamil and telugu movies too..will chk this space. great that u update ur blog on a regular basis...
    malathi S

    ReplyDelete
    Replies
    1. sure..thanks madam...
      ಅ೦ದಹಾಗೆ ಯಾವ ಸಿನಿಮಾ ನೋಡಿದ್ರೇ ಇತ್ತೀಚಿಗೆ?

      Delete
  2. watched an Oriya movie..maguneer shagada..(maguni's cart), kanasemba kudureyanneri, schindler's list.....
    :-)
    ms

    ReplyDelete
  3. ಮೈಸ್ಕಿನ್ ದು 'ನಂದಲಾಲ ' ಮಸ್ತು :) .. ಯುದ್ಧಂ ಸೈ ನ ಮೇಕಿಂಗ್ ಅದ್ಭುತವಾಗಿತ್ತು .. ಚಿತ್ತಿರಂ ಪೇಸುದಡಿ , ಅಂಜಾದೆ ಬಗ್ಗೆ ಏನ್ ಹೇಳಂಗಿಲ್ಲ .. ಚಿತ್ರಮ ಪೆಸುದಡಿ ಅಂತೂ ಸೂಪರ್ ಟ್ವಿಸ್ಟ್ ,
    ಅದರ ಯಶಸ್ಸೇ ಅದರ ಕತೆ ಹೇಳ್ತದೆ .. ಆದರೆ ಈ ಬಾರಿ ಯಾಕೋ ಮಿಸ್ಕಿನ್ 'ಮೂಗುಮುಡಿ' ಲಿ ನಿರಾಸೆ ಮಾಡಿಬಿಟ್ರು .. ಸಿನಿಮಾ ಡಾರ್ಕ್ ನೈಟ್ ಪ್ರಭಾವದಿಂದ ಬಳಲಿದಂತಿತ್ತು .. ಆದ್ರೂ ಪರವಾಗಿಲ್ಲ ಮಿಸ್ಕಿನ್ ಮತ್ತೆ ಕಮ್ ಬ್ಯಾಕ್ ಆಗ್ತಾರೆ .. ಅದು ಗ್ಯಾರಂಟಿ

    ReplyDelete