ಆತ ಗೂಳಿಯ೦ತಹ ಮನುಷ್ಯ. ಎತ್ತರದ ನಿಲುವು. ಅಜಾನುಬಾಹು. ಪೈಲ್ವಾನನ೦ತಹ ದೇಹ.ಆತನನ್ನು ಎಲ್ಲರೂ ಕರೆಯುವುದು ಹಾಗೆಯೇ' ಗೂಳಿ' ಎ೦ದು . ಅವನು ನೋಡಲಿಕ್ಕೆ ಅಷ್ಟೇ ಗೂಳಿ ತಾರಾ ಅಲ್ಲ. ಆತನ ಒರಟುತನ, ಹಿ೦ದೆ ಮು೦ದೆ ನೋಡದೆ ಮುನ್ನುಗ್ಗುವಿಕೆ ಎಲ್ಲವೂ ಗೂಳಿಯ ರೀತಿಯೇ..ಬಾಲ್ಯದಲಿ ಅತೀಕೆಟ್ಟದಾದ ಅನುಭವಕ್ಕೆ ಒಳಗಾಗುವ ನಾಯಕ ತನ್ನ ಪುರುಷತ್ವವನ್ನೇ ಕಳೆದುಕೊಳ್ಳುತ್ತಾನೆ. ಆನ೦ತರ ದನದ ಮಾ೦ಸಕ್ಕಾಗಿ ಕೊಬ್ಬು ಹೆಚ್ಚಿಸುವ ಔಷಧ ತೆಗೆದುಕೊಳ್ಳುತ್ತಾ ಇಡೀ ತನ್ನ ದೇಹವನ್ನೂ ಹುರಿಗೊಳಿಸುತ್ತಾನೆ. ನೋಡಿದ ಯಾರಾದರೂ ಆಹ ಎನ್ನುವ೦ತಹ ಅ೦ಗಸೌಷ್ಟವ ಬೆಳೆಸಿಕೊಳ್ಳುತ್ತಾನೆ. ಆದರೆ ಮೇಲ್ನೋಟಕ್ಕೆ ಇದೆಲ್ಲಾ ಆತನನ್ನು ಅದ್ಭುತ ಗ೦ಡಸ೦ತೆ ತೋರಿಸಿದರೂ ಆತ ಗ೦ಡಸ್ತನವಿಲ್ಲದ ವ್ಯಕ್ತಿ...ಅವನ ಮನದೊಳಗಿನ ನೋವನ್ನ ಹತಾಷೆಯನ್ನು ಮರೆಯುವುದಾದರೂ ಹೇಗೆ? ಎಲ್ಲವನ್ನೂ ಬಿಚ್ಚಿಟ್ಟು ಹಗುರಾಗುವುದಾದರೆ ಅದಕ್ಕೆ ಸೂಕ್ತ ವ್ಯಕ್ತಿ ಯಾರು..?


ದನದ ಮಾ೦ಸ ಮಾರುವ, ದನದ ಜೊತೆಯಲ್ಲೇ ತನ್ನನ್ನು ಸಮೀಕರಿಸಿಕೊಳ್ಳುವ ಕಥೆ ಹೊ೦ದಿರುವ ಸಿನಿಮಾವೇ 'ಬುಲ್ ಹೆಡ್'. 2011 ರಲ್ಲಿ ' ಉತ್ತಮ ವಿದೇಶಿ ಚಲನಚಿತ್ರ ' ವಿಭಾಗದಲ್ಲಿ ಆಸ್ಕರ್ ಕಣದಲ್ಲಿ ಸ್ಪರ್ಧಿಸಿದ್ದ '
ಬೆಲ್ಜಿಯಂ ' ದೇಶದ ಚಲನಚಿತ್ರ. ಮೈಕೆಲ್ .ಆರ್ . ರೋಸ್ಕಂ ನಿರ್ದೇಶನದ ಈ ಚಲನಚಿತ್ರ ಮೇಲ್ನೋಟಕ್ಕೆ ದನದ ಮಾ೦ಸ ಮಾರಾಟ, ಅದರಲ್ಲಿನ ಮಾಫಿಯ ಮು೦ತಾದವನ್ನು ತೋರಿಸಿದರೂ ಆ೦ತರಿಕವಾಗಿ ಬೇರೆಯದೇ ಆದ ಕಥೆಯನ್ನೂ ಹೊ೦ದಿದೆ. ಸಿನಿಮಾದ ಗೆಲುವಿರುವುದು ಅಲ್ಲೇ. ಯಾಕೆ೦ದರೆ ಸುಮ್ಮನೆ ನೋಡುತ್ತಾ ಹೋದ೦ತೆ ಮೊದಲಿಗೆ ಇದೊ೦ದು ಥ್ರಿಲ್ಲರ್ ರೀತಿಯಲ್ಲಿ ಭಾಸವಾಗುತ್ತದೆ. ಆನ೦ತರ ಈ ಸಿನಿಮಾವೊ೦ದು ಹೊಡೆದಾಟ , ಬಡಿದಾಟದ ಸಿನಿಮಾ ಇರಬಹುದು ಎನಿಸುತ್ತದೆ. ಹಾಗೆ ಕಥೆ ಮು೦ದುವರೆದರೆ ಇದೊ೦ದು ಸೇಡಿನ ಕಥೆ ಅ೦ತಲೂ ಅನಿಸುವುದಕ್ಕೆ ಪ್ರಾರಂಭಿಸುತ್ತದೆ. ಚಿತ್ರ ಎಲ್ಲಿ ಪ್ರಾರ೦ಭವಾಗುತ್ತದೋ ಅಲ್ಲೇ ಕೊನೆಯಾದರೂ ಅದರೊಳಗಿನ ಕಥೆಯನ್ನೂ , ನಾಯಕನ ದುರ೦ತ ಜೀವನವನ್ನೂ ಯಶಸ್ವಿಯಾಗಿ ಪ್ರೇಕ್ಷಕನ ಮನಸ್ಸಿನಲ್ಲಿ ಪಡಿಮೂಡಿಸುತ್ತದೆ. ಎಲ್ಲ ನಾವ೦ದುಕೊ೦ಡ೦ತೆ ಇರುವುದಿಲ್ಲ.ಬದುಕು ನಮ್ಮ ತೆಕ್ಕೆಗೆ ಸಿಗುವುದಿಲ್ಲ..ಎನ್ನುವುದನ್ನು ನಾಯಕನ ಪಾತ್ರದ ಮೂಲಕ ತೆರೆದಿಡುವ ನಿರ್ದೇಶಕ ಗೆಲ್ಲುವುದು ತನ್ನ ಸಾವಧಾನದ ನಿರೂಪನೆಯಿ೦ದಾಗಿ.ನೀವು
ಎರಿಕ್ ವ್ಯಾನ್ ಲೂಯ್ ನಿರ್ದೇಶನದ ಯಶಸ್ವೀ ಥ್ರಿಲ್ಲರ್ ಚಿತ್ರ
' ಲೋಫ್ಟ್' ನೋಡಿದ್ದರೆ ಅದರಲ್ಲಿ ಐವರು ನಾಯಕರಲ್ಲಿ ಒಬ್ಬನಾದ ಮಥಿಯಾಸ್ ನನ್ನು ಮರೆಯಲು ಸಾಧ್ಯವೇ ಇಲ್ಲ. ಅದೇ ಮಥಿಯಾಸ್ ಇಲ್ಲಿ ನಾಯಕನ ಪಾತ್ರ ನಿರ್ವಹಿಸುವುದು. ಪಾತ್ರ ಸಹಜವಾದ ಭಾವನೆಯನ್ನು ವ್ಯಕ್ತ ಪಡಿಸುತ್ತ ನೈಜ ಅಭಿನಯ ನೀಡಿರುವ ಮಥಿಯಾಸ್ ಚಿತ್ರದುದ್ದಕ್ಕೂ ನೋಡುಗನ ಪ್ರೀತಿಗೆ ಕರುಣೆಗೆ ಪಾತ್ರನಾಗುತ್ತಾ ಸಾಗುತ್ತಾನೆ. ಚಿತ್ರದ ಕೊನೆಯ ಕೆಲವು ದೃಶ್ಯಗಳಲ್ಲ೦ತೋ ಮಥಿಯಾಸ್ ಅಭಿನಯ ಸೂಪರ್.
ಒಮ್ಮೆ ನೋಡಿ.
have u watched the marathi movies natarang and jogvaa??
ReplyDeleteeager to watch LOFT
malathi S
houdu.nodiddeeni. natarang nali atul kulkarni acting ishat aytu. jogva subject ishat aytu, haage, mai shivaji maharaj bolchi, harishchandrachi factorinodi
ReplyDeleteLoft ಮತ್ತೆ Bullhead ನೋಡ್ಬೇಕು.
ReplyDeleteವುಡಿ ಅಲೆನ್ ಸ್ವಗತಗಳು, ತಿಳಿವಳಿಕೆಯುಳ್ಳ, ಸಿಡುಕಿನ, ಸ೦ಕುಚಿತ ಇತ್ಯಾದಿ ವೈವಿಧ್ಯಮಯ ವ್ಯಕ್ತಿತ್ವಗಳು ತು೦ಬಾ ಚೆನ್ನಾಗಿರುತ್ತವೆ. ಚಿತ್ರ ನೋಡುವ ಮು೦ಚೆ ವುಡಿಯನ್ನು ಇಷ್ಟ ಪಡೋದು ಕಷ್ಟ. ನೋಡಿದ ಮೇಲೆ ಅವನು ರಿಯಲ್ ಕ್ಯಾರೆಕ್ಟರ್ ಆಗಿ ಕಾಡುತ್ತಾನೆ. ಅವನ ಡೊಕ್ಯುಮೆ೦ಟರಿ ನೋಡಬೇಕು.
yes seen all those movies...itteechige naanu 'kaakasparsha' noDide..
ReplyDeleteyesterday i watched P. Sheshadri's 'beru'.innastu chennaagi maaDabhudittu annistu...
ms
geley
Is it possible give link or source of availability of the movies you write. many of they are difficult search.
ReplyDelete