Saturday, May 5, 2012

ಗಂಗಾವತರಣ-ನಾಟಕ.

ಬೇಂದ್ರೆಯವರ ಹತ್ತಿರ ಭವಿಷ್ಯ ಹೇಳುವವನೊಬ್ಬ ಬರುತ್ತಾನೆ..ನಾನು ಭವಿಷ್ಯ ಹೇಳುತ್ತೇನೆ ಎಂದಾಗ ಬೇಂದ್ರೆಯವರು 'ಇಲ್ಲ್ಯಾರೂ ಭವಿಷ್ಯ ಕೇಳುವವರಿಲ್ಲ..ನಿನ್ನ ಹಣ ತೆಗೆದುಕೊಂಡು ನೀನು ಹೋಗಪ್ಪ..' ಎನ್ನುತ್ತಾರೆ. ಅದಕ್ಕೆ ಆತ 'ಇಲ್ಲಾಸ್ವಾಮಿ ನಾನು ಶಾಸ್ತ್ರ ಹೇಳದೆ ಹಣ ಮುಟ್ಟುವುದಿಲ್ಲ..ಎಂದುತ್ತರಿಸುತ್ತಾನೆ..ಆಗ ಹೊರಬರುವ ಬೇಂದ್ರೆಯವರು ಅವನನ್ನು ಕರೆದು ದೂರದಲ್ಲಿ ಕುಳಿತ ಗಿಳಿಶಾಸ್ತ್ರದವನನ್ನು ತೋರಿಸುತ್ತಾ  'ಅ೦ವಾ ಹ್ಯಾಂಗ ಭವಿಷ್ಯಾ ಹೇಳ್ತಾನೋ..' ಕೇಳುತ್ತಾರೆ.
'ಅ೦ವಾ ಗಿಳೀನ ಹೊರಕ್ ಬಿಡ್ತಾನ..ಅದು ಒಂದು ದೇವರ ಪಟ ಹೊರಕ್ ತೆಗೀತದ..ಅದ್ನಾ ನೋಡಿ ಹೇಳ್ತಾನ.. ಆದರೂ ನಮಷ್ಟ ಕರೆ ಹೇಳಲ್ಲಾ.. ಅ೦ವ..' ಎಂದು ಜಂಭ ಕೊಚ್ಚಿಕೊಳ್ಳುತ್ತಾನೆ.
'ಅಲ್ಲಪಾ..ಆ ಗಿಳೀಗಾ ತಾನೂ ಹೊರ ಬಂದಾಗ ಎಲ್ಲಾರ ಹಾರೋಗಿ ಚಂದಾಗಿರ ಬೆಟ್ಟ ಮರ ಕಾಡಲ್ಲಿ  ಬದುಕಬೇಕಾನ್ನೋದ ಅದಕ ಗೊತ್ತಿಲ್ಲ..ಅ೦ತ ಹುದ್ರಲ್ಲಿ ಅದೆಂಗ್ ಬೇರೆಯವರ ಭವಿಷ್ಯ ಹೇಳ್ತಾದಾ..ಹಾಂಗ ನೀ ಬೆಳಗೆದ್ದು ಹೊರಡೋ ಮುನ್ನಾ ಯಾರ ಮನೆಗ್ ಹೋದ್ರ ಭವಿಷ್ಯ ಕೇಳ್ತಾರ..ಯಾರ ಕೇಳಲ್ಲ..ಅನ್ನೋ ಭವಿಶ್ಯಾನ ನಿ೦ಗ್ ಗೊತಿರ್ಕಿಲ್ಲಾ...ನೀ ಹ್ಯಾಂಗ ನನ್ನ ಭವಿಷ್ಯ ಹೇಳ್ತೀಯಾ..ಎಂದಾಗ ಆತ ಸುಸ್ತಾಗುತ್ತಾನೆ..
*********************

ಮಾಸ್ತರ ನಿಮಗ ಸರ್ಕಾರದೋರು ಡಾಕ್ಟರೇಟ್ ಕೊಟ್ಟಾರ..ನೀವಿನ್ನಾ ಡಾ ಬೇಂದ್ರೆ..
ಸಂತೋಷಪ್ಪಾ..ಆದರ ನಮ್ಮಪ್ಪ ಅವ್ವ ನಾ ಹುಟ್ಟಿದಾಗಲೇ ನಮಗೆ ಡಾಕ್ಟರೇಟ್ ಕೊಟ್ಟುಬಿಟಾರ..ನನ್ನ ಹೆಸರಾ ದ.ರಾ .ಬೇಂದ್ರೆ..ಅಂದ್ರಾ ಡಿ.ಆರ್.ಬೇಂದ್ರೆ ಆಯ್ತಲ್ಲಪ..ಡಾಕ್ಟರ..
***************
ಇವೆರೆಡು  ತುಣುಕುಗಳು ರಾಜೇಂದ್ರ ಕಾರಂತಗಂಗಾವತರಣ ನಾಟಕದ್ದು.
ನಿನ್ನೆ ಶುಕ್ರವಾರ ಹನುಮಂತನಗರದ ಕೆಂಗಲ್ ಹನುಮ೦ತಯ್ಯ ಕಲಾಸೌಧದಲ್ಲಿ ರಾಜೇಂದ್ರ ಕಾರಂತರ ಗಂಗಾವತರಣ ನಾಟಕವಿತ್ತು. ಬೇಂದ್ರೆಯವರ ಬದುಕು ಬರಹಗಳನ್ನಾಧರಿಸಿದ ಅದ್ಭುತ ನಾಟಕವದು. ವಸ್ತು ಮತ್ತು ನಿರೂಪಣೆಯೇ ವಿಶೇಷವಾದದ್ದು. ಅತ್ಯುತಮ ಕಲಾವಿದರು ಅಭಿನಯಿಸಿದ್ದ ಅನಾಮತ್ತು ಎರಡು ಘಂಟೆಗಳ ಈ ನಾಟಕವು ಒಂದು ನಿಮಿಷವೂ ನಿಮಗೆ ಬೋರ್ ಹೊಡಿಸುವುದಿಲ್ಲ. ಮತ್ತೆ ಎಲ್ಲಾದರೂ ಈ ನಾಟಕದ ಪ್ರದರ್ಶನವಿದ್ದರೆ ಅವಶ್ಯ ನೋಡಿ..ಅದ್ಭುತ ಅನುಭೂತಿಗೆ ಒಳಗಾಗಿ..

2 comments:

  1. ಸ್ವಾಮಿ ನಮಸ್ಕಾರ ಈ ನಾಟಕದಾಗ ಬಳಸಿದ ಭಾಷಾ ಹಂಗ ಇತ್ತೋ ಅಥವಾ ನೀವು
    ಅದನ್ನು ಕನ್ನಡದಲ್ಲಿ ಲಿಪೀಕರಿಸಲು ಹೋದಾಗ ಆದ ರಾಧ್ದಾಂತವೋ ಇದು ಗೊತ್ತಾಗಲಿಲ್ಲ...
    ನಮ್ಮ ದೇಶದಾಗ ಹೆಜ್ಜೆಹೆಜ್ಜೆಗೂ ಭಾಶಾ ಶೈಲಿ ಬದಲಾಗತದ ಉದಾ. ಅಂದ್ರ ಮಂಡ್ಯಕಡೆ ಆಡುವ
    ಕನ್ನಡ ಹಾಗೂ ಈ ಬೆಂಗಳೂರಿನಾಗ ಆಡುವ ಕನ್ನಡಕ್ಕೂ ವ್ಯತ್ಯಾಸ ಅದ, ಹಂಗ ನಮ್ಮ ಹುಬ್ಬಳ್ಳಿ-ಧಾರವಾಡಕಡೆ
    ಮಾತಾಡುವ ಕನ್ನಡಕ್ಕೆ ಅದರದೇ ಆದ ಸ್ವಾದವಿದೆ..ಪಾಪ ನಿಮ್ಮಂತವ್ರು ಸೇರಿ ಹಾಳು ಮಾಡಲಿಕ್ಕೆ ಪ್ರಯತ್ನ ಭಾಳ
    ಮಾಡಿದ್ರೂ ಅದು ಇನ್ನೂ ರುಚಿ ಕಳಕೊಂಡಿಲ್ಲ..ಬ್ಲಾಗು ಎಲ್ಲಾರು ಬರೀತಾರ ಏನು ಬರದ್ರೂ ನಡೀತದ ಅನ್ನೂವ
    ನಿಮ್ಮ ಧೋರಣಾ ಅದ ಅನಸತದ ಭಾಶಾ ಅಂದರ ತಾಯಿ ಇದ್ದಂಗ ನೀವು ಅಪಮಾನ ಮಾಡಿದ್ದು ನನ್ನ ತಾಯಿಗೆ...!!

    ReplyDelete
  2. ನಮಸ್ಕಾರಗಳು ಉಮೇಶ್ ಅವರಿಗೆ...ಭಾಷೆಯನ್ನ ಹೀಗೆ ಆಡಬೇಕೆಂಬ ನಿಯಮ ಇರುತ್ತೆ. ಮತ್ತೆ ಅದನ್ನ ಹಾಗೆ ಆಡಬೇಕು ಕೂಡ.ಭಾಷೆ ಪ್ರಾದೇಶಿಕವಾಗಿ ಬದಲಾಗುತ್ತಾ ಹೋಗುತ್ತೆ. ನಿಜ. ನಾವು ಮೈಸೂರಿನವರು.ಧಾರವಾಡದ, ಹುಬ್ಬಳಿಯ ಭಾಷೆಗಳು ಸ್ಥಳೀಯರಿಗೆ ಬರೋ ಹಾಗೆ ನಮಗೆ ಬರೋದಿಕ್ಕೆ ಸಾಧ್ಯ ಇಲ್ಲ. ಆದರೆ ಅದನ್ನ ಮಾತಾಡೋದಿಕ್ಕೆ ಪ್ರಯತ್ನಿಸಬಾರದು ಅಂತೇನೂ ಇಲ್ಲವಲ್ಲ. ಒಂದು ಭಾಷೆ ಇಷ್ಟ ಆದಾಗ ಅನುಕರಣೆ ಮಾಡೋದಿಕ್ಕೆ ಹೋಗೋದು ಸಹಜ. ಅದು ತಪ್ಪಲ್ಲ.ಆಡೋದಕ್ಕೆ ಬರಲ್ಲಾ೦ದ ತಕ್ಷಣ ಮಾತಾಡಲೇ ಬಾರದು..ನೀವೆಲ್ಲ ಮಾತಾಡಿದರೆ ಭಾಷೆ ಕೊಂದ ಹಾಗೆ ಅನ್ನೋದು ಎಷ್ಟರ ಮಟ್ಟಿಗೆ ಸರಿ? ನಿಮ್ಮ ಕಳಕಳಿ ನೋಡಿ ಒಂಥರಾ ಖುಷಿಯಾದರೂ ಭಾರೀ ಬೇಸರ ಆಯ್ತು. ಅದಕ್ಕೆ ಕಾರಣ ನೀವೆಲ್ಲಾ ಹೀಗೆ ಮಾತಾಡಬಾರದು ಅಂತ ಹೇಳ್ತೀರೆ ಹೊರತು ಹೀಗೆ ಮಾತಾಡಿದ್ರೆ ಸರಿ, ಹೀಗೆ ಅದನ್ನ ಮಾತಾಡಬೇಕು ಅಂತ ಯಾಕೆ ಅದನ್ನ ತಿದ್ದೋ ಪ್ರಯತ್ನ ಮಾಡಲ್ಲ. ಈಗ ಮೇಲಿನ ಘಟನೆಯನ್ನು ನಾಟಕದಲ್ಲಿ ಬಂದ ಹಾಗೆ ಬರೆದ್ರೆ ಚಂದ ಅನ್ನಿಸ್ತು. ಆದ್ರೆ ಆ ಭಾಷೆಯ ಬಳಕೆ ಸುಲಭವಾಗಲಿಲ್ಲ. ಪ್ರಯತ್ನಿಸಿದೆ. ನೀವು ಭಾಷಾ ಕಿಲಾಡಿಗಳು ಅದನ್ನು ಇನ್ನೊಮ್ಮೆ ಸರಿಯಾದ ಭಾಷೆಯಲ್ಲಿ ಬರೆದು ಹೀಗೆ ಬರೀಬೇಕಿತ್ತು..ಇಲ್ಲಿ ತಪ್ಪಾ ಗಿದೆ ಅನ್ನಬಹುದಿತ್ತಲ್ಲಾ.ಅದು ಬಿಟ್ಟು ತಾಯಿಗೆ ಅವಮಾನ ಮಾಡಿದಂಗೆ ಅನ್ನೋ ಮಾತು ಸರೀನಾ? ನೋಡ್ರಿ..ಯಾರು ಯಾವ ಭಾಷೆನೂ ಹಾಳು ಮಾಡ್ತಾ ಇಲ್ಲ. ಬಳಸೋದಿಕ್ಕೆ ಪ್ರಯತ್ನಿಸುತ್ತಿದ್ದಾರೆ ಅಂದ್ರೆ ಬೆಳಸೋದಕ್ಕೆ ಪ್ರಯತ್ನಿಸುತ್ತಿದ್ದಾರೇ೦ತ ಅರ್ಥ.ನಿಮ್ಮ ತರ ನಾವೇ ಅದನ್ನು ಬಳಸಬೇಕು, ಬೇರೆಯವರು ಬಳಸಿದರೆ ತಪ್ಪಾದ್ರೆ ಅದು ಕೊಂದ ಹಾಗೆ ಅನ್ನೋ ಮನೋಭಾವಾನೆ ಭಾಷೆನ ಕೊಲೆ ಮಾಡ್ತಿರೋದು. ಹುಟ್ಟಿದ ಮಗು ಮಾತಾಡೋದಕ್ಕೆ ಪ್ರಯತ್ನಿಸೋವಾಗ ತಪ್ಪುಗಳನ್ನೂ ಮಾಡುತ್ತೆ.ಹಾಗಂತ ಅದಕ್ಕೆ ಕಲಿಸೋಲ್ಲವೇನು? ಹಾಗೆ ಇದೂನು. ಈ ಸಂಕುಚಿತ ಮನೋಭಾವ ಬಿಡಿ. ನಾನು ಬರೆದ ಘಟನೆಯನ್ನೇ ನೀವು ಸರಿಯಾಗಿ ಪಕ್ಕಾ ಆ ಭಾಷೆಯ ಸೊಗಡಿನಲ್ಲಿ ಬರೆದು ನಮಗೆ ತೋರಿಸಿದರೆ ನಮಗೂ ಅದರ ಹದ ಗೊತ್ತಾಗುತ್ತದೆ. ಹಾಗೆ ಭಾಷೆಯ ಬಳಕೆ ಎಲ್ಲರಿಗೂ ಗೊತ್ತಾಗುತ್ತದೆ..ಏನಂತೀರ..?

    ReplyDelete