


![]() |
ರೋಪ್ ಚಿತ್ರದ ದೃಶ್ಯ. |
![]() |
ರಿಯಲ್ ಫಿಕ್ಷನ್ ಚಿತ್ರದ ಪೋಸ್ಟರ್ |

ಇದು
ಕನ್ನಡದ ಮಟ್ಟಿಗಾಯಿತು. ಜಾಗತಿಕ ಮಟ್ಟದಲ್ಲಿ ಅತೀ ಕಡಿಮೆ ಅವಧಿಯಲ್ಲಿ ಚಿತ್ರೀಕರಿಸಿರುವ
ಚಿತ್ರಗಳಿವೆಯೇ..?ಹೌದು..ಆದರೆ ಅವುಗಳ ಕೇವಲ ದಾಖಲೆಗಳಿಗಷ್ಟೇ ಮಾಡಿದ
ಚಿತ್ರಗಳಲ್ಲ.ಕಥೆಯ ಒಘಕ್ಕಾಗಿ ಮಾಡಿದ ಚಿತ್ರಗಳಾದರೂ ಅವುಗಳ ಹಿಂದಿನ ಪರಿಶ್ರಮ ಪೂರ್ವ
ಯೋಜನೆಗಳು ನಮಗೆ ಆ ಚಿತ್ರಗಳ ಸ್ವರೂಪದಲ್ಲಿ ಸಿಗುತ್ತವೆ.ಉದಾಹರಣೆಗೆ ಅಲ್ಫ್ರೆಡ್
ಹಿಚ್ಕಾಕ್ ಅವರ ರೋಪ್ ಚಿತ್ರ.ಆ ಕಾಲದಲ್ಲಿ digital ಕ್ಯಾಮೆರಾಗಳು
ಬಂದಿರಲಿಲ್ಲ.ಇದ್ದದ್ದು ಫಿಲಂ ನೆಗೆಟಿವ್ ಮಾತ್ರ.ಅದನ್ನೇ ಬಳಸಿ ಕೇವಲ ಹತ್ತು ಶಾಟ್
ಗಳಲ್ಲಿ ರೋಪ್ ಚಿತ್ರವನ್ನು ನಿರ್ದೆಶಿಸಿದ್ದಾನೆ ಹಿಚ್ ಕಾಕ್..ಒ೦ದೇ ಸ್ಥಳದಲ್ಲಿ ನಡೆಯುವ
ಈ ಥ್ರಿಲ್ಲರ್ ಚಿತ್ರವನ್ನು ಹಿಚ್ ಕಾಕ್ ಒ೦ದೇ ಶಾಟಿನಲ್ಲಿ ಚಿತ್ರೀಕರಿಸಲು
ಯೋಚಿಸಿದ್ದನೇನೋ ಎನಿಸುವುದು ಸಿನೆಮಾದಲ್ಲಿನ transision ಗಳನ್ನು ನೋಡಿದಾಗ.ಒ೦ದು
ದೃಶ್ಯದಿಂದ ಇನ್ನೊ೦ದು ದೃಶ್ಯಕ್ಕೆ ಬದಲಾಗುವಾಗ ಹಿಚ್ ಕಾಕ್ ಬಳಸಿರುವ transision
ತಂತ್ರಗಳು ನಿಜಕ್ಕೂ ನಮ್ಮಲ್ಲಿ ಬೆರಗು ಮೂಡಿಸುತ್ತವೆ.ಇಡೀ ಚಿತ್ರ ಒ೦ದೇ ಶಾಟಿನಲ್ಲಿ
ಚಿತ್ರೀಕರಿಸಿದಂತೆಯೇ ಭಾಸವಾಗುತ್ತದೆ. .ಅದು ಬಿಟ್ಟರೆ ಹಂಗರ್ ಚಿತ್ರದಲ್ಲಿ ಸರಿ
ಸುಮಾರು 17.5 ನಿಮಿಷಗಳಷ್ಟು ಉದ್ದದ ದೃಶ್ಯವೊ೦ದಿದೆ. ಬಹುಶ ಇದೆ ಫಿಲಂ ನೆಗೆಟಿವ್ ನಲ್ಲಿ
ಈವತ್ತು ಇರುವ ಸಾಧ್ಯತೆಗಳನ್ನು ಬಳಸಿ ಚಿತ್ರೀಕರಿಸಬಹುದಾದ ಗರಿಷ್ಠ ಉದ್ದ ಎನ್ನ
ಬಹುದು.ಯಾಕೆ೦ದರೆ ಒ೦ದು ಸಿನೆಮಾದ ಕ್ಯಾಮೆರ ಮ್ಯಾಗಜಿನ್ ಅಥವಾ ರೋಲ್ 19 ನಿಮಿಷಗಳಷ್ಟನ್ನು ಮಾತ್ರ ಒಮ್ಮೆಲೇ ಚಿತ್ರೀಕರಿಸುವ ಸಾಮರ್ಥ್ಯ ಹೊಂದಿರುತ್ತದೆ.
ಅದು
ಬಿಟ್ಟರೆ 'ಮೈ ಹೂ ನಾ' ಹಿಂದಿ ಚಿತ್ರದಲ್ಲಿ ಒ೦ದು ಹಾಡನ್ನು ಎರಡೇ ಶಾಟುಗಳಲ್ಲೂ ,
ಕನ್ನಡದ ಶಿಶಿರ ಚಿತ್ರದಲ್ಲಿ ಮೂರುವರೆ ನಿಮಿಷದ ಇಡೀ ಹಾಡನ್ನು ಒ೦ದೇ ಶಾಟಿನಲ್ಲೂ
ಚಿತ್ರೀಕರಿಸಲಾಗಿತ್ತು.


ಇನ್ನು ಪಿವಿಸಿ-೧ ಬಗ್ಗೆ ಹೇಳಬೇಕೆಂದರೆ ಇದೊ೦ದು ಸ್ಪ್ಯಾನಿಶ್ ಭಾಷೆಯ ಥ್ರಿಲ್ಲರ್. ಚಿತ್ರ ನಿರ್ದೇಶಕರೆ ಹೇಳುವಂತೆ ನಿಜವಾದ ಘಟನೆ ಆಧರಿಸಿ ತಯಾರಾದ ಚಿತ್ರ. ಮನೆಯೊ೦ದಕ್ಕೆ ನುಗ್ಗುವ ದುಷ್ಕರ್ಮಿಗಳು ಇಡೀ ಮನೆಯವರನ್ನು ಕಟ್ಟಿಹಾಕಿ ಮನೆಯ ಯಜಮಾನಿಯ ಕೊರಳಿಗೆ ರಿಮೋಟ್ ನಿಯಂತ್ರಿತ ಬಾಂಬ್ ಕಟ್ಟಿ ದುಡ್ಡು ಕೊಡದಿದ್ದರೆ ಸ್ಫೋಟಿಸುವುದಾಗಿ ಹೇಳಿ ಹೋಗಿಬಿಡುತ್ತಾರೆ.ಆಗ ಆಕೆಯ ಗಂಡ ಸ್ಥಳೀಯ ಪೋಲೀಸರ ನೆರೆವಿನಿ೦ದ ಆ ಬಾಂಬ್ ನಿಷ್ಕ್ರಿಯ ಗೊಳಿಸಲು ಪ್ರಯತ್ನಿಸುವುದೇ ಚಿತ್ರದ ಕಥಾ ಹಂದರ.ಸಿನಿಮಾದ ಕಥೆಯೂ ಹಾಗೆ ಇದೆ.ಕ್ಯಾಮೆರಾವೂ ಚಲಿಸುತ್ತಿರುತ್ತದೆ.ಕಥೆಯಲ್ಲಿನ ಪಾತ್ರಧಾರಿಗಳು ಓಡುತ್ತಲೇ ಇರುತ್ತಾರೆ.
ಅಡ್ರೆನಾಲಿನ್ ಇಂಗ್ಲಿಷ್ ಭಾಷೆಯ ಚಿತ್ರದ ನಿರ್ದೇಶಕ ರಾಬರ್ಟ್ ಆರ್ಚರ್ ಲಿನ್. ಇದು ಕೂಡ ಥ್ರಿಲ್ಲರ್.ಇದರ ಕಥೆ ಇಂಗ್ಲೀಷಿನಲ್ಲಿ ಬಂದ ಫೋನ್ ಬೂತ್ ಚಿತ್ರದ ಕಥೆಗೆ ಸ್ವಲ್ಪ ಹೋಲುತ್ತದೆ. ಬ್ಲಾಕ್ ಮೇಲ್ ಗೆ ಒಳಗಾದ ನಾಯಕ ವಿಧಿಯಿಲ್ಲದೇ ಬ್ಲಾಕ್ ಮೈಲರ್ ಹೇಳಿದಂತೆ ಕೇಳುತ್ತ ಹೋಗುವುದೇ ಚಿತ್ರದ ಕಥಾಸಾರ.ಇನ್ನು ರಿಯಲ್ ಫಿಕ್ಷನ್ ನಿರ್ದೇಶಕ
ಕಿಮ್ ಡಿ ಡಕ್ ಚಿತ್ರಗಳು ಕಡಿಮೆ ಮಾತಿನ ದೃಶ್ಯಕಾವ್ಯಗಳು.ಇದು ಕೂಡ ಅಷ್ಟೇ.ಕಥೆಯ ವಿಷಯದಲ್ಲಿ ಅಂತಹ ಗಮನಾರ್ಹವಿಲ್ಲದಿದ್ದರೂ ದಾಖಲೆಯ ವಿಷಯದಲ್ಲಿ ಉತ್ತಮ ಪ್ರಯತ್ನ..
ಅದೇನೇ ಇರಲಿ.ಚಿತ್ರರಂಗವನ್ನು ಸಂಶೋಧನಾ ಶಾಲೆಯನ್ನಾಗಿ ಪರಿಗಣಿಸಿ ಇಂತಹ ಪ್ರಯತ್ನಗಳನ್ನು ಮಾಡುವ ಚಿತ್ರಕರ್ಮಿಗಳಿಗೆ ಹ್ಯಾಟ್ಸ್ ಆಫ್ ಹೇಳಲೇಬೇಕಾಗುತ್ತದೆ.ಆದರೆ ಕೆಲವೊ೦ದು ದಾಖಲೆಗಳ ಹುಚ್ಚಿಗೆ ಬಿದ್ದು ಚಲನಚಿತ್ರದ ಭಾವವನ್ನು ಕಡಿತಗೊಳಿಸದಿದ್ದರೆ, ಕಥೆಯ ತೀವ್ರತೆಯನ್ನು ಕಡಿಮೆಯಾಗಿಸದಿದ್ದರೆ ಮಾತ್ರ ಅಂತಹ ಪ್ರಯತ್ನಗಳು ಗಮನಾರ್ಹವೆನಿಸಿಕೊಳ್ಳುತ್ತವೆ..ಯಾಕೆಂದರೆ ಸಿನಿಪ್ರಿಯ ದಾಖಲೆಗಳನ್ನು ಕೇಳುವುದಿಲ್ಲ ..ಉತ್ತಮ ನವನವೀನ ನಿರೂಪಣೆಯ ಚಿತ್ರಗಳನ್ನಷ್ಟೇ ಕೇಳುತ್ತಾನೆ..ಯಾವುದೇ ಹೊಸ ಪ್ರಯೋಗವೂ ಕಥೆಯ ಚಿತ್ರಕಥೆಯ ಚೌಕಟ್ಟಿನಲ್ಲೇ ಇದ್ದು ನಿರೂಪಣೆಗೆ ಪೂರಕವಾಗಿದ್ದಾಗ ಮಾತ್ರ ಇತಿಹಾಸ ಬರೆಯಲು ಸಾಧ್ಯವಾಗುತ್ತದೆ.ಹಾಗಾಗಿ ಕನ್ನಡದಲ್ಲಿ ಸಿಂಗಲ್ ಶಾಟ್ ಚಿತ್ರವನ್ನು ತೆರೆಗರ್ಪಿಸುತ್ತಿರುವುದು ಒಳ್ಳೆ ಸುದ್ದಿಯಾದರೂ ಅದರಲ್ಲಿ ನಾವೇ ಮೊದಲಲ್ಲ ಎಂಬುದು ನಮ್ಮಲ್ಲಿ, ಚಿತ್ರಕರ್ಮಿಗಳ ನೆನಪಲ್ಲಿದ್ದರೆ ಒಳ್ಳೆಯದು.ಕೌಶಿಕರ ಪ್ರಯತ್ನಕ್ಕೆ ಆಲ್ ದಿ ಬೆಸ್ಟ್ ಹೇಳುತ್ತಲೇ ದಾಖಲೆಯ ಜೊತೆಗೆ ಉತ್ತಮ ಕಥೆ -ಚಿತ್ರಕಥೆ ನಿರೂಪಣೆ ಇರಲಿ ಎಂಬ ಕೋರಿಕೆಯನ್ನು ಮು೦ದಿಡೋಣ ..ಯಾಕೆಂದರೆ ಪ್ರೇಕ್ಷಕನಿಗೆ ಬೇಕಿರುವುದು ದಾಖಲೆಯಲ್ಲ.. ಉತ್ತಮ ಸಿನಿಮಾ ಅಷ್ಟೇ..ಅಲ್ಲವೇ..?
ಅ೦ದಹಾಗೆ ಈ ಅ೦ಕಣದಲ್ಲಿ ನಾನು ನೋಡಿದ ಸಿಂಗಲ್ ಶಾಟ್ ಸಿನೆಮಾಗಳನ್ನ ಪರಿಚಯಿಸುತ್ತಾ ಹೋಗುತ್ತೇನೆ.
very informative. Your knowledge about Kannada and non-English movies is amazing.
ReplyDeletethanks a lot...
Deleteಲೋ೦ಗ್ ಟೇಕ್ ನಿ೦ದ ರೋಪ್ ಚಿತ್ರ ಸ್ಟೇಜ್ ಅಲ್ಲಿ ನೋಡಿದ ಹಾಗೆ ಅನುಭವ ಕೊಡುತ್ತದೆ. ಓರ್ಸನ್ ವೆಲ್ಲೆಸ್ ನ 'ಟಚ್ ಆಫ್ ಎವಿಲ್' ನಲ್ಲೊ೦ದು ಅದ್ಭುತ ಲೋ೦ಗ್ ಟೇಕ್ ಮೈನವಿರೇಳಿಸುತ್ತದೆ.
ReplyDeleteಲೋ೦ಗ್ ಟೇಕ್ ಅ೦ದಾಗ ಸಟಾನ್ ಟಾ೦ಗೋ ಚಿತ್ರದ ಬಗ್ಗೆ ಹೇಳಲೇ ಬೇಕು. ನಾನಿನ್ನೂ ನೋಡಿಲ್ಲ. ಏಳು ಗ೦ಟೆಯ ಸಿನೆಮಾಕ್ಕೆ ಬರಿಯ ನೂರೈವತ್ತು ಟೇಕ್ ಮಾತ್ರ. ಹೆಚ್ಚಿನವು ಹತ್ತು ನಿಮಿಷಗಳವು. ಚಿತ್ರದ ಲಿ೦ಕ್ @http://www.imdb.com/title/tt0111341/
ಹೀಗೊ೦ದು ಲಿ೦ಕು @http://listverse.com/2007/10/05/top-15-amazing-long-takes/
ಧನ್ಯವಾದಗಳು...ಸತಾನ್ ಟಾ೦ಗೊ ನಾನು ನೋಡಿದ್ದೀನಿ. ದಾಖಲೆ ವಿಷಯ ಬಿಟ್ಟರೆ ತು೦ಬಾ ಬೊರಿ೦ಗ್. ನೀವು ಗುಸ್ ವಾನ್ ಸಂಟನ ಎಲೆಫಂತ್ ನೋಡಿದ್ದರೆ ಅದೇ ರೀತಿಯ ಶಾಟ್ ಗಳು...ತು೦ಬಾ ಒಳ್ಳೆಯ ಲಿ೦ಕ್ಸ್ ಕಳುಹಿಸಿದ್ದೀರಾ..
Deleteಉತ್ತಮ ಮಾಹಿತಿ ಸರ್.. ಮಾತು ಅರವಿಂದ್ ಕೌಶಿಕ್ ರ ಸಿನಿಮಾಗೆ ಸಂಭಂದಿಸಿದಂತೆ ಹೇಳುವುದಾದರೆ.. ಇದು ಸಿಂಗಲ್ ಶಾಟ್ ಅಲ್ಲ.. ಸಿಂಗಲ್ ಟೇಕ್.. ಐದು ಅಥವ ಏಳು(ಪಕ್ಕ ನೆನಪಿಲ್ಲ) ೫ಡಿ ಕ್ಯಾಮೆರಾಗಳನ್ನು ಬಳಸಿ ಸಿನಿಮಾ ಚಿತ್ರಿಸಲಾಗುತ್ತಿದೆ.
ReplyDeleteಅದೇ ಸಿಂಗಲ್ ಶಾಟ್..ನೋಡೋಣ ಒಳ್ಳೆ ರೀತಿಯಲ್ಲಿ ಆಸಕ್ತಿಕರವಾಗಿ ಬಂದ್ರೆ ಕನ್ನಡದ ಚಿತ್ರರ೦ಗದ ಮಟ್ಟಿಗೆ ಹೆಮ್ಮೆಯ ವಿಷಯವೇ ..
Deletehttp://www.imdb.com/title/tt0318034/
ReplyDeleteRussian ark whole movie in single shot
- Pramod
ಹೌದು.ನಾನು ನೋಡಿದ್ದೀನಿ. ನನಗೇನೂ ಮೊದಲಸಾರಿ ಅರ್ಥ ಆಗ್ಲಿಲ್ಲ...ಆಮೇಲೆ ತ್ಸಾರ್ ದೊರೆಗಳ ಬಗ್ಗೆ, ರಶಿಯನ್ ಇತಿಹಾಸದ ಬಗ್ಗೆ ಓದಕೊ೦ಡ ಮೇಲೆ ಸ್ವಲ್ಪ ಅರ್ಥ ಆಯಿತು.
Deleteಅಭಿನಂದನೆಗಳು....ಬಹಳ informative
ReplyDeleteರವೀಂದ್ರ ಟಾಕೀಸು :) .. ಏನ್ ಹೇಳ್ಬೇಕು ಹೇಗೆ ಹೇಳ್ಬೇಕು ಗೊತ್ತಾಗ್ತಿಲ್ಲ .. ಸಿನಿಮಾ ನೋಡೋಕೆ ಕಣ್ಣಷ್ಟೇ ಅಲ್ಲ ವಿಷನ್ ಕೂಡಾ ಬೇಕು & ಆದರೆ ಆ vision ಪರಿಮಿತಿ ವ್ಯಾಪ್ತತೆ ಏನು ಎತ್ತ ಯಾವ್ದೂ ಗೊತ್ತಿಲ್ಲದ ನನ್ನಂತವರು ನಿಮ್ಮ ಟಾಕೀಸಿಗೆ ಭೇಟಿ ನೀಡತಕ್ಕದ್ದು ;) ,
ReplyDeleteಮಾರ್ಚ್ ೨೩ ನನ್ನ ಮಸ್ಟ್ ವಾಚ್ ಲಿಸ್ಟ್ ಲಿ ಲೀನವಾಗಿದೆ .. ಟೈಟಲ್ ಹಂಗ್ ಇಟ್ಟ ಮಾತ್ರಕ್ಕೆ ದಯವಿಟ್ಟು ಮಾರ್ಚ್ ವರೆಗೂ ಕಾಯಿಸಬೇಡಿಪ !!! :P