ಅಂತೂ ಇಂತೂ ವೇದಾ ಮೇಡಂ ಕಥೆ ಮುಗಿದಿದೆ. ಸುಮ್ಮನೆ
ನೀಳ್ಗತೆ ಬರೆಯೋಣ ಎಂದುಕೊಂಡು ಬರೆಯಲು ಪ್ರಾರಂಭಿಸಿದ ಕಥೆ ಅದು. ಮೂರೇ ಪಾತ್ರಗಳು, ಒಂದು ಆಫೀಸು ಪ್ರೇಮವೆನಿಸದ
ಪ್ರೇಮಕಥೆಯದು. ಕಥೆಯ ಪ್ರಾರಂಭದಲ್ಲಿ ಇಂಗ್ಲಿಷ್ ಶೀರ್ಷಿಕೆ ಎನ್ ಅಫೇರ್ ವಿಥ್ ಗರ್ಲ್ ವುಮನ್
ಅಂಡ್ ಸೋಲ್ ಎಂದು ಅಂದುಕೊಂಡೆನಾದರೂ ಮುಗಿದ ಮೇಲೆ ಅದಕ್ಕೊಂದು ಕನ್ನಡ ಶೀರ್ಷಿಕೆ ಇಡೋಣ ಎಂದು
ಕೊಂಡಿದ್ದೆ. ಕಥೆ ಮುಗಿಯಿತೇ ಹೊರತು ಇನ್ನೂ ನನಗೆ ಅದಕ್ಕೆ ತಕ್ಕದು ಎನಿಸಬಹುದಾದ ಶೀರ್ಷಿಕೆ
ಸಿಕ್ಕಿಲ್ಲ.
ಒಬ್ಬ ವಿವಾಹಿತ ಸುಂದರಿಯ ಮಾನಸಿಕ ತುಮುಲಗಳನ್ನು
ಕಥೆಯಾಗಿಸ ಹೊರಟಾಗ ಒಂದಷ್ಟು ಸವಾಲುಗಳು ಎದುರಾದವು. ಅದನ್ನೆಲ್ಲಾ ಬರೆದು ಈ ವಾರ, ಮುಂದಿನವಾರ
ಮುಗಿಸಿಬಿಡೋಣ ಎಂದು ಕೊಂಡೇನಾದರೂ ಅದ್ಯಾಕೋ ಅದು ಉದ್ದವಾಗುತ್ತ ಕಿರುಕಾದಂಬರಿ ಮಟ್ಟಕ್ಕೆ
ಬೆಳೆದುಕೊಂಡು ಹೋಯಿತು. ಸುಮಾರು ಜನ ನಾನು ಬರೆಯುವುದಕ್ಕೆ ಬ್ರೇಕ್ ಹಾಕಿದಾಗ ‘ಯಾಕೆ ಬರೆದಿಲ್ಲ..ಬರೆದಿಲ್ಲ
ಎಂದು ಕೇಳಿ ಬರೆಸಿದ್ದವರಿದ್ದಾರೆ. ಮುಗಿದ ಮೇಲೂ ಇಷ್ಟು ಬೇಗ ಮುಗಿಯಬಾರದಿತ್ತು ಎಂದು ಕೆಲವರು
ಹೇಳಿದರೆ ನನ್ನ ಗೆಳತಿ ಕರೆ ಮಾಡಿ ‘ಇನ್ನೂ ರಬ್ಬರ್ ತರಾ ಎಳೀತಾ ಇದ್ದೀಯಾ..ಬೇಗ ಮುಗಿಸೋ
ಮಾರಾಯಾ..’ ಎಂದು ಗದರಿದ್ದೂ ಉಂಟು. ಮುಗಿಯಿತು ಎನ್ನುವ ಪೋಸ್ಟ್ ನೋಡಿ, ಫೋನ್ ಮಾಡಿದ ಗೆಳೆಯರು
ಅದ್ಯಾಕೋ ಅಷ್ಟು ಅವಸರದಲ್ಲಿ ಮುಗಿಸಿಬಿಟ್ಟೆ ಎಂದದ್ದೂ ಉಂಟು.ಇನ್ನೇನು ಬರೆಯಲು ಸಾಧ್ಯ
ಗುರುವೇ..ಬೇಕಾದರೆ ಇನ್ನು ಮುಂದಕ್ಕೆ ನೀವೇ ಮುಂದುವರೆಸಿ ಎಂದು ಅವರಿಗೆ ಬಾಂಬ್ ಹಾಕಿದ್ದೂ ಉಂಟು.
ಇದು ನನ್ನದೇ ಕಥೆ ರವೀಂದ್ರಜಿ ಎಂದವರು ನನ್ನ ಫೇಸ್ಬುಕ್ ಗೆಳತಿಯೊಬ್ಬರು.
ಕಥೆಯ ಪ್ರತಿಕಂತನ್ನೂ ಬಿಡದೇ ಓದಿ ಇಲ್ಲಿ ನನ್ನದೇ ತುಮುಲಗಳಿವೆ , ಆ ಎರಡೂ ಪಾತ್ರಗಳು ನನ್ನ
ಹತ್ತಿರವೇ ಇದೆ.ಎಂದವರು ಅವರು. ನಾನು ನಿಮ್ಮದೇ ಕಥೆಯನ್ನು ನಿಮ್ಮ ಶೈಲಿಯಲ್ಲಿ ಬರೆಯಿರಿ ಎಂದು
ಹೇಳಿ ಅವರ ಕಥೆಗಾಗಿ ಕಾದಿದ್ದೇನೆ.
ಇದೆಲ್ಲದರ ಜೊತೆಗೆ ‘ಗುರು ಯಾರು ಗುರು ಅದು ಆಂಟಿ
ಪಟಾಯ್ಸಿದ್ದೀಯಲ್ಲ..ಯಾರೋ ಮಾರಾಯ..’ ಎಂದು ಸಿಕ್ಕಾಗಲೆಲ್ಲಾ ಕಿಚಾಯಿಸಿದ ಗೆಳೆಯರು ಕಮ್ಮಿಯಲ್ಲ.
ಅದೀಗ ನೂರಾ ಅರವತ್ತು ಪುಟಗಳ ಕಿರುಕಾದಂಬರಿ ರೂಪ ತಾಳುತ್ತಿದೆ. ಯಾವಾಗ ಬಿಡುಗಡೆಯಾಗುತ್ತದೆ
ಮುಂತಾದವುಗಳು ನನಗೂ ಗೊತ್ತಿಲ್ಲ. ಈಗ ನನಗೆ ಬೇಕಾಗಿರುವುದು ಒಂದು ಶೀರ್ಷಿಕೆ. ಒಂದು ಆಪ್ತವಾದ
ನವಿರಾದ ಚಂದನೆಯ ಶೀರ್ಷಿಕೆ ಬೇಕೇ ಬೇಕು.
ದಯಮಾಡಿ ಆ ತರಹದ ಶೀರ್ಷಿಕೆಯೊಂದನ್ನು ಕೊಡಿ ಎಂಬ
ಕೋರಿಕೆಯನ್ನು ನಿಮ್ಮ ಮುಂದಿಡುತ್ತಿದ್ದೇನೆ.
dear sir.........
ReplyDeletee kathe na ellige mugisiddu nange besara vagide plz matte munduvarisi.............................