ಇದು ಚಿತ್ತಚೋರನ ಹೃದಯಸ್ಪರ್ಶಿ ಕಥೆ ಎಂಬುದನ್ನು ಈ ಚಿತ್ರದ ಒಂದು ಸಾಲಿನ ವಿಮರ್ಶೆ
ಎಂದುಬಿಡಬಹುದು. ಬಾಲಿವುಡ್ ಚಿತ್ರರಂಗದಲ್ಲಿ ಅನುರಾಗ್ ಕಶ್ಯಪ್ ಮತ್ತು ವಿಕ್ರಮಾದಿತ್ಯ
ಮೊಟ್ವಾನಿಗೆ ಅವರದೇ ಆದ ಹೆಸರಿದೆ. ಅದರಲ್ಲೂ ಅನುರಾಗ್ ಕಶ್ಯಪ್ ಮಾಡದ ಹೊಸ ಪ್ರಯತ್ನಗಳಿಲ್ಲ.
ಹಿಡಿಯದ ಕ್ರಾಂತಿಕಾರಿ ಮಾರ್ಗಗಳಿಲ್ಲ. ಆದರೂ ಪ್ರಾರಂಭದಲ್ಲಿ ಅವರು ಕೈಹಾಕಿದ ಚಿತ್ರಗಳು ಏನೇನೋ
ಕಾರಣಗಳಿಂದ ಹೊರಬರದೆ ಒದ್ದಾಡಿದ ಪ್ರತಿಭಾವಂತ. ಆದರೆ ಸಮಯ ಕೈ ಹಿಡಿದಾಗ ತಾನಷ್ಟೇ ಮುಂದುವರೆಯಲು
ಆಶಿಸದೆ ಹೊಸತನದ ತುಡಿತವಿರುವ ಪ್ರತಿಭಾವಂತರಿಗೆ ಅವಕಾಶಕೊಡುವಂತಹ ಒಳ್ಳೆಯ ಮನಸ್ಸಿನ ನಿರ್ದೇಶಕ
ಅನುರಾಗ್ ಕಶ್ಯಪ್. ಏಕ್ತಾ ಕಪೂರ್ ಮತ್ತು ಅನುರಾಗ್ ಕಶ್ಯಪ್ ಜಂಟಿ ನಿರ್ಮಾಣದಲ್ಲಿ ಉಡಾನ್
ಖ್ಯಾತಿಯ ವಿಕ್ರಮಾದಿತ್ಯ ಮೋಟ್ವಾನಿ ನಿರ್ದೇಶನದಲ್ಲಿ ಹೊರ ಬಂದಿರುವ ಲುಟೇರಾ ಚಿತ್ರ ಅಂತಹದ್ದೇ
ಒಂದು ಹೊಸ ವಿಭಿನ್ನ ಪ್ರಯತ್ನ ಎನ್ನಬಹುದು.
ಚಿತ್ರದ ನಿರೂಪಣೆ ಮಂದಗತಿಯದು. ಯಾವುದೇ ತುರಾತುರಿಯಿಲ್ಲದ ಸುಂದರ ಪರಿಸರದಲ್ಲಿರುವ ನಡುವಣ
ಕೊಳದಲ್ಲಿನ ನೀರಿನಂತಹದ್ದು. ಚಲಿಸದ ಸ್ಥಿರ ಚಿತ್ರದಂತಿದ್ದರೂ ಕಣ್ಣಿಗೆ ತಂಪು ತಂಪು. ಏನೂ
ಘಟಿಸದಿದ್ದರೂ ನೋಡುತ್ತಾ ನಿಂತರೆ ಹೇಗೆ ಬೇಸರವಾಗುವುದಿಲ್ಲವೋ ಹಾಗೆಯೇ ಈ ಚಿತ್ರವೂ. ಆದರೆ
ಅದಕ್ಕೆ ಹೇಗೆ ನಿಸರ್ಗವನ್ನಾರಾಧಿಸುವ ಮನಸ್ಸು ಇರಬೇಕೋ ಹಾಗೆಯೇ ಲುಟೇರಾ ಚಿತ್ರವನ್ನು ವೀಕ್ಷಿಸಲು
ಆಸ್ವಾಧಿಸಲು ಒಂದು ಮನಸ್ಥಿತಿಯೂ ಅತ್ಯಗತ್ಯ. ಯಾಕೆಂದರೆ ಸಿಂಘಂ, ದಬಾಂಗ್ ಭರಾಟೆಯ ಚಿತ್ರಗಳನ್ನು
ನೋಡಿದವರು ಅದೇ ವೇಗವನ್ನು ಚಿತ್ರವಿಚಿತ್ರ ತಿರುವುಗಳನ್ನು ನಿರೀಕ್ಷಿಸುತ್ತಾ ಚಿತ್ರಮಂದಿರದಲ್ಲಿ
ಕುಳಿತಿರಾದರೆ ಯಾಕೋ ಲುಟೇರಾ ಚಿತ್ರ ನಿಧಾನವೆನಿಸಿ ಬೋರ್ ಎನಿಸಲೂ ಬಹುದು.
ಅಂದರೆ ಲುಟೇರಾ ಚಿತ್ರವನ್ನು ಸರ್ವಶ್ರೇಷ್ಠ
ಚಿತ್ರವೆನ್ನಬಹುದೇ..? ಖಂಡಿತ ಇಲ್ಲ. ಚಿತ್ರದ ಗತಿ ನಿಧಾನವಾದರೂ ಅಗತ್ಯವಿರುವೆಡೆ ಚಿತ್ರವನ್ನು
ಸ್ವಲ್ಪವಾದರೂ ವೇಗವಾಗಿ ನಿರೂಪಿಸಬಹುದಿತ್ತು. ಚಿತ್ರದಲ್ಲಿ ಬರುವ ಭಾವನಾತ್ಮಕ ಸನ್ನಿವೇಶದ ಚಿತ್ರಣದಂತೆಯೇ
ನಾಯಕ ನಾಯಕಿ ಪ್ರೇಮಾಂಕುರದ ದೃಶ್ಯಗಳನ್ನಾದರೂ ಲವಲವಿಕೆಯಿಂದ ಅಂದಗಾನಿಸಬಹುದಿತ್ತು. ಸಂಭಾಷಣೆ
ಚುರುಕಾಗಿದ್ದರೆ ಚಿತ್ರಕ್ಕೊಂದು ವೇಗ ದಕ್ಕುತ್ತಿತ್ತೇನೋ?
ಚಿತ್ರದ ಕಥೆ ಖ್ಯಾತ ಕಥೆಗಾರ ಒ ಹೆನ್ರಿಯವರದ್ದು. ದಿ ಲಾಸ್ಟ ಲೀಫ್ ಒಂದು ಸಣ್ಣ ಕಥೆ.
ಅದನ್ನು ಭಾರತೀಯ ಸೊಗಡಿಗೆ ಬದಲಾಯಿಸಿ ಚಿತ್ರ ರೂಪಕ್ಕೆ ರೂಪಾಂತರಿಸಲು ಕಥೆಯನ್ನು ಹಿಗ್ಗಿಸಿರುವ
ಪರಿಯನ್ನು ನಾವು ಮೆಚ್ಚಿಕೊಳ್ಳಲೇ ಬೇಕು. ಇನ್ನು ಸಂಗೀತ,ಛಾಯಾಗ್ರಹಣ, ಕಲಾ ನಿರ್ದೇಶನಗಳು ಚಿತ್ರದ
ಆಶಯಕ್ಕೆ ತಕ್ಕಂತೆ ತಮ್ಮ ಸಂಪೂರ್ಣವಾದ ಬೆಂಬಲ ನೀಡಿರುವುದು ಆಯಾ ತಂತ್ರಜ್ಞರನ್ನು ಮೆಚ್ಚುಗೆಗೆ
ಪಾತ್ರವಾಗಿಸುವ ಅಂಶ ಎನ್ನಬಹುದು. ನಿರ್ದೇಶಕ ಮೊತ್ವಾನಿಯವರ ಪ್ರಯತ್ನಕ್ಕೆ ಬೆಂಬಲ
ಸೂಚಿಸುವುದಕ್ಕಾದರೂ ಚಿತ್ರವನ್ನೊಮ್ಮೆ ನೋಡಬಹುದು.ಅಮಿತ್ ತ್ರಿವೆದಿಯವರ ಸಂಗೀತ, ಅನುರಾಗ್ ಕಶ್ಯಪ್ ರ ಸಂಭಾಷಣೆಯಿರುವ ಈ ಚಿತ್ರದ ಮುಖ್ಯ
ಭೂಮಿಕೆಯಲ್ಲಿರುವುದು ರಣವೀರ್ ಸಿಂಗ್ ಮತ್ತು ಸೋನಾಕ್ಷಿ ಸಿನ್ಹಾ.
Fair enough warning for Lootera!!:-)but looks like exactly my type of movie:
ReplyDeletei once overheard my mom saying to her friend: namm malathi noDo cinema hegirutte andre naanu bELe bEyisi, tarakaari cut maadi, masale rubbi, sambar ge kudi baMdu ondu oggaraNe haaki hora bandaagloo ade scene naDeyuttirutte anta..:-)
eager to watch both Lootera and BMB...
ನಾನು ಈ ಚಿತ್ರವನ್ನು ನೋಡೋಣ ಅ೦ತಿದ್ದೆ. ಈಗ ಅನಿಸುತ್ತಿಲ್ಲ. ನಾನೇ ತು೦ಬಾ ಸಿನಿಕ್ ಆಗಿದ್ದೀನೋ ಗೊತ್ತಿಲ್ಲ. ಸದ್ಯದ ಯಾವುದೇ ಸಿನೆಮಾ ನೋಡಬೇಕೆ೦ದು ಅನಿಸುತ್ತಿಲ್ಲ!!
ReplyDeleteಈ ಲುಟೇರಾ ಥರಹವೇ ಕನ್ನಡದಲ್ಲಿ ವಿಷ್ಣು, ಪ್ರಭಾಕರ್, ಅಂಬರೀಶ್ ಇವರೆಲ್ಲರ ಬಹು ತಾರಾಗಣದ ವಿಗ್ರಹಚೋರ-ಪೋಲೀಸನ ತಂಗಿ ಪ್ರೇಮಕಥೆ ಬಂದಿತ್ತ್ತು. ಅದರ ಹೆಸರು ನೆನಪಾಗುತ್ತಿಲ್ಲ. ನಿಮಗೇನಾದರೂ ಗೊತ್ತೇ?
ReplyDeleteಧನ್ಯವಾದಗಳು ಸರ್ ನಿಮ್ಮ ಮೆಚ್ಚುಗೆಗೆ . ಹೌದು ಆ ಸಿನಿಮಾದ ಹೆಸರು ಮಹಾಪ್ರಚಂಡರು.
Delete