ನನಗೆ ಗೊತ್ತಿರುವಂತೆ ಇರಾನಿ ಚಿತ್ರಗಳು ಪಕ್ಕಾ ಸೊಗಡಿನ ಚಿತ್ರಗಳು ಎನಿಸುತ್ತವೆ.ಅಲ್ಲಿನ ನಿರ್ದೇಶಕರು ಪಾಶ್ಚಿಮಾತ್ಯ ಚಿತ್ರರಂಗದಿಂದ ನಮ್ಮ ತರಹ ಸ್ಪೂರ್ತಿಗೊಂಡಿದ್ದು ಕಡಿಮೆ. ತಮಗೆ ತೋಚಿದಂತೆ ತಮ್ಮದೇ ಕಥೆಯನ್ನು ಹೇಳುತ್ತಾ ಸಾಗಿದವರು ಅವರು. ಹಾಗಾಗಿಯೇ ನಮಗೆ ಹಾಲಿವುಡ್ ತಂತ್ರಜ್ಞಾನವಾಗಲಿ ನಿರೂಪಣಾ ಶೈಲಿಯಾಗಲಿ ಇರಾನಿ ಚಿತ್ರಗಳಲ್ಲಿ ಕಾಣಸಿಗದು. ಹಾಗೆಯೇ ಅವರ ಚಿತ್ರಗಳಲ್ಲಿ ಆತುರವಿಲ್ಲ. ಎಲ್ಲವೂ ನಿಧಾನ ಅನ್ನುವುದಕ್ಕಿಂತ ನಿಜಸಮಯದಲ್ಲಿ ಕಣ್ಮುಂದೆ ನಡೆಯುತ್ತಿದೆಯೇನೋ ಎನ್ನುವಂತಿರುತ್ತವೆ. ಪ್ರತಿಯೊಂದು ಕ್ರಿಯೆ, ಪ್ರತಿಕ್ರಿಯೆಯನ್ನು ತೋರಿಸುವುದರಲ್ಲಿ ಅವರದು ಎತ್ತಿದ ಕೈ.ದಿ ಕಲರ್ ಆಫ್ ಪ್ಯಾರಡೈಸ್ ಮಜಿದ್ ಮಜಿದಿ ನಿರ್ದೇಶನದ ಇರಾನಿ ಚಿತ್ರ. ಅಂಧ ಹುಡುಗನ ಕಥೆಯಿರುವ ಈ ಚಿತ್ರವನ್ನು ನೋಡುತ್ತಾ ನೋಡುತ್ತಾ ನಾನು ಅದೆಷ್ಟು ಸಲ ಪರವಶನಾಗಿದ್ದೀನೋ..? ಆ ಹುಡುಗ ಅಂಧ ಹುಡುಗನ ಅಭಿನಯ ಕಥೆಯ ನಿರೂಪಣೆ ಮತ್ತು ಸಂಭಾಷಣೆ ನನ್ನನ್ನು ಬೇರೆಯದೇ ಲೋಕಕ್ಕೆ ಕರೆದುಕೊಂಡು ಹೋಗಿದೆ.
ಹೀಗೆ ಕಾಣುತ್ತದೆ ಕನ್ನಡ ಸಬ್ ಟೈಟಲ್ |
ನಾನು ಮೊದಲೇ ಹೇಳಿದಂತೆ ನಾನು ಗೆಳೆಯ ಫಿಲಿಪ್ ಕನ್ನಡ ಅಡಿಬರಹ/ಸಬ್ ಟೈಟಲ್ ಗಾಗಿ ಒದ್ದಾಡಿ ಕೊನೆಗೆ ವಸುಧೇಂದ್ರರ ಹತ್ತಿರ ಪ್ರಸ್ತಾಪವಿಟ್ಟದ್ದು, ಅವರು ಅದನ್ನು ಆರು ತಿಂಗಳು ಪ್ರಯತ್ನಿಸಿ ಯಶಸ್ವಿಯಾದದ್ದು ನಿಮಗೆ ಗೊತ್ತೇ ಇದೆ. ಮೊನ್ನೆ ನಾನು ವಸುಧೇಂದ್ರ ಭೇಟಿಯಾದಾಗ ಅವರು ದಿ ಕಲರ್ ಆಫ್ ಪ್ಯಾರಡೈಸ್ ಚಿತ್ರವನ್ನು ಪ್ರದರ್ಶಿಸುತ್ತಿದ್ದೇನೆ, ಹಾಗಾಗಿ ನನಗೆ ಕನ್ನಡ ಸಬ್ ಟೈಟಲ್ ಮಾಡಿಕೊಡು ಎಂದರು. ತುಂಬಾ ಒಳ್ಳೆಯ ಜಗತ್ತಿನ ಚಿತ್ರಗಳನ್ನು ನಾವೆಲ್ಲಾ ನಮಗೆ ಗೊತ್ತಿರುವ ಹರಕು ಮುರುಕು ಇಂಗ್ಲೀಷಿನ ಸಬ್ ಟೈಟಲಿನ ಸಹಾಯದಿಂದ ನೋಡಿ ಅರ್ಥ ಮಾಡಿಕೊಳ್ಳುತ್ತೇವೆ. ಆದರೆ ಇಂಗ್ಲೀಷ್ ಬಾರದವರ ಗತಿ ಏನು ಎಂಬುದು ನಮ್ಮ ಪ್ರಶ್ನೆ. ಹಾಗೆಯೇ ಸುಮಾರಷ್ಟು ಭಾಷೆಯಲ್ಲಿ ಸಬ್ ಟೈಟಲ್ ಇದ್ದರೂ ಕನ್ನಡದಲ್ಲಿ ಇಲ್ಲವಲ್ಲ ಎನ್ನುವ ಬೇಸರ. ಹಾಗಾಗಿ ನಾವೇ ಏಕೆ ಒಂದು ಗುಂಪು ಮಾಡಿಕೊಂಡು ನಮನಮಗಿಷ್ಟದ ಜಗತ್ತಿನ ಚಿತ್ರಗಳಿಗೆ ಸಬ್ ಟೈಟಲ್ ಮಾಡಿದರೇ ಕನ್ನಡದಲ್ಲಿ ಸಬ್ ಟೈಟಲ್ ಮಾಡಿದ ಹಾಗೆ ಆಗುತ್ತದೆ ಎಂದರು ವಸುಧೇಂದ್ರ. ಸಬ್ ಟೈಟಲ್ ಮಾಡುವುದು ತುಂಬಾ ಸುಲಭ. ಇಂಗ್ಲೀಷಿನಲ್ಲಿನ ಸಬ್ ಟೈಟಲ್ಲನ್ನು ಕನ್ನಡಕ್ಕೆ ಅನುವಾಧಿಸುವುದು ಅಷ್ಟೆ.
ಈಗ ಸಧ್ಯಕ್ಕೆ ಕನ್ನಡದ ಅನ್ಸಿಕೋಡ್ ಲಿಪಿಯನ್ನು ಮಾತ್ರ ವಿ.ಎಲ್.ಸಿ.ಮೀಡಿಯ ಪ್ಲೇಯರ್, ಎಮ್.ಪಿ.ಸಿ.ಪ್ಲೇಯರ್ ಸಪೋರ್ಟ್ ಮಾಡುತ್ತಿದೆ.
ವಿ.ಎಲ್.ಸಿ.ಯಲ್ಲಾದರೇ ಅಲ್ಲಿನ ಟೂಲ್ಸ್ ಗೆ ಹೋಗಿ ಅಲ್ಲಿ ಪ್ರಿಫೆರೆನ್ಸೆಸ್ ಗೆ ಹೋಗಿ ಅಲ್ಲಿ ಸಬ್ ಟೈಟಲ್ ಎಂಬಲ್ಲಿ ಲಿಪಿಯನ್ನು ಕನ್ನಡದ ನುಡಿಗೋ, ಬರಹಕ್ಕೋ ಬದಲಾಯಿಸಿದರೇ ಆಯಿತು. ಮೊದಲೇ ನಿಮ್ಮ ಕಂಪ್ಯೂಟರ್ ನಲ್ಲಿ ಕನ್ನಡ ಲಿಪಿ ಇನ್ ಸ್ಟಾಲ್ ಆಗಿರಬೇಕು ಎಂಬುದು ಗಮನದಲ್ಲಿರಲಿ.
ಇನ್ನು ಎಸ್.ಆರ್.ಟಿ. ಫೈಲ್ ಅನ್ನು ನೋಟ್ ಪ್ಯಾಡ್ ನಲ್ಲಿ ತೆರೆದುಕೊಂಡರೇ, ಅಲ್ಲಿ ಫಾಂಟ್ ಎನ್ನುವಲ್ಲಿ ನುಡಿಗೋ, ಬರಹಕ್ಕೋ ಬದಲಾಯಿಸಿದರೇ ಆಯಿತು. ನೀವು ಕನ್ನಡ ಸಬ್ ಟೈಟಲ್ಲಿನ ಜೊತೆಗೆ ಚಿತ್ರವನ್ನು ಆರಾಮವಾಗಿ ನೋಡಬಹುದು.ನಾನು ನನ್ನ ಮೊದಲ ಸಬ್ ಟೈಟಲ್ ಮಾಡಿದ್ದು ದಿ ಕಲರ್ ಆಫ್ ಪ್ಯಾರಡೈಸ್ ಚಿತ್ರಕ್ಕೆ.
ನಿಮ್ಮಲ್ಲೂ ಕನ್ನಡ ಸಬ್ ಟೈಟಲ್ ಮಾಡಲು ಆಸಕ್ತಿ ಇರುವವರು ನಮ್ಮೊಡನೆ ಕೈ ಜೋಡಿಸಿದರೇ ಸುಮಾರಷ್ಟು ಚಿತ್ರಕ್ಕೆ ಕನ್ನಡ ಸಬ್ ಟೈಟಲ್ ಮಾಡಿಬಿಡಬಹುದು. ನಮ್ಮವರಿಗೆ ಜಗತ್ತಿನ ಚಿತ್ರಗಳನ್ನು ತೋರಿಸಬಹುದು. ಸರಿಯಾಗಿ ಕುಳಿತುಕೊಂಡರೆ 3 ತಾಸಿನ ಕೆಲಸವದು. ನಾವೆಲ್ಲರೂ ಒಂದು ಗುಂಪು ಮಾಡಿಕೊಂಡು ಯಾವಯಾವ ಚಿತ್ರಕ್ಕೆ ಯಾರು ಯಾರು ಸಬ್ ಟೈಟಲ್ ಮಾಡುತ್ತಿದ್ದೇವೆ ಎಂಬುದನ್ನು ಮೊದಲೇ ತಿಳಿದುಕೊಂಡರೇ ಇಬ್ಬಿಬ್ಬರು ಒಂದೇ ಚಿತ್ರಕ್ಕೆ ಸಬ್ ಟೈಟಲ್ ಮಾಡುವುದು ತಪ್ಪುತ್ತದೆ.
ದಯವಿಟ್ಟು ಎಲ್ಲರೂ ಕೈಜೋಡಿಸಿ ಎಂಬ ಮನವಿ. ನನ್ನ ಈಮೇಲ್ ವಿಳಾಸಃ swapnageleya@gmail.com
ಹಾಗೆಯೇ ದಿ ಕಲರ್ ಆಫ್ ಪ್ಯಾರಡೈಸ್ ಚಿತ್ರದ ಕನ್ನಡ ಸಬ್ ಟೈಟಲ್ ಗೆ ಇಲ್ಲಿ ಕ್ಲಿಕ್ ಮಾಡಿ.
color of paradise_KAN_SUB
ಅದರ ಪಾಸ್ ವರ್ಡ: ravindratalkies.
ಬನ್ನಿ ಎಲ್ಲರೂ ಸೇರಿ ಒಂದಷ್ಟು ಚಿತ್ರಗಳಿಗೆ ಕನ್ನಡ ಸಬ್ ಟೈಟಲ್ ಮಾಡೋಣ. ನಿಮ್ಮ ಈಮೇಲ್ ಎದುರು ನೋಡುತ್ತಿರುತ್ತೇನೆ.
color of paradise_KAN_SUB
ಅದರ ಪಾಸ್ ವರ್ಡ: ravindratalkies.
ಬನ್ನಿ ಎಲ್ಲರೂ ಸೇರಿ ಒಂದಷ್ಟು ಚಿತ್ರಗಳಿಗೆ ಕನ್ನಡ ಸಬ್ ಟೈಟಲ್ ಮಾಡೋಣ. ನಿಮ್ಮ ಈಮೇಲ್ ಎದುರು ನೋಡುತ್ತಿರುತ್ತೇನೆ.
ತುಂಬಾ ಒಳ್ಳೆಯ ಪ್ರಯತ್ನ
ReplyDeleteಶ್ಲಾಘನೀಯ ಪ್ರಯತ್ನ. ನನ್ನ ಬಳಿ 300+ ಇ೦ಗ್ಲೀಷ್ ಸಬ್ ಟೈಟಲ್ ಗಳಿರುವ ವರ್ಲ್ ಮೂವಿಸ್ ಚಿತ್ರಗಳಿವೆ. ಹಾಗೇನೆ 400+ ಇ೦ಗ್ಲೀಷ್ ಚಿತ್ರಗಳೂ(ಎಲ್ಲದಕ್ಕೂ ಸಬ್ ಟೈಟಲ್ ಇದೆ) ಇವೆ. ಇದರಿ೦ದ ನಿಮಗೆ ಸಹಾಯವಾಗುವುದಾರೆ ದಯವಿಟ್ಟು ಹೇಳಿ. ನನ್ನ ಕಲೆಕ್ಷನ್ ಅನ್ನು ನಿಮಗೆ ಕೊಡುತ್ತೇನೆ :)
ReplyDeletehttp://www.icheckmovies.com/movies/checked/?user=pramodc84&sort=officialtoplists
oh wow!! thats a wise initiative. I am interesting in providing sub titles (in kannada) for some good marathi movies. whenever i am watching a marathi movie with my family it irritates me when i have to stop and explain..:-)
ReplyDeleteಅದ್ಭುತ ಪ್ರಯತ್ನ ರವೀಂದ್ರ! ಹಾಗೆಯೇ ಈ ತರಹದ ಎಲ್ಲಾ ಕನ್ನಡದ ಸಬ್ ಟೈಟಲ್ ಗಳು ಒಟ್ಟಿಗೆ ಸಿಗುವ ಒಂದು ವೆಬ್ ಸೈಟ್ ಮಾಡಿದರೆ ಒಳ್ಳೆಯದು!
ReplyDeletethe file is not opening.... :(
ReplyDeleteplease gimme ur email, iwill send it. thanking you
DeleteKannada subtitle file is not opening.. please send to nimmasms@gmail.com
DeleteThanking you..
ಒಳ್ಳೆ ಪ್ರಯತ್ನ ಶುಭಾಶಯಗಳು .
ReplyDeleteನಮಗೂ ಸಿನೆಮಾ ನೋಡುವ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು
0lleya kelasa
ReplyDeleteI would like to contribute to this. it would be great if you give more details about this. thank you.
ReplyDeleteನಿಮ್ಮ ಪ್ರಯತ್ನ ನಿಜವಾಗಲು ಅಧ್ಬುತ. ನನ್ನ ಕೆಲ ಕನ್ನಡ ಬಾರದ ಸ್ನೇಹಿತರು, ಕನ್ನಡ ಸಿನಿಮಾ ನೋಡಲು ಆಸಕ್ತಿ ಹೊಂದಿದ್ದಾರೆ, ಅದರೆ ಕನ್ನಡ ಚಿತ್ರಗಳಿಗೆ ಅಡಿಬರಹ ಇರುವುದಿಲ್ಲ ಎಂದು ಹೇಳುತ್ತಾರೆ. ದಯವಿಟ್ಟು ಕನ್ನಡ ಅಡಿಬರಹ ಡೌನ್ ಲೋಡ್ ಮಾಡಲು ಯಾವದಾದರು ಜಾಲತಾಣ ಇದ್ದರೆ ಹೇಳಿ. ಇಲ್ಲ ಅಂದರೆ ಕನ್ನಡ ಚಿತ್ರಗಳಿಗೆ ಇಂಗ್ಲೀಷ್ ಅಡಿಬರಹ ಹೇಗೆ ಬರೆಯಲು ಸಾಧ್ಯ ಎಂದು ತಿಳಿಸಿ ಕೊಡಿ.
ReplyDeleteOlleya Prayatna.. DOM :)
ReplyDeleteHello....... Can i get the Kannada sub title...?? my mail id : gmahesha@gmail.com
ReplyDeleteThanks in advance ......