ಸುಮ್ಮನೆ ಕಳೆದ ಸಾರಿಯ ಇದೇ ದಿನವನ್ನು ಗಮನಿಸಿದರೇ ನನ್ನ ಬದುಕಿನಲ್ಲಿ ಅಂತಹ ಅದ್ಭುತ ಎನಿಸಿದ್ದು ಏನು ನಡೆದಿಲ್ಲ ಎನ್ನಬಹುದು. ಹೋದ ಸಾರಿ ಇದೇ ದಿನಗಳಲ್ಲಿ 5 ನೇ ಬೆಂಗಳೂರು ಅಂತರ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸಿನಿಮಾ ನೋಡುತ್ತಾ ಕಾಲ ಕಳೆದಿತ್ತು. ಆದರೆ ಈ ಸಾರಿ ಅದು ಸಾಧ್ಯವಾಗಲೇ ಇಲ್ಲ. ಹಾಗಾದರೆ ಏನು ಮಾಡಿದೆ ಅಂತಹ ಸಾಧನೆ ಎಂಬ ಪ್ರಶ್ನೆಗೆ ಹೇಳಿಕೊಳ್ಳುವಂತಹ ಉತ್ತರವೂ ಇಲ್ಲ. ಬಿಡುಗಡೆಯಾಗಬೇಕಿದ್ದ ನನ್ನ ಸಿನಿಮಾ ಮತ್ತಷ್ಟು ಸಮಸ್ಯೆಯಲ್ಲಿ ಸಿಕ್ಕಿಕೊಂಡಿತ್ತು. ಆದರೆ ಅದೇಗೋ ಏನೋ 2013 ರ ವರ್ಷಾಂತ್ಯದ ಹೊತ್ತಿಗೆ ಎಲ್ಲಾ ಸಮಸ್ಯೆಗಳು ವಿವಾದಗಳು ಒಂದು ಮಟ್ಟಿಗೆ ಬಗೆ ಹರಿದಿದೆ. ನನ್ನ ಪುಸ್ತಕ ನೋಡಲೇಬೇಕಾದ ನೂರೊಂದು ಕನ್ನಡ ಚಿತ್ರಗಳು ಈ ವರ್ಷ ಬಿಡುಗಡೆಯಾಯಿತು. ಇಷ್ಟು ಬಿಟ್ಟರೆ ಒಂದಷ್ಟು ಧಾರಾವಾಹಿ, ಸಿನಿಮಾಗಳಲ್ಲಿ ನನ್ನನ್ನು ತೊಡಗಿಸಿಕೊಂಡದ್ದು ಬಿಟ್ಟರೆ ಬೇರೆ ಯಾವ ಸಾಧನೆಯೂ ಆಗಲಿಲ್ಲ.
ಆದರೆ ಈ ಸಾರಿಯೂ ನಾನು ನೋಡಿದ ಸಿನಿಮಾಗಳು ದಾಖಲೆಯ ಸಂಖ್ಯೆ ದಾಟಿವೆ ಎನ್ನಬಹುದು. ಮೊದಲಿಗೆ ಜನವರಿಯಿಂದ ಡಿಸೆಂಬರ್ ವರೆಗೆ ಕನ್ನಡದಲ್ಲೇ ಸರಿ ಸುಮಾರು ನೂರಾ ಹದಿನಾರು ಸಿನೆಮಾಗಳು ಬಿಡುಗಡೆಯಾಗಿವೆ. ಅವುಗಳಲ್ಲಿ ಮನಸಿನ ಪುಟದಲಿ, ನೀನಂದ್ರೆ ಇಷ್ಟಕಣೋ, ಮಾನಸ, ಬ್ಲೂ ಮೂನ್ ಮುಂತಾದ ಒಂದಷ್ಟು ಚಿತ್ರಗಳನ್ನು ಹೊರತು ಪಡಿಸಿದರೇ, ನೂರಾ ಒಂಭತ್ತು ಸಿನಿಮಾಗಳನ್ನ ನೋಡಿಬಿಟ್ಟಿದ್ದೇನೆ. ಹಾಗೆಯೇ ಬಾಲಿವುಡ್ ಚಿತ್ರಗಳಲ್ಲೂ ಸುಮಾರಷ್ಟು ನೋಡಿದ್ದೇನೆ. ಹಾಲಿವುಡ್ ನ ಜಗತ್ತಿನ ಸಿನಿಮಾಗಳು ನೂರ ಐವತ್ತಕ್ಕೂ ಹೆಚ್ಚು ನೋಡಿದ್ದೇನೆ. ಆ ಲೆಕ್ಕದಲ್ಲಿ ಸುಮಾರು ಎರಡು ನೂರ ಐವತ್ತಕ್ಕೂ ಹೆಚ್ಚು ಸಿನಿಮಾಗಳನ್ನು ನೋಡಿದ ಸಂತಸ ನನ್ನದು. ಅವುಗಳಲ್ಲಿ ಸುಮಾರಷ್ಟು ಖುಷಿ ಕೊಟ್ಟಿವೆ. ಬೇಸರ ಕಳೆದಿವೆ, ಬೇಸರ ತರಿಸಿವೆ. ಅದು ಬೇರೆ ಮಾತು.
ಇನ್ನು ಈ ಸಾರಿಯ ಓದು ಸ್ವಲ್ಪ ಕಡಿಮೆ ಎನ್ನಬಹುದು. ಸುಮ್ಮನೆ ಲೆಕ್ಕ ಇಟ್ಟರೆ ಮೂವತ್ತು ಪುಸ್ತಕಗಳನ್ನು ಓದಿರಬಹುದಷ್ಟೇ.ಅದು ಬಿಟ್ಟರೆ ದಿನಪತ್ರಿಕೆ, ವಾರ ಪತ್ರಿಕೆಗಳು ಒಂದಷ್ಟು ಧಾರಾವಾಹಿಗಳನ್ನು ಅಲ್ಲಲ್ಲಿ ನೋಡಲಷ್ಟೇ ಸಾಧ್ಯವಾಯಿತು. ಮಿತ್ರರ ಬ್ಲಾಗ್ ನಲ್ಲಿದ್ದ ಒಂದಷ್ಟು ಬರಹಗಳನ್ನು ಓದಲೂ ಸಮಯ ಸಾಲದೇ ಅಲ್ಲಲ್ಲಿ ಓದಿದ್ದಾಯಿತು. ಬರವಣಿಗೆಯೂ ಅಷ್ಟಾಗಿಲ್ಲ. ಮಾರ್ಚ್ ತಿಂಗಳ ನಂತರ ಓಡಾಟ, ಕೆಲಸದ ಒತ್ತಡಗಳು ಜಾಸ್ತಿಯಾದ್ದರಿಂದ ಓದಲು ಸಮಯ, ಆಸಕ್ತಿ ಎರಡೂ ಕೊರತೆಯಾಗಿತ್ತು.ಹಾಗೆಯೇ ಇಡೀ ವರ್ಷದಲ್ಲಿ ಎರಡು ಪ್ರಬಂಧಗಳು, ಒಂದು ಕಥೆ ಮಾತ್ರ ಬರೆಯಲು ಸಾಧ್ಯವಾಯಿತಷ್ಟೇ.ನನ್ನ ಬ್ಲಾಗ್ ನಲ್ಲೂ ಕೂಡ ನಿಯಮಿತವಾಗಿ ಬರೆಯಲು ಸಮಯ ಮತ್ತು ಅದಕ್ಕೆ ಅನುಗುಣವಾದ ಪರಿಸ್ಥಿತಿ ಎರಡೂ ಸಿಗಲಿಲ್ಲ ಎಂದೇ ಹೇಳಬಹುದು.
ಹಾಗೆಯೇ ನನ್ನ ಸುಮಾರಷ್ಟು ಯೋಜನೆಗಳು ಇನ್ನೇನು ಪ್ರಾರಂಭವಾಯಿತು ಎನ್ನುವ ಹಂತಕ್ಕೆ ಬಂದು ನಿಂತು ಹೋದವು. ಕೆಲವು ಮುಂದಿನವರ್ಶಕ್ಕೆ ಮುಂದೂಡಲ್ಪಟ್ಟವು.
ಈ ವರ್ಷದಲ್ಲಿ ಒಂದಷ್ಟು ಯೋಜನೆಗಳನ್ನು ಹಾಕಿಕೊಂಡಿದ್ದೇನೆ. ಯಾವುದು ಫಲ ಕೊಡುತ್ತದೋ?
೨೦೧೪ ನಿಮಗೆ ಸಂತಸ ತರಲಿ, ನಿಮ್ಮ ಯೋಜನೆಗಳೆಲ್ಲ ಕೈಗೂಡಲಿ !!
ReplyDelete:-)
ಎಮ್ ಎಸ್
ಹೊಸ ವರ್ಷದ ಶುಭಾಶಯಗಳು :)
ReplyDelete1001 Movies You Must See Before You Die ಲೀಸ್ಟ್ ನಲ್ಲಿನ ಅರ್ಧದಷ್ಟು ನೋಡಬೇಕೆ೦ದು ಗೋಲ್ ಇಟ್ಟಿದ್ದೆ.
500 ನೋಡಾಗಿದೆ, ಒಟ್ಟು ಸಿನೆಮಾಗಳು 1007. ಏನೋ ಒ೦ದು ಖುಷಿ ಇದೆ. ಈ ವರ್ಷ ಕಮ್ಮಿ ನೋಡಬೇಕು, ವರ್ಲ್ಡ್ ಸಿನೆಮಾ ಬಗ್ಗೆ ಜಾಸ್ತಿ ಬರೆಯಬೇಕು ಎ೦ಬ ಆಸೆ ಇದೆ. ನೋಡೋಣ.