ಹಿಂದಿಯಲ್ಲಿ ಎ ವೆಡ್ನೆಸ್ ಡೆ ನನ್ನ ಅಚ್ಚುಮೆಚ್ಚಿನ ಚಿತ್ರ. ನೀರಜ್ ಪಾಂಡೆಯವರ ಬಿಗಿಯಾದ ಚಿತ್ರಕಥೆ ಚಿತ್ರದ ಪ್ರಮುಖ ಆಸ್ತಿ ಎನ್ನಬಹುದು. ಅದನ್ನು ದಿ ಕಾಮನ್ ಮ್ಯಾನ್ ಎನ್ನುವ ಹೆಸರಿನಲ್ಲಿ ಇಂಗ್ಲೀಷಿಗೆ ರೀಮೇಕ್ ಮಾಡಲಾಗಿದೆ.ಬೆನ್ ಕಿಂಗ್ ಸ್ಲೇ [ಕೃಷ್ಣ ಪಂಡಿತ್ ಭಾ೦ಜಿ]ನಮ್ಮಲ್ಲಿ ನಾಸೀರುದ್ದೀನ್ ಷಾ ಅಭಿನಯಿಸಿದ್ದ ಪಾತ್ರವನ್ನು ನಿಭಾಯಿಸಿದ್ದಾರೆ. ಇಡೀ ಚಿತ್ರ ಶ್ರೀಲಂಕಾದಲ್ಲಿ ನಡೆಯುತ್ತದೆ.ಕಥೆಯ ಬಗ್ಗೆ ಹೇಳುವುದೇನೂ ಇಲ್ಲ. ಆದರೆ ನಮ್ಮ ಷಾ ನಿರ್ವಹಿಸಿದ್ದ ಪಾತ್ರವನ್ನು ಬೆನ್ ನಿರ್ವಹಿಸುವಲ್ಲಿ ಕೊಂಚ ಎಡವಿದ್ದಾರೆ ಎನ್ನಬಹುದು. ಇಲ್ಲಿ ಬೆನ್ ನಮಗೆ ಜನಸಾಮಾನ್ಯ ಎನಿಸುವುದೇ ಇಲ್ಲ. ಪಕ್ಕಾ ಫಿಟ್ ದೇಹವನ್ನು ಹೊಂದಿರುವ ಮತ್ತು ಇನ್ ಶರ್ಟ್ ಮಾಡಿಕೊಂಡ ಬೆನ್ ನಮಗೆ ಬೇರೆ ರೀತಿಯಾಗಿಯೇ ಕಾಣುತ್ತಾರೆ. ಅದಲ್ಲದೆ ಅವರ ನಡೆ ನುಡಿ ಸಂಭಾಷಣೆ ಒಪ್ಪಿಸುವ ಪರಿ ನಮಗೆಲ್ಲೂ ಸಾಮಾನ್ಯನೊಬ್ಬ ತನ್ನ ಒಳಗುದಿಯನ್ನು ವ್ಯಕ್ತ ಪಡಿಸುವ ಹಾಗೆ ಕಾಣಿಸುವುದೇ ಇಲ್ಲ.ಅದೇ ಚಿತ್ರದ ಮೈನಸ್ ಪಾಯಿಂಟ್ ಎನ್ನಬಹುದು.
ಇದೆ ಚಿತ್ರ ತಮಿಳು/ತೆಲುಗಲ್ಲಿ ಕಮಲ್ ಹಾಸನ್ ಅಭಿನಯದಲ್ಲೂ ತೆರೆಗೆ ಬಂದಿತ್ತು. ಆದರೆ ಕಮಲ್ ಹಾಸನ್ ಕೂಡ ಒಬ್ಬ ಸಾಮಾನ್ಯ ನಾಗಿರಲಿಲ್ಲ. ಅವರ ಮಾತು, ಶೈಲಿ ಯಾವುದೂ ಸಾಮಾನ್ಯ ಎನಿಸಿರಲಿಲ್ಲ. ಚಿತ್ರದ ಕಥೆ ಎಷ್ಟೇ ಬಿಗಿಯಾಗಿದ್ದರೂ ಕಲಾವಿದ ಸರಿಯಾಗಿ ಪಾತ್ರವನ್ನು ಅಭಿನಯಿಸದಿದ್ದರೆ ಚಿತ್ರ ನಿರೀಕ್ಷಿತ ಪರಿಣಾಮ ಬೀರುವುದಿಲ್ಲ. ಕಮಲ್ ಹಾಸನ್ ಮುಖಭಾವವಾಗಲಿ, ಅವರ ದೇಹದಾರ್ಡ್ಯತೆ ಚಿತ್ರದಲ್ಲಿನ ಪಾತ್ರಕ್ಕೆ ಸಹಾಯ ಮಾಡಿರಲಿಲ್ಲ.

ರೀಮೇಕ್ ನ ಇತಿಮಿತಿಗಳೇನೆ ಇರಲಿ ಅದನ್ನು ನಿರ್ವಹಿಸುವುದು ಕಷ್ಟ ಸಾಧ್ಯದ ಕೆಲಸ. ಒಂದು ರೀಮೇಕ್ ಚಿತ್ರ ಮಾಡುವಾಗ ಕಲಾವಿದರ ಆಯ್ಕೆಯಂತೂ ಬಹಳ ಮುಖ್ಯ. ಅಲ್ಲಿ ಆ ಭಾಷೆಯಲ್ಲಿ ಪಾತ್ರ ನಿರ್ವಹಿಸಿದ್ದವನ ರೀತಿಯ ಸಮರ್ಥ ಕಲಾವಿದನನ್ನು ಹುಡುಕುವುದು ಸಾಹಸದ ಕೆಲಸವೇ.ಈಗಲೂ ನನಗೆ ಬಾಜಿಗರ್ ಚಿತ್ರವನ್ನು ಬೇರ್ಯಾವ ಭಾಷೆಯಲ್ಲಿ ನಿರ್ಮಿಸಿದರೂ ಶಾರುಕ್
ನಂತಹ ಕಲಾವಿದನನ್ನು ಎಲ್ಲಿ ಹುಡುಕುವುದು ಎನಿಸುತ್ತದೆ..?
ನಂತಹ ಕಲಾವಿದನನ್ನು ಎಲ್ಲಿ ಹುಡುಕುವುದು ಎನಿಸುತ್ತದೆ..?
ಹೆಚ್ಚು ಕಡಿಮೆ ರೀಮೇಕ್ ಆದ ಎಲ್ಲಾ ಭಾಷೆಯಲ್ಲೂ ಯಶಸ್ವಿಯಾದದ್ದು ತಮಿಳಿನ ಚಿನ್ನತಂಬಿ. ಆದರೆ ಎಲ್ಲಾ ಭಾಷೆಗಿಂತ ಕನ್ನಡದ ರಾಮಾಚಾರಿ ಬೆಸ್ಟ್ ವರ್ಶನ್ ಎನ್ನಬಹುದು..ಯಾಕೆಂದರೆ ರವಿಚಂದ್ರನ್ ರೀತಿಯಲ್ಲಿ ಅಮಾಯಕತೆ ತೋರಿಸುವುದು ಮತ್ತು ಆ ಪಾತ್ರವನ್ನು ನಿರ್ವಹಿಸುವುದು ಬೇರೆ ಕಲಾವಿದರಿಗೆ ಸಾಧ್ಯವಾದರೂ ಅವರ ರೂಪದಲ್ಲಿ ವ್ಯತ್ಯಾಸವಿದ್ದದ್ದೆ ಅದಕ್ಕೆ ಮುಖ್ಯ ಕಾರಣ ಎನ್ನಬಹುದು.
ಹಾಗೆಯೇ ಭಾರತದಿಂದ ಇಂಗ್ಲಿಷಿಗೆ ಅಥವಾ ಬೇರೆಯ ದೇಶಕ್ಕೆ ಹೆಚ್ಚು ಚಿತ್ರಗಳು ಹೋಗಿಲ್ಲ. ಮುನ್ನಾಭಾಯಿ ಚಿತ್ರ ಹಾಲಿವುಡ್ ನಲ್ಲಿ ರೀಮೇಕ್ ಆಗುತ್ತಿದೆ ಎಂಬ ಸುದ್ದಿ ಕೇಳಿ ಬಂದಿತ್ತಾದರೂ ಅದಿನ್ನು ಕಾರ್ಯ ರೂಪಕ್ಕೆ ಬಂದಿಲ್ಲ. ಕೊರಿಯಾದ, ಜಪಾನಿನ ಚೀನಾದ ಕೆಲವು ಚಿತ್ರಗಳು ಹಾಲಿವುಡ್ ನಲ್ಲಿ ಪುನರ್ನಿರ್ಮಾಣವಾಗಿವೆ. ಆದರೆ ಅತಿ ಹೆಚ್ಚು ಚಿತ್ರ ನಿರ್ಮಾಣವಾಗುವ ಭಾರತದಲ್ಲಿನ ಯಾವ ಚಿತ್ರವೂ ಹಾಲಿವುಡಿನತ್ತ ಮುಖ ಮಾಡದೆ ಇರುವುದು ಬೇಸರ ತರಿಸುತ್ತದೆ.
ಹಾಲಿವುಡ್ ಗೆ ರೀಮೇಕ್ ಆದ ಭಾರತೀಯ ಚಿತ್ರಗಳು ನಿಮಗೆ ಗೊತ್ತಿದ್ದರೆ ತಿಳಿಸುವಿರಾ..?

ನಿಮ್ಮ ಬರಹ ಇಷ್ಟ ಆಯಿತು. ನೋಡಬೇಕು ಚಿತ್ರವನ್ನೂ.
ReplyDeleteಈ ಚಿತ್ರದ ಬಗ್ಗೆ ಮೊನ್ನೆಯಷ್ಟೇ ಕೇಳಲ್ಪಟ್ಟೆ.
ReplyDeleteಹಾಲಿವುಡ್ ಗೆ ಬೇಕಾದಷ್ಟು ಸರಕು ನಮ್ಮಲ್ಲಿದೆ. ಆದರೆ ಅಲ್ಲಿ ಹೋಗು ಮಾಡುವವರಾರು. ನಮ್ಮ ಒಳ್ಳೆಯ ಕಥೆಗಳನ್ನುಅಲ್ಲಿ ತಿಳಿಸುವವರಾರು. ಮೀಡಿಯೋಕರ್ ಬಾಲಿವುಡ್ ನೋಡಿದ ಪ್ರಪ೦ಚ ಭಾರತ ಇಷ್ಟೇ ಅ೦ತಾ ಬ್ರಾ೦ಡ್ ಮಾಡಿದ್ದಾರೆ. ಅದನ್ನು ತಪ್ಪು ಮಾಡುವ ನಿರ್ದೇಶಕರು ನಮ್ಮಲ್ಲಿಲ್ಲ. ಇದ್ದರೂ ಮಾರ್ಕೆಟಿ೦ಗ್ ಆಗುತ್ತಿಲ್ಲ.