ಜಾಗತಿಕ ಮಟ್ಟದಲ್ಲಿ ಬಂದ ಹತ್ತು ಹಲವಾರು ಶ್ರೇಷ್ಠ ಚಿತ್ರಗಳಿವೆ.ಅವುಗಳ ವಿಭಿನ್ನತೆಯನ್ನು ಅನುಸರಿಸಿ ಹಲವಾರು ವಿಭಾಗಗಳನ್ನು ಮಾಡಿಕೊಂಡು ಒಂದು ಪುಸ್ತಕವನ್ನು ಬರೆಯೋಣ ಎನಿಸಿತು. ಆವತ್ತೊಂದು ದಿನ ನಾನು ಪಿಲಿಪ್ ಮೆಜಸ್ಟಿಕ್ ನ ಹೋಟೆಲ್ಲೊಂದರಲ್ಲಿ ಕುಳಿತಿದ್ದೆವು. ನಾವು ಆಗಾಗ ಒಂದೊಂದು ಕಾಫಿ ಕುಡಿದು ಗಂಟೆಗಟ್ಟಲೆ ಮಾತನಾಡಲು ಕೆಲವು ಹೋಟೆಲ್ಲು ಗಳನ್ನು ನೋಡಿಕೊಂಡಿದ್ದೆವು. ನಾವು ನಮ್ಮ ಪಾಡಿಗೆ ಮಾತನಾಡುತ್ತಾ ಕುಳಿತರೆ ಸಪ್ಲೈಯರ್ ಗಳು ನಾವು ಕರೆಯುವವರೆಗೂ ನಮ್ಮ ಬಳಿಗೆ ಬರುತ್ತಿರಲಿಲ್ಲ. ನಾವು ಬೇಟಿಯಾದಾಗಲೆಲ್ಲಾ ಸಿನಿಮಾ ಬಗ್ಗೆ, ನಿರ್ದೇಶಕರು ಅವರ ಶೈಲಿಯ ಬಗ್ಗೆ ಗಂಟೆಗಟ್ಟಲೆ ಚರ್ಚಿಸುತ್ತಿದ್ದೆವು. ಅಥವಾ ಅದನ್ನು ಮಾತನಾಡಲೆಂದೇ ಬೇಟಿಯಾಗುತ್ತಿದ್ದೆವು. ಆವಾಗಾಗಲೇ ನಮ್ಮ ನೋಡಿದ ಪಟ್ಟಿಯಲ್ಲಿ ಸಾವಿರಗಟ್ಟಲೆ ಚಿತ್ರಗಳಿದ್ದವು. ಎಲ್ಲೆಂದರಲ್ಲಿ ಹುಡುಕಿಹುಡುಕಿ ನೋಡಿಬಿಟ್ಟಿದ್ದೆವು. ಜಗತ್ತಿನ ಸಿನಿಮಾದ ಪ್ರಮುಖ ಭಾಷೆಯ ಹತ್ತು ನಿರ್ದೇಶಕರ ಹೆಸರು ಹೇಳಿದರೆ ಅವರಲ್ಲಿ ಕನಿಷ್ಠ ಐದು ಜನರ ಸಿನಿಮಾಗಳನ್ನು ನಾವು ನೋಡಿದ್ದೆವು. ಪ್ರಮುಖ ನಿರ್ದೇಶಕರ ಚಿತ್ರಗಳು ಅವುಗಳಿಗೆ ಪ್ರೇರಣೆಯಾದ ಸಿನಿಮಾಗಳು,ಕಥೆಗಳು ಲೇಖನಗಳು ..ಹೀಗೆ ಎಲ್ಲವನ್ನು ಶೋಧಿಸಿದ್ದೆವು. ಹೀಗೆ ಮಾತನಾಡುತ್ತಿದ್ದಾಗ ಪಿಲಿಪ್ ಹೇಳಿದ್ದರು. 'ನೀವ್ಯಾಕೆ ಒಂದು ಸಿನಿಮಾದ ಬಗೆಗಿನ ಪುಸ್ತಕ ಬರೆಯಬಾರದು..?'
ನನಗೂ ಬರೆಯೋಣ ಎನಿಸಿತ್ತು. ಅದಕ್ಕಾಗಿ ಮತ್ತೆ ದಿನಗಳು, ತಿಂಗಳುಗಳು ವ್ಯಯವಾದವು. ಮತ್ತೆ ಸಾವಿರಗಟ್ಟಲೆ ಸಿನಿಮಾಗಳನ್ನು ನೋಡಿದ್ದಾಗಿತ್ತು. ಎಲ್ಲವನ್ನು ಸೇರಿಸಿ ಬರೆದು ಮತ್ತೆ ಗಿರಿ ಜೊತೆ ಚರ್ಚಿಸಿ ..ಹೀಗೆ ಪುಸ್ತಕ ಸಂಪೂರ್ಣವಾಗುವಲ್ಲಿಗೆ ಎರಡು ವರ್ಷ ಕಳೆದುಹೋಗಿತ್ತು.
ಅದಾದ ನಂತರ ಅದನ್ನು ಪ್ರಕಟಿಸುವುದು ಹೇಗೆ..? ಎಂಬ ಪ್ರಶ್ನೆ ಬಂದಿತು. ನಾವೇ ಹಣ ಹೊಂದಿಸಿ ಪ್ರಕಟಿಸೋಣ ಎನಿಸಿದರೂ ಅದನ್ನು ಮಾರಾಟ ಮಾಡುವ ಬಗೆ ಹೇಗೆ..ಅದರ ತಂತ್ರಗಳು ದಾರಿಗಳ ಬಗೆಗಿನ ಅಜ್ಞಾನ ನಮ್ಮನ್ನು ಕಾಡತೊಡಗಿತ್ತು. ಒಳ್ಳೆ ಪ್ರಕಾಶಕರ ಹತ್ತಿರ ಯಾವ ಹಣವನ್ನೂ ನಿರೀಕ್ಷೆ ಮಾಡದೆ[ಮಾಡಿದ್ದರೂ ಕೊಡುವವರ್ಯಾರು...ಎನ್ನುವುದು ಬೇರೆ ಮಾತು..] ಅಚ್ಚು ಹಾಕಿಸೋಣ ಎನಿಸಿತ್ತು..
ಅದಾದ ನಂತರ ಕೃಷ್ಣ ಒಂದು ಪುಸ್ತಕ ಪ್ರಕಟಿಸಿದ್ದ. ನನ್ನ ಪುಸ್ತಕ ನೋಡಿ ಪ್ರಕಟಿಸೋಣ ಅದಕ್ಕೂ ಮೊದಲು ಕನ್ನಡ ಸಿನಿಮಾಗಳ ಬಗ್ಗೆ ಈ ತರಹದ್ದೊಂದು ಪುಸ್ತಕ ಬರೆದುಕೊಡು ಎಂದ. ನಾನು ಖಾಲಿ ಇದ್ದದ್ದರಿಂದ ಕೈಹಾಕಿದೆ. ಆದರೆ ಕೆಲಸ ನಾನಂದುಕೊಂಡಷ್ಟು ಸುಲಭವಾಗಿರಲಿಲ್ಲ. ನಂದಲ್ಲ ಎನ್ನುವಂತೆ ಒಂಭತ್ತು ತಿಂಗಳು ಕಳೆದುಹೋಗಿತ್ತು. ದಿನ ಸಿನಿಮಾ ನೋಡುವುದು ಹುಡುಕುವುದು ಇದೆ ಕೆಲಸವಾಗಿತ್ತು. ಹಾಗೆ ರೂಪ ತಾಳಿದ್ದು ನೋಡಲೇಬೇಕಾದ ಕನ್ನಡದ ನೂರೊಂದು ಚಿತ್ರಗಳು ಪುಸ್ತಕ. ಈಗ ಬಿಡುಗಡೆಗೆ ಸಿದ್ಧವಾಗಿದೆ.
ಇದೇ ಶನಿವಾರ ಬೆಳಿಗ್ಗೆ ಹತ್ತೂಮೂವತ್ತಕ್ಕೆ ನಯನ ರಂಗಮಂದಿರದಲ್ಲಿ.
ದಯವಿಟ್ಟು ಬನ್ನಿ ಎಂದು ಗೆಳೆಯ ಗೆಳತಿಯರಲ್ಲಿ ಕೇಳಿಕೊಳ್ಳುತ್ತೇನೆ.
ಮತ್ತು ನಿಮಗಾಗಿ ಕಾಯುತ್ತಿರುತ್ತೇನೆ...
ನನ್ನ ಮೊದಲ ಪುಸ್ತಕ "ಚಿತ್ರ-ವಿಚಿತ್ರ" ಕ್ಕೆ ಇನ್ನೂ ಬಿಡುಗಡೆಯ ಭಾಗ್ಯ ಬಂದಿಲ್ಲವೆನಿಸುತ್ತದೆ. ಈ ಪುಸ್ತಕದ ನಂತರ ಅದನ್ನು ಹೊರತರುವ ಯೋಜನೆಯಿದೆ...
ನೋಡೋಣ...
ಅಪರೂಪಕ್ಕೆ ರಜೆ ಸಿಕ್ಕಿದೆ.. ಆತ್ಮೀಯ ಗೆಳೆಯನೊಬ್ಬನ ಮದುವೆ ಇದೆ.. ಹೋಗಲೇ ಬೇಕಿದೆ.. ಕ್ಷಮೆ ಇರಲಿ ಸಾರ್.. ಅದೆಷ್ಟು ಆಸೆ ಇಟ್ಕೊಂಡು ಪ್ರಯತ್ನ ಪಟ್ಟರೂ ಈ ಕಾರ್ಯಕ್ರಮಕ್ಕೆ ಬರಲಾಗದೆ ಇರೋ ಸಾಧ್ಯತೆಯೇ ಹೆಚ್ಚು.. ಕಾರ್ಯಕ್ರಮ ಚೆನ್ನಾಗಿ ಆಗ್ಲಿ.. ಪುಸ್ತಕವನ್ನ ಖಂಡಿತ ಕೊಂಡು ಓದ್ತೇನೆ.. :) ನಿಮ್ಮ ಸಾಧನೆಗಳು ಮತ್ತಷ್ಟೂ ವ್ರುದ್ದಿಸಲಿ. :)
ReplyDeleteರವೀಂದ್ರ,
ReplyDeleteಅಭಿನಂದನೆಗಳು. ಇಂತಹ ಪುಸ್ತಕಗಳು ಕನ್ನಡದಲ್ಲಿ ವಿರಳ ಆದರೆ ಅಗತ್ಯವಾಗಿದೆ. ನಿಮ್ಮ ಈ ಕೃತಿಗೆ ಅಪಾರ ಯಶಸ್ಸು ಮತ್ತು ಜನ ಮನ್ನಣೆ ದೊರೆಯಲಿ ಎಂದು ಶುಭಾಶಯಗಳು.
ಮಧು ಕೃಷ್ಣಮೂರ್ತಿ
ಚಲನ ಚಿತ್ರಗಳನ್ನು ನೋಡುತ್ತಲೇ ವಿಕಸಿತಗೊಂಡ ವೀಕ್ಷಕರಿಗೆ ಹಬ್ಬ ಎನಿಸಬಹುದಾದ ಒಂದು ಪುಸ್ತಕದ ಬಿಡುಗಡೆ!ಅಭಿನಂದನೆಗಳು
ReplyDeleteಬಿಡುಗಡೆಯ ಭಾಗ್ಯ. ಅಭಿನ೦ದನೆಗಳು. ಒಳ್ಳೆಯದಾಗಲಿ.
ReplyDeleteಈ ಶನಿವಾರ ಬರಲು ಸಾಧ್ಯವಿಲ್ಲ ಎಂದು ಹೇಳಲು ಬೇಸರವಾಗ್ತಿದೆ, ಖಂಡಿತ ಪುಸ್ತಕ ಓದಿ ಅನಿಸಿಕೆಗಳನ್ನು ಹಂಚಿಕೊಳ್ಳುವೆ, ಕಾರ್ಯಕ್ರಮ ಯಶಸ್ವಿಯಾಗಿ ಇನ್ನೂ ಹತ್ತು ಹಲವು ಪುಸ್ತಕಗಳು ಹೊರಹೊಮ್ಮಲಿ ಎಂದು ಆಶಿಸುವೆ
ReplyDeletepustaka elli sigutte??
ReplyDeletemalathi S
http://kannada.oneindia.in/movies/news/2013/05/must-watch-101-kannada-movies-before-you-die-074291.html
ReplyDeleteನಿಮ್ಮ ಪುಸ್ತಕದ ಬಗ್ಗೆ ಚುಕ್ಕು ಬುಕ್ಕುವಿನಲ್ಲಿ ಓದಿದೆ
ReplyDeleteಈ ಸಾರಿ ಅಂಕಿತಾ ಭೇಟಿಯಲ್ಲಿ ಪುಸ್ತಕ ಕೊಳ್ಳುತ್ತೇನೆ
ಅಭಿನಂದನೆಗಳು